• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮೊರೊಟೋರಿಯಂ ಅವಧಿಯ ಬಡ್ಡಿಯನ್ನು ಬದಿಗಿಟ್ಟು ಜನರ ನೋವುಗಳನ್ನೂ ಆಲಿಸಿ; ಕೇಂದ್ರದ ವಿರುದ್ಧ ಸುಪ್ರೀಂ ತರಾಟೆ

ಮೊರೊಟೋರಿಯಂ ಅವಧಿಯ ಬಡ್ಡಿಯನ್ನು ಬದಿಗಿಟ್ಟು ಜನರ ನೋವುಗಳನ್ನೂ ಆಲಿಸಿ; ಕೇಂದ್ರದ ವಿರುದ್ಧ ಸುಪ್ರೀಂ ತರಾಟೆ

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿಯ ಮೇಲಿನ ಬಡ್ಡಿ ಹಾಗೂ ಮಾರ್ಚ್ 27 ರಂದು ಹೊರಡಿಸಲಾದ ಆರ್‌ಬಿಐ ಅಧಿಸೂಚನೆಯ ಕೆಲವು ಭಾಗವನ್ನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಮುಂದೆ ಓದಿ ...
  • Share this:

ನವ ದೆಹಲಿ (ಆಗಸ್ಟ್‌ 26); ಕೊರೋನಾ ಕಾರಣದಿಂದಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ಪರಿಣಾಮದಿಂದಾಗಿ ಜನ ಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಕೆಲಸವಿಲ್ಲದೆ, ಆದಾಯವಿಲ್ಲದೆ ದಿನಗಳನ್ನು ದೂಡಿದ್ದಾರೆ. ಲಾಕ್‌ಡೌನ್ ಕಾರಣದಿಂದಲೇ ಈ ಪ್ರಮಾದ ಜರುಗಿದ್ದು, ಮೊರೊಟೋರಿಯಂ ಅವಧಿಯ ನಂತರ ಸಾಲ ಮರುಪಾವತಿಯ ಮೇಲಿನ ಬಡ್ಡಿ ದರವನ್ನು ಸರ್ಕಾರ ಮತ್ತು ಆರ್‌ಬಿಐ ಏಕೆ ಮನ್ನಾ ಮಾಡಬಾರದು? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದೆ.


ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿಯ ಮೇಲಿನ ಬಡ್ಡಿ ಹಾಗೂ ಮಾರ್ಚ್ 27 ರಂದು ಹೊರಡಿಸಲಾದ ಆರ್‌ಬಿಐ ಅಧಿಸೂಚನೆಯ ಕೆಲವು ಭಾಗವನ್ನು ರದ್ದುಗೊಳಿಸಬೇಕು. ಏಕೆಂದರೆ ರಿಸರ್ವ್ ಬ್ಯಾಂಕಿನ ಈ ಅಧಿಸೂಚನೆ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಜೀವನ ಹಕ್ಕಿನಲ್ಲಿ ಕಷ್ಟಗಳು ಮತ್ತು ಅಡೆತಡೆಗಳು ಸೃಷ್ಟಿಸುತ್ತದೆ ಎಂದು ಸುಪ್ರೀಂ ಕೋರ್ಟ್‌‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.


ಹೀಗಾಗಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಲಾಕ್‌ಡೌನ್ ಸಮಯದಲ್ಲಿನ ಸಾಲ ಮರುಪಾವತಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲು ಬುಧವಾರದ ವರೆಗೆ ಸಮಯ ನಿಗಧಿಪಡಿಸಿತ್ತು. ಹೀಗಾಗಿ ಇಂದು ನ್ಯಾಯಾಲಯಕ್ಕೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಕೇಂದ್ರ ಸರ್ಕಾರ, “ಈ ಕ್ರಮವು ಬ್ಯಾಂಕುಗಳ ವ್ಯವಹಾರಗಳಿಗೆ ಧಕ್ಕೆ ತರುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.


ಕೇಂದ್ರದ ಈ ಅಭಿಪ್ರಾಯಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, "ಕೇಂದ್ರ ಸರ್ಕಾರ ಕೊರೋನಾ ಕಾರಣದಿಂದಾಗಿ ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ಕಾರಣಕ್ಕೆ ಇಂತಹ ಪರಿಸ್ಥಿತಿ ಸಂಭವಿಸಿದೆ. ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಿರುವ ಪರಿಣಾಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಗಲಿ, ಸರ್ಕಾರವಾಗಲಿ ಮರೆಮಾಡಲು ಸಾಧ್ಯವಿಲ್ಲ. ಬ್ಯಾಂಕುಗಳು ಕೇವಲ ವ್ಯವಹಾರಗಳ ಮೇಲೆ ಮಾತ್ರ ಆಸಕ್ತಿ ಹೊಂದುವ ಬದಲು ಜನರ ನೋವುಗಳನ್ನೂ ಆಲಿಸುವುದು ಸೂಕ್ತ" ಎಂದು ತಿಳಿಸಿದೆ.


ಇದನ್ನೂ ಓದಿ : Murder News: ಅಮ್ಮ, ಹೆಂಡತಿಯನ್ನು ಇರಿದು ಕೊಂದ ಭಾರತದ ಮಾಜಿ ಕ್ರೀಡಾಪಟು ಇಕ್ಬಾಲ್ ಸಿಂಗ್ ಬಂಧನ


ಇನ್ನೂ ಸರ್ಕಾರದ ಎದುರು ಕಟು ಪ್ರಶ್ನೆಗಳನ್ನಿಟ್ಟಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್, "ಇದು ಕೇವಲ ವ್ಯವಹಾರ ಬಗ್ಗೆ ಮಾತ್ರ ಪರಿಗಣಿಸುವ ಸಮಯವಲ್ಲ. ಬದಲಾಗಿ ಜನರ ದುಸ್ಥಿತಿಯ ಬಗ್ಗೆ ಸರ್ಕಾರ ಗಮನವಹಿಸಬೇಕಿದೆ. ಹೀಗಾಗಿ ಸರ್ಕಾರ ನ್ಯಾಯಾಲಯಕ್ಕೆ ಎರಡು ವಿಚಾರದ ಬಗ್ಗೆ ಸ್ಪಷ್ಟತೆ ನೀಡಬೇಕು. ನೀವು ರಾಷ್ಟ್ರೀಯ ವಿಪತ್ತನ್ನು ನಿರ್ವಹಣೆ ಮಾಡುತ್ತೀರಾ? ಅಥವಾ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಗೆ ಮತ್ತಷ್ಟು ಬಡ್ಡಿಯನ್ನು ಸೇರಿಸುವ ಕುರಿತು ಲೆಕ್ಕ ಹಾಕುತ್ತೀರ?" ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.


ಅಲ್ಲದೆ, "ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದ್ದರೂ ಈ ಕುರಿತು ತನ್ನ ನಿಲುವನ್ನು ಸರ್ಕಾರ ಈವರೆಗೆ ಸ್ಪಷ್ಟಪಡಿಸಿಲ್ಲ. ಹೀಗಾಗಿ ಸೆಪ್ಟೆಂಬರ್ 1ರ ಒಳಗಾಗಿ ಸರ್ಕಾರ ಈ ಕುರಿತು ಕೋರ್ಟ್‌‌ಗೆ ಸ್ಪಷ್ಟೀಕರಣ ನೀಡಬೇಕು" ಎಂದು ಕಾಲಾವಕಾಶ ನೀಡಲಾಗಿದೆ.

top videos
    First published: