ನಿಮ್ಮ ಒಂದು ಮತ ಭಾರೀ ಬದಲಾವಣೆ ತರಬಹುದು; ಅದಕ್ಕೆ ಈ ವಿಡಿಯೋ ಸಾಕ್ಷಿ

‘ನನ್ನ ಒಂದು ಮತದಿಂದ ಆಗುವು ಬದಲಾವಣೆಯಾದರೂ ಏನು?’ ಈ ರೀತಿಯ ಆಲೋಚನೆಯನ್ನು ಎಂದಿಗೂ ಮಾಡಬೇಡಿ. ನಮ್ಮ ಏಕತೆಯೇ ನಮ್ಮ ವೈವಿಧ್ಯತೆ ಆಗಲಿ. ದೇಶದ ಉಜ್ವಲ ಭವಿಷ್ಯಕ್ಕೆ ನಿಮ್ಮ ಮತ ಬಹಳ ಪ್ರಮುಖವಾಗಲಿ. ಈ ವಿಡಿಯೋ ನಿಮಗೆ ಮತ ಚಲಾವಣೆ ಮಾಡುವಂತೆ ಸ್ಫೂರ್ತಿ ನೀಡುತ್ತದೆ.

news18
Updated:April 25, 2019, 3:39 PM IST
ನಿಮ್ಮ ಒಂದು ಮತ ಭಾರೀ ಬದಲಾವಣೆ ತರಬಹುದು; ಅದಕ್ಕೆ ಈ ವಿಡಿಯೋ ಸಾಕ್ಷಿ
ಎಚ್​ಡಿಎಫ್​ಸಿ, ನ್ಯೂಸ್​18 ಕ್ಯಾಂಪೇನ್​
news18
Updated: April 25, 2019, 3:39 PM IST
ಇದು ಚುನಾವಣಾ ಸಮಯ. ಸದ್ಯ ಮುಂದಿನ ಸರ್ಕಾರದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಕೆಲವರು ಮತದಾನ ಮಾಡದೇ ಇರಲು ಕಾರಣ ನೀಡುತ್ತಿದ್ದಾರೆ. ಅವರು ಈ ರೀತಿ ಕಾರಣಗಳನ್ನು 2014ರ ಚುನಾವಣೆಯಲ್ಲೂ ನೀಡಿದ್ದರು ಎನ್ನುವುದು ಬೇಸರದ ಸಂಗತಿ.

ಕಳೆದಬಾರಿ 84.3 ಕೋಟಿ ಮತದಾರರ ಪೈಕಿ ಶೇ.66 ಜನರು ಮಾತ್ರ ಮತದಾನ ಮಾಡಿದ್ದರು. ಉಳಿದ ಶೇ.34 ಜನರು ಮತದಾನ ಮಾಡಿಲ್ಲ. ಹಾಗಾಗಿ ಅವರಿಗೂ ಮತದಾನ ಮಾಡುವಂತೆ ಕೇಳಿಕೊಳ್ಳೋಣ. ದೇಶದ ಭವಿಷ್ಯ ನಿರ್ಧಾರಕ್ಕೆ ಅವರೂ ಕಾರಣರಾಗುವಂತೆ ಮಾಡೋಣ.

2019ರ ಲೋಕಸಭಾ ಚುನಾವಣೆಯಲ್ಲಿ 90 ಕೋಟಿ ಜನರು ಮತದಾನ ಮಾಡಲು ಅರ್ಹರಾಗಿದ್ದಾರೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಚುನಾವಣೆ. ಅಂತೆಯೇ ಮತದಾನ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಬೇಕು ಎನ್ನುವ ನಿರೀಕ್ಷೆ ಇದೆ. ದೇಶದ ಜನತೆ ಶೇ.100 ಮತದಾನ ಮಾಡದೆ ಸರ್ಕಾರ ಮಾತ್ರ ಸಂಪೂರ್ಣ ಬದ್ಧವಾಗಿರಬೇಕು ಎಂದು ನಾವು ಹೇಗೆ ನಿರೀಕ್ಷಿಸಬಹುದು?

‘ನನ್ನ ಒಂದು ಮತದಿಂದ ಆಗುವು ಬದಲಾವಣೆಯಾದರೂ ಏನು?’ ಈ ರೀತಿಯ ಆಲೋಚನೆಯನ್ನು ಎಂದಿಗೂ ಮಾಡಬೇಡಿ. ನಮ್ಮ ಏಕತೆಯೇ ನಮ್ಮ ವೈವಿಧ್ಯತೆ ಆಗಲಿ. ದೇಶದ ಉಜ್ವಲ ಭವಿಷ್ಯಕ್ಕೆ ನಿಮ್ಮ ಮತ ಬಹಳ ಪ್ರಮುಖವಾಗಲಿ. ಈ ವಿಡಿಯೋ ನಿಮಗೆ ಮತ ಚಲಾವಣೆ ಮಾಡುವಂತೆ ಸ್ಫೂರ್ತಿ ನೀಡುತ್ತದೆ.ಈ ರೀತಿಯ ವಿಭಿನ್ನ ಹೆಜ್ಜೆಯನ್ನು ನೆಟ್ವರ್ಕ್ 18 ಹಾಗೂ ಎಚ್ ಡಿಎಫ್ ಸಿ ಲೈಫ್ ಆರಂಭಿಸಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ. #AajSawaaroApnaKal
Loading...

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತಹಾಕುವ ಶಪಥ ಮಾಡಿ: https://kannada.news18.com/
First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...