ನೀರಿನಲ್ಲಿ ಮೊಸಳೆಯಿದೆ ಎಂದರೆ ಸಾಕು ಭಯದಿಂದ ಮೈಲು ಗಟ್ಟಲೇ ದೂರ ಓಡುವವರನ್ನು ನೋಡಿದ್ದೇವೆ. ಇನ್ನು, ಕೆರೆ, ಗದ್ಡೆ, ಹೊಳೆಗಳಿಗೆ ಮೊಸಳೆ ಬಂದಿದೆ ಎಂದರೇ ಸಾಕು ಜಾನುವಾರುಗಳು ಸೇರಿ ಆ ಕಡೆಗೆ ಯಾರೂ ಸುಳಿಯದಂತೆ ಎಚ್ಚರಿಕೆ ವಹಿಸುವುದನ್ನು ನೋಡಿರುತ್ತೇವೆ. ಆದರೆ, ತಮಿಳುನಾಡಿನ ಭೂಪನೊಬ್ಬ ಮೊಸಳೆ ಬಾಲವನ್ನು ಹಿಡಿದು ನೀರಿನಿಂದ ಎಳೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಆರೋಪಿ ಪತ್ತೆಗೆ ಬಲೆ ಬೀಸಿದ ಅರಣ್ಯಾಧಿಕಾರಿಗಳು!
ತಮಿಳುನಾಡಿನ ತಿರುಚಿ ಜಿಲ್ಲೆಯ ಮುಕ್ಕೊಂಬುವಿನಲ್ಲಿರುವ ಕಾವೇರಿ ನದಿಯಲ್ಲಿ ಯುವಕನೋರ್ವನು ಮೊಸಳೆಯ ಬಾಲವನ್ನು ಹಿಡಿದು ಎಳೆಯುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಯಾವ ದಿನ ದೃಶ್ಯ ಸೆರೆ ಹಿಡಿಯಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುದನ್ನು ತನಿಖೆ ನಡೆಸಲು ಅರಣ್ಯಾಧಿಕಾರಿಗಳು ಭಾನುವಾರದಂದು ವಿಶೇಷ ತಂಡವನ್ನು ರಚಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಈ ಕುರಿತಾಗಿ ತಿರುಚಿ ಜಿಲ್ಲಾ ಅರಣ್ಯ ಅಧಿಕಾರಿ ಸುಜಾತಾ ಅವರು ಮಾತನಾಡಿದ್ದು, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ, ವೇಳಾಪಟ್ಟಿ - I (ಭಾಗ - II) ರ ಅಡಿಯಲ್ಲಿ ಮೊಸಳೆಯನ್ನು ರಕ್ಷಿಸಲಾಗುತ್ತದೆ. ಮೊಸಳೆಗಳಿಗೆ ನೋವುಂಟು ಮಾಡುವುದು, ಬೇಟೆ ಆಡುವುದಕ್ಕೆ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲಾಗುತ್ತದೆ. ಇನ್ನು, ವೈರಲ್ ಆಗಿರುವ ವಿಡಿಯೋದಲ್ಲಿ ಮೊಸಳೆ ಸತ್ತಿರುವ ರೀತಿಯಲ್ಲಿ ಕಾಣುತ್ತದೆ. ಮೊದಲು ವಿಡಿಯೋ ವೈರಲ್ ಆಗಿರುವ ಸ್ಥಳವನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಹಾವಿನ ಬಾಲ ಹಿಡಿದು ವಿಡಿಯೋ ವೈರಲ್!
ಇದೇ ರೀತಿಯ ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ನಡೆದಿದ್ದು, ಹಾವಿನ ಬಾಲ ಹಿಡಿದು ನೀರಿನಿಂದ ಎಳೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋನಲ್ಲಿನ ಸ್ಥಳ ಯಾವುದು ಎಂದು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಲು ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ