ಚಿನ್ನ ಎಂಬುದು ಸದಾ ಕಾಲ ಸುರಕ್ಷಿತ ಹೂಡಿಕೆ. ಇದೇ ಕಾರಣಕ್ಕೆ ಬಂಗಾರ ಕೊಳ್ಳಲು ಮಹಿಳಾಮಣಿಗಳು ಮುಗಿಬೀಳುವಂತೆ ಪುರುಷರೂ ಕೂಡ ಇದರ ಮೇಲೆ ಬಂಡಾವಳ ಹೂಡಲು ಹಿಂದೆ ಮುಂದೆ ಯೋಚಿಸುವುದಿಲ್ಲ. ಚಿನ್ನದ ಬೆಲೆ ಎಷ್ಟೇ ಏರಿದ್ದರೂ ಹಬ್ಬ, ಮದುವೆ ಸಮಾರಂಭದಲ್ಲಿ ಚಿನ್ನವನ್ನು ಕೈಯಲ್ಲಿ ಆದ ಮಟ್ಟಿಗೆ ಎಲ್ಲಾ ವರ್ಗದ ಜನರು ಕೊಳ್ಳಲು ಮುಂದಾಗುತ್ತಿದ್ದಾರೆ. ಈಗಾಗಲೇ ಗಗನ ಮುಖಿಯಾಗಿದ್ದ ಚಿನ್ನ ಕೊಂಚ ಇಳಿಕೆ ಹಾದಿ ಹಿಡಿಯುತ್ತಿದೆ, ಎಂಸಿಎಕ್ಸ್ನಲ್ಲಿ 10,000 ರೂಗಳಷ್ಟು ಚಿನ್ನ ಅಗ್ಗವಾಗುತ್ತಿದೆ. ತನಿಷ್ಕ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ನಂತಹ ದೊಡ್ಡ ಆಭರಣ ಬ್ರಾಂಡ್ಗಳು ಅಗ್ಗದ ಬೆಲೆಗೆ ಚಿನ್ನವನ್ನು ಮಾರಾಟ ಮಾಡುತ್ತಿವೆ.
ಆನ್ಲೈನ್ ಮಾರಾಟಕ್ಕೆ ಹೆಚ್ಚಿದ ಒಲವು
ಭಾರತೀಯರಿಗೆ ಚಿನ್ನದ ಮೇಲಿನ ಆಸಕ್ತಿ ಕಂಡಿರುವ ಹೆಸರಾಂತ ತನಿಷ್ಕ್ ಮತ್ತು ಕಲ್ಯಾಣ್ ಜ್ಯುವೆಲರ್ಸ್ ನಂತಹ ಬ್ರಾಂಡ್ಗಳು ಈಗ ಅತಿ ಕಡಿಮೆ ದರದಲ್ಲಿ ಚಿನ್ನ ಮಾರಾಟಕ್ಕೆ ಮುಂದಾಗಿದೆ. ಈ ಬ್ರಾಂಡ್ಗಳು ಆನ್ಲೈನ್ನಲ್ಲಿ ಆಭರಣಗಳನ್ನು ಮಾರಾಟ ಮಾಡುತ್ತಿದ್ದು, ಅಲ್ಲಿ ನೀವು 100 ರೂಪಾಯಿಗಳಿಗೆ ಚಿನ್ನವನ್ನು ಖರೀದಿಸಬಹುದು.
ಕೋವಿಡ್ ಸಾಂಕ್ರಾಮಿಕ ಬಳಿಕ ಉದ್ಯಮದ ಮಾರಾಟ ಮಾರ್ಗ ಬದಲಾವಣೆಗೊಂಡಿದೆ. ಮನೆಯಲ್ಲಿಯಿಂದಲೇ ಜನರು ಆನ್ಲೈನ್ ಮೂಲಕ ಪ್ರತಿ ವಸ್ತು ಕೊಳ್ಳಲು ಮುಂದಾಗಿರುವ ಹಿನ್ನಲೆ ಈ ಹಿಂದಿನ ಸಂಪ್ರದಾಯಿಕ ವಹಿವಾಟು ಮಾರ್ಪಡಾಗುತ್ತಿದೆ, ಇದೇ ಕಾರಣಕ್ಕಾಗಿ ಈಗ ಚಿನ್ನವನ್ನು ಕೂಡ ಆನ್ಲೈನ್ನಲ್ಲಿ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ.
100ರೂಗೆ ಚಿನ್ನ ಪಡೆಯಬಹುದು
ಟಾಟಾ ಗ್ರೂಪ್ನ ತನಿಷ್ಕ್, ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಲಿಮಿಟೆಡ್, ಪಿಸಿ ಜ್ಯುವೆಲರ್ಸ್ ಲಿಮಿಟೆಡ್ ಮತ್ತು ಸೆಂಕೋ ಗೋಲ್ಡ್ ಮತ್ತು ಡೈಮಂಡ್ಸ್ನಂತಹ ಆಭರಣ ವ್ಯಾಪಾರಿಗಳು ತಮ್ಮ ವೆಬ್ಸೈಟ್ಗಳಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಇದರ ಹೊರತಾಗಿ, ದೊಡ್ಡ ಕಂಪನಿಗಳು ಇತರ ವೆಬ್ಸೈಟ್ಗಳಿಂದ ಟೈ-ಅಪ್ಗಳ ಮೂಲಕ 100 ರೂ.ಗಿಂತ ಕಡಿಮೆ ಬೆಲೆಗೆ ಚಿನ್ನವನ್ನು ಮಾರಾಟ ಮಾಡುತ್ತಿವೆ ಎಂಬುದು ಸುಳ್ಳಲ್ಲ
ಇದನ್ನು ಓದಿ: ರೈಸ್ ಕುಕರ್ನ್ನು ಬಾಳ ಸಂಗಾತಿಯನ್ನಾಗಿ ಮಾಡ್ಕೊಂಡು ನಾಲ್ಕೇ ದಿನಕ್ಕೆ ಡಿವೋರ್ಸ್ ಕೊಟ್ಟ!
ಡಿಜಿಟಲ್ ಗೋಲ್ಡ್ ಪ್ಲಾಟ್ಫಾರ್ಮ್ ಮೂಲಕ ಮಾರಾಟ
ಈ ಆನ್ಲೈನ್ ವ್ಯವಸ್ಥೆಯನ್ನು ಡಿಜಿಟಲ್ ಗೋಲ್ಡ್ ಪ್ಲಾಟ್ಫಾರ್ಮ್ ಎಂದು ಹೆಸರಿಸಲಾಗಿದೆ. ದಸರಾ ದೀಪಾವಳಿಯ ಲಕ್ಷ್ಮೀ ಹಬ್ಬದ ಸಮಯದಲ್ಲಿ ಹಬ್ಬದ ಸಂಭ್ರಮದಲ್ಲಿ ಜನರು ಚಿನ್ನಕೊಳ್ಳಲು ಮುಂದಾಗುವುದು ಸಾಮಾನ್ಯ. ಈ ಹಿನ್ನಲೆ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಮುಂದಾಗಿವೆ. ಈ ಯೋಜನೆ ಮೂಲಕ ಗ್ರಾಹಕರು ಕನಿಷ್ಠ 1 ಗ್ರಾಂ ಚಿನ್ನದ ಮೇಕೆ ಹೂಡಿಕೆ ಮಾಡಿದ ನಂತರ ಗ್ರಾಹಕರು ವಿತರಣೆಯನ್ನು ತೆಗೆದುಕೊಳ್ಳಬಹುದು. ವಿತರಣೆಯನ್ನು ತೆಗೆದುಕೊಳ್ಳಲು, ನೀವು ಚಿನ್ನವನ್ನು ಖರೀದಿಸಿದ ಬ್ರಾಂಡ್ನ ಶೋರೂಂಗೆ ಹೋಗಿ ನಿಮ್ಮ ಆಭರಣಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಆ ಆಭರಣದ ತಯಾರಿಕೆ ಶುಲ್ಕವನ್ನು ಪಾವತಿಸಬೇಕು.
ಇದನ್ನು ಓದಿ: ಬನಶಂಕರಿಯ ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಬಿದ್ದು 10 ವರ್ಷದ ಬಾಲಕ ಸಾವು
ಸುರಕ್ಷಿತ ವಹಿವಾಟು
ಯುಪಿಐ ಪಾವತಿಗಳು ಮತ್ತು ಇತರ ಡಿಜಿಟಲ್ ಪಾವತಿ ವಿಧಾನಗಳ ಬಳಕೆಯಿಂದ ಜನರು ಆನ್ಲೈನ್ ಶಾಪಿಂಗ್ ಅನ್ನು ನಂಬಲು ಆರಂಭಿಸಿದ್ದಾರೆ. ಆಗ್ಮಾಂಟ್ ಗೋಲ್ಡ್ ಫಾರ್ ಆಲ್ ಮತ್ತು ವರ್ಲ್ಡ್ ಗೋಲ್ಡ್ ಕೌನ್ಸಿಲ್ ನಂತಹ ಮೊಬೈಲ್ ವ್ಯಾಲೆಟ್ ಸುರಕ್ಷಿತ ಚಿನ್ನದ ಉತ್ಪನ್ನಗಳನ್ನು ಮೊದಲು ಪರಿಚಯಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ