News18 India World Cup 2019

4 ಸಾವಿರ ಉರ್ದು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಬಿಟ್ಟ ಯೋಗಿ ಸರಕಾರ

ಹಿಂದಿನ ಎಸ್​ಪಿ ಸರಕಾರ 16,460 ಸಹಾಯಕ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿತ್ತು. ಅವರಲ್ಲಿ 4 ಸಾವಿರ ಉರ್ದು ಶಿಕ್ಷಕರ ನೇಮಕಾತಿಯೂ ಒಳಗೊಂಡಿತ್ತು. ಈಗ ಬಿಜೆಪಿ ಸರಕಾರವು ಉರ್ದು ಶಿಕ್ಷಕರ ನೇಮಕಾತಿಯನ್ನು ಮಾತ್ರ ಕೈಬಿಟ್ಟಿದೆ.

Vijayasarthy SN
Updated:October 11, 2018, 3:42 PM IST
4 ಸಾವಿರ ಉರ್ದು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಬಿಟ್ಟ ಯೋಗಿ ಸರಕಾರ
ಮದರಸಾ
Vijayasarthy SN
Updated: October 11, 2018, 3:42 PM IST
- ಖಾಜಿ ಫರಾಜ್ ಅಹ್ಮದ್, ನ್ಯೂಸ್18

ಲಕ್ನೋ(ಅ. 11): ಮುಸ್ಲಿಮ್ ವಿರೋಧಿ ಹಣೆಪಟ್ಟಿ ಹೊತ್ತುಕೊಂಡಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರಕಾರ ಈಗ ಅದಕ್ಕೆ ಪೂರಕವಾದ ನಿರ್ಧಾರ ಕೈಗೊಂಡಿದೆ. ಹಿಂದಿನ ಸರಕಾರ ಚಾಲನೆಗೊಳಿಸಿದ್ದ ಉರ್ದು ಶಿಕ್ಷಕರ ನೇಮಕಾತಿಗೆ ಯೋಗಿ ಸರಕಾರ ಕೊಕ್ಕೆ ಹಾಕಿದೆ. 4 ಸಾವಿರ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಉರ್ದು ಶಿಕ್ಷಕರ ಕೊರತೆ ಇಲ್ಲ. ಬೇಕಷ್ಟು ಸಂಖ್ಯೆಯಲ್ಲಿ ಉರ್ದು ಶಿಕ್ಷಕರಿದ್ದಾರೆ ಎಂದು ಹೇಳಿ ಬಿಜೆಪಿ ಸರಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಅತ್ತ, ಮುಸ್ಲಿಮ್ ವಿದ್ವಾಂಸರು ಯೋಗಿ ಸರಕಾರದ ನಿರ್ಧಾರವನ್ನು ಉರ್ದು ವಿರೋಧಿ ಎಂದು ಬಣ್ಣಿಸಿದ್ದಾರೆ.

ಅಖಿಲೇಶ್ ಯಾದವ್ ನೇತೃತ್ವದ ಹಿಂದಿನ ಎಸ್​ಪಿ ಸರಕಾರ 2016 ಡಿಸೆಂಬರ್ 15ರಂದು 16,460 ಸಹಾಯಕ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿತ್ತು. ಅವರಲ್ಲಿ 4 ಸಾವಿರ ಉರ್ದು ಶಿಕ್ಷಕರ ನೇಮಕಾತಿಯೂ ಒಳಗೊಂಡಿತ್ತು. ಈಗ ಬಿಜೆಪಿ ಸರಕಾರವು ಉರ್ದು ಶಿಕ್ಷಕರ ನೇಮಕಾತಿಗೆ ಮಾತ್ರ ತಡೆ ಕೊಟ್ಟಿದೆ.

“ರಾಜ್ಯ ಸರಕಾರದ ಈ ನಿರ್ಧಾರವು ಉರ್ದು ಭಾಷೆ ಮತ್ತು ಉರ್ದು ಶಿಕ್ಷಕರಿಗೆ ಹೊಡೆತಕೊಟ್ಟಿದೆ. ಸರಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು. ಉರ್ದುವನ್ನು ಮುಸ್ಲಿಮರ ಭಾಷೆ ಎಂದು ನೋಡದೆ ಇತರೆ ಭಾರತೀಯ ಭಾಷೆಯಂತೆಯೇ ಕಾಣಬೇಕು,” ಎಂದು ಮೌಲಾನ ಖಾಲಿದ್ ರಷೀದ್ ಫರಂಗಿ ಮಹಲಿ ಅವರು ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್ ಸರಕಾರದ ಈ ಹಿಂದಿನ ಕೆಲ ಕ್ರಮಗಳಿಂದಾಗಿ ಅದಕ್ಕೆ ಮುಸ್ಲಿಮ್ ವಿರೋಧಿ ಎಂಬ ಹಣೆಪಟ್ಟಿ ಬಂದಿದೆ. ಉತ್ತರ ಪ್ರದೇಶದಲ್ಲಿರುವ ಎಲ್ಲಾ ಮದರಸಾಗಳ ಮೇಲೆ ನಿಗಾ ಇಡಲು ನೊಂದಣಿ ಹಾಗೂ ಜಿಯೋ ಟ್ಯಾಗ್ ಕಾರ್ಯವನ್ನು ಪ್ರಾರಂಭಿಸಿದ್ದು; ಸ್ವಾತಂತ್ರ್ಯೋತ್ಸವದ ವೇಳೆ ಮದರಸಾಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಪ್ರಕ್ರಿಯೆ ನಡೆಸಿದ ಕ್ರಮಗಳು ಮುಸ್ಲಿಮರ ಮೇಲೆ ಬಲವಂತವಾಗಿ ಹೇರಿದಂತಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದದ್ದೂ ಮುಸ್ಲಿಮರನ್ನ ಗುರಿಯಾಗಿಸಿಕೊಂಡೆಯೇ ಎಂಬ ಆರೋಪವೂ ಇದೆ.
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...