Pagal lover: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮನಿಂದ ಖತರ್ನಾಕ್​ ಪ್ಲ್ಯಾನ್!​: ಹುಡುಗಿಯನ್ನು ತಗಲಾಕಿಸಲು ಹೋಗಿ ತಾನೇ ಲಾಕ್​!

Pagal lover : ಪ್ರೀತಿ ತಿರಸ್ಕಾರ ಮಾಡಿದ ಯುವತಿ ಮೇಲೆ ಕೋಪ (Angry)ತೀರಿಸಿಕೊಳ್ಳುವ ಉದ್ದೇಶದಿಂದ ಇಲ್ಲೊಬ್ಬ ಪಾಗಲ್​ ಪ್ರೇಮಿ ಮಾಡಬಾರದ್ದನ್ನು ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಪ್ರೇಯಸಿಗೆ ಗಿಫ್ಟ್(Gift)​ ನೀಡುವ ನೆಪದಲ್ಲಿ ಗಾಂಜಾ(marijuana) ನೀಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ.. ಭೂಮಿಗೆ ತಂದು ಎಸೆದ.. ಹಂಚಲು ಹೋಗಿ ಬೇಸರವಾಗಿ ಹಂಚಿಕೋ ಹೋಗಿ ಎಂದ.. ಎಂಬ ಹಾಡನ್ನು ಎಲ್ಲರೂ ಕೇಳಿದ್ದೇವೆ. ಎಲ್ಲರಿಗೂ ಪ್ರೀತಿ(Love) ಸಿಗಲ್ಲ, ಸಿಕ್ಕ ಎಲ್ಲರಿಗೂ ನಮ್ಮ ಪ್ರೀತಿ ಇಷ್ಟವಾಗಲ್ಲ. ಪ್ರೀತಿ ಅಂದರನೇ ಹಾಗೇ ಅದು ಒಲಿದರೆ ಮನುಷ್ಯ ನೆಮ್ಮದಿಯಾಗಿರುತ್ತಾನೆ. ಅದೇ ನಾವು ಪ್ರೀತಿಸಿದವರು ನಮ್ಮನ್ನು ನಿರಾಕರಿಸಿದರೆ(Reject) ಆಗುವ ನೋವು(Pain) ಯಾರಿಗೂ ಹೇಳಲು ಸಾಧ್ಯವಿಲ್ಲ. ಕೆಲವರು ಪ್ರೀತಿ ನಿರಾಕರಿಸಿದ್ದಕ್ಕೆ ತಾವೂ ಪ್ರೀತಿಸುತ್ತಿದ್ದವರನ್ನ ಕೊಂದೇ(Murder) ಬಿಡುತ್ತಾರೆ. ಇನ್ನೂ ಕೆಲವರು ತಮ್ಮ ಬದುಕನ್ನೇ ಮುಗಿಸಿಕೊಂಡು ಬಿಡುತ್ತಾರೆ. ಆದರೆ ವಿಶಾಖಪಟ್ಟಣಂನಲ್ಲಿ(Visakhapatnam) ಪ್ರೀತಿ ತಿರಸ್ಕಾರ ಮಾಡಿದ ಯುವತಿ ಮೇಲೆ ಕೋಪ (Angry)ತೀರಿಸಿಕೊಳ್ಳುವ ಉದ್ದೇಶದಿಂದ ಇಲ್ಲೊಬ್ಬ ಪಾಗಲ್​ ಪ್ರೇಮಿ ಮಾಡಬಾರದ್ದನ್ನು ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಪ್ರೇಯಸಿಗೆ ಗಿಫ್ಟ್(Gift)​ ನೀಡುವ ನೆಪದಲ್ಲಿ ಗಾಂಜಾ(marijuana) ನೀಡಿದ್ದಾನೆ. ಆಂಧ್ರಪ್ರದೇಶ(Andhra Pradesh)ದ ವಿಶಾಖಪಟ್ಟಣಂದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ.

ಪ್ರೀತಿ ನಿರಾಕರಿಸಿದ್ದ ಯುವತಿ

25 ವರ್ಷದ ವಿನಯ್​ ಕುಮಾರ್​ ಈ ಕೃತ್ಯ ಎಸಗಿದ್ದಾನೆ. ತಾನು ಓದುತ್ತಿದ್ದ ಕಾಲೇಜಿನಲ್ಲಿ ತನ್ನೊಂದಿಗೆ ವ್ಯಾಸಂಗ ಮಾಡುತ್ತಿದ್ದ ಯುವತಿ ಮೇಲೆ ಈತನಿಗೆ ಲವ್​ ಆಗಿತ್ತು. ಆಕೆಯ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಾಗದೇ ವಿನಯ್​ ಪರದಾಡುತ್ತಿದ್ದ. ಕೊನೆಗೆ ಸ್ನೇಹಿತರು ನೀಡಿದ ಧೈರ್ಯದಿಂದ ಯುವತಿ ಬಳಿ ಹೋಗಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಈತನನ್ನು ಕಂಡರೇ ಯುವತಿಗೆ ಇಷ್ಟವಿರಲಿಲ್ಲ. `ನನಗೆ ಇಷ್ಟವಿಲ್ಲ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಇರೋಣ’ ಎಂದು ಯುವತಿ ಹೇಳಿದ್ದಾಳೆ. ಅಲ್ಲಿ ಸುಮ್ಮನಾಗಿ ಬಂದಿದ್ದ ವಿನಯ್​ ಬಳಿಕ ಆಕೆಯ ಮೇಲೆ ಸೇಡು ತಿರಿಸಿಕೊಳ್ಳಲು ಪ್ಲ್ಯಾನ್​ ಮಾಡಿದ್ದಾನೆ.

ಇದನ್ನು ಓದಿ : ಹುಡುಗಿಗೆ ಯುವಕನಿಂದ ನಿತ್ಯ ಕಿರುಕುಳ; ಕುಟುಂಬಸ್ಥರಿಂದ ಹೊಡೆದು ಕೊಲೆ!

ಈತ ಮಾಡಿದ ಖತರ್ನಾಕ್​​ ಪ್ಲ್ಯಾನ್​ ಏನು ಗೊತ್ತಾ?

ಯುವತಿ ತನ್ನ ಸ್ನೇಹಿತರ ಜೊತೆ ಸೇರಿ ಶಿರಡಿ ಸಾಯಿ ಎಕ್ಸ್​​ಪ್ರೆಸ್​ ರೈಲಿನಲ್ಲಿ ಸಿಕಂದರಾಬಾದ್​​ಗೆ ತೆರುಳುತ್ತಿದ್ದಳು. ಈ ವಿಚಾರ ವಿನಯ್​ಗೆ ತಿಳಿದಿತ್ತು. ಸೇಡು ತಿರಿಸಿಕೊಳ್ಳಲು ಒಳ್ಳೆಯ ಸಮಯವೆಂದು ವಿನಯ್​ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. `ನೀನು ಹೇಳಿದ ಹಾಗೇ ನಾವು ಸ್ನೇಹಿತರಾಗಿ ಇರೋಣ, ಸ್ನೇಹದ ಸಂಕೇತವಾಗಿ ಈ ಗಿಫ್ಟ್​ ತಂದಿದ್ದೇನೆ’ ಎಂದು ಉಡುಗೊರೆವೊಂದನ್ನು ನೀಡಿದ್ದಾನೆ. ಆ ಗಿಫ್ಟ್​ ಬಾಕ್ಸ್​ನಲ್ಲಿ 3 ಕೆಜಿ ಗಾಂಜಾ ಇತ್ತು ಎಂಬುದು ಆ ಯುವತಿಗೆ ತಿಳಿದಿರಲಿಲ್ಲ. ಗಿಫ್ಟ್​ ಕೊಟ್ಟು ನಗು ಮುಖದಿಂದಲೇ ಅಲ್ಲಿಂದ ವಿನಯ್​ ಹೊರಟ್ಟಿದ್ದಾನೆ.

ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದ ಪಾಗಲ್​

ರೈಲು ಹೊರಡುತ್ತಿದ್ದಂತೆ ತಾನೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ರೈಲಿನಿಲ್ಲಿ ಒಂದು ಹುಡುಗಿ ಗಾಂಜಾ ಸಾಗಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ರೈಲು ಸಿಕಂದರಾಬಾದ್​ ತಲುಪುತ್ತಿದ್ದಂತೆ ರೈಲ್ವೇ ಪೊಲೀಸರು ಆ ಹುಡುಗಿಯನ್ನ ಹಿಡಿದು ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಆ ವೇಳೆ ಯುವತಿ ನಡೆದಿದ್ದ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರಿಗೆ ಯುವಕ ಮಾಡಿದ ನಾಟಕ ಗೊತ್ತಾಗಿದೆ.

ಇದನ್ನು ಓದಿ : ಪ್ರೇಯಸಿ ಮೇಲೆ ಪ್ರಿಯಕರನಿಂದ​ ಅತ್ಯಾಚಾರ​, 4 ವರ್ಷದ ಮಗುವಿನ ಮೇಲೆ ರೇಪ್​; ಎರಡು ಕೃತ್ಯದಿಂದ ಬೆಚ್ಚಿಬಿದ್ದ ನಗರಿ

ಯುವತಿಯನ್ನು ಬಂಧಿಸಿದ್ದೇವೆ ಬಾ ಎಂದು ಕರೆದು ಲಾಕ್

ಪೊಲೀಸರಿಗೆ ಎಲ್ಲ ಮಾಹಿತಿ ತಿಳಿದ ನಂತರ ಆ ಯುವಕನ ಫೋನ್​ ನಂಬರ್​ ಪಡೆದು ಕರೆ ಮಾಡಿದ್ದಾರೆ. ನೀವು ಹೇಳಿದಂತೆ ಆಕೆಯನ್ನು ಬಂಧಿಸಿದ್ದೇವೆ. ನೀವು ಒಮ್ಮೆ ಠಾಣೆಗೆ ಬಂದು ಹೋಗಿ ಎಂದು ಪೊಲೀಸರು ಹೇಳಿದ್ದರು. ಸೇಡು ತಿರಿಸಿಕೊಂಡ ಜೋಶ್​ನಲ್ಲಿ ಠಾಣೆಗೆ ವಿನಯ್​ ಬಂದಿದ್ದ. ಕೂಡಲೇ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಇದಾದ ಬಳಿಕ ಪ್ರೀತಿ ನಿರಾಕರಿಸಿದ್ದಕ್ಕೆ ಈ ರೀತಿ ಮಾಡಿದ್ದಾಗಿ ವಿನಯ್​ ತಪ್ಪೊಪ್ಪಿಕೊಂಡಿದ್ದಾನೆ
Published by:Vasudeva M
First published: