Girl Death: ಪ್ರಿಯಕರನ ನೋಡಲು ಸೀರೆ ಹತ್ತಿ ಬಾಲ್ಕನಿಗೆ ಹೋದವಳು ಕೈ ಜಾರಿ ಕೆಳಕ್ಕೆ ಬಿದ್ದಳು! ನೋಡ ನೋಡುತ್ತಿದ್ದಂತೆ ಅನಾಹುತ

ಚೆನ್ನೈನಲ್ಲಿ ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯುವತಿಯೊಬ್ಬಳು ಕಟ್ಟಡದ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು, ಸಾವನ್ನಪ್ಪಿದ್ದಾಳೆ. ಹಾಗಾದ್ರೆ ಆಕೆ ಯಾರು? ಆಕೆಯ ಸಾವಿಗೆ ಕಾರಣವೇನು? ಆಕೆಯೇ ಮಾಡಿಕೊಂಡ ಸಣ್ಣ ತಪ್ಪೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮಿಳುನಾಡು: ಆಕೆ ಐಎಎಸ್‌ ಅಧಿಕಾರಿಯಾಗಿ (IAS Officer), ದೇಶ ಸೇವೆ ಮಾಡಬೇಕು ಎಂಬ ಕನಸು (Dreams) ಕಂಡವಳು. ಅದಕ್ಕಾಗಿ ಕಷ್ಟಪಟ್ಟು ಓದಿ, ಐಎಎಸ್ ಪರೀಕ್ಷೆ (IAS Exam) ಪಾಸಾಗಬೇಕು (Pass) ಅಂತ ತಯಾರಿ (Preparation) ನಡೆಸಿದ್ದವಳು. ಆದರೆ ಆಕೆಯ ಕನಸು ನನಸಾಗುವ ಮುನ್ನವೇ ಆಕೆ ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ಸಾವನ್ನಪ್ಪಿದ್ದು (Died) ಆಕೆಯೇ ಮಾಡಿಕೊಂಡ ಚಿಕ್ಕ ಎಡವಟ್ಟಿನಿಂದ. ಹೌದು ತಮಿಳುನಾಡಿನ (Tamil Nadu) ಚೆನ್ನೈನಲ್ಲಿ (Chennai) ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯುವತಿಯೊಬ್ಬಳು ಕಟ್ಟಡದ ಬಾಲ್ಕನಿಯಿಂದ (balcony) ಆಕಸ್ಮಿಕವಾಗಿ ಬಿದ್ದು, ಸಾವನ್ನಪ್ಪಿದ್ದಾಳೆ. ಹಾಗಾದ್ರೆ ಆಕೆ ಯಾರು? ಆಕೆಯ ಸಾವಿಗೆ ಕಾರಣವೇನು? ಆಕೆಯೇ ಮಾಡಿಕೊಂಡ ಸಣ್ಣ ತಪ್ಪೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಕಟ್ಟಡದ ಬಾಲ್ಕನಿಯಿಂದ ಬಿದ್ದು ಯುವತಿ ಸಾವು

ತಮಿಳುನಾಡಿನ ಚೆನ್ನೈನಲ್ಲಿ ಬಹುಮಹಡಿ ಕಟ್ಟಡದ ಮೂರನೇ ಫ್ಲೋರ್ ಬಾಲ್ಕನಿಯಿಂದ ಬಿದ್ದು, ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಮಕ್ಕಲ್ ಜಿಲ್ಲೆಯ, 25 ವರ್ ವಯಸ್ಸಿನ ಮಖಿಲಮತಿ ಎಂಬಾಕೆಯೇ ಮೃತ ಯುವತಿ.

ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯುವತಿ

ಮೃತ ಯುವತಿ ಮಖಿಲಮತಿ  ಎಂಎಸ್ಸಿ, ಭೌತಶಾಸ್ತ್ರ ಪದವೀಧರಳಾಗಿದ್ದು, ಆಕೆ ನುಂಗಂಬಾಕ್ಕಂನಲ್ಲಿರುವ ಖಾಸಗಿ ಸಿವಿಲ್ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಾ, ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದ್ದಳು ಎನ್ನಲಾಗಿದೆ. ಈಕೆ ಜಾಂಬಜಾರ್​​ನಲ್ಲಿ ಒಂದು ಅಪಾರ್ಟ್​ಮೆಂಟ್‌ನಲ್ಲಿ ವಾಸ್ತವ್ಯ ಹೂಡಿದ್ದಳು.

ಇದನ್ನೂ ಓದಿ: Child Sale: ಮೊಮ್ಮಗುವನ್ನೇ ಮಾರಾಟ ಮಾಡಿದ ಅಜ್ಜ! ಹೆತ್ತ ತಾಯಿ ಗೋಳು ಯಾರಿಗೂ ಬೇಡ

ಪ್ರಿಯಕರನು ನೋಡಲು ಸೀರೆ ಹತ್ತಿ ಮೇಲಕ್ಕೆ ಹೋಗಿದ್ದ ಯುವತಿ

ಮೃತ ಮಖಿಲಮತಿ ಯುವಕನೊಬ್ಬನನ್ನು ಪ್ರೀತಿಸುತ್ತಾ ಇದ್ದಳು ಎನ್ನಲಾಗಿದೆ. ಆಕೆಯ ಪ್ರಿಯಕರ ಐಟಿ ಉದ್ಯೋಗಿಯಾಗಿದ್ದು, ಅದೇ ಅಪಾರ್ಟ್‌ಮೆಂಟ್​​​​​ನಲ್ಲಿ ವಾಸವಾಗಿದ್ದ. ಮಖಿಲಮತಿ ಮತ್ತು ಆ ಯುವಕ ಅಪಾರ್ಟ್‌ಮೆಂಟ್‌ನಲ್ಲಿ ಆಗಾಗ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ನಿನ್ನೆಯೂ ಸಹ ಪ್ರಿಯಕರನನ್ನು ನೋಡಲು ಆತ ಇರುವ ಮೂರನೇ ಫ್ಲೋರ್‌ಗೆ ಸೀರೆ ಕಟ್ಟಿಕೊಂಡು ಹೋಗಿದ್ದಾಳೆ.

ಆಯ ತಪ್ಪಿ ಕೆಳಕ್ಕೆ ಬಿದ್ದು ಯುವತಿ ಸಾವು

ರಾತ್ರಿ ಮಖಿಲಮತಿ ತರಗತಿ ಮುಗಿಸಿಕೊಂಡು ಮನೆಗೆ ಬಂದು ಸ್ನೇಹಿತನ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಆತ ಬಾಗಿಲು ತೆರೆಯಲಿಲ್ಲ. ಬಳಿಕ ಅವರ ಮೊಬೈಲ್‌ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಯುವತಿ, ಸೀರೆಯನ್ನು ಬಳಸಿಕೊಂಡು 3ನೇ ಮಹಡಿಯಿಂದ ಬಾಲ್ಕನಿಗೆ ಇಳಿದು ಹಿಂಬಾಗಿಲಿನ ಮೂಲಕ ಮನೆಗೆ ಪ್ರವೇಶಿಸಲು ಯೋಜಿಸಿದ್ದಳು. ಅದರಂತೆ ಸೀರೆಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕೆಳಗೆ ಇಳಿಯುತ್ತಿದ್ದಾಗ ಸೀರೆ ಹರಿದಿದ್ದು, ಮಖಿಲಮತಿ 3ನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.

ಪೊಲೀಸರಿಂದ ಯುವತಿಯ ಪ್ರಿಯಕರನ ವಿಚಾರಣೆ

ಆಕೆಯ ಪ್ರಿಯಕರ ಖಾಸಗಿ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮನೆಗೆ ಬಂದವನು ಸುಸ್ತಾಗಿ ನಿದ್ದೆಗೆ ಜಾರಿದ್ದು, ಯುವತಿ ಬಾಗಿಲು ಬಡಿದ ಸದ್ದು ಕೇಳಿಸಲಿಲ್ಲ ಎಂದು ತನಿಖೆ ವೇಳೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಮಾಹಿತಿ ಪಡೆದ ಜಾಂಬಜಾರ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Divorce Case: ಹೆಂಡತಿ ಓದಿದ ಮಾತ್ರಕ್ಕೆ ಕೆಲಸ ಮಾಡಲೇಬೇಕು ಅಂತ ಬಲವಂತ ಮಾಡಂಗಿಲ್ಲ ಎಂದ ಕೋರ್ಟ್

ಮೃತ ಯುವತಿ  ಮಖಿಲಮತಿ ಐಎಎಸ್‌ ಅಧಿಕಾರಿಯಾಗಿ, ದೇಶ ಸೇವೆ ಮಾಡಬೇಕು ಎಂಬ ಕನಸು ಕಂಡವಳು. ಅದಕ್ಕಾಗಿ ಕಷ್ಟಪಟ್ಟು ಓದಿ, ಐಎಎಸ್ ಪರೀಕ್ಷೆ ಪಾಸಾಗಬೇಕು  ಅಂತ ತಯಾರಿ ನಡೆಸಿದ್ದವಳು. ಆದರೆ ಆಕೆಯ ಕನಸು ನನಸಾಗುವ ಮುನ್ನವೇ ಆಕೆ ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾಳೆ.  ಆಕೆ ಮಾಡಿಕೊಂಡ ಚಿಕ್ಕ ಎಡವಟ್ಟಿನಿಂದ ಇದೀಗ ಆಕೆ ಸಾವನ್ನಪ್ಪಿದ್ದಾಳೆ.
Published by:Annappa Achari
First published: