ಮುಂದಿನ ವಾರ ಯೋಗಿ ಆದಿತ್ಯನಾಥ್​ ಸಂಪುಟ ವಿಸ್ತರಣೆ ಸಾಧ್ಯತೆ? 2022ರ ಚುನಾವಣೆಗೆ ಗುರಿ ಇಟ್ಟ ಬಿಜೆಪಿ

ಮಾರ್ಚ್ 19, 2017 ರಂದು ರಾಜ್ಯ ಸರ್ಕಾರ ರಚನೆಯಾದ ನಂತರ, ಯೋಗಿ ಸರ್ಕಾರವು ಕ್ಯಾಬಿನೆಟ್ ಅನ್ನು ಆಗಸ್ಟ್ 22, 2019 ರಂದು ವಿಸ್ತರಿಸಿತು. ಆ ಸಮಯದಲ್ಲಿ ಅವರ ಸಂಪುಟದಲ್ಲಿ 56 ಸದಸ್ಯರು ಇದ್ದರು. ಕರೋನಾದಿಂದ ಮೂವರು ಸಚಿವರು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ, ರಾಜ್ಯ ಸಚಿವ ವಿಜಯ್ ಕುಮಾರ್ ಕಶ್ಯಪ್ ನಿಧನರಾದರೆ, ಸಚಿವ ಚೇತನ್ ಚೌಹಾಣ್ ಮತ್ತು ಮಂತ್ರಿ ಕಮಲ್ ರಾಣಿ ವರುಣ್ ಮೊದಲ ಕೊರೊನಾದ ಅಲೆಯ ವೇಳೆ ನಿಧನರಾದರು.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

 • Share this:
  ಯೋಗಿ ಆದಿತ್ಯನಾಥ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮುಂದಿನ ವಾರ ನಡೆಯಬಹುದು ಎಂದು ಹೇಳಲಾಗಿದೆ. ಉತ್ತರ ಪ್ರದೇಶದಲ್ಲಿ 2022 ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಈ ಸಂಪುಟ ವಿಸ್ತರಣೆಯು ಸಾಕಷ್ಟು ನಿರ್ಣಾಯಕವಾಗಿರುತ್ತದೆ ಎಂದು ಹೇಳಲಾಗಿದೆ.

  ಮೂಲಗಳ ಪ್ರಕಾರ, ಜಿತಿನ್​ ಪ್ರಸಾದ್​ ಅವರು ಜಾತಿ ಸಮೀಕರಣಗಳನ್ನು ಹೊಂದಿಸಲು ಮಂತ್ರಿ ಸ್ಥಾನವನ್ನು ಪಡೆಯಬಹುದು. ಪ್ರಸಾದ ಹೊರತುಪಡಿಸಿ, ಮೀರತ್‌ನಿಂದ ಸೋಮೇಂದ್ರ ತೋಮರ್, ಫತೇಪುರ್‌ನಿಂದ ಕೃಷ್ಣ ಪಾಸ್ವಾನ್, ಗಾಜಿಯಾಬಾದ್‌ನ ದಾದ್ರಿಯಿಂದ ತೇಜಪಾಲ್ ಗುರ್ಜಾರ್, ನಿಷಾದ್ ಪಕ್ಷದಿಂದ ಸಂಜಯ್ ನಿಶಾದ್, ರಾಮಚಂದ್ರ ವಿಶ್ವಕರ್ಮ, ಮೋದಿನಗರದಿಂದ ಮಂಜು ಸಿವಾಚ್ ಮತ್ತು ಅಪ್ನಾ ದಳದಿಂದ ಆಶೀಶ್ ಪಟೇಲ್ ಯೋಗಿ ಸಂಪುಟದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಬಹುದು.

  ಇತ್ತೀಚೆಗೆ, ಯುಪಿ ಬಿಜೆಪಿ ಹೈಕಮಾಂಡ್​ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚಿಸಿ ಹೆಸರುಗಳ ಪಟ್ಟಿಯನ್ನು ಫೈನಲ್​ ಮಾಡಲಾಗಿದೆ  ಮತ್ತು ನಂತರ ಈ ಪಟ್ಟಿಯ ಅನುಮೋದನೆಗಾಗಿ ದೆಹಲಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

  ಈಗ ದೆಹಲಿಯಿಂದ ಹೆಸರುಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.  ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಅವರು ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧಿಕೃತ ನಿವಾಸದಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಿದ್ದರು.

  ಪ್ರಸ್ತುತ, 23 ಕ್ಯಾಬಿನೆಟ್ ಮಂತ್ರಿಗಳು, ಒಂಬತ್ತು ಸ್ವತಂತ್ರ ಉಸ್ತುವಾರಿ ಸಚಿವರು ಮತ್ತು 22 ರಾಜ್ಯ ಮಂತ್ರಿಗಳು ಯೋಗಿ ಕ್ಯಾಬಿನೆಟ್ ನಲ್ಲಿ, ಅಂದರೆ, ಒಟ್ಟು ಸಚಿವರ ಸಂಖ್ಯೆ 54 ಇರಲಿದೆ. ಪ್ರಸ್ತುತ, ಆರು ಸಚಿವ ಸ್ಥಾನಗಳು ಖಾಲಿ ಇವೆ. ಇಂತಹ ಪರಿಸ್ಥಿತಿಯಲ್ಲಿ, ಯೋಗಿ ಸರ್ಕಾರವು ಯಾವುದೇ ಮಂತ್ರಿಯನ್ನು ಸಂಪುಟದಿಂದ ತೆಗೆದುಹಾಕದೆ, ಆರು ಹೊಸ ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

  ಇದನ್ನೂ ಓದಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ಗೆ ಆಂಜಿಯೋಪ್ಲ್ಯಾಸ್ಟಿ: ಆರೋಗ್ಯ ಸ್ಥಿರ ಎಂದ ವೈದ್ಯರು

  ಮಾರ್ಚ್ 19, 2017 ರಂದು ರಾಜ್ಯ ಸರ್ಕಾರ ರಚನೆಯಾದ ನಂತರ, ಯೋಗಿ ಸರ್ಕಾರವು ಕ್ಯಾಬಿನೆಟ್ ಅನ್ನು ಆಗಸ್ಟ್ 22, 2019 ರಂದು ವಿಸ್ತರಿಸಿತು. ಆ ಸಮಯದಲ್ಲಿ ಅವರ ಸಂಪುಟದಲ್ಲಿ 56 ಸದಸ್ಯರು ಇದ್ದರು. ಕರೋನಾದಿಂದ ಮೂವರು ಸಚಿವರು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ, ರಾಜ್ಯ ಸಚಿವ ವಿಜಯ್ ಕುಮಾರ್ ಕಶ್ಯಪ್ ನಿಧನರಾದರೆ, ಸಚಿವ ಚೇತನ್ ಚೌಹಾಣ್ ಮತ್ತು ಮಂತ್ರಿ ಕಮಲ್ ರಾಣಿ ವರುಣ್ ಮೊದಲ ಕೊರೊನಾದ ಅಲೆಯ ವೇಳೆ ನಿಧನರಾದರು. ಮೊದಲ ಕ್ಯಾಬಿನೆಟ್ ವಿಸ್ತರಣೆಯಲ್ಲಿ, ಸ್ವತಂತ್ರ ಉಸ್ತುವಾರಿ ಹೊಂದಿರುವ ಆರು ಮಂತ್ರಿಗಳಿಗೆ ಸಂಪುಟ ದರ್ಜೆಯ ಪ್ರಮಾಣವಚನ ಬೋಧಿಸಲಾಯಿತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: