Terrorist Attack in Pakistan|ಉಗ್ರರಿಂದ 11 ಜನ ಪಾಕಿಸ್ತಾನ ಸೈನಿಕರ ಹತ್ಯೆ-ಹಲವರ ಅಪಹರಣ; ವರದಿ

ಕಳೆದ ವಾರವಷ್ಟೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ದೇಶ ಹಿಂದೆಂದಿಗಿಂತಲೂ ಹೆಚ್ಚು ಅಪಾಯದಲ್ಲಿದೆ. ತೆಹ್ರಿಕ್‌ ಎ ತಾಲಿಬಾನ್‌ ಪಾಕಿಸ್ತಾನ್‌ ಸಂಘಟನೆ ದೇಶದ ಮುಂದಿರುವ ದೊಡ್ಡ ಆತಂಕವಾಗಿದೆ ಎಂದು ಸಂಸತ್‌ನಲ್ಲಿ ಹೇಳಿದ್ದರು. ಪ್ರಧಾನಿ ಹೇಳಿಕೆ ಬೆನ್ನಲ್ಲೇ ಈ ದಾಳಿ ನಡೆದಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಅಹಮದಾಬದ್ (ಜುಲೈ  14); ಉಗ್ರರಗೆ ನೀರೆರೆದು ಪೋಷಿಸುತ್ತಿರುವ ಮತ್ತು ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡಿಸುತ್ತಿರುವ ಪಾಕಿಸ್ತಾನದ ಮೇಲೆಯೇ ಇಂದು ಉಗ್ರರು ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಖೈಬರ್‌ ಫಕ್ತುನ್‌ಖ್ವಾ ಪ್ರಾಂತ್ಯದ ಖುರ್‍ರಮ್‌ ಗಡಿ ಭಾಗದಲ್ಲಿ ಉಗ್ರರು ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಆರ್ಮಿ ಕ್ಯಾಪ್ಟನ್ ಸೇರಿದಂತೆ 11 ಜನ ಸೈನಿಕರನ್ನು ಉಗ್ರರು ಹತ್ಯೆಗೈದಿದ್ದಾರೆ. ಹುತಾತ್ಮ ಕ್ಯಾಪ್ಟನ್‌ ಅಬ್ದುಲ್‌ ಬಸಿತ್‌ ಅವರನ್ನು ಸೈನಿಕರು ಬರ್ಬರವಾಗಿ ಹತ್ಯೆಗೈದಿದ್ದಾರೆ. ದಾಳಿಯಲ್ಲಿ ಅನೇಕ ಸೈನಿಕರು ತೀವ್ರವಾಗಿ ಗಾಯಗೊಂಡಿದ್ದು ಕೆಲವು ಸೈನಿಕರನ್ನು ಉಗ್ರರು ಅಪಹರಿಸಿರುವುದು ವರದಿಯಾಗಿದೆ.

  ಉಗ್ರ ಹಫೀಜ್‌ ಖಾನ್‌ 6ಜನ ಟೆಲಿಕಾಮ್‌ ಸಿಬ್ಬಂದಿಯನ್ನು ಒತ್ತೆಯಾಳುಗಳಾನ್ನಾಗಿ ಇರಿಕೊಂಡಿರುವುದನ್ನು ಪಾಕಿಸ್ತಾನದ ಪ್ರಮುಖ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಂಗಳವಾರದ ದಾಳಿಯ ಹಿಂದೆ ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ್‌ (TTP) ಸಂಘಟನೆಯ ಕೈವಾಡವಿದೆ ಎಂದು ಪಾಕಿಸ್ತಾನ ಸೇನಾ ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಸೇನಾ ಪಡೆಗಳ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ.

  ಅಮೆರಿಕ ಅಪಘಾನಿಸ್ತಾನದಿಂದ ಸೇನಾ ಪಡೆಗಳ ಹಿಂತೆಗೆತಕ್ಕೆ ಮುಂದಾಗುತ್ತಿದ್ದಂತೆ ತಾಲಿಬಾನ್ ಮತ್ತು ಟಿಟಿಪಿ ಸಂಘಟನೆಗಳು ಕಾರ್ಯಪ್ರವ್ರತ್ತವಾಗಿದ್ದು ಪಾಕಿಸ್ತಾನ ನೆಲದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ಜೂನ್‌ 13ರ ದಾಳಿಗೆ ಪ್ರತಿಕ್ರಿಯಿಸಿದೆ.

  ಇದನ್ನೂ ಓದಿ: ಜೈಲ್ ಬ್ರೇಕ್ ಪ್ರಕರಣದಲ್ಲಿ ಜೈಲು ಪಾಲಾಗಿ ಜೈಲಿಂದಲೇ ನಕಲಿ ಸರ್ಕಾರಿ ವೆಬ್‌ಸೈಟ್ ನಡೆಸಿದ ಆರೋಪಿಗಳು!

  ಕಳೆದ ವಾರವಷ್ಟೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ದೇಶ ಹಿಂದೆಂದಿಗಿಂತಲೂ ಹೆಚ್ಚು ಅಪಾಯದಲ್ಲಿದೆ. ತೆಹ್ರಿಕ್‌ ಎ ತಾಲಿಬಾನ್‌ ಪಾಕಿಸ್ತಾನ್‌ ಸಂಘಟನೆ ದೇಶದ ಮುಂದಿರುವ ದೊಡ್ಡ ಆತಂಕವಾಗಿದೆ ಎಂದು ಸಂಸತ್‌ನಲ್ಲಿ ಹೇಳಿದ್ದರು. ಪ್ರಧಾನಿ ಹೇಳಿಕೆ ಬೆನ್ನಲ್ಲೇ ಈ ದಾಳಿ ನಡೆದಿದೆ.

  ಇದನ್ನೂ ಓದಿ: Mekedatu Project| ಕರ್ನಾಟಕಕ್ಕೆ ಮೇಕೆದಾಟು ಡ್ಯಾಂ ಕಟ್ಟುವ ಹಕ್ಕಿದ್ದರೆ, ಅದನ್ನು ನಿಲ್ಲಿಸುವ ಹಕ್ಕು ನಮಗೂ ಇದೆ; ತಮಿಳುನಾಡು

  TTP ಸಂಘಟನೆ ಮುಸ್ಲೀಂ ಮೂಲಭೂತ ಸಂಘಟನೆಯಾಗಿದ್ದು ಷರಿಯಾ ಕಾನೂನುಗಳನ್ನು ಪಾಕಿಸ್ತಾನದಲ್ಲಿ ಸ್ಥಾಪಿಸುವ ಗುರಗಳನ್ನಟ್ಟಿಕೊಂಡು ಭಯೋತ್ಪಾದಕ ಚಟುವಟಿಕೆಗೆಳನ್ನು ನಡೆಸುತ್ತಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: