ವಿಶ್ವದಾದ್ಯಂತ ಅಂದಾಜು 50 ಬಿಲಿಯನ್ ಪಕ್ಷಿಗಳಿವೆ ಎಂದು ಆಸ್ಟ್ರೇಲಿಯಾದ ಅಧ್ಯಯನ ತಂಡ ನಿರೀಕ್ಷೆ ಮಾಡಿದೆ. ಆದಾಗ್ಯೂ ಈ ಸಂಖ್ಯೆಯನ್ನು ಮೀರಿದ ಪಕ್ಷಿಗಳ ಸಂಖ್ಯೆ ದೊಡ್ಡದಾಗಿದೆ. "ಮನಷ್ಯರು, ನಮ್ಮದೇ ವಿವಿಧ ಬಗೆಯ ಹಕ್ಕಿಗಳ ಗಣತಿಗೆ ಹೆಚ್ಚಿನ ಶ್ರಮ ವ್ಯಯಿಸಿದ್ದಾರೆ." ಎಂದು ಪರಿಸರ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧನೆ ಸಹ ಲೇಖಕ ವಿಲ್ ಕಾರ್ನ್ವೆಲ್ ಹೇಳುತ್ತಾರೆ. ಸಂಶೋಧನಾ ವರದಿ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ನಲ್ಲಿ ಪ್ರಕಟಗೊಂಡಿದೆ.
ಕ್ಯಾಲಘನ್ ಮತ್ತು ಇತರರ ಅಧ್ಯಯನದ ಪ್ರಕಾರ, ಹೆಚ್ಚು ಹೇರಳವಾಗಿರುವ ಪಕ್ಷಿಗಳು
ಮನೆ ಗುಬ್ಬಚ್ಚಿ (House sparrow) (1.6 ಬಿಲಿಯನ್)
ಯುರೋಪಿಯನ್ ಸ್ಟಾರ್ಲಿಂಗ್ (European starling ) (1.3 ಬಿಲಿಯನ್)
ರಿಂಗ್-ಬಿಲ್ಡ್ ಗಲ್ (Ring-billed gull) (1.2 ಬಿಲಿಯನ್)
ಬಾರ್ನ್ ಸ್ವಾಲ್ವೊ (Barn swallow) (1.1 ಬಿಲಿಯನ್)
ಗ್ಲಾಕಸ್ ಗಲ್ (Glaucous gull) (949 ಮಿಲಿಯನ್)
ಆಲ್ಡರ್ ಫ್ಲೈ ಕ್ಯಾಚರ್ (Alder flycatcher) (896 ಮಿಲಿಯನ್)
ಕಪ್ಪು ಕಾಲಿನ ಕಿಟ್ಟಿವಾಕ್ (Black-legged kittiwake) (815 ಮಿಲಿಯನ್)
ಹಾರ್ನಿಡ್ ಲಾರ್ಕ್ (Horned lark) (771 ಮಿಲಿಯನ್)
ಸೂಟಿ ಟರ್ನ್ (Sooty tern) (711 ಮಿಲಿಯನ್)
ಸವನ್ನಾ ಗುಬ್ಬಚ್ಚಿ (Savannah sparrow) (599 ಮಿಲಿಯನ್)
ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ನೆಲೆಸಿರುವ ಸಂಶೋಧಕರು, ತಮ್ಮ ಅಂದಾಜುಗಾಗಿ ಇ ಬರ್ಡ್ ಎಂಬ ಡೇಟಾಬೇಸ್ ಅನ್ನು ಬಳಸಿದ್ದಾರೆ. ಯುಎಸ್ ಮೂಲದ ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿಯಿಂದ ನಡೆಸಲ್ಪಡುವ ಇಬರ್ಡ್ ಪಕ್ಷಿ ವೀಕ್ಷಕರಿಗೆ ತಮ್ಮ ಅವಲೋಕನಗಳನ್ನು ದಾಖಲಿಸಲು ಅನುವು ಮಾಡಿಕೊಡುತ್ತದೆ, ದತ್ತಾಂಶವನ್ನು ಸಂಶೋಧಕರಿಗೆ, ಅಥವಾ ಆಸಕ್ತ ನಾಗರಿಕ ವಿಜ್ಞಾನಿಗಳಿಗೆ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುತ್ತದೆ.
ದಾಖಲಾದ ಪ್ರತಿಯೊಂದು ಜಾತಿಯ ಒಟ್ಟು ಸಂಖ್ಯೆಯನ್ನು ಅಂದಾಜು ಮಾಡುವಂತಹ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಲು ಸಂಶೋಧಕರು ಸುಮಾರು ಒಂದು ಶತಕೋಟಿ ವೀಕ್ಷಣೆಗಳನ್ನು ಹೊಂದಿರುವ ಇಬರ್ಡ್ ಡೇಟಾಸೆಟ್ ಅನ್ನು ಬಳಸಿದ್ದಾರೆ. ಒಟ್ಟಾರೆಯಾಗಿ, 9,700 ಜಾತಿಯ ಪಕ್ಷಿಗಳನ್ನು ಪರೀಕ್ಷಿಸಲಾಯಿತು. ಎಲ್ಲಾ ಜೀವಂತ ದಾಖಲಾದ ಜಾತಿಗಳಲ್ಲಿ ಶೇ. 92 ಸಹಜ ಹಾಗೂ ಉಳಿದ ಶೇ. 8 ಪ್ರಭೇದಗಳನ್ನು ಅಪರೂಪವೆಂದು ಪರಿಗಣಿಸಲಾಗಿದೆ.
ಅಲ್ಗಾರಿದಮ್‌ನ ಒಂದು ಪ್ರಮುಖ ಭಾಗವೆಂದರೆ ಪಕ್ಷಿ ‘ಪತ್ತೆಹಚ್ಚುವಿಕೆ’. ಅಂದರೆ, ಪಕ್ಷಿ ವೀಕ್ಷಕನು ಯಾವುದೇ ನಿರ್ದಿಷ್ಟ ಪ್ರಭೇದಗಳನ್ನು ನೋಡುವ ಸಾಧ್ಯತೆಯಿದೆ, ಇದು ದತ್ತಾಂಶದಲ್ಲಿ ವೀಕ್ಷಣೆಗಳನ್ನು ಹೆಚ್ಚು ಪ್ರಾಮುಖ್ಯಗೊಳಿಸುತ್ತದೆ. ಪತ್ತೆ ಹಚ್ಚುವಿಕೆ ನಗರಗಳ ಸಾಮೀಪ್ಯ, ಗಾತ್ರ, ಬಣ್ಣ ಮತ್ತು ಪಕ್ಷಿಗಳ ಹಿಂಡು ವರ್ತನೆಯಂತಹ ಅಂಶಗಳನ್ನು ಒಳಗೊಂಡಿದೆ. ಪಕ್ಷಿ ವೀಕ್ಷಣೆಯ ನಡವಳಿಕೆಗಳು (ಅಪರೂಪದ ಪ್ರಬೇಧಗಳನ್ನು ಹುಡುಕುವುದು ಮತ್ತು ದಾಖಲಿಸುವುದು) ಸಹ ಡೇಟಾದ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧಕರು ಒಪ್ಪಿಕೊಂಡಿದ್ದಾರೆ.
ಜಾಗತಿಕ ಮಟ್ಟದ ಅಂದಾಜು ಮಾಡುವಾಗ ಹಲವಾರು ಅನಿಶ್ಚಿತತೆಯ ಇರಲಿದೆ ಎಂದು ಯುಎನ್‌ಎಸ್‌ಡಬ್ಲ್ಯೂ ಪರಿಸರ ವಿಜ್ಞಾನ ಮತ್ತು ಅಂಕಿ ಅಂಶಗಳ ಪ್ರಾಧ್ಯಾಪಕ ಹಾಗೂ ಸಹ ಲೇಖಕ ಶಿನಿಚಿ ನಕಗಾವಾ ಹೇಳಿದ್ದಾರೆ.
ಇದನ್ನು ಓದಿ: Supreme Court: ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟು; ಸುಪ್ರೀಂಕೋರ್ಟ್ನಲ್ಲಿ ದೇವರನ್ನು ಪ್ರಾರ್ಥಿಸಿದ ನ್ಯಾ. ಚಂದ್ರಚೂಡ್!
ಸಂಶೋಧಕರ ಅಂದಾಜಿನ ಪ್ರಕಾರ (ಅಥವಾ ಸರಾಸರಿ) ವಿಶ್ವದಲ್ಲಿ 50 ಶತಕೋಟಿ ಪ್ರತ್ಯೇಕ ಪಕ್ಷಿಗಳಿವೆ ಎಂದು ಅತ್ಯಂತ ನಿಖರವಾಗಿ ನಂಬಲಾಗಿದೆ. ಈ ಸಂಖ್ಯೆಯಲ್ಲಿ ಸಾಕಷ್ಟು ಅನಿಶ್ಚಿತತೆ ಸಹ ಇದೆ. ಈ ಸಂಖ್ಯೆಯಲ್ಲಿ ಕಡಿಮೆ ಇರಬಹುದು ಅಥವಾ ಹೆಚ್ಚಿನದಾಗಿಯೂ ಇರಬಹುದು. ಬದಲಾಗಿ ಸರಾಸರಿ ಅಂದಾಜು 428 ಶತಕೋಟಿ ಪಕ್ಷಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ