ಜಾಮಾ ಮಸೀದಿ ಪಾಕ್​ನಲ್ಲಿದೆಯೇ, ಇಲ್ಲಿ ಪ್ರತಿಭಟಿಸುವುದು ಹೇಗೆ ಕಾನೂನು ಉಲ್ಲಂಘನೆಯಾಗುತ್ತೆ?; ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್​

ಜನರು ಸಂಸತ್ತಿನೊಳಗೆ ಹೇಳಬೇಕಾದ ವಿಷಯಗಳನ್ನು ಹೇಳದ ಕಾರಣ ಬೀದಿಗಿಳಿದಿದ್ದಾರೆ. ಈ ಪ್ರತಿಭಟನೆಯಲ್ಲಿ ಅಸಾಂವಿಧಾನಿಕವಾದದ್ದು ಏನಿದೆ? ಪ್ರತಿಭಟಿಸುವುದು ಸಂವಿಧಾನದ ಹಕ್ಕು. ಜನರು ಶಾಂತಿಯುತವಾಗಿ ಪ್ರತಿಭಟಿಸಿದರೆ ನಿಮ್ಮ ಸಮಸ್ಯೆ ಏನು? ಯಾವುದೇ ಹಿಂಸಾಚಾರ ನಡೆಯದಿರುವ ತನಕ ನೀವು ಪ್ರತಿಭಟನೆಯನ್ನು ಹೇಗೆ ನಿಲ್ಲಿಸಬಹುದು? ಎಂದು ಪೊಲೀಸರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.

MAshok Kumar | news18-kannada
Updated:January 14, 2020, 5:03 PM IST
ಜಾಮಾ ಮಸೀದಿ ಪಾಕ್​ನಲ್ಲಿದೆಯೇ, ಇಲ್ಲಿ ಪ್ರತಿಭಟಿಸುವುದು ಹೇಗೆ ಕಾನೂನು ಉಲ್ಲಂಘನೆಯಾಗುತ್ತೆ?; ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್​
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​ ತನ್ನ ಬೆಂಬಲಿಗರ ಜೊತೆ ಸಂವಿಧಾನದ ಪುಸ್ತಕ ಹಿಡಿದು ಜಾಮಾ ಮಸೀದಿಯ ಎದುರು ಪ್ರತಿಭಟಿಸುತ್ತಿರುವುದು.
  • Share this:
ನವ ದೆಹಲಿ (ಜನವರಿ 14); ಜಾಮಾ ಮಸೀದಿ ಪಾಕಿಸ್ತಾನದಲ್ಲಿದೆಯೇ? ಪೊಲೀಸರೇಕೆ ಪಾಕಿಸ್ತಾನದಲ್ಲಿರುವಂತೆ ವರ್ತಿಸಿದ್ದಾರೆ? ಜಾಮಾ ಮಸೀದಿ ಭಾರತದ ಒಂದು ಭಾಗವೇ ಆಗಿದ್ದ ಮೇಲೆ ಇಲ್ಲಿ ಪ್ರತಿಭಟಿಸಲು ನಿಮ್ಮ ತಕರಾರು ಏಕೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿರಿಸಿರುವ ದೆಹಲಿ ಸೆಷನ್ಸ್​ ಕೋರ್ಟ್​ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಸಿಎಎ ಹಾಗೂ ಎನ್ಆರ್​ಸಿ ಕಾನೂನನ್ನು ವಿರೋಧಿಸಿ ಡಿಸೆಂಬರ್ 21 ರಂದು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ದೆಹಲಿಯ ಜಾಮಾ ಮಸೀದಿಯ ಎದುರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ, ಜಾಮಾ ಮಸೀದಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡದ ದೆಹಲಿ ಪೊಲೀಸರು ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಿದ್ದರು. ಅವರ ಜಾಮೀನು ಅರ್ಜಿ ಇಂದು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ ಸಿಎಎ ಮತ್ತು ಎನ್ಆರ್​ಸಿ ವಿರೋಧಿ ಪ್ರತಿಭಟನೆಗಳ ಕುರಿತು ಮಾತನಾಡಿರುವ ನ್ಯಾಯಾಧೀಶರು,”ಜನರು ಸಂಸತ್ತಿನೊಳಗೆ ಹೇಳಬೇಕಾದ ವಿಷಯಗಳನ್ನು ಹೇಳದ ಕಾರಣ ಬೀದಿಗಿಳಿದಿದ್ದಾರೆ. ಈ ಪ್ರತಿಭಟನೆಯಲ್ಲಿ ಅಸಾಂವಿಧಾನಿಕವಾದದ್ದು ಏನಿದೆ? ಪ್ರತಿಭಟಿಸುವುದು ಸಂವಿಧಾನದ ಹಕ್ಕು. ಜನರು ಶಾಂತಿಯುತವಾಗಿ ಪ್ರತಿಭಟಿಸಿದರೆ ನಿಮ್ಮ ಸಮಸ್ಯೆ ಏನು? ಯಾವುದೇ ಹಿಂಸಾಚಾರ ನಡೆಯದಿರುವ ತನಕ ನೀವು ಪ್ರತಿಭಟನೆಯನ್ನು ಹೇಗೆ ನಿಲ್ಲಿಸಬಹುದು? ಎಂದು ಪೊಲೀಸರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.

ಭೀಮ್ ಆರ್ಮಿ ಚಂದ್ರಶೇಖರ ಆಜಾದ್​ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಿರಲು ನಿಮ್ಮ ಕಾರಣ ಏನು? ಎಂದು ಸಹ ನ್ಯಾಯಾಧೀಶರು ಈ ವೇಳೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರ ಪರ ವಾದ ಮಂಡಿಸಿದ್ದ ಪ್ರಾಸಿಕ್ಯೂಟರ್, ಸಾಮಾಜಿಕ ಜಾಲತಾಣಗಳಲ್ಲಿ ಸಿಎಎ ಹಾಗೂ ಎನ್ಆರ್​ಸಿ ವಿರುದ್ಧ ಜನರನ್ನು ಹೋರಾಟಕ್ಕೆ ಆಗಮಿಸಿ ಎಂದು ಆಜಾದ್ ಆಹ್ವಾನಿಸಿರುವ ಕೆಲವು ಸಂದೇಶಗಳನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಿದರು.

ಇದಕ್ಕೂ ಉತ್ತರ ನೀಡಿರುವ ನ್ಯಾಯಾಧೀಶರು, “ಸಂಸತ್​ ಹೊರಗೆ ದೊಡ್ಡ ಮಟ್ಟದ ಹೋರಾಟ ನಡೆಸಿದವರು ನಂತರ ಮಂತ್ರಿಗಳಾಗಿರುವುದನ್ನು ನಾನು ನೋಡಿದ್ದೇನೆ. ಚಂದ್ರಶೇಖರ್ ಆಜಾದ್ ಸಹ ಉದಯೋನ್ಮುಖ ರಾಜಕಾರಣಿ ಹಾಗೂ ಅವರಿಗೆ ಪ್ರತಿಭಟಿಸುವ ಹಕ್ಕಿದೆ. ಅಲ್ಲದೆ, ಜಾಮಾ ಮಸೀದಿಯ ಬಳಿ ಪ್ರತಿಭಟನೆ ನಡೆಸುವುದು ಕಾನೂನು ಉಲ್ಲಂಘಟನೆ ಎಂದು ಹೇಳಿದವರು ಯಾರು? ಜಮಾ ಮಸೀದಿ ಪಾಕಿಸ್ತಾನದಲ್ಲಿದೆಯೇ? ಅಥವಾ ಪೊಲೀಸರು ಪಾಕಿಸ್ತಾನದಲ್ಲಿದ್ದೀರಾ? ಭಾರತದಲ್ಲೇ ಇರುವ ಯಾವುದೇ ಸ್ಥಳದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂಇದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಪ್ರತಿಭಟನಾ ಸ್ಥಳದಲ್ಲಿ ಆಜಾದ್ ಹಿಂಸಾಚಾರವನ್ನು ಪ್ರಚೋದಿಸುತ್ತಿರುವಂತೆ ಕಾಣುವ ಕೆಲವು ಡ್ರೋನ್ ತುಣುಕುಗಳನ್ನು ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ಪ್ರದರ್ಶಿಸಿದರು. ಅಲ್ಲದೆ, ಈ ಕುರಿತು ಸಾಕ್ಷ್ಯ ಸಂಗ್ರಹಿಸಲು ಸ್ವಲ್ಪ ಸಮಯಾವಕಾಶವನ್ನೂ ಕೇಳಿಕೊಂಡರು. ಹೀಗಾಗಿ ಪ್ರಕರಣದ ಮುಂದಿನ ವಿಚಾರಣೆಯನ್ನು ನಾಳೆ (ಬುಧವಾರ) ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಎನ್​ಆರ್​ಸಿ, ಸಿಎಎ ವಿರುದ್ಧ ತಣ್ಣಗಾಗದ ಆಕ್ರೋಶ; ರಾತ್ರೋರಾತ್ರಿ ಅಂಗಡಿ ಮುಂಗಟ್ಟುಗಳಲ್ಲಿ ಆಕ್ಷೇಪಾರ್ಹ ಬರಹ
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading