ಬಿಜೆಪಿ ಶಾಸಕನ ವಿರುದ್ಧದ 7 ಪ್ರಕರಣಗಳನ್ನ ಹಿಂಪಡೆಯಲು ಯೋಗಿ ಸರ್ಕಾರ ಸಜ್ಜು?

2013ರಿಂದ 2017ರ ಅವಧಿಯಲ್ಲಿ ನಾಲ್ಕು ಕಡೆ ಸಂಗೀತ್ ಸೋಮ್ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ. ಅವೆಲ್ಲವೂ ಗಲಭೆ ಘಟನೆಗೆ ಸಂಬಂಧಿಸಿದ್ದಾಗಿವೆ.

news18
Updated:August 13, 2019, 8:40 PM IST
ಬಿಜೆಪಿ ಶಾಸಕನ ವಿರುದ್ಧದ 7 ಪ್ರಕರಣಗಳನ್ನ ಹಿಂಪಡೆಯಲು ಯೋಗಿ ಸರ್ಕಾರ ಸಜ್ಜು?
ಸಂಗೀತ್ ಸೋಮ್
  • News18
  • Last Updated: August 13, 2019, 8:40 PM IST
  • Share this:
ಮೀರತ್(ಆ. 13): ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧ ದಾಖಲಾಗಿದ್ದ 7 ಪ್ರಕರಣಗಳನ್ನ ಯೋಗಿ ಆದಿತ್ಯನಾಥ್ ಸರ್ಕಾರ ವಾಪಸ್ ಪಡೆಯುವ ಸಾಧ್ಯತೆ ಇದೆ ಎಂದು ಐಎಎನ್​ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರಲ್ಲಿ 2013ರ ಮುಜಾಫರ್​ನಗರ ಕೋಮುಗಲಭೆ ಘಟನೆಗೆ ಸಂಬಂಧಿಸಿದ ಪ್ರಕರಣವೂ ಸೇರಿದೆ. 2013ರಿಂದ 2017ರವರೆಗೆ ಮುಜಾಫರನಗರ್, ಸಹರಾನ್​ಪುರ್, ಮೀರತ್ ಮತ್ತು ಗೌತಮ ಬುದ್ಧ ನಗರ್​ಗಳಲ್ಲಿ ಸಂಗೀತ್ ಸೋಮ್ ವಿರುದ್ಧ ಈ ಏಳು ಪ್ರಕರಣಗಳು ದಾಖಲಾಗಿವೆ.

ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧ ದಾಖಲಾಗಿರುವ ಈ ಏಳು ಪ್ರಕರಣಗಳ ಕುರಿತು ಉತ್ತರ ಪ್ರದೇಶ ಸರ್ಕಾರವು ಮಾಹಿತಿ ಕೇಳಿ ಪಡೆದುಕೊಂಡಿದೆ. ಈ ಪ್ರಕರಣಗಳನ್ನು ಹಿಂಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಕಾನೂನು ಇಲಾಖೆಯ ಮೂಲಗಳು ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಬರೆದಿದೆ.

ಇದನ್ನೂ ಓದಿ: ಬಿಜೆಪಿ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ; ಸಂಸದ ಶಶಿ ತರೂರ್ ಹೇಳಿಕೆ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಕೋರ್ಟ್!

ಸಂಗೀತ್ ಸೋಮ್ ಅವರದಷ್ಟೇ ಅಲ್ಲ ವಿವಿಧ ಗಲಭೆ ಘಟನೆಗಳಿಗೆ ಸಂಬಂಧಿಸಿ 74 ಪ್ರಕರಣಗಳನ್ನೂ ಯೋಗಿ ಸರ್ಕಾರ ವಾಪಸ್ ಪಡೆಯುವ ಪ್ರಕ್ರಿಯೆ ಶುರು ಮಾಡಿದೆ. ಆದರೆ, ನ್ಯಾಯಾಲಯದಿಂದ ಇದಕ್ಕೆ ಅನುಮತಿ ಸಿಗಬೇಕಷ್ಟೇ.

ಇನ್ನು, 2013ರಲ್ಲಿ ಮುಜಾಫರ್​ನಗರದಲ್ಲಿ ಉದ್ರಿಕ್ತ ಭಾಷಣ ಮಾಡಿ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಸಂಗೀತ್ ಸೋಮ್ ಮೇಲಿದೆ. ಗೌತಮ ಬುದ್ಧ ನಗರ್ ಮತ್ತು ಸಹರಾನ್​ಪುರದಲ್ಲಿ ಕರ್ಫ್ಯೂ ಉಲ್ಲಂಘನೆ ಮಾಡಿದ ಪ್ರಕರಣಗಳು ದಾಖಲಾಇಗವೆ. ಸಂಗೀತ್ ಸೋಮ್ ಅವರ ತವರು ಲೋಕಸಭಾ ಕ್ಷೇತ್ರವಾದ ಸಾರ್ಧನಾದಲ್ಲಿ ಮೆರವಣಿಗೆ ಮಾಡಿದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೈಗೆ ಜಾತಿ ಸೂಚಕ ಬ್ಯಾಂಡ್​ಗಳು ಕಡ್ಡಾಯವಂತೆ; ಮಕ್ಕಳ ಎದೆಗೆ ವಿಷಬೀಜ ಬಿತ್ತುತ್ತಿರುವ ಶಿಕ್ಷಣ ಸಂಸ್ಥೆಗಳು!

ಇವೆಲ್ಲವೂ ಅಂದಿನ ಸಮಾಜವಾದಿ ಪಕ್ಷವು ರಾಜಕೀಯ ಕಾರಣಗಳಿಗೆ ದಾಖಲು ಮಾಡಿದ ಪ್ರಕರಣಗಳಾಗಿವೆ. ಕೆಲ ಪ್ರಕರಣಗಳಲ್ಲಿ ಪೊಲೀಸರು ಚಾರ್ಜ್​ಶೀಟ್ ಕೂಡ ಹಾಕಿಲ್ಲ. ಈ ಸುಳ್ಳು ಪ್ರಕರಣಗಳನ್ನು ಹಿಂಪಡೆದುಕೊಳ್ಳುವ ಸರ್ಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಬಿಜೆಪಿ ಶಾಸಕ ಹೇಳಿದ್ದಾರೆ.ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ