ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಸೂಪರ್​ಸ್ಟಾರ್ ರಿಹಾನ್ನಾ ಹಿನ್ನೆಲೆ ಏನು ಗೊತ್ತಾ..?

2017 ರಲ್ಲಿ, ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ವರ್ಷದ ಮಾನವೀಯ ವ್ಯಕ್ತಿ ಎಂಬ ಪ್ರಶಸ್ತಿಯನ್ನು ಪಡೆದರು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾದ ಮಲಾಲಾ, ಕೈಲಾಶ್ ಸತ್ಯಾರ್ಥಿ ಸಹ ಈ ಪ್ರಶಸ್ತಿ ಪಡೆದುಕೊಂಡಿದ್ದರು. ಬಾರ್ಬಡೋಸ್ನ ಬ್ರಿಡ್ಜ್​ಟೌನ್​ನಲ್ಲಿ ರಿಹಾನ್ನಾ ಅವರ ದಾನ ಕಾರ್ಯಗಳಿಗಾಗಿ ಗೌರವಿಸಲಾಗಿದೆ.

ರಿಹಾನ್ನಾ

ರಿಹಾನ್ನಾ

 • Share this:
  ಬಾರ್ಬಡಿಯನ್ ಪಾಪ್ ಗಾಯಕಿ ಸೆನ್ಸೇಷನ್ ರಿಹಾನ್ನಾ ಭಾರತದ ರಾಜಧಾನಿ ಸುತ್ತಮುತ್ತ ಹಾಗೂ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನಾಕಾರ ರೈತರನ್ನು ಬೆಂಬಲಿಸಿದ ಮೊದಲ ಜಾಗತಿಕ ವ್ಯಕ್ತಿಗಳಲ್ಲಿ ಒಬ್ಬರಾದವರು. ನಂತರ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್, ನಟ ಜಾನ್ ಕುಸಾಕ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರಸೊಸೆ ಮೀನಾ ಹ್ಯಾರಿಸ್ ಮತ್ತು ಲೆಬನಾನ್ ಮೂಲದ ಅಮೆರಿಕ ಮಾಡೆಲ್, ಮಾಜಿ ನೀಲಿ ತಾರೆ ಮಿಯಾ ಖಲೀಫಾ ಸೇರಿ ಇತರರು ಸಹ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮೋದಿ ಸರ್ಕಾರದ ವಿರುದ್ಧದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

  ಇವರ ಪೈಕಿ, 32 ವರ್ಷದ ಗಾಯಕಿ-ನಟಿ ತನ್ನ 101 ಮಿಲಿಯನ್​ಗೂ ಅಧಿಕ ಅಂದರೆ (10.1 ಕೋಟಿಗೂ ಹೆಚ್ಚು) ಅನುಯಾಯಿಗಳಿಗೆ ಮಾಡಿದ ಆ ಒಂದು ಟ್ವೀಟ್, ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಭಿನ್ನ ರೀತಿಯ ಪ್ರತಿಕ್ರಿಯೆ, ವಿರೋಧ, ಮೆಚ್ಚುಗೆಗಳು ಬರಲಾರಂಭಿಸಿದವು. “ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ?! #FarmersProtest” ಎಂದು ಸಿಎನ್ಎನ್ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. "ಭಾರತವು ನವದೆಹಲಿಯ ಸುತ್ತಲೂ ಇಂಟರ್ನೆಟ್ ಕಡಿತಗೊಳಿಸುತ್ತಿದೆ, ಪ್ರತಿಭಟನಾಕಾರ ರೈತರೊಂದಿಗೆ ಪೊಲೀಸರು ಘರ್ಷಣೆ ಮಾಡುತ್ತಾರೆ," ಎಂದು ಸಿಎನ್ಎನ್ ವರದಿ ಮಾಡಿತ್ತು. "ಸೆಲೆಬ್ರಿಟಿಗಳು ಮತ್ತು ಇತರರ" ಟೀಕೆಗೆ ವಿದೇಶಾಂಗ ಸಚಿವಾಲಯವು ಖಾರವಾಗಿ ಪ್ರತಿಕ್ರಿಯೆ ನೀಡಿ, ಆ ಪ್ರತಿಕ್ರಿಯೆಗಳು "ನಿಖರ ಅಥವಾ ಜವಾಬ್ದಾರಿಯುತವಲ್ಲ" ಎಂದು ಹೇಳಿತು.

  ರಿಹಾನ್ನಾ ಈ ರೀತಿ ಹೋರಾಟಗಳಿಗೆ ಬೆಂಬಲ ಕೊಡುತ್ತಿರುವುದು ಇದೇ ಮೊದಲಲ್ಲ.
  600 ಮಿಲಿಯನ್ ಡಾಲರ್​ಗಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಗಾಯಕಿ - ಉದ್ಯಮಿ ರಿಹಾನ್ನಾ, ಮಾನವೀಯ, ಲೋಕೋಪಕಾರಿ ಮತ್ತು ಸಾಂಸ್ಕೃತಿಕ ಕಾರಣಗಳೊಂದಿಗಿನ ಒಡನಾಟಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಜೀಮರ್ ಅಸೋಸಿಯೇಷನ್, ಮನರಂಜನಾ ಉದ್ಯಮ ಫೌಂಡೇಶನ್, ಡಿಸೈನರ್ಸ್ ಎಗೇನೆಸ್ಟ್ ಏಡ್ಸ್, ಶ್ರೈನರ್ಸ್ ಹಾಸ್ಪಿಟಲ್ಸ್ ಫಾರ್ ಚಿಲ್ಡ್ರನ್, ಸ್ಟ್ಯಾಂಡ್ ಅಪ್ ಟು ಕ್ಯಾನ್ಸರ್, ಬ್ಲ್ಯಾಕ್ ಐಡ್ ಪೀಸ್ ಫೌಂಡೇಶನ್ ಮತ್ತು ಯುನಿಸೆಫ್ ಸೇರಿದಂತೆ ಹಲವಾರು ಚಾರಿಟಿಗಳಿಗೆ ಅವರು ಬೆಂಬಲಿಸಿದ್ದಾರೆ. ಸ್ಯಾಂಡಿ ಚಂಡಮಾರುತ ಪರಿಹಾರಕ್ಕಾಗಿ ರಿಹಾನ್ನಾ 100,000 ಡಾಲರ್ ಆಹಾರ ಬ್ಯಾಂಕ್​ಗೆ ದೇಣಿಗೆ ನೀಡಿದ್ದರು. ಜತೆಗೆ, ಇಡೀ ಪ್ರಪಂಚವನ್ನೇ ವಕ್ಕರಿಸಿರುವ ಮಹಾಮಾರಿ ಕೊರೋನಾ ವೈರಸ್ ಪರಿಹಾರಕ್ಕಾಗಿ ಕಳೆದ ವರ್ಷ 5 ಮಿಲಿಯನ್ ಡಾಲರ್ ಸಹಾಯ ಮಾಡಿದ್ದರು.

  ರಿಹಾನ್ನಾಗೆ ಸಿಕ್ಕ ಪ್ರಶಸ್ತಿ - ಗೌರವ

  ಸಾಂಕ್ರಾಮಿಕ ಕೊರೋನಾ ಸೊಂಕು ವಿಶ್ವಾದ್ಯಂತ ಅಪ್ಪಳಿಸುವ ಸ್ವಲ್ಪ ಮೊದಲು, ರಿಹಾನ್ನಾ ಸಂಸ್ಥೆ ಕ್ಲಾರಾ ಮತ್ತು ಲಿಯೋನೆಲ್ ಫೌಂಡೇಶನ್ ಮಾಡಿದ ಲೋಕೋಪಕಾರಿ ಪ್ರಯತ್ನಗಳಿಗಾಗಿ ಗಾಯಕಿಗೆ ಗೌರವಿಸಲಾಯಿತು. ರಿಹಾನ್ನಾ ಅಜ್ಜ - ಅಜ್ಜಿಯ ಹೆಸರಿನ ಈ ಸಂಸ್ಥೆ ಪ್ರಪಂಚಾದ್ಯಂತ 60 ದೇಶಗಳ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. 2020ರ NAACP ಇಮೇಜ್ ಅವಾರ್ಡ್​ನಲ್ಲಿ, “ನಾವು ಒಟ್ಟಾಗಿ ಏನು ಮಾಡಬಹುದೆಂದು
  ಊಹಿಸಿ. ನಾವು ಈ ಜಗತ್ತನ್ನು ಒಟ್ಟಿಗೆ ಸರಿಪಡಿಸಬಹುದು. ನಾವು ವಿಭಜನೆಗೊಂಡರೆ ಇದನ್ನು ಮಾಡಲು ಸಾಧ್ಯವಿಲ್ಲ.” ಎಂದು ಪ್ರಶಸ್ತಿ ಸ್ವೀಕರಿಸುವ ವೇಳೆ ನಟಿ, ಗಾಯಕಿ ರಿಹಾನ್ನಾ ಹೇಳಿಕೊಂಡಿದ್ದರು.

  2017 ರಲ್ಲಿ, ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ವರ್ಷದ ಮಾನವೀಯ ವ್ಯಕ್ತಿ ಎಂಬ ಪ್ರಶಸ್ತಿಯನ್ನು ಪಡೆದರು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾದ ಮಲಾಲಾ, ಕೈಲಾಶ್ ಸತ್ಯಾರ್ಥಿ ಸಹ ಈ ಪ್ರಶಸ್ತಿ ಪಡೆದುಕೊಂಡಿದ್ದರು. ಬಾರ್ಬಡೋಸ್ನ ಬ್ರಿಡ್ಜ್​ಟೌನ್​ನಲ್ಲಿ ರಿಹಾನ್ನಾ ಅವರ ದಾನ ಕಾರ್ಯಗಳಿಗಾಗಿ ಗೌರವಿಸಲಾಗಿದೆ. ಅಲ್ಲಿ ಅವರು ಸ್ತನ ಕ್ಯಾನ್ಸರ್ ರೋಗಿಗಳಿಗೆ ಆಂಕೊಲಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಕೇಂದ್ರವನ್ನು ಕಟ್ಟಿಸಿದ್ದಾರೆ. ಇದಕ್ಕೂ ಮೊದಲು 2010 ರಲ್ಲಿ, ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಗ್ಗೆ ಹಾಡುಗಳನ್ನು ರೆಕಾರ್ಡ್ ಮಾಡುವ ಮೂಲಕ ಅವರು ಹೋಪ್ ಫಾರ್ ಹೈಟಿ ನೌ ಅಭಿಯಾನವನ್ನು ಬೆಂಬಲಿಸಿದ್ದರು.

  ಬಡತನ ಮೆಟ್ಟಿ ಬಂದಿದ್ದ ದಿಟ್ಟೆ

  ಬಾರ್ಬಡೋಸ್​ನ ಬ್ರಿರ್ಡ್​ಟೌನ್​ನಲ್ಲಿ ರಿಹಾನ್ನಾ ಜನಿಸಿದರು. ಅವರ ತಂದೆ ಹಲವಾರು ವ್ಯಸನಗಳನ್ನು ಹೊಂದಿದ್ದು, ತಾಯಿ ಕುಟುಂಬವನ್ನು ಪೋಷಿಸಲು ಶ್ರಮಿಸುತ್ತಿದ್ದರು. ಒಂದು ಹಂತದಲ್ಲಿ, ಬಾಲಕಿ ರಿಹಾನ್ನಾ ಕುಟುಂಬ ಜೀವನಕ್ಕಾಗಿ ತನ್ನ ತಂದೆಯೊಂದಿಗೆ ಟೋಪಿಗಳು ಮತ್ತು ಬೆಲ್ಟ್​ಗಳನ್ನು ಮಾರುತ್ತಿದ್ದರು.

  ತನ್ನ ಬಾಲ್ಯದ ಬಗ್ಗೆ 2017 ರ ಭಾಷಣದಲ್ಲಿ ಹೇಳಿಕೊಂಡಿದ್ದ ರಿಹಾನ್ನಾ, ''ಹಸಿವಿನಿಂದ, ಇತರ ತೊಂದರೆಗಳಿಂದ ಬಳಲುತ್ತಿರುವ ಮಕ್ಕಳಿಗೆ ದೇಣಿಗೆ ನೀಡಿ ಎಂದು ಟಿವಿಯಲ್ಲಿ ಬರುತ್ತಿದ್ದ ಮನವಿಗಳನ್ನು ನೋಡುತ್ತಿದ್ದ ತಾನು ಆಫ್ರಿಕಾದಲ್ಲಿರುವ ಮಕ್ಕಳನ್ನು ಉಳಿಸಲು 25 ಸೆಂಟ್ಸ್ ಉಳಿಸಬಹುದೆಂದು ಯೋಚಿಸುತ್ತಿದ್ದೆ. ನಾನು ಹದಿಹರೆಯದವರಾಗಿದ್ದಾಗ ಅದನ್ನು ಮಾಡಲು ನನಗೆ ಸಾಧ್ಯವಾಗುವುದಿಲ್ಲ ಎಂದು ಆ ವೇಳೆ ನನಗೆ ಗೊತ್ತಿರಲಿಲ್ಲ'' ಎಂದು ಹೇಳಿದರು. ರಿಹಾನ್ನಾ ತನ್ನ ವೃತ್ತಿಜೀವನವನ್ನು 17 ನೇ ವಯಸ್ಸಿನಲ್ಲಿ ಪ್ರಾರಂಭಿಸಿದ್ದು, 18 ವರ್ಷದವಳಿದ್ದಾಗ, ಮೊದಲ ಬಾರಿಗೆ ಗಾಯನ ಆರಂಭಿಸಿದ್ದರು.

  ಅದಕ್ಕೂ ಮೊದಲು, 14 ನೇ ವಯಸ್ಸಿನಲ್ಲೇ, ತನ್ನ ಸ್ನೇಹಿತರೊಂದಿಗೆ ಕಾಂಟ್ರಾಸ್ಟ್ ಎಂಬ ಗರ್ಲ್ ಬ್ಯಾಂಡ್ ಅನ್ನು ರಿಹಾನ್ನಾ ರಚಿಸಿದ್ದರು. ಈ ತಂಡವು ಸಂಗೀತ ನಿರ್ಮಾಪಕ ಇವಾನ್ ರಿಚರ್ಡ್​ಗಾಗಿ ಆಡಿಷನ್ ಮಾಡಿತ್ತು. ನಂತರ, ರ್ಯಾಪರ್ ಜೇ ಝಡ್ ಅವರೊಂದಿಗಿನ ಸಭೆಯ ನಂತರ, ಗಾಯಕಿಯಾದರು. ಅವರ ಮೊದಲ ಆಲ್ಬಂ ಮ್ಯೂಸಿಕ್ ಆಫ್ ದಿ ಸನ್ (2005) 2 ಮಿಲಿಯನ್ ಪ್ರತಿಗಳು ಮಾರಾಟವಾದವು. ಜೊತೆಗೆ ಪೊನ್ ಡಿ ರಿಪ್ಲೇ ಹಾಡು ತಕ್ಷಣವೇ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಯಿತು.

  ಇದನ್ನು ಓದಿ: ಭಾರತದ ಕೃಷಿ ಸುಧಾರಣೆಗಳಿಗೆ ಅಮೆರಿಕ ಸ್ವಾಗತ; ರೈತರ ಶಾಂತಿಯುತ ಪ್ರತಿಭಟನೆಗೂ ಭರಪೂರ ಬೆಂಬಲ

  ಆದರೆ ರಿಹಾನ್ನಾಗೆ ಹೆಚ್ಚು ಖ್ಯಾತಿ ತಂದುಕೊಟ್ಟದ್ದು ಅವರ ಮೂರನೆಯ ಆಲ್ಬಂ ಗುಡ್ ಗರ್ಲ್ ಗಾನ್ ಬ್ಯಾಡ್ (Good Girl Gone Bad) (2007) ನಲ್ಲಿ ಪ್ರಮುಖ ಸಿಂಗಲ್ Umbrella, ಇದು ಅವರಿಗೆ ಮೊದಲ ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟಿತು. 2012 ರಲ್ಲಿ, ಅವರು ಚೀನಾದ ಪ್ರಖ್ಯಾತ ಸಂಖ್ಯೆಯ ರಾಜಕುಮಾರಿಗಾಗಿ ಕೋಲ್ಡ್ ಪ್ಲೇ (Coldplay) ಯೊಂದಿಗೆ ಮತ್ತು ಆಲ್ ಆಫ್ ದ ಲೈಟ್ಸ್​ಗಾಗಿ  ಕಾನ್ಯೆ ವೆಸ್ಟ್ ಜೊತೆ ಮ್ಯೂಸಿಕ್ ಆಲ್ಬಂನಲ್ಲಿ ಭಾಗಿಯಾಗಿದ್ದರು. 31 ನೇ ವಯಸ್ಸಿನಲ್ಲಿ, ಐಷಾರಾಮಿ ಫ್ಯಾಶನ್ ಲೇಬಲ್ (Fenty) ನಡೆಸುವ ಮೊದಲ ಕಪ್ಪು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2020 ರಲ್ಲಿ, ಅವರು ಯುಕೆಗೆ ಹೋದ ನಂತರ, ಆ ದೇಶದ ಶ್ರೀಮಂತ ಮಹಿಳಾ ಸಂಗೀತಗಾರ್ತಿ ಎನಿಸಿಕೊಂಡಿದ್ದಾರೆ ರಿಹಾನ್ನಾ.
  Published by:HR Ramesh
  First published: