HOME » NEWS » National-international » YOUNG ENTREPRENEUR VIDYUT MOHAN SAYS BUDGET NEEDS TO FOCUS ON TECH R AND D SNVS

Budget 2021 - ಬಜೆಟ್​ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕು? ಹೊಸ ತಲೆಮಾರಿನ ಯುವ ಉದ್ಯಮಿ ಏನಂತಾರೆ?

ಪರಿಸರಕ್ಕೆ ಧಕ್ಕೆಯಾಗದ ಸುಸ್ಥಿರ ತಂತ್ರಜ್ಞಾನ ಆವಿಷ್ಕಾರಕ್ಕೆ ಬಜೆಟ್ ಉತ್ತೇಜನ ನೀಡಬೇಕು. ಅಂಥವರ ಕೈಬಲಪಡಿಸಲು ಸರ್ಕಾರವೇ ಧನಸಹಾಯ ಒದಗಿಸಬೇಕು. ಟೆಕ್ನಾಲಜಿ ಆರ್ ಅಂಡ್ ಡಿಗೆ ಸರ್ಕಾರ ಗಮನ ಹರಿಸಬೇಕು ಎಂದು ಯುವ ಉದ್ಯಮಿ ವಿದ್ಯುತ್ ಮೋಹನ್ ಅಭಿಪ್ರಾಯಪಡುತ್ತಾರೆ.

news18
Updated:February 1, 2021, 8:34 AM IST
Budget 2021 - ಬಜೆಟ್​ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕು? ಹೊಸ ತಲೆಮಾರಿನ ಯುವ ಉದ್ಯಮಿ ಏನಂತಾರೆ?
ವಿದ್ಯುತ್ ಮೋಹನ್
  • News18
  • Last Updated: February 1, 2021, 8:34 AM IST
  • Share this:
ನವದೆಹಲಿ(ಫೆ. 01): ಮೂವತ್ತು ವರ್ಷಗಳ ಹಿಂದೆ ಭಾರತದ ಆರ್ಥಿಕತೆ ಉದಾರೀಕರಣ ನೀತಿಗೆ ತೆರೆದುಕೊಂಡಿತ್ತು. ದೊಡ್ಡಮಟ್ಟದಲ್ಲಿ ಕೈಗಾರಿಕಾ ಕ್ರಾಂತಿ ಆಯಿತು. ಅದರ ಜೊತೆಗೇ ಸೈಡ್ ಎಫೆಕ್ಟ್ ಆಗಿ ಪರಿಸರ ಮಾಲಿನ್ಯವೂ ಅಪಾಯಕಾರಿ ಮಟ್ಟಕ್ಕೆ ಹೆಚ್ಚಾಗಿದೆ. ಪಾಶ್ಚಿಮಾತ್ಯ ದೇಶಗಳಿಂದ ಕೈಗಾರಿಕೆಗಳು ಭಾರತದಲ್ಲಿ ತಯಾರಿಕೆ ಪ್ರಾರಂಭಿಸಿ ಇಲ್ಲಿನ ಪರಿಸರವನ್ನ ಕುಲಗೆಡಿಸಿವೆ. ಉದಾರೀಕರಣ ನೀತಿ ಭಾರತ ಒಂದು ರೀತಿಯಲ್ಲಿ ಭಾರತದ ಪಾಲಿಗೆ ಅನಿವಾರ್ಯ ಭೂತ ಎಂಬಂತಾಗಿತ್ತು. ಈ ಮೂರು ದಶಕಗಳ ಉದಾರೀಕರಣ ಆರ್ಥಿಕ ನೀತಿ ಬಗ್ಗೆ ಹೊಸ ತಲೆಮಾರಿನ ಉದ್ಯಮಿಗಳು ಏನಂತಾರೆ? ‘Takachar’ ಎಂಬ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ವಿದ್ಯುತ್ ಮೋಹನ್ ಪ್ರಕಾರ, “ಉದಾರೀಕರಣ ಅಗತ್ಯವಾಗಿತ್ತು. ಆದರೆ, ಅದು ಸಾವಶ್ಯವಾಗಿರಲಿಲ್ಲ. ನಮ್ಮದು ಉದಾರೀಕರಣ ಆರ್ಥಿಕತೆಯಾಗಿ ಬದಲಾದಾಗ ಪಾಶ್ಚಿಮಾತ್ಯ ದೇಶಗಳ ಕೆಟ್ಟ ಸಂಪ್ರದಾಯಗಳನ್ನ ಅಳವಡಿಸಿಕೊಂಡೆವು. ಪಾಶ್ಚಿಮಾತ್ಯ ಮಾಡೆಲ್ ಅನ್ನು ಯಥಾವತ್ತಾಗಿ ಅನುಸರಿಸಿದೆವು” ಎಂದು ವಿದ್ಯುತ್ ಮೋಹನ್ ಹೇಳುತ್ತಾರೆ.

“ಉದಾಹರಣೆಗೆ, ಪಶ್ಚಿಮ ದೇಶಗಳಲ್ಲಿ ಮಾಲಿನ್ಯ ಮಾಡುತ್ತಿದ್ದ ಹಲವು ಕೈಗಾರಿಕೆಗಳು ಭಾರತದಲ್ಲಿ ಸ್ವಲ್ಪ ಆರ್ಥಿಕ ಬಿಗಿಕ್ರಮ ಸಡಿಲಗೊಳ್ಳುತ್ತಿದ್ದಂತೆಯೇ ಇಲ್ಲಿ ವ್ಯಾಪಾರ ವಹಿವಾಟು ಪ್ರಾರಂಭಿಸಿದವು. ಇದಕ್ಕೆ ಪ್ರಮುಖ ಕಾರಣ, ಪಶ್ಚಿಮ ದೇಶಗಳಲ್ಲಿ ಪರಿಸರ ಸಂಬಂಧಿ ಕಾನೂನುಗಳು ಬಿಗಿಗೊಂಡಿದ್ದು ಒಂದಾದರೆ, ಕಾನೂನು ಸಡಿಲಗೊಂಡ ಭಾರತದಲ್ಲಿ ಉತ್ಪಾದನೆ ವೆಚ್ಚವೂ ಕಡಿಮೆ ಎನಿಸಿದ್ದು ಇನ್ನೊಂದೆಡೆ. ಇದರಿಂದ ಭಾರತದಲ್ಲಿ ಕೈಗಾರಿಕೆಗಳಿಂದ ದೊಡ್ಡಮಟ್ಟದಲ್ಲಿ ಮಾಲಿನ್ಯವಾಗುವುದು ಎಗ್ಗಿಲ್ಲದೆ ನಡೆಯಿತು” ಎಂದವರು ತಿಳಿಸುತ್ತಾರೆ.

ಹಾಗಾದರೆ, ಕೈಗಾರಿಕೆಗಳೇ ಇಲ್ಲದಿದ್ದರೆ? ಈ ಪ್ರಶ್ನೆಯನ್ನ ವಿದ್ಯುತ್ ಮೋಹನ್ ಅಲ್ಲಗಳೆಯುತ್ತಾರೆ. ಪರಿಸರ ಸಮಸ್ಯೆಗಳಿಗೆ ನಾವು ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕಬಹುದು. ತಂತ್ರಜ್ಞಾನ ಆಧಾರಿತ ಆರ್ ಅಂಡ್ ಡಿ ಕ್ಷೇತ್ರದ ಮೇಲೆ ಬಂಡವಾಳ ಹಾಕಿದರೆ ನಮಗೆ ಸ್ವಚ್ಛತೆಯ ತಂತ್ರಜ್ಞಾನಕ್ಕೆ ದಾರಿ ಸಿಕ್ಕಬಹುದು ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: Union Budget 2021 – ಈ ಬಾರಿಯ ಬಜೆಟ್​ನಿಂದ ಜನಸಾಮಾನ್ಯನಿಗಿರುವ ಕೆಲ ನಿರೀಕ್ಷೆಗಳು

“ಹವಾಮಾನ ಬದಲಾವಣೆ ಸಮಸ್ಯೆ ಎದುರಿಸಲು ಸಮರ್ಪಕ ವಿಧಾನ ಎಂದರೆ ಸರಳ ಜೀವನ. ಆದರೆ ಅದು ನಮ್ಮ ವರ್ತನೆಯಲ್ಲಿ ಬದಲಾವಣೆ ಆಗಬೇಕು. ಅದಕ್ಕೆ ಸಾಮಾಜಿಕ ಬದ್ಧತೆ ಮತ್ತು ಸಮಯಾವಕಾಶ ಬೇಕಾಗುತ್ತದೆ. ಅದು ಬಿಟ್ಟರೆ ನಮಗೆ ಈ ಕ್ಲೈಮೇಟ್ ಚೇಂಜ್ ಸಮಸ್ಯೆಯನ್ನ ಎದುರಿಸಲು ತಂತ್ರಜ್ಞಾನವೇ ಪರಿಣಾಮಕಾರಿ ವಿಧಾನವಾಗಿದೆ. ಪ್ರತಿಯೊಂದು ಕೆಲಸಕ್ಕೂ ನಾವು ಟೆಕ್ನಾಲಜಿ ಉಪಯೋಗಿಸುತ್ತೇವೆ. ಪರಿಸರಕ್ಕೆ ಧಕ್ಕೆಯಾಗದಂತೆ ನಮ್ಮ ಜೀವನ ನಡೆಸಲು ಬೇಕಾದ ಸುಸ್ಥಿರ ತಂತ್ರಜ್ಞಾನವನ್ನು ನಾವು ಆವಿಷ್ಕರಿಸಲು ಸಾಧ್ಯವಿದೆ. ಇಂಥ ಸಸ್ಟೈನಬಲ್ ಟೆಕ್ನಾಲಜಿಯನ್ನು ಆವಿಷ್ಕರಿಸಲು ಜನರಿಗೆ ಬಂಡವಾಳದ ಅಗತ್ಯ ಬೀಳುತ್ತದೆ. ಈ ಬಂಡವಾಳವು ಹೂಡಿಕೆದಾರರಿಂದ ಬರದೆ ಸರ್ಕಾರದಿಂದಲೇ ಬರಬೇಕು. ಪರಿಸರಕ್ಕೆ ಅನುಕೂಲವಾಗುವ ತಂತ್ರಜ್ಞಾನ ಆವಿಷ್ಕಾರಕ್ಕೆ ನಮ್ಮ ಬಜೆಟ್ ಪೂರಕವಾಗಿರಬೇಕು” ಎಂದು ವಿದ್ಯುತ್ ಮೋಹನ್ ಹೇಳುತ್ತಾರೆ.

ಅಮೆರಿಕದಲ್ಲಿ ಒಳ್ಳೆಯ ಐಡಿಯಾ ಹೊಂದಿರುವ ವ್ಯಕ್ತಿಗೆ ಅಲ್ಲಿ ಸರ್ಕಾರವೇ ಫಂಡಿಂಗ್ ಮಾಡುತ್ತದೆ. ಅಂದರೆ ಕಾನ್ಸೆಪ್ಟ್ ಡೆವಲಪ್ಮೆಂಟ್ ಹಂತದಿಂದ ಹಿಡಿದು ಪ್ರೋಟೋಟೈಪ್ ರೂಪುಗೊಳಿಸಿ ವಾಣಿಜ್ಯಾತ್ಮಕವಾಗಿ ಬೆಳವಣಿಗೆ ಸಾಧಿಸುವವರೆಗೂ ಸರ್ಕಾರವೇ ಧನಸಹಾಯ ಒದಗಿಸುತ್ತದೆ. ಅದೇ ರೀತಿ ಭಾರತ ಸರ್ಕಾರ ಕೂಡ ಸಂಶೋಧನಾ ಕ್ಷೇತ್ರಕ್ಕೆ ಹಣ ವಿನಿಯೋಗಿಸಬೇಕು. ಆರ್ ಅಂಡ್ ಡಿ ಮೇಲೆ ವೆಚ್ಚ ಮಾಡುವುದಷ್ಟೇ ಅಲ್ಲ, ಖಾಸಗಿ ಕಂಪನಿಗಳಿಗೆ ಸರ್ಕಾರದಿಂದ ಧನಸಹಾಯ ಸಿಕ್ಕರೆ ಒಳ್ಳೆಯ ತಂತ್ರಜ್ಞಾನ ಪರಿಹಾರಗಳನ್ನ ಒದಗಿಸಬಲ್ಲವು ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: Budget 2021: ನಿರ್ಮಲಾ ಸೀತಾರಾಮನ್ 3ನೇ ಬಾರಿ ಪೂರ್ಣಾವಧಿ ಬಜೆಟ್ ಮಂಡಿಸುವ ಮುನ್ನ ನೀವು ತಿಳಿದಿರಬೇಕಾದ ಅಂಶಈ ಬಾರಿಯ ಬಜೆಟ್​ನಲ್ಲಿ ಆರ್ ಅಂಡ್ ಡಿಗೆ ಒತ್ತು ಕೊಡುವುದರ ಜೊತೆಗೆ ಸೌರ ಶಕ್ತಿಯ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಮರುಬಳಕೆ ಇಂಧನದ ವಿತರಣೆಗೆ ಬಜೆಟ್​ನಲ್ಲಿ ಹೆಚ್ಚು ಹಣ ವಿನಿಯೋಗವಾಗಬೇಕು. ಪರಿಸರದ ರಕ್ಷಣೆಗಾಗಿ ಕೈಗಾರಿಕೆಗಳನ್ನ ಹೊಣೆಯಾಗಿಸುವಂತೆ ಕಾನೂನು ಸಂಸ್ಥೆಗಳ ಬಲ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಸಲಹೆಗಳನ್ನೂ ಟಾಕಾಚರ್ ಸಂಸ್ಥೆಯ ಸಿಇಒ ನೀಡುತ್ತಾರೆ.

ವಿದ್ಯುತ್ ಮೋಹನ್ ಅವರ Takachar ಕಂಪನಿಯು ಕೃಷಿ ತ್ಯಾಜ್ಯವನ್ನ ಮೌಲ್ಯವರ್ಧಿತ ರಾಸಾಯನಿಕವಾಗಿ ಪರಿವರ್ತಿಸಿ ಹಣ ಮಾಡಲು ರೈತರಿಗೆ ಸಹಾಯ ಮಾಡುತ್ತದೆ. ವಿಶ್ವ ಸಂಸ್ಥೆಯ ಯುವ ಚಾಂಪಿಯನ್​ಗಳಲ್ಲಿ ಮೋಹನ್ ಕೂಡ ಒಬ್ಬರೆಂದು ಪರಿಗಣಿಸಲಾಗಿದೆ.
Published by: Vijayasarthy SN
First published: February 1, 2021, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories