Uttar Pradesh Election: ಅಯೋಧ್ಯೆಯಲ್ಲ, ಗೋರಖ್​ಪುರದಿಂದ ಕಣಕ್ಕೆ ಇಳಿಯಲಿರುವ Yogi Adityanath

ಗೋರಖ್​ ಪುರದಿಂದ ಈಗಾಗಲೇ ಐದು ಬಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿ ಮೊದಲ ಬಾರಿ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಲಕ್ನೋ (ಜ. 15): ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Election) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)  ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈ ಹಿಂದೆ ಅವರು ರಾಮ ಜನ್ಮಭೂಮಿ ಅಯೋಧ್ಯೆಯಿಂದ ಅಥವಾ ಕೃಷ್ಣ ನಗರಿ ಮಥುರಾದಿಂದ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈಗ ಈ ಎಲ್ಲಾ ಊಹಾ ಪೋಹಗಳಿಗೆ ಇದೀಗ ತೆರೆ ಬಿದ್ದಿದೆ. ಸಿಎಂ ಯೋಗಿ ಆದಿತ್ಯನಾಥ್​ ಅವರು  ಗೋರಖ್‌ಪುರ (ನಗರ) (Gorakhpur) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷ ಇಂದು ತಿಳಿಸಿದೆ. ಇಂದು ಅಭ್ಯರ್ಥಿಗಳ ಚುನಾವಣಾ ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಯೋಗಿ ಆದಿತ್ಯನಾಥ ಕ್ಷೇತ್ರವನ್ನು ಸ್ಪಷ್ಟಪಡಿಸಿದೆ. 

    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಮೊದಲ ಹಂತಕ್ಕೆ ಪಕ್ಷವು 58 ರಲ್ಲಿ 57 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪಟ್ಟಿ ಮಾಡಿದೆ. ಎರಡನೇ ಹಂತಕ್ಕೆ 55 ರಲ್ಲಿ 48 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗುವುದು ಎಂದಿದ್ದಾರೆ. ಸಾಕಷ್ಟು ಚರ್ಚೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಕ್ಷದ ಉನ್ನತ ನಾಯಕರು ಚರ್ಚಿಸಿ ಈ ಬಗ್ಗೆ ತಿಳಿಸಿದ್ದಾರೆ.

    ಪ್ರಸ್ತುತ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಆದಿತ್ಯನಾಥ್ ಅವರು ಪಕ್ಷದ ನಾಯಕತ್ವ ನಿರ್ಧರಿಸುವ ಎಲ್ಲಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಇತ್ತೀಚೆಗೆ ಹೇಳಿದ್ದರು.

    ಗೋರಖ್​ ಪುರದಿಂದ ಈಗಾಗಲೇ ಐದು ಬಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿ ಮೊದಲ ಬಾರಿ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ.

    ಇದನ್ನು ಓದಿ: ಜ.31ರಿಂದ Budget Session ಆರಂಭ; ಫೆ. 1ಕ್ಕೆ ಬಜೆಟ್​ ಮಂಡನೆ

    ಯೋಗಿ ಸರ್ಕಾರಕ್ಕೆ ಮೆಚ್ಚುಗೆ
    ಇದೇ ವೇಳೆ ಯೋಗಿ ಸರ್ಕಾರವನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯವನ್ನು ಗಲಭೆ ಮುಕ್ತ ಮಾಡುವ ಭರವಸೆಯನ್ನು ಈಡೇರಿಸಿದ್ದಾರೆ ಎಂದರು.

    2017ರ ಮೊದಲು ಯುಪಿಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿತ್ತು. ನಾವು ಗೂಂಡಾರಾಜ್ ವಿರುದ್ಧ ಅಭಿವೃದ್ಧಿಗಾಗಿ ಚುನಾವಣೆ ಎದುರಿಸಿದ್ದೇವೆ. ಇಂದು ರಾಜ್ಯ ಬಡವರಿಗಾಗಿಯೇ ಹೆಚ್ಚು ಅಭಿವೃದ್ಧಿ ಕಂಡಿದೆ. ಬಡವರಿಗೆ ಆಶ್ರಯ, ವಸತಿ ಮತ್ತು ನೀರಿನ ಯೋಜನೆಗಳನ್ನು ತಲುಪಿಸುವಾಗ, ಹಣವೂ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ತಲುಪುತ್ತಿದೆ. ಅಪರಾಧ ಮತ್ತು ಭ್ರಷ್ಟಾಚಾರ ಕಡಿಮೆಯಾಗಿದೆ. ಇಂದು ಯುಪಿಯ ಬೀದಿಗಳಲ್ಲಿ ಮಹಿಳೆಯರು ಮುಕ್ತವಾಗಿ ಓಡಾಡಬಹುದಾಗಿದೆ ಎಂದರು.

    ಇದನ್ನು ಓದಿ: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​​ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಪಟ್ಟ?

    ಬಿಜೆಪಿ ನಾಯಕರಿಂದ ಪಕ್ಷಾಂತರ ಪರ್ವ
    ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ಈ ವಾರ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಮೂವರು ಸಚಿವರು ಸೇರಿದಂತೆ ಉತ್ತರ ಪ್ರದೇಶದ 10 ಶಾಸಕರು ಬಿಜೆಪಿ ತೊರೆದು, ಪಕ್ಷಾಂತರ ಪರ್ವ ಆರಂಭಿಸಿದ್ದಾರೆ.

    ಪ್ರಭಾವಿ ಒಬಿಸಿ ನಾಯಕರು ಮತ್ತು ಮಾಜಿ ಸಚಿವರಾದ ಧರಮ್ ಸಿಂಗ್ ಸೈನಿ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಅವರಲ್ಲಿ ಹಲವರು ಪ್ರತಿಸ್ಪರ್ಧಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರಿದರು.

    ಏಳು ಹಂತದಲ್ಲಿ ಉತ್ತರ ಪ್ರದೇಶ ಚುನಾವಣೆ

    ಉತ್ತರ ಪ್ರದೇಶವು 403 ವಿಧಾನಸಭಾ ಕ್ಷೇತ್ರಕಕೆ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10 ಮತ್ತು ಮಾರ್ಚ್ 7 ರವರೆ ವಿವಿಧ ಹಂತದಲಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಗೋರಖ್​ಪುರದಲ್ಲಿ ಆರನೇ ಹಂತ ಮತದಾನ ನಡೆಯಲಿದೆ. ಮಾರ್ಚ್ 3 ರಂದು ಕ್ಷೇತ್ರದಲ್ಲಿ ಮತದಾನ ಆಗಲಿದೆ.
    Published by:Seema R
    First published: