• Home
  • »
  • News
  • »
  • national-international
  • »
  • Telangana: ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ ಅರೆಸ್ಟ್​!

Telangana: ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ ಅರೆಸ್ಟ್​!

ಸಿಎಂ ಜಗನ್ ಸಹೋದರಿ ಶರ್ಮಿಳಾ

ಸಿಎಂ ಜಗನ್ ಸಹೋದರಿ ಶರ್ಮಿಳಾ

ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರೊಂದಿಗೆ ನಡೆದ ಘರ್ಷಣೆ ಬಳಿಕ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ರೆಡ್ಡಿ ಅವರನ್ನು ಬಂಧಿಸಲಾಗಿದೆ.

  • News18 Kannada
  • Last Updated :
  • Telangana, India
  • Share this:

ಹೈದರಾಬಾದ್(ನ.29): ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (Andhra Pradesh CM YS Jagan Mohan Reddy) ಅವರ ಸಹೋದರಿ ಯಡುಗುರಿ ಸಂದೀಪ್ತಿ ಶರ್ಮಿಳಾ ರೆಡ್ಡಿ (Yeduguri Sandinti Sharmila Reddy)  ಅವರನ್ನು ಸೋಮವಾರ ತೆಲಂಗಾಣದ ವಾರಂಗಲ್‌ನಲ್ಲಿ ಅವರ ಬೆಂಬಲಿಗರು ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆಯ ಬಳಿಕ ಬಂಧಿಸಲಾಗಿದೆ. ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ನಾಯಕಿ ಶರ್ಮಿಳಾ ರೆಡ್ಡಿ ಅವರು ಪ್ರಚಾರ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಕೆಲವರು ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.


ಪಾದಯಾತ್ರೆ ವೇಳೆ ಘರ್ಷಣೆ


ಈ ಘಟನೆ ನಡೆದಾಗ ಶರ್ಮಿಳಾ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸುತ್ತಿದ್ದರು. ಶರ್ಮಿಳಾ ಅವರನ್ನು ಪೊಲೀಸರು ಆಕೆಯ ಬೆಂಬಲಿಗರ ಜೊತೆ ಕರೆದುಕೊಂಡು ಹೋಗುತ್ತಿದ್ದಾಗ, ‘ನನ್ನನ್ನು ಯಾಕೆ ಬಂಧಿಸುತ್ತಿದ್ದೀರಿ? ಇಲ್ಲಿ ನಾನು ಬಲಿಪಶು, ಆರೋಪಿಯಲ್ಲ’ ಎಂದು ಕೂಗಾಡಿದ್ದಾರೆ. ಈ ಘಟನೆಯ ನಂತರ ಶರ್ಮಿಳಾ ಅವರು, ‘ಟಿಆರ್‌ಎಸ್ ಸರ್ಕಾರದ ಪಿತೂರಿಯಿಂದ ಪಾದಯಾತ್ರೆ ವೇಳೆ ಬಸ್‌ಗೆ ಬೆಂಕಿ ಹಚ್ಚಲಾಗಿದೆ. ನಾನು ಎಲ್ಲಾ ಅನುಮತಿಗಳೊಂದಿಗೆ ಪಾದಯಾತ್ರೆ ಮಾಡುತ್ತಿದ್ದೇನೆ. ಅವರು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿ ನನ್ನನ್ನು ಬಂಧಿಸಿ ಪಾದಯಾತ್ರೆ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸ್ ಪೇದೆಗಳನ್ನು ಕಳುಹಿಸಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Divya Sridhar: ಮಂಗಳಮುಖಿಯನ್ನೂ ಮದ್ವೆಯಾಗಿ, ಮೋಸ ಮಾಡಿದ್ದ ಅರ್ನವ್! ದಿವ್ಯಾ ಶ್ರೀಧರ್ ಬಾಳಲ್ಲೂ ಈತ ಖಳನಾಯಕನೇ!


ವೈಎಸ್‌ಆರ್ ತೆಲಂಗಾಣ ಪಕ್ಷವನ್ನು (ವೈಎಸ್‌ಆರ್‌ಟಿಪಿ) ಪ್ರಾರಂಭಿಸಿದ ಶರ್ಮಿಳಾ ಕಳೆದ ವರ್ಷ ಅಕ್ಟೋಬರ್‌ನಿಂದ 'ಪಾದಯಾತ್ರೆ'ಯಲ್ಲಿ ನಡೆಸುತ್ತಿದ್ದಾರೆ. ಆಕೆ ಇಲ್ಲಿಯವರೆಗೆ 3,500 ಕಿ.ಮೀ. ದೂರ ಕ್ರಮಿಸಿದ್ದಾರೆ. ನಿನ್ನೆ ನರಸಂಪೇಟೆಯಲ್ಲಿದ್ದ ಅವರು ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದರು. ಇದರಿಂದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡರು. ಹೀಗಾಗೇ ಪಾದಯಾತ್ರೆ ವೇಳೆ ಶರ್ಮಿಳಾ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆನ್ನಲಾಗಿದೆ. ಇದರಿಂದ ಕೋಪಗೊಂಡ ಶರ್ಮಿಳಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಉಭಯ ಪಕ್ಷದ ಕಾರ್ಯಕರ್ತರ ನಡುವೆ ಜಗಳ ಹುಟ್ಟಿಕೊಳ್ಳಲು ಕಾರಣವಾಗಿದೆ.


ಇದನ್ನೂ ಓದಿ: Akhilesh and Shivpal: ಒಂದಾಗ್ತಾರಾ ಅಖಿಲೇಶ್, ಶಿವಪಾಲ್‌ ಯಾದವ್? ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿಗೆ ಲಾಭ


ಗಮನಾರ್ಹವಾಗಿ, ಶರ್ಮಿಳಾ ಅವರ 'ಪಾದಯಾತ್ರೆ' ವೈಎಸ್‌ಆರ್‌ಟಿಪಿ ಮತ್ತು ಆಡಳಿತಾರೂಢ ಟಿಆರ್‌ಎಸ್ ನಡುವೆ ಸಾಕಷ್ಟು ರಾಜಕೀಯ ಒತ್ತಡವನ್ನು ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಮತ್ತೊಂದು ಉದ್ದೇಶಿತ ‘ಪಾದಯಾತ್ರೆ’ ವಿವಾದಕ್ಕೆ ಸಿಲುಕಿದೆ. ಇದಕ್ಕಾಗಿ ಸಾರ್ವಜನಿಕ ಸಭೆಗೆ ತೆಲಂಗಾಣ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಭೈಂಸಾದಲ್ಲಿ ಪಾದಯಾತ್ರೆ ಬೇಡ, ಅದು ಕೋಮು ಸೂಕ್ಷ್ಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Precilla Olivia Dias
First published: