Yogi Govt Hikes Sugarcane Purchase Price: ಸಿಎಂ ಯೋಗಿ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಬಂಪರ್ ಗಿಫ್ಟ್

ಯುಪಿ ಸಿಎಂ ಯೋಗಿ.

ಯುಪಿ ಸಿಎಂ ಯೋಗಿ.

Price By Rs 25 Per Quintal: ಇಷ್ಟು ದಿನ ಪ್ರತಿ ಕ್ವಿಂಟಲ್ 325 ರೂ. ನೀಡಲಾಗುತ್ತಿತ್ತು. ಈಗ ಸರ್ಕಾರ ರೈತರ ಹಿತದೃಷ್ಟಿಯಿಂದ ಪ್ರತಿ ಕ್ವಿಂಟಲ್ ಬೆಲೆಯನ್ನು 350 ರೂ.ಗೆ ಏರಿಕೆ ಮಾಡಿದೆ. ಇದರ ಜೊತೆಗೆ ಸಾಮಾನ್ಯ ಕಬ್ಬಿಗೂ 25 ರೂ. ನೀಡಲಾಗುವುದು.

  • Share this:

ಲಕ್ನೋ: ಸಂಪುಟ ವಿಸ್ತರಣೆಗೂ ಮೊದಲು ಇವತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief Minister Yogi Adityanath) ಕಬ್ಬು ಬೆಳೆಗಾರರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಇನ್ಮುಂದೆ ಪ್ರತಿ ಕ್ವಿಂಟಲ್ ಕಬ್ಬಿನ ಬೆಲೆ ಮೇಲೆ 25 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಈಗ ಪ್ರತಿ ಕ್ವಿಂಟಲ್ ಕಬ್ಬು ಬೆಲೆ 325 ರಿಂದ 350 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರದ ನಿರ್ಧಾರದಿಂದ ಕಬ್ಬು ಬೆಳೆಗಾರರ ಆದಾಯ ಶೇ.8ರಷ್ಟು ಏರಿಕೆಯಾಗಲಿದೆ. 45 ಲಕ್ಷಕ್ಕೂ ಅಧಿಕ ರೈತರು ಇದರ ಲಾಭ ಪಡೆಯಲಿದ್ದಾರೆ. ರೈತ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ರೆ, ರಾಜಕೀಯ ಪಕ್ಷಗಳು ಚುನಾವಣೆ (Uttar Pradesh Assembly elections) ಗಿಮಿಕ್ ಎಂದು ವಾಗ್ದಾಳಿ ನಡೆಸಿವೆ.


ಎಲ್ಲ ಮಾದರಿಯ ಕಬ್ಬು ಬೆಲೆ ಏರಿಕೆ


ಲಕ್ನೋನಲ್ಲಿ ಆಯೋಜಿಸಲಾಗಿದ್ದ 'ಕಿಸಾನ್ ಸಮ್ಮೇಳನ'ದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಇಷ್ಟು ದಿನ ಪ್ರತಿ ಕ್ವಿಂಟಲ್ 325 ರೂ. ನೀಡಲಾಗುತ್ತಿತ್ತು. ಈಗ ಸರ್ಕಾರ ರೈತರ ಹಿತದೃಷ್ಟಿಯಿಂದ ಪ್ರತಿ ಕ್ವಿಂಟಲ್ ಬೆಲೆಯನ್ನು 350 ರೂ.ಗೆ ಏರಿಕೆ ಮಾಡಿದೆ. ಇದರ ಜೊತೆಗೆ ಸಾಮಾನ್ಯ ಕಬ್ಬಿಗೂ 25 ರೂ. ನೀಡಲಾಗುವುದು. ಮೊದಲಿಗೆ ಸಾಮಾನ್ಯ ತಳಿಯ ಕಬ್ಬು ಪ್ರತಿ ಕ್ವಿಂಟಲ್ 315 ರೂ,ಗೆ ಖರೀದಿಸಲಾಗುತ್ತಿತ್ತು. ರೈತರ ಬಳಿಯಲ್ಲಿ ಉಳಿಯುವ ಅನುಪಯುಕ್ತ ಕಬ್ಬನ್ನು ಸಹ 25 ರೂ. ಏರಿಕೆಯ ಹೊಸ ಬೆಲೆಯಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಘೋಷಣೆ ಮಾಡಿದ್ದಾರೆ.


ದಾಖಲೆ ಬೆಲೆಯಲ್ಲಿ ಕಬ್ಬು ಖರೀದಿ ಅಂದ್ರು ಸಿಎಂ ಯೋಗಿ


ಬಿಎಸ್‍ಪಿ ಸರ್ಕಾರದಲ್ಲಿ 21 ಸಕ್ಕರೆ ಕಾರ್ಖಾನೆಗಳು ಮುಚ್ಚಿದ್ದವು. ಸದ್ಯ ರಾಜ್ಯದಲ್ಲಿ 119 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ನಾಲ್ಕೂವರೆ ವರ್ಷದಲ್ಲಿ ನಮ್ಮ ಬಿಜೆಪಿ ಸರ್ಕಾರ ದಾಖಲೆ ಬೆಲೆಯಲ್ಲಿ ಕಬ್ಬನ್ನು ಖರೀದಿಸುತ್ತಿದೆ. ಬಿಜೆಪಿ ಸರ್ಕಾರದಲ್ಲಾದ ಅಭಿವೃದ್ಧಿ ಕಾರ್ಯಗಳು ಬೇರೆ ಯಾರ ಆಡಳಿತದಲ್ಲಿ ನಡೆದಿಲ್ಲ. 2004 ರಿಂದ 2014ರವರೆಗೆ ದೇಶ ಮತ್ತು ಉತ್ತರ ಪ್ರದೇಶ ಅಂಧಕಾರ ಯುಗದಲ್ಲಿತ್ತು. ಅರಜಾಕತೆ, ಗೂಂಡಾಗಿರಿ, ದೌರ್ಜನ್ಯಗಳು ಕಣ್ಮುಂದೆಯೇ ನಡೆಯುತ್ತಿದ್ದವು. ರೈತರು ಆತ್ಮಹತ್ಯೆ ಮಾಡಿಕೊಂಡ್ರೆ, ಸಾಮಾನ್ಯ ಜನ ಹಸಿವು ಎಂದು ಸಾವನ್ನಪ್ಪುತ್ತಿದ್ದರು. ಈಗ ರೈತ ಪರವಾದ ಸರ್ಕಾರ ರಾಜ್ಯದಲ್ಲಿನ ಆಡಳಿತ ನಡೆಸುತ್ತಿದೆ. ಇಂದು ಮಾತನಾಡುತ್ತಿರುವ ಈ ನಾಯಕರು ಅಂದು ಎಲ್ಲಿ ಹೋಗಿದ್ದರು ಎಂದು ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದಾರೆ.ಇದೇ ವೇಳೆ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ. ಅತ್ಯಧಿಕ ಕ್ಷೇತ್ರಗಳಲ್ಲಿ ಕಮಲ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.


ಇದನ್ನೂ ಓದಿ: Yogi Cabinet Expansion: ಚುನಾವಣೆ ಹೊಸ್ತಿಲಲ್ಲಿ ಯೋಗಿ ಸಂಪುಟ ವಿಸ್ತರಣೆ; ಹಿಂದುಳಿದ-ದಲಿತರಿಗೆ ಮಂತ್ರಿಗಿರಿ


ಯೋಗಿ ಸಂಪುಟಕ್ಕೆ ಸರ್ಜರಿ 


ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡ ಬಿಜೆಪಿ ಹೈಕಮಾಂಡ್ ಸಿಎಂ ಯೋಗಿ ಸಂಪುಟವನ್ನು ವಿಸ್ತರಣೆ ಮಾಡಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಕಮಲ ಬಾವುಟ ಹಿಡಿದಿದ್ದ ಜಿತಿನ್ ಪ್ರಸಾದ್ ಅವರಿಗೆ ಮಂತ್ರಿ ಭಾಗ್ಯ ದೊರಕಿದೆ. ಇಂದು ಒಟ್ಟು ಏಳು ಜನ ಪ್ರಮಾಣ ವಚನ ಸ್ವೀಕರಿಸಿದ್ದು, ಜಿತಿನ್ ಪ್ರಸಾದ್ ಅವರಿಗೆ ಕ್ಯಾಬಿನೆಟ್ ಮಂತ್ರಿಯ ಸ್ಥಾನಮಾನ ಲಭ್ಯವಾಗಿದೆ. ಜಾತಿ ಸಮೀಕರಣದದಲ್ಲಿಯೇ ಬಿಜೆಪಿ ಸಂಪುಟ ವಿಸ್ತರಣೆ ಮಾಡಿದೆ.


ಸಂಪುಟ ಸೇರಿದ ಏಳು ಜನರು 


ಜಿತಿನ್ ಪ್ರಸಾದ್ (ಬ್ರಾಹ್ಮಣ), ಛತ್ರಪಾಲ್ ಗಂಗಾವಾರ್ (ಕುರ್ಮಿ), ಪಲಟೂ ರಾಮ್ (ದಲಿತ), ಸಂಗೀತಾ ಬಿಂದ್ (ಓಬಿಸಿ), ಸಂಜೀವ್ ಕುಮಾರ್ (ಅನುಸೂಚಿತ ಜಾತಿ), ದಿನೇಶ್ ಖಟಿಕ್ (ಎಸ್‍ಸಿ) ಮತ್ತು ಧರ್ಮವೀರ್ ಪ್ರಜಾಪತಿ (ಓಬಿಸಿ)


ವರದಿ: ಮಹ್ಮದ್​ ರಫೀಕ್​ ಕೆ 

top videos
    First published: