ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸಚಿವರಿಗೆ ಸೈಕಲ್ ಕಳುಹಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿಯನ್ನು ಖಂಡಿಸಿ 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಆಗಿರುವುದರಿಂದ ಇನ್ನು ಮುಂದೆ ಸೈಕಲ್ ಬಳಸಿ ಎಂದು ಕೇಂದ್ರ ಸಚಿವರಿಗೆ ಸೈಕಲ್ ಕಳುಹಿಸಿ' ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

  • Share this:
ನವದೆಹಲಿ(ಮಾ. 19): ದೆಹಲಿಯಲ್ಲಿ ಸದಾ ವಿನೂತನವಾಗಿ ಪ್ರತಿಭಟನೆ ನಡೆಸುವ ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಸಿಲಿಂಡರ್ ಬೆಲೆಗಳನ್ನು ಏರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಆಗಿರುವುದರಿಂದ ಇನ್ನು ಮುಂದೆ ಸೈಕಲ್ ಬಳಸಿ ಎಂದು ಕೇಂದ್ರ ಸಚಿವರಿಗೆ ಸೈಕಲ್ ಕಳುಹಿಸಿ' ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ನೇತೃತ್ವದಲ್ಲಿ ದೆಹಲಿಯ ರೈಸೀನಾ ರಸ್ತೆಯಲ್ಲಿರುವ ಯುವ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಬಳಿಕ ಸೈಕಲ್ ಏರಿ ಕೇಂದ್ರ ಸಚಿವರ ಮನೆ ಮನೆಗೆ ಸೈಕಲ್ ತಲುಪಿಸಲು ಹೊರಟರು. ಆದರೆ ಮಾರ್ಗ ಮಧ್ಯೆಯೇ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ಅವರು ಕೇಂದ್ರ ಸಚಿವೆ ಮನೆಗೆ ಹೋಗದಂತೆ ತಡೆದರು.

ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆ; ಬಾಗಲಕೋಟೆಯ ಐತಿಹಾಸಿಕ ಹೋಳಿಗೆ ಬ್ರೇಕ್​​ ಹಾಕಲು ನಿರ್ಧಾರ

ಈ ವಿಭಿನ್ನವಾದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಹಿಂದೆ ಯುಪಿಎ ಸರ್ಕಾರ ಇದ್ದಾಗ ಕಚ್ಛಾ ತೈಲದ ಬೆಲೆ ಲೀಟರ್ ಗೆ 100 ರೂಪಾಯಿ ಇದ್ದರೂ ಇಲ್ಲಿ 60ರಿಂದ 70 ಬೆಲೆಗೆ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಕೊಡಲಾಗುತ್ತಿತ್ತು. ಈಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ  ಲೀಟರ್ ಗೆ ಸುಮಾರು 70 ರೂಪಾಯಿ ಇದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿಯನ್ನು ಖಂಡಿಸಿ 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಆಗಿರುವುದರಿಂದ ಇನ್ನು ಮುಂದೆ ಸೈಕಲ್ ಬಳಸಿ ಎಂದು ಕೇಂದ್ರ ಸಚಿವರಿಗೆ ಸೈಕಲ್ ಕಳುಹಿಸಿ' ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ವಲ್ಪವೇ ಹೆಚ್ಚಳವಾದರೂ ಬಿಜೆಪಿ ನಾಯಕರು ಬೀದಿಗಿಳಿಯುತ್ತಿದ್ದರು‌. ಅವರಿಗೆ ಹಳೆಯದನ್ನು ನೆನಪಿಸಲು ಸೈಕಲ್ ಕಳುಹಿಸುತ್ತಿದ್ದೇವೆ. ಸದ್ಯ ರವಿಶಂಕರ್ ಪ್ರಸಾದ್, ಧರ್ಮದ ಪ್ರಧಾನ್, ಪ್ರಕಾಶ್ ಜಾವ್ಡೇಕರ್, ಸ್ಮೃತಿ ಇರಾನಿಗೆ ಸೈಕಲ್ ಕಳುಹಿಸುತ್ತೇವೆ. ಇದಾದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇನ್ನೂ ಒಳ್ಳೆಯ ಸೈಕಲ್ ಕಳಿಸುತ್ತೇವೆ ಎಂದು ವ್ಯಂಗ್ಯ ಮಾಡಿದರು.

ಅಚ್ಛೆ ದಿನ್ ಬೇಡ, ಹಳೆಯ ದಿನಗಳೇ ಮರುಕಳಿಸಲಿ

ನರೇಂದ್ರ ಮೋದಿಯವರು ಹೇಳುತ್ತಿದ್ದ 'ಅಚ್ಚೇ ದಿನ್' ಈಗ ಜನರಿಗೆ ಬೇಡವಾಗಿದೆ.‌ ಹಳೆಯ ದಿನಗಳು ವಾಪಸ್ ಬರಲಿ ಎಂದು ಆಶಿಸುತ್ತಿದ್ದಾರೆ. ಈ ವಿಷಯವನ್ನು ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಕ್ಕಾಗಿ ಕೂಡ ಸೈಕಲ್ ಕಳುಹಿಸುತ್ತಿದ್ದೇವೆ ಎಂದು ಶ್ರೀನಿವಾಸ್ ಹೇಳಿದರು.

ಇನ್ನೊಂದೆಡೆ ಅಡುಗೆ ಸಿಲಿಂಡರ್ ಗಳ ಬೆಲೆ ಏರಿಕೆ ಕೂಡ ಆಗುತ್ತಿರುವುದರಿಂದ ಪ್ರತಿಭಟನಾ ನಿರತ ಯುವ ಕಾಂಗ್ರೆಸ್ ಕಾರ್ಯಕರ್ತರು ಬಲೂನ್ ಗಳಿಂದ ಮಾಡಿದ ಬೃಹತ್ ಗ್ಯಾಸ್ ಸಿಲಿಂಡರ್ ಗಳನ್ನು ಪ್ರದರ್ಶನ ಮಾಡಿದರು.
Published by:Latha CG
First published: