PM Modi Birthday: ಮೋದಿ ಹುಟ್ಟುಹಬ್ಬವನ್ನು ‘ನಿರುದ್ಯೋಗ ದಿನ‘ ಎಂದು ಆಚರಿಸುತ್ತಿರುವ ಯೂತ್ ಕಾಂಗ್ರೆಸ್

‌ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ನಿರಂತರವಾಗಿ ಪ್ರತಿಭಟನೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಅಖಿಲ ಭಾರತ ಯುವ ಕಾಂಗ್ರೆಸ್ ಇಂದು ದೇಶಾದ್ಯಂತ 'ನಿರುದ್ಯೋಗ ದಿನ' ಆಚರಿಸಲು ಕರೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ನವದೆಹಲಿ(ಸೆ. 17): ದೇಶಾದ್ಯಂತ ನಿರುದ್ಯೋಗ ಸಮಸ್ಯೆ (Unemployment Problem) ತಾರಕಕ್ಕೆ ಏರುತ್ತಿದೆ. ನಿರುದ್ಯೋಗದಿಂದ ಅಪರಾಧ ಕೃತ್ಯಗಳ (Criminal Activities) ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಇಂದು (ಸೆಪ್ಟೆಂಬರ್​ 17) ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ 71ನೇ ಹುಟ್ಟುಹಬ್ಬದ ದಿನವನ್ನು ಅಖಿಲ ಭಾರತ ಯುವ ಕಾಂಗ್ರೆಸ್ (All India Youth Congress) ವತಿಯಿಂದ 'ನಿರುದ್ಯೋಗ ದಿನ' (Unemployment Day) ಎಂದು ಆಚರಿಸಲಾಗುತ್ತಿದೆ.‌

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ (BJP) ತನ್ನ ಪ್ರಣಾಳಿಕೆಯಲ್ಲಿ (Manifesto) ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ (Employment Creation) ಭರವಸೆ ನೀಡಿತ್ತು. ಆಗ ಪ್ರಧಾನ ಮಂತ್ರಿ ಅಭ್ಯರ್ಥಿ (Prime Ministerial Candidate) ಆಗಿದ್ದ ನರೇಂದ್ರ ಮೋದಿ ಕೂಡ 'ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ' ಬಗ್ಗೆ ಪದೇ ಪದೇ ಭಾಷಣ ಮಾಡಿದ್ದರು. ಆದರೆ 2014ರಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರದ (Union Government) ಅಂಕಿಅಂಶಗಳು ಕೂಡ ಸಾರಿ ಸಾರಿ ಹೇಳುತ್ತಿವೆ.

ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್​

ಇತ್ತೀಚೆಗೆ ಕೊರೋನಾ (Corona) ಮತ್ತು ಲಾಕ್ಡೌನ್ (Lockdown) ಪರಿಸ್ಥಿತಿ ಬಂದ ಮೇಲಂತೂ ನಿರುದ್ಯೋಗ ಸಮಸ್ಯೆ ಇನ್ನಷ್ಟು ತೀವ್ರವಾಗಿ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಅಖಿಲ ಭಾರತ ಯುವ ಕಾಂಗ್ರೆಸ್ ಮೋದಿ ಹುಟ್ಟುಹಬ್ಬದ ದಿನವನ್ನು 'ನಿರುದ್ಯೋಗ ದಿನ' ಎಂದು ಆಚರಿಸುತ್ತಿದೆ.

ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ.


‌ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ನಿರಂತರವಾಗಿ ಪ್ರತಿಭಟನೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಅಖಿಲ ಭಾರತ ಯುವ ಕಾಂಗ್ರೆಸ್ ಇಂದು ದೇಶಾದ್ಯಂತ 'ನಿರುದ್ಯೋಗ ದಿನ' ಆಚರಿಸಲು ಕರೆ ನೀಡಿದೆ. ಈ ಬಗ್ಗೆ ನ್ಯೂಸ್ 18 ನೆಟ್ ವರ್ಕ್ (News18 Network) ಜೊತೆ ಮಾತನಾಡಿರುವ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. (All India Youth Congress President Srinivas B.V) 'ಬಿಜೆಪಿ ನಾಯಕರು, ವಿಶೇಷವಾಗಿ ನರೇಂದ್ರ ಮೋದಿ ವರ್ಷಕ್ಕೆ ಎರಡು ಕೋಟಿ ಸುಳ್ಳು ಭರವಸೆ ನೀಡಿ ಯುವಕರ ಮತ ಪಡೆದರು. ಅದರಿಂದಾಗಿಯೇ ಅವರು 2014ರಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಆದರೆ ಇವರು ಉದ್ಯೋಗ ಸೃಷ್ಟಿ ಮಾಡುವ ಬದಲು ಇರುವ ಉದ್ಯೋಗವನ್ನು ಕಸಿದುಕೊಂಡಿದ್ದಾರೆ. ಈ ಬಗ್ಗೆ ಯುವಕರನ್ನು ಜಾಗೃತಗೊಳಿಸಬೇಕಿದೆ. ಆದುದರಿಂದ ಮೋದಿ‌ ಹುಟ್ಟುಹಬ್ಬದ ದಿನವನ್ನು ನಿರುದ್ಯೋಗ ದಿನ ಎಂದು ಆಚರಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Assam: ಪರೀಕ್ಷೆಗೆ Shorts ಹಾಕಿಕೊಂಡು ಬಂದ ವಿದ್ಯಾರ್ಥಿನಿಗೆ ಕರ್ಟನ್ ಸುತ್ತಿ ಎಕ್ಸಾಂ ಬರೆಸಿದ ಸಿಬ್ಬಂದಿ

ಕೇಂದ್ರ ಸರ್ಕಾರದ ಮತ್ತು ವಿಶೇಷವಾಗಿ ನರೇಂದ್ರ ಮೋದಿ ಅವರ ಕೆಟ್ಟ ಆರ್ಥಿಕ ನೀತಿಗಳ (Economic Policy) ಕಾರಣದಿಂದ ಉದ್ಯೋಗಗಳು ನಷ್ಟವಾಗುತ್ತಿವೆ ಹಾಗೂ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಬಗ್ಗೆ ಹರಿಸಬೇಕು, ಉದ್ಯೋಗ ಸೃಷ್ಟಿ ಮಾಡಬೇಕು ಎಂಬುದು ಕೇವಲ ಯುವ ಕಾಂಗ್ರೆಸ್ ಒತ್ತಡವಲ್ಲ. ದೇಶದ ಪ್ರತಿಯೊಬ್ಬ ಯುವಕನ ಆಗ್ರಹವೂ ಹೌದು. ಆದುದರಿಂದ ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಲೆಂದೇ ಮೋದಿ ಹುಟ್ಟುಹಬ್ಬದ ದಿನವನ್ನು ನಿರುದ್ಯೋಗ ದಿನ ಎಂದು ಆಚರಿಸಲಾಗುತ್ತಿದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಚ ಶ್ರೀನಿವಾಸ್ ಬಿ.ವಿ. ಶ್ರೀನಿವಾಸ್ ನ್ಯೂಸ್ 18 ನೆಟ್ ವರ್ಕ್ ಗೆ ತಿಳಿಸಿದ್ದಾರೆ.
Published by:Latha CG
First published: