ಬಂಪರ್​ ಆಫರ್​: ಹಳೆ ಬಿಯರ್ ಬಾಟಲ್​​ ಮುಚ್ಚಳ ಕೊಟ್ಟು ಚಿಲ್ಡ್​ ಬಿಯರ್ ಬಾಟಲ್​ ​ಪಡೆಯಿರಿ

ಬಳಕೆಗೆ ಬಾರದ ಬಿಯರ್​ ಬಾಟಲ್​ ಮುಚ್ಚಳ ಏನಕ್ಕೆ ಎಂದು ಅಲ್ಲಿಲ್ಲಿ ಬಿಸಾಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿ. ನಿಮ್ಮ ಹಳೆ ಬಾಟಲ್​ ಮುಚ್ಚಳಗಳನ್ನು ಒಮ್ಮೆ ಈ ಅಂಗಡಿಗೆ ನೀಡಿದರೆ, ಹೊಸ ಬಿಯರ್​ ಬಾಟಲ್​ಅನ್ನು ನೀಡುತ್ತಿದೆ. ಈ ಅಂಗಡಿ ಆಶ್ಚರ್ಯವಾದರೂ ಇದು ನಿಜ.

Seema.R | news18
Updated:February 6, 2019, 12:52 PM IST
ಬಂಪರ್​ ಆಫರ್​: ಹಳೆ ಬಿಯರ್ ಬಾಟಲ್​​ ಮುಚ್ಚಳ ಕೊಟ್ಟು ಚಿಲ್ಡ್​ ಬಿಯರ್ ಬಾಟಲ್​ ​ಪಡೆಯಿರಿ
ಪ್ರಾತಿನಿಧಿಕ ಚಿತ್ರ
  • News18
  • Last Updated: February 6, 2019, 12:52 PM IST
  • Share this:
ರಕ ಮಖರ್ಜಿ

ಬಳಕೆಗೆ ಬಾರದ ಬಿಯರ್​ ಬಾಟಲ್​ ಮುಚ್ಚಳ ಏನಕ್ಕೆ ಎಂದು ಅಲ್ಲಿಲ್ಲಿ ಬಿಸಾಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿ. ನಿಮ್ಮ ಹಳೆ ಬಾಟಲ್​ ಮುಚ್ಚಳಗಳನ್ನು ಒಮ್ಮೆ ಈ ಅಂಗಡಿಗೆ ನೀಡಿದರೆ, ಹೊಸ ಬಿಯರ್​ ಬಾಟಲ್​ಅನ್ನು ನೀಡುತ್ತಿದೆ. ಈ ಅಂಗಡಿ ಆಶ್ಚರ್ಯವಾದರೂ ಇದು ನಿಜ.

ಗೋವಾ ಎಂದ್ರೆ ಸಾಕು ಬೀಚ್​, ಬಿಯರ್​ ಎಲ್ಲವೂ ಒಟ್ಟೊಟ್ಟಿಗೆ ನೆನಪಾಗುತ್ತದೆ. ಬಿಯರ್​ಗಾಗಿಯೇ ಅನೇಕರು ಗೋವಾಕ್ಕೆ ತೆರಳುವವರು ಇದ್ದಾರೆ. ಅಂತವರು ಈಗ ಪುಕ್ಕಟೆಯಾಗಿ ಬಿಯರ್​ ಕುಡಿಯಬಹುದು. ಹೇಗೆ ಅಂತೀರಾ. ಬೀಚ್​ ಬದಿಯಲ್ಲಿ ಬಿಸಾಡಿದ ಸಿಗರೇಟ್​ ಪ್ಯಾಕ್​ ಹಾಗೂ ಬಿಯರ್​ ಬಾಟೆಲ್​ ಮುಚ್ಚಳವನ್ನು ಸಂಗ್ರಹಿಸಿ ನೀಡಿದರೆ, ಹೊಸ ಬಿಯರ್​ ಪಡೆಯಬಹುದಾಗಿದೆ.

ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 7 ಲಕ್ಷ ಪ್ರವಾಸಿಗರು ಬರುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಯಾಗುವುದರ ಜೊತೆಗೆ ಕಸ ನಿರ್ವಹಣೆ ಕೂಡ ಇಲ್ಲಿ ಸಮಸ್ಯೆಯಾಗಿದೆ. ಅದರಲ್ಲಿಯೂ ಬೀಚ್​ ಬದಿಯಲ್ಲಿ ಪ್ರವಾಸಿಗರು ಬಿಸಾಡುವ ಕಸ ಶುಚಿ ಮಾಡುವುದು ಸರ್ಕಾರಕ್ಕೆ ತಲೆನೋವಾಗಿದೆ. ಈ ಹಿನ್ನಲೆಯಲ್ಲಿ  ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಹೊಸ ಯೋಚನೆ ಶುರು ಮಾಡಿದೆ.

10 ಬಿಯರ್​ ಬಾಟೆಲ್​ ಮುಚ್ಚಳ ಹಾಗೂ 20 ಸಿಗರೇಟ್​ ಪ್ಯಾಕ್​ಗಳನ್ನು ನೀಡಿದರೆ ಹೊಸ ಬಿಯರ್​ ಪಡೆಲಿಯನ್ನು ಇದರ ಪ್ರತಿಯಾಗಿ ಪಡೆಯಬಹುದು. ಜನವರಿ 30ರಿಂದ ಈ ಹೊಸ ಯೋಜನೆ ಶುರುವಾಗಿದೆ. ಬೇಗಬೀಚ್​ನಲ್ಲಿರುವ ಜಾನ್​ಜೀಬರ್​ ಮೊದಲ ಕಸ ವಿನಿಮಯದ ಶಾಪ್​ ಆಗಲಿದೆ.

ಇದನ್ನು ಓದಿ: ದೇಶದೆಲ್ಲೆಡೆ ಕೆಂಪು ಬಣ್ಣದ ಬಟ್ಟೆ ಬ್ಯಾನ್​ ಮಾಡಿ ಎಂದು ಸುಪ್ರೀಂ ಕೋರ್ಟ್​ಗೆ ಮನವಿ

ಕೇವಲ ಸಿಗರೇಟ್​ ಪ್ಯಾಕ್​, ಬಿಯರ್​ ಮುಚ್ಚಳ ಅಷ್ಟೇ ಅಲ್ಲದೇ ಪ್ಲಾಸ್ಟಿಕ್​ ಸ್ಟ್ರಾಗಳನ್ನು ಕೂಡ ಬದಲಾವಣೆ ಮಾಡಿಕೊಂಡು ಕಾಕ್​ಟೇಲ್​ ಅಥವಾ ತಂಪು ಬಿಯರ್​ ಅನ್ನು ಈ ವೆಸ್ಟ್​ ಬಾರ್​ನಲ್ಲಿ ಪಡೆಯಬಹುದಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ವೆಸ್ಟ್​ ಬಾರ್​ ಶಾಪ್​ ತೆರೆಯಲಿದ್ದು, ಪ್ರವಾಸಿಗರಿಗೆ ಬಂಫರ್​ ಆಫರ್​ ನೀಡಲಿದೆ.
First published:February 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ