Yoshihide Suga: ಜಪಾನ್​​ ದೇಶದ ನೂತನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆ

Japan New Prime Minister : ಯೋಶಿಹಿದೆ ಸುಗಾ ಅವರು ಜಪಾನ್‌ ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ದೀರ್ಘಕಾಲದ ಒಡನಾಡಿಯಾಗಿದ್ದವರು. ಯೋಶಿಹಿದೆ ಸುಗಾ ಗ್ರಾಮೀಣ ಜಪಾನ್‌ನ ಉತ್ತರ ಪ್ರಾಂತ್ಯ ಒಗಾಚಿಯ ರೈತ ಕುಟುಂಬದ ಕುಡಿ. ಇವರ ತಂದೆ ಸ್ಟ್ರಾಬೆರಿ ಬೆಳೆಗಾರರಾಗಿದ್ದು, ತಾಯಿ ಶಾಲಾ ಶಿಕ್ಷಕಿಯಾಗಿದ್ದರು

news18-kannada
Updated:September 16, 2020, 5:07 PM IST
Yoshihide Suga: ಜಪಾನ್​​ ದೇಶದ ನೂತನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆ
ನೂತನ ಪ್ರಧಾನಿ ಯೋಶಿಹಿದೆ ಸುಗಾ
  • Share this:
ಜಪಾನ್‌ನ ನೂತನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಅಧಿಕೃತವಾಗಿ ಆಯ್ಕೆಯಾಗಿಯಾಗಿದ್ದಾರೆ. ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ಸಂಪುಟದ ಮುಖ್ಯ ಕಾರ್ಯದರ್ಶಿಯಾಗಿದ್ದ ಸುಗಾ ಅವರನ್ನು ಸಂಸತ್ತಿನ ಕೆಳಮನೆ ಚುನಾಯಿಸಿದೆ. 71 ವರ್ಷದ ಸುಗಾ ಸಂಸತ್ತಿನ ಕೆಳಮನೆಯಲ್ಲಿ 314 ಮತಗಳನ್ನು ಪಡೆದು ಸುಲಭವಾಗಿ ಗೆಲುವು ಸಾಧಿಸಿದರು. ಕೆಳಮನೆಯಲ್ಲಿ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಬಹುಮತ ಹೊಂದಿದೆ. ತಮ್ಮನ್ನು ಆಯ್ಕೆ ಮಾಡಿದ ಶಾಸಕ ಸದಸ್ಯರಿಗೆ ಸುಗಾ ಧನ್ಯವಾದಗಳನ್ನು ಅರ್ಪಿಸಿದರು. ಸುಗಾ ಅವರು ಬುಧವಾರ ತಮ್ಮ ಸಂಪುಟವನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಬೆ ಅವರ ಸರ್ಕಾರದ ಕೆಲ ಮಂತ್ರಿಗಳನ್ನು ತಮ್ಮ ಸಂಪುಟದಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್‌-19 ಸಂಕಷ್ಟದಿಂದಾಗಿ ಹದಗೆಟ್ಟಿರುವ ಜಪಾನ್‌ನ ಆರ್ಥಿಕ ಸ್ಥಿತಿಯನ್ನು ಮತ್ತೆ ಸರಿದಾರಿಗೆ ತರುವುದಾಗಿ ಸುಗಾ ಹೇಳಿದ್ದಾರೆ. ಅಬೆ ಅವರು ಜಾರಿಗೆ ತಂದ ಅನೇಕ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ (ಸೆ.14) ನಡೆದ ಚುನಾವಣೆಯಲ್ಲಿ ಒಟ್ಟು 534 ಮತಗಳ ಪೈಕಿ ಬರೋಬ್ಬರಿ 377 ಮತಗಳನ್ನು ಪಡೆಯುವ ಮೂಲಕ ಭಾರೀ ಅಂತರದ ಗೆಲುವು ಪಡೆದ್ದರು.

ಸುಗಾ ಅವರೊಂದಿಗೆ ಇನ್ನೂ ಇಬ್ಬರು ಆಕಾಂಕ್ಷಿಗಳು ಪ್ರತಿಸ್ಪರ್ಧಿಸಿದ್ದರು. ಮಾಜಿ ವಿದೇಶಾಂಗ ಸಚಿವ ಫುಮಿಯೋ ಕಿಶಿಡ ಹಾಗೂ ಎಲ್‌ಡಿಪಿ ಪಕ್ಷದ ಜನರಲ್‌ ಸೆಕ್ರೆಟರಿಯಾಗಿದ್ದ ಶಿಗೆರು ಇಶಿಬ ಅವರು ಸ್ಪರ್ಧಿಸಿದ್ದರು.

ಸುಗಾ ಅವರು ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಅವರಿಗೆ ಶುಭಾಶಯ ತಿಳಿಸಿದ್ದಾರೆ. ‘ಜಪಾನ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ಯೋಶಿಹಿದೆ ಸುಗಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಶೇಷವಾದ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಜಂಟಿಯಾಗಿ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


ಯೋಶಿಹಿದೆ ಸುಗಾ ಅವರು ಜಪಾನ್‌ ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ದೀರ್ಘಕಾಲದ ಒಡನಾಡಿಯಾಗಿದ್ದವರು. ಯೋಶಿಹಿದೆ ಸುಗಾ ಗ್ರಾಮೀಣ ಜಪಾನ್‌ನ ಉತ್ತರ ಪ್ರಾಂತ್ಯ ಒಗಾಚಿಯ ರೈತ ಕುಟುಂಬದ ಕುಡಿ. ಇವರ ತಂದೆ ಸ್ಟ್ರಾಬೆರಿ ಬೆಳೆಗಾರರಾಗಿದ್ದು, ತಾಯಿ ಶಾಲಾ ಶಿಕ್ಷಕಿಯಾಗಿದ್ದರು.

ಟೋಕಿಯೊ ಜುಲೈ 2021 ರಲ್ಲಿ ನಡೆಸಲು ಉದ್ದೇಶಿಸಿರುವ 2020 ಒಲಿಂಪಿಕ್ಸ್ ಗೆ ಕೊರೋನಾ ವೈರಸ್​​ ತಡೆಗಟ್ಟಬೇಕಾಗಿರುವುದು ಜೊತೆಗೆ ದೇಶದ ಆರ್ಥಿಕತೆಯನ್ನು ಹೆಚ್ಚಿಸುವುದು ಮೊದಲ ಆದ್ಯತೆಯಾಗಿದೆ ಎಂದು ಸುಗಾ ಹೇಳಿದ್ದಾರೆ.

ಇದನ್ನೂ ಓದಿ : Hema Malini: ಬಾಲಿವುಡ್​ ಬಗ್ಗೆ ಟೀಕಿಸಿದರೆ ಸಹಿಸಲು ಅಸಾಧ್ಯ; ಪರೋಕ್ಷವಾಗಿ ಕಂಗನಾ ನಡೆ ಖಂಡಿಸಿದ ಹೇಮಾ ಮಾಲಿನಿ

ಕರುಳಿನ ಕ್ಯಾನ್ಸರ್ ಹಿನ್ನೆಲೆ ಆಗಸ್ಟ್‌ನಲ್ಲಿ ಶಿಂಜೋ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತನ್ನ ಆರೋಗ್ಯ ಸ್ಥಿತಿ ಕೈಕೊಡುತ್ತಿರುವ ಕಾರಣದಿಂದ ತಾನು ಈ ಜವಾಬ್ದಾರಿಯುತ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅಬೆ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು.

ನನ್ನ ಜನರಿಗೆ ಉತ್ತಮವಾದ ನಿರ್ಧಾರಗಳನ್ನು ನಾನು ತೆಗೆದುಕೊಳ್ಳಲಾಗದಿದ್ದರೆ ನಾನು ಪ್ರಧಾನ ಮಂತ್ರಿಯಾಗಿ ಈ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು 65 ವರ್ಷದ ಶಿಂಜೋ ಅಬೆ ಅವರು ತಿಳಿಸಿದ್ದರು
Published by: G Hareeshkumar
First published: September 16, 2020, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading