• Home
  • »
  • News
  • »
  • national-international
  • »
  • Suicide Case: ಈಗ ಮದ್ವೆ ಮಾಡಿ ನೋಡೋಣ! ವಿಚಿತ್ರ ಡೆತ್‌ನೋಟ್ ಬರೆದಿಟ್ಟು ಹುಡುಗಿ ಸೂಸೈಡ್!

Suicide Case: ಈಗ ಮದ್ವೆ ಮಾಡಿ ನೋಡೋಣ! ವಿಚಿತ್ರ ಡೆತ್‌ನೋಟ್ ಬರೆದಿಟ್ಟು ಹುಡುಗಿ ಸೂಸೈಡ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಕೆ ಇನ್ನು ಎರಡು ವಾರಗಳ ನಂತರ ಹಸೆಮಣೆ ಏರಬೇಕಿತ್ತು. ಆದರೆ ಮದುವೆ ತನಗೆ ಇಷ್ಟವಿಲ್ಲದಿದ್ದರೂ ನಿಶ್ಚಯ ಮಾಡಿದ್ದಾರೆಂಬ ಕಾರಣಕ್ಕೆ ಯುವತಿ ದುಡುಕಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡು, ಮಸಣ ಸೇರಿದ್ದಾಳೆ!

  • News18 Kannada
  • Last Updated :
  • Lucknow, India
  • Share this:

    ಲಕ್ನೋ: ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ (Marriage) ನಿಶ್ಚಯ ಮಾಡಿದ್ದರಿಂದ ಯುವತಿಯೊಬ್ಬಳು (Young Woman) ಡೆತ್ ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow) ನಡೆದಿದೆ. ವರದಿಗಳ ಪ್ರಕಾರ, ಲಕ್ನೋದ ಕೃಷ್ಣನಗರ ಪ್ರದೇಶದ ಬಾಡಿಗೆ ಕೊಠಡಿಯಲ್ಲಿ 28 ವರ್ಷದ ಯುವತಿಯ ಶವ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಎರಡು ವಾರಗಳ ನಂತರ ಯುವತಿಯ ಮದುವೆ ನಡೆಯಬೇಕಿತ್ತು. ಆದರೆ ಆಕೆಯ ಮದುವೆ ನಿಶ್ಚಯವಾಗಿದ್ದು ಆಕೆಯ ಇಚ್ಛೆಗೆ ವಿರುದ್ಧವಾಗಿತ್ತು.


    ಬೇಡವೆಂದ್ರೂ ಮದುವೆ ನಿಶ್ಚಯವಾಗಿತ್ತು


    ಯುವತಿಯ ಆತ್ಮಹತ್ಯೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಮೃತ ಯುವತಿಯನ್ನು ಪ್ರಿಯಾಂಕಾ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಆಕೆಗೆ ಇನ್ನು ಎರಡು ವಾರಗಳ ನಂತರ ಹಸೆಮಣೆ ಏರಬೇಕಿತ್ತು. ಆದರೆ ಮದುವೆ ತನಗೆ ಇಷ್ಟವಿಲ್ಲದಿದ್ದರೂ ನಿಶ್ಚಯ ಮಾಡಿದ್ದಾರೆಂಬ ಕಾರಣಕ್ಕೆ ಯುವತಿ ದುಡುಕಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡು, ಮಸಣ ಸೇರಿದ್ದಾಳೆ.


    ಮದುವೆ ನಿಶ್ಚಯವಾದ ನಂತರ ಹುಡುಗಿ ಖಿನ್ನತೆಗೆ ಒಳಗಾಗಿದ್ದಳು


    ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೃತ ಯುವತಿ ಪ್ರಿಯಾಂಕಾ ಶ್ರೀವಾಸ್ತವ್ , ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ನಿಶ್ಚಯಿಸಿದ್ದ ಹಿನ್ನೆಲೆ ಹುಡುಗಿ ಖಿನ್ನತೆಗೆ ಒಳಗಾಗಿದ್ದಳು. ಕೆಲ ವರ್ಷಗಳ ಹಿಂದೆ ಮೃತ ಯುವತಿಯ ತಾಯಿ ಮತ್ತು ತಂದೆ ಮೃತಪಟ್ಟಿದ್ದರು.


    ಇದನ್ನೂ ಓದಿ: ಅಮ್ಮನ ಬಟ್ಟೆ ಧರಿಸಿ ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕ, ಹೆತ್ತವರಿಲ್ಲದಾಗ ನೇಣಿಗೆ ಶರಣು!


    ಇನ್‌ಸ್ಪೆಕ್ಟರ್ ಇನ್ ಚಾರ್ಜ್ ವಿಕ್ರಮ್ ಸಿಂಗ್ ಪ್ರಕಾರ, ಪ್ರಿಯಾಂಕಾ ಶ್ರೀವಾಸ್ತವ್ ಎಲ್ ಡಿಎ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆಕೆ ತನ್ನ ಅಣ್ಣ ಮತ್ತು ಅತ್ತಿಗೆಯ ಮನೆಯ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡ್ತಿದ್ದಳು.


    ಸೋಮವಾರ ಮಧ್ಯಾಹ್ನದವರೆಗೆ ಯುವತಿ ಕೊಠಡಿಯ ಬಾಗಿಲು ತೆರೆಯದೇ ಹೋದ ಕಾರಣ. ಹಾಗೂ ತುಂಬಾ ಹೊತ್ತಿನವರೆಗೆ ಆಕೆ ಹೊರಗೆ ಬಾರದೆ ಇದ್ದಾಗ ಅನುಮಾನಗೊಂಡ ಮನೆ ಮಾಲೀಕರು ಬಾಗಿಲು ತಟ್ಟಿದ್ದಾರೆ.


    ಬಹಳ ಹೊತ್ತಿನವರೆಗೆ ಮನೆ ಮಾಲೀಕರು ಬಾಗಿಲು ಬಡಿದರೂ ಸಹ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಾಗಿಲು ಮುರಿದು ಒಳ ಹೋಗಿ ನೇತಾಡುತ್ತಿದ್ದ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಈ ವೇಳೆ ಆಕೆಯ ಕೊಠಡಿಯಿಂದ ಸೂಸೈಡ್ ನೋಟ್ ಪತ್ತೆ ಆಗಿದೆ.


    ನವೆಂಬರ್ 25 ರಂದು ಹುಡುಗಿಯ ಮದುವೆ ನಿಶ್ಚಯವಾಗಿತ್ತು


    ಪೊಲೀಸರು ಆಕೆಯ ಕೊಠಡಿಯೊಳಗೆ ಪ್ರವೇಶ ಮಾಡಿದಾಗ ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿದ್ದ ಆತ್ಮಹತ್ಯೆ ಲೆಟರ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ಮೃತ ಯುವತಿ ಪ್ರಿಯಾಂಕಾ ಶ್ರೀವಾಸ್ತವ್, 'ಬೈ ಬೈ ಕುಟುಂಬ ಸದಸ್ಯರೇ, ಲೋ ಕರ್ ಲೋ ಅಬ್ ಶಾದಿ (ತಗೋಳಿ ಇವಾಗ್ ಮದ್ವೆ ಆಗಿ )’ ಎಂದು ಬರೆದಿದ್ದಾಳೆ. ಮೊಬೈಲ್ ಫೋನ್ ನ ಸಿಮ್ ಕಾರ್ಡ್ ಬಳಕೆ ಮಾಡಬೇಡಿ ಮತ್ತು ದೇಹವನ್ನು ಸುಡಬೇಡಿ ಎಂದು ಬರೆದಿದ್ದಾಳೆ.


    ಇದನ್ನೂ ಓದಿ: ಕೂದಲು ಉದುರಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ, ಡೆತ್‌ ನೋಟ್‌ನಲ್ಲಿತ್ತು ಡಾಕ್ಟರ್ ಹೆಸರು!


    ಹುಡುಗಿಯ ಕುಟುಂಬ ಸದಸ್ಯರ ಪ್ರಕಾರ, ಮೃತ ಯುವತಿ ಪ್ರಿಯಾಂಕಾ ಶ್ರೀವಾಸ್ತವ್, ಎಚ್‌ ಡಿಎಫ್‌ ಸಿ ಬ್ಯಾಂಕ್‌ ನಲ್ಲಿ ಉದ್ಯೋಗಿ ಆಗಿದ್ದರು. ನವೆಂಬರ್ 25 ರಂದು ಆಗ್ರಾದಲ್ಲಿ ಮದುವೆ ನಡೆಯಬೇಕಿತ್ತು. ಇದರಿಂದಾಗಿ ಆಕೆ ಕೆಲಸ ಬಿಡಬೇಕಾದ ಸ್ಥಿತಿ ಬಂದಿತ್ತು. ಕುಟುಂಬದಲ್ಲಿ ಪ್ರಿಯಾಂಕಾ ಕಿರಿಯವಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Published by:renukadariyannavar
    First published: