ನಾವು ಹೇಳೋ ರೂಲ್ಸ್ ಫಾಲೋ ಮಾಡಿದ್ರೆ ಧಾರಾಳವಾಗಿ ನಮ್ಮ ದೇಶಕ್ಕೆ ಬನ್ನಿ: ಭಾರತಕ್ಕೆ ಗ್ರೀಸ್

ಗ್ರೀಸ್ ದೇಶ ಮತ್ತು ಅದರ ಅತ್ಯಂತ ಮನಮೋಹಕ ದ್ವೀಪಗಳು ಬಹಳ ಹಿಂದಿನಿಂದಲೂ ಭಾರತೀಯರನ್ನು ಆಕರ್ಷಿಸುತ್ತಿವೆ. ಮತ್ತು ಆ ರಾಷ್ಟ್ರವು ಭಾರತೀಯರ ಪಾಲಿಗೆ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವಾಗಿ ಬಹಳ ವೇಗವಾಗಿ ಹೊರಹೊಮ್ಮುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಸಾಂಕ್ರಮಿಕ (Corona attack) ದಾಳಿ ಮಾಡಿದ ಬಳಿಕ ಜಾಗತಿಕ ಪ್ರವಾಸೋದ್ಯಮಕ್ಕೆ (Global tourism) ಪೆಟ್ಟು ಬಿದ್ದಿದ್ದು, ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದ ಬಹಳಷ್ಟು ದೇಶಗಳು ಆ ಪೆಟ್ಟಿನಿಂದ ಇನ್ನೂ ಚೇತರಿಸಿಕೊಳ್ಳುವುದು (Recover) ಸಾಧ್ಯವಾಗಿಲ್ಲ. ಕೋರೋನಾ ರೂಪಾಂತರಿಗಳ ಹಾವಳಿ (Mutants) ಕಡಿಮೆಯಾಗಿಲ್ಲ. ಹಾಗಾಗಿ, ಕೆಲವು ದೇಶಗಳು ಈಗಲೂ ತಮ್ಮ ದೇಶಕ್ಕೆ ವಿದೇಶಿಗರ (Foreigners) ಪ್ರವೇಶವನ್ನು ನಿರ್ಭಂಧಿಸಿದೆ. ಆದರೆ, ಇದೀಗ ಪ್ರವಾಸಿಗರ (Tourist )ಕಣ್ಮಣಿಯಾಗಿರುವ ಗ್ರೀಸ್ (Greece), ಇಯು ಮತ್ತು ಭಾರತ ಸೇರಿದಂತೆ ಇತರ ದೇಶಗಳ ಹಾಗೂ ನಿರ್ದಿಷ್ಟ ವರ್ಗದ ಪ್ರಯಾಣಿಕರಿಗೆ ತಮ್ಮ ದೇಶಕ್ಕೆ ಬರಲು ಅನುಮತಿ ನೀಡಿದೆ.

ಪ್ರೊಟೋಕಾಲ್‍ ಫಾಲೋ ಮಾಡಿ
ಗ್ಲೋಬಲ್ ವೀಸಾ ಸೆಂಟರ್ ವಲ್ರ್ಡ್ (ಜಿವಿಸಿಡಬ್ಲ್ಯು) ಹೇಳಿಕೆಯೊಂದನ್ನು ನೀಡಿದ್ದು, ಕೋವಿಡ್ – 19 ಪರೀಕ್ಷಾ ಪ್ರೊಟೋಕಾಲ್‍ಗಳನ್ನು ಅನುಸರಿಸುವ ಮೂಲಕ ಭಾರತೀಯ ಪ್ರಯಾಣಿಕರ ಗ್ರೀಸ್‍ಗೆ ಪ್ರವೇಶಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: Travel: ‘ಎಂದೂ ನಿದ್ರಿಸಿದ ನಗರ‘ ಎಂದೇ ಖ್ಯಾತಿಯಾದ ಮುಂಬೈ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳಿವು..!

ಸಿ- ವೀಸಾ ವರ್ಗದಲ್ಲಿ ಅರ್ಜಿ ಸಲ್ಲಿಸಿ
ಗ್ಲೋಬಲ್ ವೀಸಾ ಸೆಂಟರ್ ವಲ್ರ್ಡ್ ಮತ್ತು ಭಾರತದಲ್ಲಿನ ಅವರ ವೀಸಾ ಅರ್ಜಿ ಪಾಲುದಾರರು, “ ಸೋಮವಾರ ಮತ್ತು ಬುಧವಾರದಂದು , ಇದೀಗ ನೀವು ಹೊಸ ದೆಹಲಿ ಮತ್ತು ಮುಂಬೈನಲ್ಲಿರುವ ಜಿವಿಸಿಡಬ್ಲ್ಯು ಅರ್ಜಿ ಕೇಂದ್ರಗಳಲ್ಲಿ ಅಲ್ಪಾವಧಿಯ ವೀಸಾ (ಸಿ- ವೀಸಾ ವರ್ಗ) ಗೆ ಅರ್ಜಿ ಸಲ್ಲಿಸಬಹುದು” ಎಂದು ತಿಳಿಸಿದ್ದಾರೆ. ಗ್ರೀಸ್‌ನ ಆಡಳಿತವು ಪ್ರಯಾಣದ ನಿರ್ಭಂಧವನ್ನು ಯಾವಾಗ ತೆಗೆಯುತ್ತದೆ ಎಂದು ಅತ್ಯಂತ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಮಂದಿ ಭಾರತೀಯರ ಪಾಲಿಗೆ ಇದು ಒಂದು ಸ್ವಾಗತಾರ್ಹ ಸುದ್ದಿಯಾಗಿದೆ.

ಗ್ರೀಸ್ ಆಕರ್ಷಕ
ಗ್ರೀಸ್ ದೇಶ ಮತ್ತು ಅದರ ಅತ್ಯಂತ ಮನಮೋಹಕ ದ್ವೀಪಗಳು ಬಹಳ ಹಿಂದಿನಿಂದಲೂ ಭಾರತೀಯರನ್ನು ಆಕರ್ಷಿಸುತ್ತಿವೆ. ಮತ್ತು ಆ ರಾಷ್ಟ್ರವು ಭಾರತೀಯರ ಪಾಲಿಗೆ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವಾಗಿ ಬಹಳ ವೇಗವಾಗಿ ಹೊರಹೊಮ್ಮುತ್ತಿದೆ. ಅದರ ವಿಶಿಷ್ಟ ಯುರೋಪಿನ್ ಶೈಲಿಯ ಕಾರಣದಿಂದಾಗಿ, ಇತ್ತೀಚಿನ ದಿನಗಳಲ್ಲಿ ಗ್ರೀಸ್ , ಮಧುಚಂದ್ರಕ್ಕೆ ಹೋಗುವ ಜೋಡಿಗಳಿಗೆ ಅತ್ಯಂತ ಮೆಚ್ಚುಗೆ ತಾಣವಾಗಿದೆ.
ಕಳೆದ ಕೆಲವು ವರ್ಷಗಳಿಂದ ಭಾರತೀಯ ಸಿನಿಮಾ ರಂಗವನ್ನು ಕೂಡ , ಮುಖ್ಯವಾಗಿ ಬಾಲಿವುಡ್ ಮಂದಿಯನ್ನು ಗ್ರೀಸ್ ಆಕರ್ಷಿಸಿದೆ ಮತ್ತು ಹಲವಾರು ಭಾರತೀಯ ಹಾಗೂ ಪ್ರಾದೇಶಿಕ ಸಿನಿಮಾಗಳ ಚಿತ್ರೀಕರಣವನ್ನು ಇಲ್ಲಿ ಮಾಡಲಾಗಿದೆ.

ಓಮೈಕ್ರಾನ್‍ ಭೀತಿ ದೇಶದಲ್ಲಿ ನಿರ್ಬಂಧ
ಗ್ಲೋಬಲ್ ವೀಸಾ ಸೆಂಟರ್ ವಲ್ರ್ಡ್ ನೀಡಿರುವ ಪ್ರಕಟಣೆ , ಭಾರತೀಯ ಪ್ರವಾಸಿಗರು ಕಾತರದಿಂದ ಕಾಯುತ್ತಿದ್ದ ಸುದ್ದಿ ಆಗಿದ್ದರೂ ಕೂಡ, ಓಮೈಕ್ರಾನ್‍ನ ಏಕಾಏಕಿ ದಾಳಿಯನ್ನು ತಪ್ಪಿಸಲು, ಭಾರತವು ಜನವರಿ 31 ರವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ನಿಲ್ದಾಣಗಳನ್ನು ನಿರ್ಬಂಧಿಸಿದೆ. ಈ ವಿಷಯದಲ್ಲಿ, ಏರ್ –ಟ್ರಾವೆಲ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಬರುವ ವಿಮಾನಗಳು ಮತ್ತು ಸರಕು ವಿಮಾನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: Holiday Plan: ಅರಮನೆ ನಗರಿ ಸುತ್ತಲೂ ಇವೆ ಈ ಸೂಪರ್ ಪ್ರವಾಸಿ ತಾಣಗಳು- ಕ್ರಿಸ್​ಮಸ್​ ರಜೆಯಲ್ಲಿ ನೀವೂ ಹೋಗಿ

ನಿಯಮಗಳು ಪರಿಶೀಲಿಸಿ
ಓಮೈಕ್ರಾನ್‍ ದಾಳಿಯಿಂದ ತಪ್ಪಿಸಿಕೊಳ್ಳುವ ಕಾರಣದಿಂದ , ಸದ್ಯದ ಪರಿಸ್ಥಿತಿಯಲ್ಲಿ ವಿಮಾನಗಳನ್ನು ನಿಷೇಧಿಸುವ ಭಾರತದ ನಿರ್ಧಾರವು , ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ. ಯಾವುದೇ ಪ್ರಯಾಣಿಕರು ಭಾರತ ದೇಶಕ್ಕೆ ಅಥವಾ ಭಾರತ ದೇಶದಿಂದ , ಅಂತರರಾಷ್ಟ್ರೀಯ ಪ್ರವಾಸವನ್ನು ಕೈಗೊಳ್ಳಲು ಆಲೋಚಿಸುವ ಮೊದಲು, ಇತ್ತೀಚೆಗೆ ವಿಧಿಸಲಾದ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಿ, ಆ ಬಳಿಕ ಪ್ರಯಾಣದ ನಿರ್ಧಾರ ಕೈಗೊಳ್ಳುವುದು ಉತ್ತಮ ಎನ್ನಬಹುದು.
Published by:vanithasanjevani vanithasanjevani
First published: