ಸಾವಿನ ಜಿಗಿತ; ಟಿಕ್​-ಟಾಕ್ ವಿಡಿಯೋ ಮಾಡಲು ಕಾಲುವೆಗೆ ನೆಗೆದು ದುರಂತ ಅಂತ್ಯ ಕಂಡ ಯುವಕ

ರಾಜಾ ಖುರೇಶಿ ಎಂಬ 18 ವರ್ಷದ ಯುವಕನಿಗೆ ಟಿಕ್​-ಟಾಕ್​ ವಿಡಿಯೋ ಮಾಡುವ ಗೀಳು ತುಂಬಾ ಇತ್ತು. ದಿನಕ್ಕೆ ಅದೆಷ್ಟೋ ಟಿಕ್​ ಟಾಕ್​ ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಭಾನುವಾರ ಆದ್ದರಿಂದ ಕಾಲೇಜಿಗೆ ರಜೆ ಇತ್ತು. ಹೀಗಾಗಿ ಟಿಕ್​-ಟಾಕ್​ ಮಾಡಲು ಗಂಗಾ ಕಾಲುವೆ ಬಳಿ ಹೋಗಿದ್ದ.

news18-kannada
Updated:March 2, 2020, 5:38 PM IST
ಸಾವಿನ ಜಿಗಿತ; ಟಿಕ್​-ಟಾಕ್ ವಿಡಿಯೋ ಮಾಡಲು ಕಾಲುವೆಗೆ ನೆಗೆದು ದುರಂತ ಅಂತ್ಯ ಕಂಡ ಯುವಕ
ಪ್ರಾತಿನಿಧಿಕ ಚಿತ್ರ
  • Share this:
ಮುಜಾಫರ್​ನಗರ (ಮಾ.02): ಇತ್ತೀಚಿನ ಯುವ ಪೀಳಿಗೆ ಟಿಕ್​-ಟಾಕ್ ಗೀಳಿಗೆ ಅಂಟಿಕೊಂಡಿದೆ. ಈ ಗೀಳಿನಿಂದಾಗಿ ಅದೆಷ್ಟೋ ಯುವಕ-ಯುವತಿಯರು ಅನೇಕ ಸಂಕಷ್ಟಗಳಿಗೆ ಈಡಾಗಿದ್ದಾರೆ. ಆದರೂ ಮಾತ್ರ ಇದರಿಂದ ಯುವ ಸಮುದಾಯ ಎಚ್ಚರಿಕೆಯಿಂದ ಇರಲು ಮುಂದಾಗುತ್ತಿಲ್ಲ. ಇಲ್ಲೂ ಸಹ ಟಿಕ್​ ಟಾಕ್​ ಗೀಳಿಗೆ ಅಂಟಿಕೊಂಡ ಯುವಕ ದುರಂತ ಅಂತ್ಯ ಕಂಡಿದ್ದಾನೆ. 

ಉತ್ತರ ಪ್ರದೇಶದ ಮುಜಾಫರ್​ನಗರದ ರಾಜಾ ಖುರೇಶಿ ಎಂಬ 18 ವರ್ಷದ ಯುವಕನಿಗೆ ಟಿಕ್​-ಟಾಕ್​ ವಿಡಿಯೋ ಮಾಡುವ ಗೀಳು ತುಂಬಾ ಇತ್ತು. ದಿನಕ್ಕೆ ಹತ್ತಾರು ಟಿಕ್​ ಟಾಕ್​ ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಭಾನುವಾರ ಆದ್ದರಿಂದ ಕಾಲೇಜಿಗೆ ರಜೆ ಇತ್ತು. ಹೀಗಾಗಿ ಟಿಕ್​-ಟಾಕ್​ ಮಾಡಲು ಗಂಗಾ ಕಾಲುವೆ ಬಳಿ ಹೋಗಿದ್ದ.

ಮಗುವನ್ನು ಅಪ್ಪಿಕೊಂಡೇ ಬದುಕಿಸಿಕೊಳ್ಳುವ ಅಪ್ಪನ‌ ವಿಶಿಷ್ಟ ವಿಧಾನ... ಕಾಂಗರೂ ಕೇರ್ ಈಗ ಭಾರೀ ಯಶಸ್ವಿ!

ದುರಾದೃಷ್ಟವಶಾತ್​ ಖುರೇಶಿ ಅಂದು ಮನೆಗೆ ವಾಪಸ್​ ಆಗಲಿಲ್ಲ, ಬದಲಿಗೆ ಸಾವಿನ ಮನೆ ಸೇರಿದ್ದ. ಟಿಕ್​ ಟಾಕ್​ ಮಾಡಲೆಂದೇ ಕಾಲುವೆಗೆ ಬಿದ್ದ ಆತ ಮೇಲೆ ಬರಲೇ ಇಲ್ಲ. ಕಾಲುವೆಗೆ ಜಿಗಿದ ಆತ ಬಿದ್ದ ರಭಸಕ್ಕೆ ಅಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ನಡೆದಿರುವುದು ಮುಜಾಫರ್ ಜಿಲ್ಲೆಯ ಕುತುಬ್ಪುರ್​ ಗ್ರಾಮದಲ್ಲಿ.

ಕಾಲುವೆಗೆ ಜಿಗಿದ ಆತನ ಕೊನೆಯ ಟಿಕ್​-ಟಾಕ್ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಓಮರ್ ಅಬ್ದುಲ್ಲಾರಿಂದ ಸಾರ್ವಜನಿಕ ವ್ಯವಸ್ಥೆಗೆ ಅಪಾಯ: ಸುಪ್ರೀಂಗೆ ತಿಳಿಸಿದ ಜಮ್ಮು-ಕಾಶ್ಮೀರ ಸರ್ಕಾರ
First published: March 2, 2020, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading