UP Result: ರಾಜ್ಯದ ಚಾಮರಾಜನಗರದಂತೆ ಯುಪಿಯ ನೋಯ್ಡಾ ಬಗ್ಗೆ ಇದೆ ಮೂಢನಂಬಿಕೆ; ಇದನ್ನು ಲೆಕ್ಕಿಸಲಿಲ್ಲ ಯೋಗಿ

ಗೋರಖ್‌ಪುರದಿಂದ ಒಂದು ಲಕ್ಷ ಮತಗಳಿಂದ ಸಿಎಂ ಯೋಗಿ ಆದಿತ್ಯನಾಥ ಜಯಗಳಿಸಿದ್ದಾರೆ. ಈ ಗೆಲುವಿನ ಮೂಲಕ ಹಲವು ಮೂಢನಂಬಿಕೆಗಳನ್ನು ಮುರಿದಿದ್ದಾರೆ.

ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ

 • Share this:
  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (UP Assembly Election 2022)ಯಲ್ಲಿ ಬಿಜೆಪಿ (BJP) ಭರ್ಜರಿ ಗೆಲುವು (Win) ಸಾಧಿಸಿದೆ. ಗೋರಖ್‌ಪುರ (ನಗರ) ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ರೋಚಕ ಜಯಭೇರಿ ಬಾರಿಸಿದ್ದಾರೆ. ಮೇ 20, 1952ರಂದು ಉತ್ತರ ಪ್ರದೇಶದ (Utter Pradesh) ಮೊದಲ ವಿಧಾನಸಭೆ ರಚನೆ ಆಯಿತು. ಈ 70 ವರ್ಷಗಳಲ್ಲಿ ರಾಜ್ಯವು 21 ಮುಖ್ಯಮಂತ್ರಿಗಳನ್ನು ಕಂಡಿದೆ. ಯೋಗಿ ಆದಿತ್ಯನಾಥ್ ಅವರು 70 ವರ್ಷಗಳ ಉತ್ತರ ಪ್ರದೇಶ ಚುನಾವಣಾ ಇತಿಹಾಸದಲ್ಲಿ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಸತತ ಎರಡನೇ ಅವಧಿಗೆ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 37 ವರ್ಷಗಳ ನಂತರ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ವಹಿಸಲಿದ್ದಾರೆ. 2017ರ ನಂತರ 2022ರ ಚುನಾವಣೆಯಲ್ಲೂ ಬಿಜೆಪಿಗೆ ಜನತೆ ಸ್ಪಷ್ಟ ಹಾಗೂ ಪ್ರಬಲ ಜನಾದೇಶ ನೀಡಿದ್ದಾರೆ.

  ಒಂದು ಲಕ್ಷ ಮತಗಳಿಂದ ಯೋಗಿ ಆದಿತ್ಯನಾಥ ಗೆಲುವು

  ಗೋರಖ್‌ಪುರದಿಂದ ಒಂದು ಲಕ್ಷ ಮತಗಳಿಂದ ಸಿಎಂ ಯೋಗಿ ಆದಿತ್ಯನಾಥ ಜಯಗಳಿಸಿದ್ದಾರೆ. ಸತತ 2ನೇ ಅವಧಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವಲ್ಲಿ ಯಾವ ಮುಖ್ಯಮಂತ್ರಿಯೂ ಯಶಸ್ವಿಯಾಗಿರಲಿಲ್ಲ. ಇದೀಗ ಇಂತಹದ್ದೊಂದು ವಿಶಿಷ್ಟ ಸಾಧನೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬಿಜೆಪಿ ಸಿಎಂ ಎಂಬ ಖ್ಯಾತಿಯೂ ಯೋಗಿ ಮುಡಿಗೇರಿದೆ.

  ಮೂಢನಂಬಿಕೆಗೆ ಸವಾಲೆಸೆದು ಜಯಭೇರಿ ಬಾರಿಸಿದ ಸನ್ಯಾಸಿ ಯೋಗಿ

  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಗೆಲುವಿನ ಮೂಲಕ ಹಲವು ಮೂಢನಂಬಿಕೆಗಳನ್ನು ಮುರಿದಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ ಸನ್ಯಾಸಿ. ಸನ್ಯಾಸಿ ಪ್ರತಿ ಸವಾಲನ್ನು ಸ್ವೀಕರಿಸಿ, ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ನೋಯ್ಡಾಗೆ ಹೋಗುವುದು, ಆಗ್ರಾದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಮಾಡುವುದು ಯಾವುದಕ್ಕೂ ಜಗ್ಗಿಲ್ಲ ಯೋಗಿ ಆದಿತ್ಯನಾಥ.

  ಇದನ್ನೂ ಓದಿ: UPಯಲ್ಲಿ ಇತಿಹಾಸ ಸೃಷ್ಟಿಸಿದ Yogi; ಆದಿತ್ಯನಾಥ್ ಗೆಲುವಿಗೆ ಮುಲಾಯಂ ಯಾದವ್​ ಸೊಸೆ ಸಂಭ್ರಮ​

  ಯೋಗಿ ಆದಿತ್ಯನಾಥ್ ಸೇರಿ ಇಲ್ಲಿಯವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಐವರು ಮುಖ್ಯಮಂತ್ರಿಗಳು ಮಾತ್ರ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದಿದ್ದಾರೆ. 1957ರಲ್ಲಿ ಸಂಪೂರ್ಣಾನಂದ, 1962ರಲ್ಲಿ ಚಂದ್ರಭಾನು ಗುಪ್ತಾ, 1974ರಲ್ಲಿ ಹೇಮಾವತಿ ನಂದನ್‌ ಬಹುಗುಣ ಮತ್ತು 1985ರಲ್ಲಿ ನಾರಾಯಣ್‌ ದತ್‌ ತಿವಾರಿ (ಎನ್‌ಡಿ ತಿವಾರಿ) ಈ ಸಾಧನೆ ಮಾಡಿದ ಉಳಿದ ಮುಖ್ಯಮಂತ್ರಿಗಳಾಗಿದ್ದಾರೆ.

  37 ವರ್ಷಗಳ ಮೂಢನಂಬಿಕೆಯನ್ನು ತೊಡೆದ ಯೋಗಿ ಆದಿತ್ಯನಾಥ

  2022ರ ಯುಪಿ ಚುನಾವಣೆಯಲ್ಲಿ ಯೋಗಿ 37 ವರ್ಷಗಳಿಂದ ನಡೆದು ಬಂದಿದ್ದ ಮೂಢನಂಬಿಕೆಯನ್ನು ತೊಡೆದಿದ್ದಾರೆ. 1985 ರಿಂದ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಯಾರೂ ಸಿಎಂ ಆಗಿಲ್ಲ. ಆದರೆ ಇದೀಗ ಸಿಎಂ ಯೋಗಿ ಸತತ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

  ಕಾಂಗ್ರೆಸ್ ಮುಖ್ಯಮಂತ್ರಿ ವೀರ ಬಹದ್ದೂರ್ ಸಿಂಗ್ 23 ಜೂನ್ 1988 ರಂದು ನೋಯ್ಡಾಗೆ ಹೋಗಿದ್ದರು. ಆಗ ಸ್ವಲ್ಪ ಸಮಯದ ನಂತರ ಅವರು ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

  ವೀರ್ ಬಹದ್ದೂರ್ ಸಿಂಗ್, ನಾರಾಯಣ್ ದತ್ ತಿವಾರಿ, ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್, ರಾಮಪ್ರಕಾಶ್ ಗುಪ್ತಾ, ರಾಜನಾಥ್ ಸಿಂಗ್ ರಿಂದ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದಾಗಲೂ ಯಾರೂ ಕೂಡ ಸಿಎಂ ಪಟ್ಟ ಕಳೆದು ಹೋದೀತು ಎಂಬ ಭಯ, ಮೂಢನಂಬಿಕೆಯಿಂದ ನೋಯ್ಡಾ ಕಾಲಿಟ್ಟಿರಲಿಲ್ಲ.

  ನೋಯ್ಡಾ ಎಲ್ಲರ ಸಿಎಂ ಕುರ್ಚಿಯನ್ನು ನಡುಗಿಸಿತ್ತು. ಎಲ್ಲರನ್ನೂ ಹೆದರಿಸುತ್ತಲೇ ಇತ್ತು. ಹೀಗಾಗಿ ಮೂಢನಂಬಿಕೆಯಿಂದ ಯಾರೂ ನೋಯ್ಡಾಗೆ ಹೋಗಿರಲಿಲ್ಲ . ಆದರೆ ಸಿಎಂ ಯೋಗಿ ಆದಿತ್ಯನಾಥ ತಮ್ಮ ಅಧಿಕಾರಾವಧಿಯಲ್ಲಿ ಹತ್ತಾರು ಬಾರಿ ನೋಯ್ಡಾಕ್ಕೆ ಹೋಗಿದ್ದಾರೆ.

  ಮಾಯಾವತಿ ಅವರು ಸಂಪೂರ್ಣ ಬಹುಮತದ ಸರ್ಕಾರದೊಂದಿಗೆ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದಾಗ, ಅವರು 14 ಆಗಸ್ಟ್ 2011 ರಂದು ಈ ಮೂಢನಂಬಿಕೆಯ ಭಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದರು. ಮುಂದಿನ ಚುನಾವಣೆ ಬಂದಾಗ ಮಾಯಾವತಿ ಸೋತಿದ್ದರು.

  ಆಗ್ರಾದ ಮೂಢನಂಬಿಕೆಯನ್ನೂ ತೊಡೆದು ಹಾಕಿದ ಯೋಗಿ

  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಾಜ್ ನಗರಿ ಆಗ್ರಾದಲ್ಲಿ ನಾಯರಲ್ಲಿ ಮೂಡಿಸಿದ್ದ ಮೂಢನಂಬಿಕೆಯನ್ನು ಮುರಿದಿದ್ದಾರೆ. ಆಗ್ರಾದ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದರೆ ಸಿಎಂ ಪಟ್ಟ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮೂಢನಂಬಿಕೆ ಬೇರೂರಿತ್ತು.

  16 ವರ್ಷಗಳ ಹಿಂದೆ ರಾಜನಾಥ್ ಸಿಂಗ್ ಮುಖ್ಯಮಂತ್ರಿಯಾಗಿ ಸರ್ಕ್ಯೂಟ್ ಹೌಸ್ ನಲ್ಲಿ ಉಳಿದುಕೊಂಡಿದ್ದರು. ಇದಾದ ನಂತರ ಮಾಯಾವತಿ, ಅಖಿಲೇಶ್ ಯಾದವ್, ಸಿಎಂ ಕುರ್ಚಿ ಹೋಗುವ ಭಯದಿಂದ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿರಲಿಲ್ಲ.

  ಆದರೆ 2018ರ ಜನವರಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆಗ್ರಾದ ಸರ್ಕ್ಯೂಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದರು. ಈ ಮೂಲಕ ಆಗ್ರಾದ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿದರೆ ಸಿಎಂ ಪಟ್ಟ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ತೊಡೆದು ಹಾಕಿದ್ದಾರೆ. ಈಗ ಎರಡನೇ ಬಾರಿಗೆ ಜಯಭೇರಿ ಬಾರಿಸಿದ್ದಾರೆ.

  ಇದನ್ನೂ ಓದಿ: ಪಂಜಾಬ್ ನೂತನ ಸಿಎಂ ಪ್ರತಿಜ್ಞಾ ವಿಧಿ ಸ್ವೀಕರಿಸುವುದು ರಾಜಭವನದಲ್ಲಿ ಅಲ್ವಂತೆ! ಮತ್ತೆಲ್ಲಿ ಅಧಿಕಾರಿ ಸ್ವೀಕರಿಸ್ತಾರೆ ಭಗವಂತ್ ಮಾನ್?

  ದಾಖಲೆ ಮಾಡುವುದು ಯೋಗಿಯ ಸ್ವಭಾವ

  ನಂಬರ್ ಒನ್ ಸ್ಥಾನದಲ್ಲಿ ಇರುವುದು, ದಾಖಲೆ ಮಾಡುವುದು ಯೋಗಿ ಸ್ವಭಾವವಾಗಿದೆ. ಸುಮಾರು ಎರಡೂವರೆ ದಶಕಗಳ ಹಿಂದೆ ಅವರು ಉತ್ತರ ಭಾರತದ ಪ್ರಮುಖ ಪೀಠಗಳಲ್ಲಿ ಒಂದಾದ ಗೋರಕ್ಷಪೀಠದ ಉತ್ತರಾಧಿಕಾರಿಯಾದಾಗ, ಅವರು ದೇಶದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅಂದಿನಿಂದ, ಅವರ ಹೆಸರಿಗೆ ದಾಖಲೆಗಳನ್ನು ಸೇರಿಸಲಾಗಿದೆ.

  ಉದಾಹರಣೆಗೆ ಅವರು 1998 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದಾಗ, ಅವರು ಅತ್ಯಂತ ಕಿರಿಯ ಸಂಸದರಾಗಿದ್ದರು. 42ನೇ ವಯಸ್ಸಿನಲ್ಲಿ ಸತತ 5 ಬಾರಿ ಗೋರಖ್ ಪುರ ಕ್ಷೇತ್ರದಿಂದ ಸಂಸದರಾಗಿ ದಾಖಲೆ ಬರೆದಿದ್ದಾರೆ. ಮುಖ್ಯಮಂತ್ರಿಯಾಗುವ ಮೊದಲು, 42 ನೇ ವಯಸ್ಸಿನಲ್ಲಿ, ಅವರು ಒಂದೇ ಸ್ಥಾನದಿಂದ ಸತತ ಐದು ಬಾರಿ ಆಯ್ಕೆಯಾದ ದೇಶದ ಏಕೈಕ ಸಂಸದರಾಗಿದ್ದರು.
  Published by:renukadariyannavar
  First published: