ಉತ್ತರ ಪ್ರದೇಶ ಆಯ್ತು, ದಿಲ್ಲಿಯಲ್ಲೂ ಬಿಜೆಪಿ ಗೆಲುವಿಗೆ ದಾರಿ: ಕಾಂಗ್ರೆಸ್ ಮೈತ್ರಿ ಲೆಕ್ಕಾಚಾರಕ್ಕೆ ಆಮ್ ಆದ್ಮಿ ಗರಂ

ಪಂಜಾಬ್, ಚಂಡೀಗಡದಲ್ಲಿ ಆಮ್ ಆದ್ಮಿಗೆ ಒಂದೂ ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲದ ಕಾಂಗ್ರೆಸ್​ಗೆ ದೆಹಲಿಯಲ್ಲಿ ಮೂರು ಕ್ಷೇತ್ರಗಳು ಯಾಕೆ ಬೇಕು ಎಂದು ಆಪ್ ಮುಖಂಡರು ಪ್ರಶ್ನಿಸುತ್ತಿದ್ದಾರೆ.

Vijayasarthy SN | news18
Updated:April 15, 2019, 11:03 PM IST
ಉತ್ತರ ಪ್ರದೇಶ ಆಯ್ತು, ದಿಲ್ಲಿಯಲ್ಲೂ ಬಿಜೆಪಿ ಗೆಲುವಿಗೆ ದಾರಿ: ಕಾಂಗ್ರೆಸ್ ಮೈತ್ರಿ ಲೆಕ್ಕಾಚಾರಕ್ಕೆ ಆಮ್ ಆದ್ಮಿ ಗರಂ
ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್
  • News18
  • Last Updated: April 15, 2019, 11:03 PM IST
  • Share this:
ನವದೆಹಲಿ(ಏ. 15): ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ಸೋಲಿಸಲು ದೇಶಾದ್ಯಂತ ವಿಪಕ್ಷಗಳ ಮೈತ್ರಿಗಳಾಗುತ್ತಿವೆ. ಇದರಲ್ಲಿ ಹಲವು ಯಶಸ್ವಿಯಾದರೆ, ಕೆಲವು ಗೊಂದಲದ ಗೂಡಾಗಿವೆ. ಅಂಥವುಗಳಲ್ಲಿ ದೆಹಲಿಯೂ ಒಂದು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಆಮ್ ಆದ್ಮಿ ಮೊದಲಿಂದಲೂ ಇಚ್ಛಿಸಿತ್ತು. ಮೈತ್ರಿ ಇಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದ ಕಾಂಗ್ರೆಸ್ ಪಕ್ಷ ಇದೀಗ ದೆಹಲಿಯ 7 ಕ್ಷೇತ್ರಗಳ ಪೈಕಿ ನಾಲ್ಕನ್ನು ಆಮ್ ಆದ್ಮಿಗೆ ಬಿಟ್ಟುಕೊಡಲು ನಿರ್ಧರಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ತಮ್ಮ ಮೈತ್ರಿಬಾಗಿಲು ಇನ್ನೂ ಮುಕ್ತವಾಗಿದೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಹುಲ್ ಗಾಂಧಿ ಆಮ್ ಆದ್ಮಿ ಮುಖ್ಯಸ್ಥರ ಬಗ್ಗೆ ವ್ಯಂಗ್ಯವನ್ನೂ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಯೂಟರ್ನ್ ಹೊಡೆಯುತ್ತಾರೆ. ಸಮಯ ಮೀರಿ ಹೋಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: 'ಒಲ್ಲದ ಮನಸಿಂದ ಯಾಕಿದ್ದೀರ? ಬಿಜೆಪಿಗೆ ಬಂದುಬಿಡಿ'; ಸಿಎಂ ಕುಮಾರಸ್ವಾಮಿಗೆ ಕೇಂದ್ರ ಸಚಿವರಿಂದ ಆಫರ್!

ಕಾಂಗ್ರೆಸ್ ಅಧ್ಯಕ್ಷರು ಕೊಟ್ಟ 4:3 ಆಫರ್ ಮತ್ತು ಯೂಟರ್ನ್ ಆರೋಪ ಎರಡೂ ಕೂಡ ಆಮ್ ಆದ್ಮಿ ಮುಖಂಡರನ್ನು ಕೆರಳಿಸಿವೆ. ದೆಹಲಿಯಲ್ಲಿ ಒಂದೂ ಸಂಸದ ಮತ್ತು ಶಾಸಕರನ್ನು ಹೊಂದಿಲ್ಲದ ಕಾಂಗ್ರೆಸ್ ಪಕ್ಷಕ್ಕೆ 3 ಸ್ಥಾನಗಳು ಬೇಕಾ ಎಂದು ಕೇಜ್ರಿವಾಲ್ ಮೊದಲಾದವರು ಪ್ರಶ್ನಿಸುತ್ತಿದ್ದಾರೆ.

ಆಮ್ ಆದ್ಮಿ ಪಕ್ಷವು ದೆಹಲಿಯೊಂದರಲ್ಲಷ್ಟೇ ಅಲ್ಲ, ಪಂಜಾಬ್, ಚಂಡೀಗಡ, ಹರಿಯಾಣ ಹಾಗೂ ಗೋವಾ ಈ ಪಂಚರಾಜ್ಯಗಳಲ್ಲಿರುವ 33 ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಉತ್ಸುಕತೆ ತೋರಿತ್ತು. ಆದರೆ, ಕಾಂಗ್ರೆಸ್ ಪಕ್ಷವೇ ಈ ಮೈತ್ರಿ ಆಫರನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ಇದನ್ನೂ ಓದಿ: ಬೆಂಗಳೂರಿನ 3 ಕ್ಷೇತ್ರಗಳ 6 ಅಭ್ಯರ್ಥಿಗಳಿಗೆ ಸಿಕ್ಕಿದೆ ಬಿಪ್ಯಾಕ್ ಅನುಮೋದನೆ

ಒಂದೆಡೆ ಕಾಂಗ್ರೆಸ್ ಪಕ್ಷವು ಪಂಜಾಬ್​ನಲ್ಲಿ ನಾಲ್ಕು ಶಾಸಕರನ್ನು ಹೊಂದಿರುವ ಆಮ್ ಆದ್ಮಿ ಪಕ್ಷಕ್ಕೆ ಒಂದೂ ಕಡೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಿಲ್ಲ. ಇನ್ನೊಂದೆಡೆ, ದೆಹಲಿಯಲ್ಲಿ ಒಂದೂ ಶಾಸಕರಿಲ್ಲದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ 3 ಸ್ಥಾನಗಳು ಬೇಕು. ಇದೆಂಥಾ ನ್ಯಾಯ ಎಂದು ಆಮ್ ಆದ್ಮಿ ಮುಖಂಡರು ಪ್ರಶ್ನಿಸುತ್ತಿದ್ದಾರೆ.

ರಾಹುಲ್ ಗಾಂಧಿ ಅವರ ಮೈತ್ರಿ ಆಫರ್​ ಹಾಗೂ ಯೂಟರ್ನ್ ಟೀಕೆಗೆ ತಿರುಗೇಟು ಕೊಟ್ಟಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಯಾವ ಯೂಟರ್ನ್? ಮೈತ್ರಿಗಾಗಿ ನಾವಿನ್ನೂ ಮಾತನಾಡುತ್ತಿದ್ದೇವೆ. ನೀವು ನೀಡಿರುವ ಮೈತ್ರಿ ಆಫರ್ ಕೇವಲ ತೋರ್ಪಡಿಕೆಗೆ ಮಾತ್ರ ಎಂಬುದು ನಿಮ್ಮ ಟ್ವೀಟ್​ನಿಂದ ಗೊತ್ತಾಗುತ್ತಿದೆ. ಇವತ್ತು ಮೋದಿ-ಶಾ ಜೋಡಿಯನ್ನು ಸೋಲಿಸಿ ದೇಶವನ್ನು ಬಚಾವ್ ಮಾಡುವುದು ಮುಖ್ಯ ಕಾರ್ಯ. ದುರದೃಷ್ಟವಶಾತ್, ನೀವು ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಮೋದಿ ವಿರೋಧಿ ವೋಟುಗಳನ್ನ ವಿಭಜಿಸಿ ಮೋದಿ ಅವರಿಗೆ ನೆರವಾಗುತ್ತಿದ್ದೀರಿ” ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: ಮಂಡ್ಯ ಯಾರ ಸ್ವತ್ತೂ ಅಲ್ಲ, ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದರೆ ತಪ್ಪೇನಿದೆ?; ಸಿಎಂಗೆ ಯಶ್​ ತಿರುಗೇಟು

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಎದುರಾಗಿ ಎಸ್​ಪಿ-ಬಿಎಸ್​ಪಿ ನೇತೃತ್ವದಲ್ಲಿ ಪ್ರಬಲ ಮಹಾಘಟಬಂಧನ್ ರಚನೆಯಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಈ ಮಹಾಮೈತ್ರಿಕೂಟದಲ್ಲಿ ಸೇರಲು ಪ್ರಯತ್ನಿಸಿತ್ತು. ಅದು ವಿಫಲವಾದ ನಂತರ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಹಾಕಿದೆ. ಕಾಂಗ್ರೆಸ್ ಸ್ಪರ್ಧೆಯಿಂದ ತಮ್ಮ ಗೆಲುವಿನ ಹಾದಿಗೇನೂ ಅಡ್ಡಿಯಾಗುವುದಿಲ್ಲ ಎಂದು ಎಸ್​ಪಿ-ಬಿಎಸ್​ಪಿ ಹೇಳುತ್ತಿವೆಯಾದರೂ, ಕಾಂಗ್ರೆಸ್ ಪಕ್ಷ ಅಲ್ಪಸ್ವಲ್ಪ ವೋಟುಗಳನ್ನ ಕಿತ್ತುಕೊಂಡು ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇಲ್ಲದಿಲ್ಲ ಎಂಬ ವಿಶ್ಲೇಷಣೆಗಳು ನಡೆದಿವೆ. ಅರವಿಂದ್ ಕೇಜ್ರಿವಾಲ್ ಅವರು ಇದೇ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದಾರೆ.

(ವರದಿ: ಸುಹಾಸ್ ಮುನ್ಷಿ)
First published:April 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading