ನವದೆಹಲಿ, ಆ. 14: ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳಾದ ಹಿನ್ನಲೆಯಲ್ಲಿ ಈ ವರ್ಷ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಿಸಲಾಗುತ್ತಿದೆ. ಸ್ವತಂತ್ರ್ಯೋತ್ಸವ ಎಂದಿನಂತೆ ದೇಶಾದ್ಯಂತ ಸಡಗರ ಸಂಭ್ರಮದಿಂದ ಜರುಗುತ್ತದೆಯಾದರೂ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮ ಇನ್ನೊಂದು ಬಗೆಯ ಸಂಭ್ರಮದ್ದು. ಈ ಬಾರಿ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿ ಶತಮಾನದ ಬಳಿಕ ಒಲಂಪಿಕ್ಸ್ ಆಥ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದ ನೀರಜ್ ಚೋಪ್ರಾ.
ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮ ಸದಾ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತದೆ. ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಬಾರಿಯೂ ಇದೇ ರೀತಿಯ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರನಕ್ಕೆ ದೇಶ ವಿದೇಶಗಳ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಅದೇ ರೀತಿ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದ ನೀರಜ್ ಚೋಪ್ರಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜಾವಲಿನ್ ಎಸೆತಗಾರ ಸುಬೇದಾರ್ ನೀರಜ್ ಚೋಪ್ರಾ ಅಲ್ಲದೆ ಒಲಂಪಿಕ್ಸ್ ನಲ್ಲಿ ಈ ಬಾರಿ ಪದಕ ಗೆದ್ದ ಇನ್ನಿಬ್ಬರನ್ನು ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಇಬ್ಬರು ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಇದಲ್ಲದೆ ಕೊರೋನಾ ಯೋಧರನ್ನು (Corona warriors) ಅವರನ್ನು ಆಹ್ವಾನಿಸಿದ್ದು ಅವರನ್ನು ಕೂರಿಸಲು ಪ್ರತ್ಯೇಕವಾದ ಬ್ಲಾಕ್ ರೂಪಿಸಲಾಗಿದೆ. ಸ್ವತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಭಾರತೀಯ ವಾಯು ಸೇನಾ ವಿಮಾನಗಳು ಈ ಬ್ಲಾಕ್ ಮೇಲೆ ಹೂಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಲಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಐತಿಹಾಸಿಕ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಬಳಿಕ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದಕ್ಕೂ ಮೊದಲು ಸಂಪ್ರದಾಯದಂತೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಅವರು ಪ್ರಧಾನ ಮಂತ್ರಿಯನ್ನು ಕೆಂಪು ಕೋಟೆಗೆ ಬರಮಾಡಿಕೊಳ್ಳುತ್ತಾರೆ. ರಕ್ಷಣಾ ಕಾರ್ಯದರ್ಶಿ ಜನರಲ್ ಆಫೀಸರ್ ಕಮಾಂಡಿಂಗ್ ವತಿಯಿಂದ ಸಂಯೋಜಿತ ಇಂಟರ್-ಸರ್ವೀಸಸ್ ಮತ್ತು ದೆಹಲಿ ಪೋಲಿಸ್ ಗಾರ್ಡ್ ಪ್ರಧಾನ ಮಂತ್ರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.
ಇದನ್ನು ಓದಿ: Coronavirus: ಹೊರಗಿನಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ; ಪಂಜಾಬ್ ಸರ್ಕಾರ ಆದೇಶ
ಪ್ರಧಾನ ಮಂತ್ರಿಗೆ ಗಾರ್ಡ್ ಆಫ್ ಆನರ್ ತುಕಡಿಯು ಒಬ್ಬ ಹಿರಿಯ ಅಧಿಕಾರಿ ಮತ್ತು ಭೂಸೇನೆ, ನೌಕಾಪಡೆ, ವಾಯುಪಡೆ ಹಾಗೂ ದೆಹಲಿ ಪೊಲೀಸ್ ಪಡೆಯ ತಲಾ 20 ಜನರನ್ನು ಒಳಗೊಂಡಿರುತ್ತದೆ. ಭಾರತೀಯ ನೌಕಾಪಡೆಯು ಈ ವರ್ಷ ಸಮನ್ವಯ ಸೇವೆಯಾಗಿದೆ. ನಂತರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಧ್ವಜವನ್ನು ಹಾರಿಸುವ ಕಡೆಗೆ ತೆರಳುತ್ತಾರೆ. ರಾಷ್ಟ್ರಧ್ವಜ ಹಾರಿಸುವ ವೇಳೆ 16 ಜನರನ್ನು ಒಳಗೊಂಡ ನೌಕಾಪಡೆಯ ತಂಡವು ರಾಷ್ಟ್ರಗೀತೆಯನ್ನು ನುಡಿಸುತ್ತದೆ ಮತ್ತು 'ರಾಷ್ಟ್ರೀಯ ಸೆಲ್ಯೂಟ್'. ಬ್ಯಾಂಡ್ ಅನ್ನು MCPO ವಿನ್ಸೆಂಟ್ ಜಾನ್ಸನ್ ನಿರ್ವಹಿಸುತ್ತಾರೆ. ಲೆಫ್ಟಿನೆಂಟ್ ಕಮಾಂಡರ್ ಪಿ ಪ್ರಿಯಂಬದ ಸಾಹೂ ರಾಷ್ಟ್ರಧ್ವಜವನ್ನು ಹಾರಿಸುವಲ್ಲಿ ಪ್ರಧಾನಿಗೆ ಸಹಾಯ ಮಾಡುತ್ತಾರೆ. ಇದಾದ ಮೇಲೆ 21 ಕುಶಾಲ ತೋಪು ಸಿಡಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ