• Home
  • »
  • News
  • »
  • national-international
  • »
  • I&B Ministry: ನವ ಮಾಧ್ಯಮದತ್ತ ಯುವ ಪೀಳಿಗೆಯ ಆಕರ್ಷಣೆ; ಭಾರತದಲ್ಲಿ 800ಕ್ಕೂ ಅಧಿಕ ಚಾನೆಲ್​ಗಳು

I&B Ministry: ನವ ಮಾಧ್ಯಮದತ್ತ ಯುವ ಪೀಳಿಗೆಯ ಆಕರ್ಷಣೆ; ಭಾರತದಲ್ಲಿ 800ಕ್ಕೂ ಅಧಿಕ ಚಾನೆಲ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

“ಭಾರತದ ಮಾಧ್ಯಮದ ವಿಷಯವು ವಿಶ್ವಾಸಾರ್ಹತೆಯ ಸವಾಲಾಗಿದೆ ಮತ್ತು ಇದು ಸರ್ಕಾರಕ್ಕೆ ಒಂದು ರೀತಿಯ ಸವಾಲಾಗಿದೆ” ಎಂದು ಕಾರ್ಯದರ್ಶಿ ಹೇಳಿದರು.

  • Trending Desk
  • 4-MIN READ
  • Last Updated :
  • Share this:

ನವದೆಹಲಿ; ಜಗತ್ತಿನಲ್ಲಿ ಸ್ಮಾರ್ಟ್‌ಪೋನ್‌ ಬಳಕೆದಾರರು (Smartphone Users) ಗಣನೀಯವಾಗಿ ಏರುತ್ತಲೇ ಇದ್ದಾರೆ. ಹಾಗೆಯೇ ಭಾರತದಲ್ಲೂ (India) ಸಹ ದಿನದಿಂದ ದಿನಕ್ಕೆ ಸ್ಮಾರ್ಟ್‌ಪೋನ್‌ ಬಳಕೆದಾರರು ಹೆಚ್ಚುತ್ತಿದ್ದಾರೆ. ಭಾರತವು 1.2 ಬಿಲಿಯನ್ ಮೊಬೈಲ್ ಫೋನ್ (Mobile Phone Users) ಬಳಕೆದಾರರನ್ನು ಹೊಂದಿದ್ದು, ಅದರಲ್ಲಿ ಬರೋಬ್ಬರಿ 600 ಮಿಲಿಯನ್ (600 million Users) ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ (Ministry of Information and Broadcasting secretary Apurva Chandra) ಮಾಧ್ಯಮಗಳಿಗೆ ಹೇಳಿದ್ದಾರೆ.


ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆ 


"ಕಡಿಮೆ ಡೇಟಾ ದರಗಳ ಜೊತೆಗೆ, ಸ್ಮಾರ್ಟ್ ಫೋನ್‌ಗಳ ಅತಿಯಾದ ಬಳಕೆಯಿಂದ ಸ್ಮಾರ್ಟ್‌ಪೋನ್‌ ಬಳಕೆದಾರರು ಮೊಬೈಲ್ ಸಾಧನಗಳ ಮೂಲಕ ಹೆಚ್ಚಿನ ಪ್ರಮಾಣದ ಮಾಹಿತಿ ಮತ್ತು ಮನರಂಜನೆಯನ್ನು ಪಡೆಯುತ್ತಿದ್ದಾರೆ" ಎಂದು ಅಪೂರ್ವ ಚಂದ್ರ ಅವರನ್ನು ಉಲ್ಲೇಖಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಭಾರತದಲ್ಲಿ ಸೋಷಿಯಲ್‌ ಮೀಡಿಯಾವು ಅತಿ ವೇಗವಾಗಿ ಬೆಳೆಯುತ್ತಿದೆ. ಅದರ ಜೊತೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹ ಮುಖ್ಯ ಕಾರಣವಾಗಿದೆ.


ಅಬುದಾಬಿಯಲ್ಲಿ ಅಪೂರ್ವ ಚಂದ್ರ ಹೇಳಿಕೆ


ಇದು ನೈಸರ್ಗಿಕ ವಿಕೋಪಗಳಲ್ಲಿ ಆಗುವ ಅನೇಕ ಜೀವಹಾನಿಯನ್ನು ಕಡಿಮೆ ಮಾಡಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ ನಡೆದ ಮೊದಲ ವಿಶ್ವ ಮಾಧ್ಯಮ ಕಾಂಗ್ರೆಸ್‌ನಲ್ಲಿ ಕಾರ್ಯದರ್ಶಿ ಅಪೂರ್ವ ಮಾತನಾಡಿ ಈ ಮಾಹಿತಿಯನ್ನು ಹಂಚಿಕೊಂಡರು.


youngsters shifted new media in india stg mrq
ಸಾಂಕೇತಿಕ ಚಿತ್ರ


ಅಪೂರ್ವ ಚಂದ್ರ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅಭಿನಂದಿಸಿದರು. ಆತಿಥೇಯ ದೇಶದೊಂದಿಗೆ ಭಾರತವು ಬಹಳಷ್ಟು ಸಾಮ್ಯತೆಗಳನ್ನು ಹೊಂದಿದೆ ಎಂದು ಅವರು ಹೇಳಿದರು.


ಭಾರತದಲ್ಲಿ 800ಕ್ಕೂ ಚಾನೆಲ್​ಗಳು


ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರು “ಭಾರತದ ಮಾಧ್ಯಮ ಭೂದೃಶ್ಯದ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು. ಅದರ ಜೊತೆಗೆ ಮತ್ತು ಭಾರತವು 897 ದೂರದರ್ಶನ ಚಾನೆಲ್‌ಗಳನ್ನು ಒಳಗೊಂಡಿದ್ದು, ಈಗಲೂ ಸಹ ಟ್ರೆಡಿಷನಲ್‌ ಮೀಡಿಯಾ ಅಥವಾ ಸಾಂಪ್ರದಾಯಿಕ ಮಾಧ್ಯಮವನ್ನು ಹೊಂದಿರುವ ದೇಶವಾಗಿದೆ ಎಂದು ಹೇಳಿದರು.


ಹೊಸ ಮಾಧ್ಯಮಗಳತ್ತ ಯುವಕರ ಆಕರ್ಷಣೆ


ಅದರಲ್ಲಿ 350 ಕ್ಕೂ ಹೆಚ್ಚು ಸುದ್ದಿ ವಾಹಿನಿಗಳು ಮತ್ತು 80 ಸಾವಿರಕ್ಕೂ ಹೆಚ್ಚು ಪತ್ರಿಕೆಗಳು ವಿವಿಧ ಭಾಷೆಗಳಲ್ಲಿ ಹೊರಬರುತ್ತಿವೆ. ಇದರೊಂದಿಗೆ, ಇತ್ತೀಚೆಗೆ ಯುವಕರು ಈ ಹೊಸ ಮಾಧ್ಯಮದಿಂದ ಮಾಹಿತಿಯನ್ನು ಪಡೆಯುವ ಮೂಲಕ ಹೊಸ ಮಾಧ್ಯಮದತ್ತ ಆಸಕ್ತಿ ತೋರಿಸುತ್ತಿದ್ದಾರೆ” ಎಂದು ಹೇಳಿದರು.


“ಭಾರತದ ಮಾಧ್ಯಮದ ವಿಷಯವು ವಿಶ್ವಾಸಾರ್ಹತೆಯ ಸವಾಲಾಗಿದೆ ಮತ್ತು ಇದು ಸರ್ಕಾರಕ್ಕೆ ಒಂದು ರೀತಿಯ ಸವಾಲಾಗಿದೆ” ಎಂದು ಕಾರ್ಯದರ್ಶಿ ಹೇಳಿದರು.


ಈ ವಿದ್ಯಮಾನದ ಬಗ್ಗೆ ಪರೀಕ್ಷೆಯನ್ನು ನಡೆಸಿ ಸೂಕ್ತ ಮಾರ್ಗವನ್ನು ಕಂಡುಹಿಡಿಯುವುದು ಉತ್ತಮ ಎಂದು ಅಪೂರ್ವ ಚಂದ್ರ ಅಭಿಪ್ರಾಯಪಟ್ಟಿದ್ದಾರೆ.. ಭಾರತವು ಸ್ವಯಂ ನಿಯಂತ್ರಣ ಕಾರ್ಯವಿಧಾನವನ್ನು ಅಳವಡಿಸಿಕೊಂಡಿರುವ ದೇಶವಾಗಿದೆ. ಮಾಧ್ಯಮ ಸಂಸ್ಥೆಯು ಪ್ರಾಥಮಿಕ ಹಂತದ ಟೀಕೆಗಳನ್ನು ಸಾಮಾಜಿಕ ಮಟ್ಟದಲ್ಲಿ ಪರಿಹರಿಸಬಹುದು ಎಂದು ಖಚಿತಪಡಿಸುತ್ತದೆ ಎಂದು ಕಾರ್ಯದರ್ಶಿ ಅವರು ಹೇಳಿದರು.


ಇದನ್ನೂ ಓದಿ:  Cat Missing: ಹೆಸರು ಫ್ರೀಡಾ, 5 ವರ್ಷ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಾಣೆಯಾಗಿದೆ!


ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬಗ್ಗೆ ಒಂದಿಷ್ಟು ಮಾಹಿತಿ


ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರದ ಮಂತ್ರಿಮಂಡಲದ ಸಂಸ್ಥೆಯಾಗಿದ್ದು, ಮಾಹಿತಿ, ಪ್ರಸಾರ, ಪತ್ರಿಕಾ ಮತ್ತು ಭಾರತದ ಸಿನೆಮಾ ಕ್ಷೇತ್ರಗಳಲ್ಲಿ ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಈ ಸಚಿವಾಲಯವು ಹೊಂದಿದೆ.


youngsters shifted new media in india stg mrq
ಸ್ಮಾರ್ಟ್‌ಫೋನ್‌


ಭಾರತ ಸರ್ಕಾರದ ಪ್ರಸಾರ ವಿಭಾಗವಾದ ಪ್ರಸಾರ್ ಭಾರತಿಯ ಆಡಳಿತದ ಜವಾಬ್ದಾರಿಯನ್ನು ಸಚಿವಾಲಯ ಹೊಂದಿದೆ. ಭಾರತದಲ್ಲಿ ಪ್ರಸಾರವಾಗುವ ಸಿನಿಮಾಗಳ ನಿಯಂತ್ರಣಕ್ಕೆ ಈ ಸಚಿವಾಲಯದ ಅಡಿಯಲ್ಲಿರುವ ಇತರ ಪ್ರಮುಖ ಶಾಸನಬದ್ಧ ಸಂಸ್ಥೆಯು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣವಾಗಿದೆ.


ಇದನ್ನೂ ಓದಿ:  Asha Workers: ನೂರರ ವಸಂತದಲ್ಲಿ ಹೇಗಿರಬೇಕು ಭಾರತ? ಆಶಾ ಕಾರ್ಯಕರ್ತೆ ಹೇಳಿದ್ದೇನು?


ಮಾಹಿತಿ ಸಚಿವಾಲಯದ ಉಸ್ತುವಾರಿಯನ್ನು ಪ್ರಸ್ತುತ ಮಂತ್ರಿಗಳಾದ ಪ್ರಕಾಶ್‌ ಜಾವಡೇಕರ್‌ ನಿರ್ವಹಿಸುತ್ತಿದ್ದಾರೆ.

Published by:Mahmadrafik K
First published: