Indian Railways: ನೀವು ಬುಕ್​ ಮಾಡಿದ ಟಿಕೆಟ್​ಅನ್ನು ನಿಮ್ಮ ಸಂಬಂಧಿಕರಿಗೂ ನೀಡಬಹುದು: ರೈಲ್ವೇ ಇಲಾಖೆಯ ಸಖತ್​ ಆಫರ್​

ಕಾಯ್ದಿರಿಸಿದ ಟಿಕೆಟ್‌ನಲ್ಲಿ ಪ್ರಯಾಣದ ದಿನಾಂಕವನ್ನು ಒಮ್ಮೆ ದೃಡಿಕರಿಸಿದರೆ ಅಥವಾ ಆರ್‌ಎಸಿ ಅಥವಾ ವೇಯ್ಟಿಂಗ್​ ಲೀಸ್ಟ್​ ಆಗಿ ಇದನ್ನು ಬದಲಾಯಿಸಬಹುದು. ಆದರೆ, ಈ ಸೌಲಭ್ಯವು ಆಫ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಬೇರೆಯದೆ ರೀತಿಯ ಸೌಲಭ್ಯವಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Indian Railways: ನೀವೇನಾದರೂ ಒಮ್ಮೆಯಾದರೂ ರೈಲ್ವೇ ಟಿಕೆಟ್​ ಬುಕ್​ ಮಾಡಿದ್ದೀರಾ ಎಂದಾದರೆ ಅದರ ಕಷ್ಟ ಹೇಳತೀರದು. ಆದರೆ ಟಿಕೆಟ್​ ಬುಕ್​ ಮಾಡುವುದು ಎಂದರೆ ಎಲ್ಲಿಲ್ಲದ ಪ್ರಯಾಸದ ಕೆಲಸ. ಅಕಸ್ಮಾತ್​ ನೀವು ಎಲ್ಲಿಗಾದರೂ ಹೋಗಬೇಕು ಎಂದು ಎಷ್ಟೋ ದಿನಗಳ ಮುಂಚೆ ಯೋಜನೆ ಹಾಕಿ, ಆ ದಿನಾಂಕಕ್ಕೆ ಸರಿಯಾಗಿ ಪ್ಲಾನ್​ ಮಾಡಿರುತ್ತೀರಿ. ಆದರೆ ಆ ಪ್ಲಾನ್​ ಏನಾದರೂ ಏರುಪೇರಾಗಿ, ಅದೇ ವೇಳೆಗೆ ನೀವು ಏನಾದರೂ ಟಿಕೆಟ್​ ಬುಕ್​ ಮಾಡಿದ್ದರೆ, ಅದನ್ನು ಬದಲಾಯಿಸಲು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. 

  ಈಗ ಈ ಎಲ್ಲಾ ತಲೆ ನೋವಿಗೆ ಗುಡ್​ಬೈ ಹೇಳಲು ರೈಲ್ವೇ ಇಲಾಖೆ ಒಂದು ಯೋಜನೆ ರೂಪಿಸಿದ್ದು, ಇದರ ಮೂಲಕ ಹೇಗೆ ಈ ತಲೆ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

  ಎಲ್ಲಿಗಾದರೂ ಪ್ರಯಾಣ ಮಾಡುವಾಗ ವೇಳಾಪಟ್ಟಿ ಏರುಪೇರಾದರೆ ಟಿಕೆಟ್ ರದ್ದು ಮಾಡದಂತೆ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅಗತ್ಯಗಳಿಗೆ ಅನುಗುಣವಾಗಿ ಮರುಹೊಂದಿಸಲು ರೈಲ್ವೆ ಇಲಾಖೆ ಅವಕಾಶ ನೀಡುತ್ತದೆ ಎನ್ನುವ ವಿಚಾರ ಕೆಲವೇ ಜನರಿಗೆ ತಿಳಿದಿದೆ. ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವ ಆಯ್ಕೆಯೂ ಇದೆ. ನೀವು ಮಾಡಬೇಕಾಗಿರುವುದು ಆಫ್‌ಲೈನ್ ಟಿಕೆಟ್‌ಗಳ ಸಂದರ್ಭದಲ್ಲಿ ಮೂಲ ಬೋರ್ಡಿಂಗ್ ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗೆ ಈ ವಿಚಾರವಾಗಿ ಒಂದು ಪತ್ರ ಬರೆದು ಗಮನಕ್ಕೆ ತರಬಹುದು ಎಂದು ರೈಲ್ವೇ ಇಲಾಖೆ ತಿಲಿಸಿದೆ.

  ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಿಕೆಟ್‌ಗಳಲ್ಲಿ, ಪ್ರಯಾಣಿಕರು ತಮ್ಮ IRCTC ಖಾತೆಗೆ ಲಾಗ್ ಇನ್ ಮಾಡಬಹುದು ಮತ್ತು ನಿಗದಿತ ನಿರ್ಗಮನಕ್ಕೆ ಕನಿಷ್ಠ 24 ಗಂಟೆಗಳ ಮೊದಲು ಈ ಬದಲಾವಣೆಗಳನ್ನು ಸಹ ಅಪ್‌ಡೇಟ್ ಮಾಡಬಹುದು ಹಾಗೂ ಇದರಿಂದ ಉಪಯೋಗ ಪಡೆಯಬಹುದು.


  ಕಾಯ್ದಿರಿಸಿದ ಟಿಕೆಟ್‌ನಲ್ಲಿ ಪ್ರಯಾಣದ ದಿನಾಂಕವನ್ನು ಒಮ್ಮೆ ದೃಡಿಕರಿಸಿದರೆ ಅಥವಾ ಆರ್‌ಎಸಿ ಅಥವಾ ವೇಯ್ಟಿಂಗ್​ ಲೀಸ್ಟ್​ ಆಗಿ ಇದನ್ನು ಬದಲಾಯಿಸಬಹುದು. ಆದರೆ, ಈ ಸೌಲಭ್ಯವು ಆಫ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಬೇರೆಯದೆ ರೀತಿಯ ಸೌಲಭ್ಯವಿದೆ.  ಪ್ರಯಾಣ  ಮಾಡುವ ಪ್ರಯಾಣಿಕನು ತಾನು ಟಿಕೆಟನ್ನು ಕಾಯ್ದಿರಿಸುವ ಕಚೇರಿಗೆ ರೈಲು ಹೊರಡುವ ಕನಿಷ್ಠ 48 ಗಂಟೆಗಳ ಮೊದಲು ಈ ವಿಚಾರವಾಗಿ ಮಾಹಿತಿ ನೀಡಬೇಕು. ಆಗ ಮಾತ್ರ ಬದಲಾವಣೆ ಮಾಡಲು ಸಾಧ್ಯ ಎಂದು ಹೇಳಲಾಗಿದೆ.

  ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ನಮ್ಮ ಪ್ರಯಾಣದ ದಿನಾಂಕವನ್ನು ಬದಲಾವಣೆಯನ್ನು ಮಾಡಬಹುದು. ನಾವು ಹೋಗಬೇಕಾದ ಸ್ಥಳ ಮತ್ತು ಹೈಕ್ಲಾಸ್​ ಅಥವಾ ಒಂದು ವರ್ಗದ  ಟಿಕೆಟ್‌ಗಳನ್ನು ಮುಂಗಡವಾಗಿ ಮುಂದೂಡುವ ಸೌಲಭ್ಯವನ್ನು ಸಾಕಷ್ಟು ದಿನಗಳ ಹಿಂದೆಯೇ ಜನರಿಗಾಗಿ ಪರಿಚಯಿಸಲಾಗಿದೆ. ಆದರೆ ಈ ವಿಚಾರವಾಗಿ ನಮ್ಮ ಜನರಿಗೆ ಅಷ್ಟೊಂದು ತಿಳುವಳಿಕೆ ಇಲ್ಲ ಎಂಬುದು ರೈಲ್ವೇ ಅಧಿಕಾರಿಗಳ ಮಾತು.


  ದೃಡೀಕರಿಸಿದ ಟಿಕೆಟ್ ವರ್ಗಾವಣೆ (CONFIRMED TICKET TRANSFER)


  ಪ್ರಯಾಣಿಕರು ತಮ್ಮ ದೃಡೀಕರಿಸಿದ ಟಿಕೆಟ್​ಗಳನ್ನು ಕುಟುಂಬ ಸದಸ್ಯರಿಗೆ ವರ್ಗಾಯಿಸಬಹುದು - ತಂದೆ, ತಾಯಿ, ಸಹೋದರ, ಸಹೋದರಿ, ಸಂಗಾತಿ, ಮಗ ಅಥವಾ ಮಗಳು. ಪ್ರಯಾಣ ಆರಂಭವಾಗುವ ಕನಿಷ್ಠ 24 ಗಂಟೆಗಳ ಮೊದಲು ಈ ಮೊದಲು ಟಿಕೆಟ್​ ಬುಕ್​ ಮಾಡಿದವರು ಮನವಿ ಸಲ್ಲಿಸಬೇಕು. ವಿಶೇಷ ನಿಯಮಗಳು ಮತ್ತು ರಿಯಾಯಿತಿ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್​ಗಳಿಗೆ ಈ ಸೌಲಭ್ಯ ನೀಡಲಾಗುವುದಿಲ್ಲ.


  ನಮ್ಮ ಜರ್ನಿಯನ್ನು ವಿಸ್ತರಿಸಬಹುದು ಹಾಗೂ ಅಪ್‌ಗ್ರೇಡ್ ಮಾಡಿಕೊಳ್ಳಬಹುದು

  ರೈಲಿನಲ್ಲಿ ಟಿಕೆಟ್ ಪರಿಶೀಲಿಸುವ ಸಿಬ್ಬಂದಿ ಅಂದರೆ ಟಿಕೆಟ್​ ಚೆಕ್ಕಿಂಗ್​ ಅಧಿಕಾರಿಯನ್ನು ಸಂಪರ್ಕಿಸುವ ಮೂಲಕ ಪ್ರಯಾಣಿಕರು ಅದೇ ಟಿಕೆಟ್ ನಲ್ಲಿ ತಮ್ಮ ಪ್ರಯಾಣವನ್ನು ವಿಸ್ತರಿಸಬಹುದು. ಅಂದರೆ ನಾವು ಮಹಾರಾಷ್ಟ್ರದ ಮೂಲಕ ದೆಹಲಿಗೆ ಹೋಗುವ ರೈಲಿಗೆ ಹತ್ತಿದ್ದೇವೆ ಆದರೆ ಇದ್ದಕ್ಕಿದ್ದ ಹಾಗೇ ಪ್ಲಾನ್​ ಬದಲಾಗಿ ಮಹಾರಾಷ್ಟ್ರದಲ್ಲಿ ಇಳಿಯುವ ಬದಲು ದೆಹಲಿಗೆ ಹೋಗಬೇಕು ಎಂದಾದರೆ ಟಿಕೆಟ್​ ಚೆಕ್ಕಿಂಗ್​ ಆಫೀಸರ್​ ಸಂಪರ್ಕಿಸಿ ಅವರ ಬಳಿ ಮಾತನಾಡಿ, ಒಂದಷ್ಟು ನಿಗಧಿತ ಶುಲ್ಕ ಪಾವತಿಸಿ ಮುಂದಿನ ಪ್ರಯಾಣವನ್ನು ಮಾಡಬಹುದು.

  ಇದನ್ನೂ ಓದಿ: ಕುಖ್ಯಾತ ಬಿಲ್ಲಿ ಕಿಡ್​ ಸಾಯಿಸಿದ ಪಿಸ್ತೂಲ್​ 6 ಮಿಲಿಯನ್​ ಡಾಲರ್​ಗೆ ಹರಾಜು; ದಾಖಲೆ ಬರೆದ ಭಾರೀ ಮೊತ್ತ

  ಪ್ರಯಾಣಿಕರು ಶುಲ್ಕದಲ್ಲಿ ವ್ಯತ್ಯಾಸವನ್ನು ಪಾವತಿಸುವ ಮೂಲಕ ಉನ್ನತ ವರ್ಗಕ್ಕೆ ಅಪ್‌ಗ್ರೇಡ್ ಮಾಡಬಹುದು. ಟಿಕೇಟ್ ಚೆಕ್ ಸಿಬ್ಬಂದಿಯನ್ನು ಸಂಪರ್ಕಿಸುವ ಮೂಲಕ ಈ ಪ್ರಯಾಣವನ್ನು ರೈಲು ಪ್ರಯಾಣದ ಸಮಯದಲ್ಲಿ ಕೂಡ ಮಾಡಬಹುದು. ಆದಾಗ್ಯೂ, ಅಪ್‌ಗ್ರೇಡ್ ಸೀಟುಗಳ ಲಭ್ಯತೆಗೆ ಒಳಪಟ್ಟಿರುತ್ತದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: