ಶವದೊಂದಿಗೆ ಸೆಕ್ಸ್ ಮಾಡಿದ ಭೂಪನಿಗೆ 6 ವರ್ಷ ಜೈಲು ಶಿಕ್ಷೆ

9 ಮೃತದೇಹಗಳನ್ನ ಘಾಸಿಗೊಳಿಸಿದ್ದು ಹೇಗೆ ಮತ್ತು ಯಾಕೆ ಎಂಬುದು ನಿಮಗೇ ಗೊತ್ತು ಎಂದು ಅಪರಾಧಿಗೆ ಶಿಕ್ಷೆ ನೀಡುವ ಮುನ್ನ ನ್ಯಾಯಾಧೀಶರು ದಿಗ್ಭ್ರಮೆ ವ್ಯಕ್ತಪಡಿಸಿದರು.

Vijayasarthy SN | news18
Updated:February 2, 2019, 6:55 PM IST
ಶವದೊಂದಿಗೆ ಸೆಕ್ಸ್ ಮಾಡಿದ ಭೂಪನಿಗೆ 6 ವರ್ಷ ಜೈಲು ಶಿಕ್ಷೆ
ಪ್ರಾತಿನಿಧಿಕ ಚಿತ್ರ
Vijayasarthy SN | news18
Updated: February 2, 2019, 6:55 PM IST
ಲಂಡನ್(ಫೆ. 02): ಶವಾಗಾರಕ್ಕೆ ನುಗ್ಗಿ 9 ಶವಪೆಟ್ಟಿಗೆಗಳಿಂದ ಮೃತದೇಹಗಳನ್ನ ಹೊರತೆಗೆದು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯೊಬ್ಬನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬರ್ಮಿಂಗ್​ಹ್ಯಾಂ ನಗರದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ವರದಿಯಾಗಿದೆ. ಕಾಸಿಮ್ ಖುರಮ್ ಎಂಬಾತನೇ ಆ ವಿಲಕ್ಷಣ ಅಪರಾಧಿ. 23 ವರ್ಷದ ಕಾಸಿಮ್ ಖುರಮ್ ಶವದೊಂದಿಗೆ ಸೆಕ್ಸ್ ಮಾಡುವ ವೇಳೆ ಕುಡಿತದ ನಶೆಯಲ್ಲಿದ್ದ ಹಾಗೂ ಮಾದಕ ವಸ್ತು ಸೇವನೆಯಿಂದ ಮದೋನ್ಮತನಾಗಿದ್ದನೆನ್ನಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೊಸ ಇತಿಹಾಸ ಬರೆದ ಹಿಂದೂ ಮಹಿಳೆ!

ನೀವು ಮಾಡಿದ್ದು ಮನುಷ್ಯತ್ವ ತದ್ವಿರುದ್ಧವಾಗಿದೆ. ಒಂಬತ್ತು ಮೃತ ದೇಹಗಳನ್ನ ಘಾಸಿಗೊಳಿಸಿದಿರಿ. ಇಂಥ ಕೆಲಸ ಯಾಕೆ ಮಾಡಿದ್ದು ಎಂಬುದು ನಿಮಗೆ ಮಾತ್ರ ಗೊತ್ತು. ಇದು ತುಂಬಾ ಮುಜುಗರ ವಿಷಯ ಎಂದು ನ್ಯಾಯಾಧೀಶರಾದ ಮೆಲ್ಬೋರ್ನ್ ಇನ್ಮನ್ ಅವರು ತೀರ್ಪು ನೀಡುವ ವೇಳೆ ಕಾಸಿಮ್​ನನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಸತ್ತ ಮಗ ಬದುಕಿ ಬರುತ್ತಾನೆಂದು ನಂಬಿ 38 ದಿನ ಸಮಾಧಿ ಬಳಿಯೇ ಇದ್ದ ಅಪ್ಪ

ಇದೇ ವೇಳೆ, ಕಾಸಿಮ್ ಪರ ವಕೀಲ ಜೋಸೆಫ್ ಕೀಟಿಂಗ್ ಅವರು, ಘಟನೆಯ ಬಗ್ಗೆ ತಮ್ಮ ಕಕ್ಷಿದಾರನಿಗೆ ತೀರಾ ವಿಷಾದವಿದೆ. ಅಸ್ವಾಭಾವಿಕವಾಗಿ ಈ ಕೆಲಸ ಮಾಡಿರುವುದು ಅವರ ಅರಿವಿಗೆ ಬಂದಿದೆ ಎಂದು ಕೋರ್ಟ್​ನಲ್ಲಿ ಹೇಳಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವ ವಿಫಲಪ್ರಯತ್ನಿಸಿದರು.
First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ