YS Sharmila: ಸಂಚು ರೂಪಿಸಿ ರಾಜಶೇಖರ್ ರೆಡ್ಡಿ ಕೊಲೆ; ವೈಎಸ್ ಶರ್ಮಿಳಾ ಗಂಭೀರ ಆರೋಪ

YS Rajashekar Reddy: ನಿಮಗೆ ಅಷ್ಟೆಲ್ಲ ತಾಕತ್ತು ಇರುವುದೇ ಹೌದಾದಲ್ಲಿ ನನ್ನನ್ನು ಅರೆಸ್ಟ್ ಮಾಡಿ ತೋರಿಸಿ. ವೈ ಎಸ್ ರಾಜಶೇಖರ್ ರೆಡ್ಡಿ ಮಗಳು ನಾನು, ಹುಲಿ ಮರಿ ಇದ್ದಂತೆ ಎಂದು ಶರ್ಮಿಳಾ ಸವಾಲೆಸೆದಿದ್ದಾರೆ.

ವೈಎಸ್ ಶರ್ಮಿಳಾ

ವೈಎಸ್ ಶರ್ಮಿಳಾ

  • Share this:
ಹೈದರಾಬಾದ್: ನನ್ನ ತಂದೆ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರನ್ನು (YS Rajasekhar Reddy)  ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ (YS Sharmila) ಗಂಭೀರ ಆರೋಪ ಮಾಡಿದ್ದಾರೆ. ನನ್ನ ತಂದೆ ವೈ ಎಸ್ ರಾಜಶೇಖರ್ ರೆಡ್ಡಿ ಸಾವಿನ ಹಿಂದೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ (K Chandrashekar Rao) ಕೈವಾಡವಿದೆ. ನನ್ನನ್ನೂ ಕೊಲೆ ಮಾಡಲು ಕುತಂತ್ರ ರೂಪಿಸಲಾಗುತ್ತಿದೆ. ಆದರೆ ನಾನು ಅಂತಹ ಕುತಂತ್ರಗಳಿಗೆ ಜಗ್ಗುವುದಿಲ್ಲ ಎಂದು ಶರ್ಮಿಳಾ ಆರೋಪಿಸಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ಸಂಚಲನವನ್ನೇ ಸೃಷ್ಟಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಆಡಳಿತ ಪಕ್ಷದ ನಾಯಕರಿಗೆ ನಡುಕ ಏಕೆ ಎಂದು ಶರ್ಮಿಳಾ ಪ್ರಶ್ನೆ ಎತ್ತಿದ್ದಾರೆ.

ನಾನು ಹುಲಿ ಮರಿ ಇದ್ದಂತೆ, ತಾಕತ್ತಿದ್ದರೆ ಅರೆಸ್ಟ್ ಮಾಡಿ
ಕೆ. ಚಂದ್ರಶೇಖರ್ ರಾವ್ ಅವರನ್ನು ನೇರವಾಗಿ ಆರೋಪಿಸಿರುವ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾ, ನೀವು ನನ್ನನ್ನು ಬಂಧಿಸುತ್ತೀರಿ ಎಂಬ ಭಯ ನನಗಿಲ್ಲ. ನಿಮಗೆ ಅಷ್ಟೆಲ್ಲ ತಾಕತ್ತು ಇರುವುದೇ ಹೌದಾದಲ್ಲಿ ನನ್ನನ್ನು ಅರೆಸ್ಟ್ ಮಾಡಿ ತೋರಿಸಿ. ವೈ ಎಸ್ ರಾಜಶೇಖರ್ ರೆಡ್ಡಿ ಮಗಳು ನಾನು, ಹುಲಿ ಮರಿ ಇದ್ದಂತೆ, ನೀವು ಹೆದರಿಸುವ ಕೈ ಕೋಳಗಳು ನನ್ನ ಕೈಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Video: ಹಿಜಾಬ್ ಹಾಕದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿ ಯುವತಿಯ ಕೊಲೆ

ರಾಯಚೂರು ತೆಲಂಗಾಣಕ್ಕೆ ಸೇರಬೇಕು ಎಂದಿದ್ದ ಕೆಸಿಆರ್
ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ತನಗೆ ಸೇರಬೇಕೆಂದು ಪಕ್ಕದ ಮಹಾರಾಷ್ಟ್ರ ಪದೇ ಪದೇ ವಿವಾದ ಹೊತ್ತಿಸಿದ್ದು ಇನ್ನೂ ಮಾಸಿಲ್ಲ. ಈ ಮುನ್ನವೇ ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರಬೇಕೆಂದು ಹೇಳುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿವಾದದ ಕಿಡಿ ಹೊತ್ತಿಸಿದ್ದರು ಟಿಆರ್‌ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಅವರ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: Viral Video: ತರಕಾರಿ ಮೇಲೆ ಮೂತ್ರ ವಿಸರ್ಜಿಸಿ ಮಾರುತ್ತಿದ್ದ ವ್ಯಾಪಾರಿ; ಇಲ್ಲಿದೆ ಶಾಕಿಂಗ್ ವಿಡಿಯೋ

ಟಿಆರ್‌ಎಸ್ ಅಧಿಕಾರಕ್ಕೆ ಬಂದ ನಂತರ 2016 ರಲ್ಲಿ ರೂಪುಗೊಂಡ ನೈರುತ್ಯ ತೆಲಂಗಾಣದ ಹೊಸ ಜಿಲ್ಲೆಯಾದ ವಿಕಾರಾಬಾದ್‌ನಲ್ಲಿ ಹೊಸ ಕಲೆಕ್ಟರೇಟ್ ಸಂಕೀರ್ಣವನ್ನು ರಾವ್ ಮಂಗಳವಾರ ಉದ್ಘಾಟಿಸಿದ ಸಂದರ್ಭದಲ್ಲಿ ಈ ವಿವಾದ ಹುಟ್ಟಿಸಿದ್ದರು.

ಕರ್ನಾಟಕ ಸರ್ಕಾರದಿಂದ ಪ್ರತಿಕ್ರಿಯೆಯಿಲ್ಲ; ಪ್ರಿಯಾಂಕ್ ಖರ್ಗೆ ಕಿಡಿಕಿಡಿ
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿವಾದದ ಹೇಳಿಕೆಗೆ ಕಾಂಗ್ರೆಸ್ ನಾಯಕ, ಶಾಸಕ ಪ್ರಿಯಾಂಕ್ ಖರ್ಗೆ ಕರ್ನಾಟಕ ಸರ್ಕಾರದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರಾಯಚೂರು ಹೇಳಿಕೆ ನೀಡಿ 24 ಗಂಟೆಯೇ ಆದರೂ ಕರ್ನಾಟಕ ಸರ್ಕಾರ ಇನ್ನೂ ಯಾವುದೇ ವಿರೋಧ ಅಥವಾ ಪ್ರತಿಕ್ರಿಯೆ ನೀಡಿಲ್ಲ" ಎಂದು ಪ್ರಿಯಾಂಕ್ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮೇಘಸ್ಪೋಟದ ಹಿಂದೆ ವಿದೇಶ ಕೈವಾಡ ಎಂದಿದ್ದ ಕೆ ಚಂದ್ರಶೇಖರ್ ರಾವ್
ದೇಶದಲ್ಲಿ ಉಂಟಾಗುವ ಮೇಘಸ್ಫೋಟಗಳ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್​ ಹೇಳಿಕೆ ನೀಡಿದ್ದರು. ಗೋದಾವರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಮೇಘಸ್ಫೋಟದ ಹಿಂದೆ ವಿದೇಶಿಯರ ಕೈವಾಡವಿರುವ ಶಂಕೆ ಇದೆ ಎಂದು ಕೆಸಿಆರ್​​ ಹೇಳಿದ್ದರು.
Published by:ಗುರುಗಣೇಶ ಡಬ್ಗುಳಿ
First published: