Yogi Adityanath: ಇಂದಿನಿಂದ ಉತ್ತರ ಪ್ರದೇಶದಲ್ಲಿ 'ಯೋಗಿ ಯುಗ' ಪುನಾರಂಭ! ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಬಸವರಾಜ ಬೊಮ್ಮಾಯಿ

ಇಂದು ಉತ್ತರ ಪ್ರದೇಶ ನೂತನ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಹತ್ವದ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ಗಣ್ಯರು, ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಾಮಾನ್ಯರು ಸಾಕ್ಷಿಯಾಗಲಿದ್ದಾರೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • Share this:
ಉತ್ತರ ಪ್ರದೇಶ: ಪಂಚ ರಾಜ್ಯಗಳ (5 States) ಪೈಕಿ ಇಡೀ ದೇಶದ ಗಮನ ಸೆಳೆದಿದ್ದು ಅಂದರೆ ಉತ್ತರ ಪ್ರದೇಶ (Uttara Pradesh) ಚುನಾವಣೆ (Election).  ಈ ಚುನಾವಣೆಯಲ್ಲಿ ಅಮೋಘ ಜಯ ಸಾಧಿಸಿದ ಯೋಗಿ ಆದಿತ್ಯನಾಥ್, ಮತ್ತೊಮ್ಮೆ ಸಿಎಂ (CM) ಆಗಿ ಆಡಳಿತ ನಡೆಸುತ್ತಿದ್ದಾರೆ. ಇಂದು ಉತ್ತರ ಪ್ರದೇಶ ನೂತನ ಸಿಎಂ ಆಗಿ ಯೋಗಿ ಆದಿತ್ಯನಾಥ್ (Yogi Adityanath) ಪ್ರಮಾಣ ವಚನ (Oath) ಸ್ವೀಕರಿಸಲಿದ್ದಾರೆ.  ಸಂಜೆ 4 ಗಂಟೆಗೆ ಲಕ್ನೋದ ಶಹೀದ್ ಪಥ್‌ನಲ್ಲಿರುವ ಇಕಾನಾ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಈ ಮಹತ್ವದ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಪ್ರಮುಖ ಗಣ್ಯರು, ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಾಮಾನ್ಯರು ಸಾಕ್ಷಿಯಾಗಲಿದ್ದಾರೆ.

 ಇಂದಿನಿಂದ ಮತ್ತೆ ‘ಯೋಗಿ ಯುಗಾರಂಭ’

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುತ್ತಿದ್ದಾರೆ. ಬಿಜೆಪಿ ಸತತ 2ನೇ ಬಾರಿ ಆಡಳಿತ ನಡೆಸುತ್ತಿದೆ. ಸಂಜೆ 4 ಗಂಟೆಗೆ ಲಕ್ನೋದ ಶಹೀದ್ ಪಥ್‌ನಲ್ಲಿರುವ ಇಕಾನಾ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ. ನೂತನ ಸಿಎಂಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.

ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಭಾಗಿ

ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ, ಬಿಜೆಪಿ ಆಳ್ಬಿಕೆ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಭಾಗಿಯಾಗಲಿರುವ ಬಸವರಾಜ ಬೊಮ್ಮಾಯಿ

ಇನ್ನು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಲಿದ್ದಾರೆ. ಈಗಾಗಲೇ ಬೆಂಗಳೂರಿನಿಂದ ಹೊರಟಿರುವ ಸಿಎಂ ಬಸವರಾಜ ಬೊಮ್ಮಾಯಿ, ವಿಮಾನದ ಮೂಲಕ ಲಕ್ನೋಗೆ ತೆರಳಿ, ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: "ಬೇಗ ಬಂದು ಒಮ್ಮೆ ಅಮ್ಮನ ಜೊತೆ ಮಾತನಾಡು!" ಹೀಗಂತ Yogi Adityanathಗೆ ಹೇಳಿದ್ದು ಯಾರು?

50 ಸಾವಿರ ಮಂದಿ ಉಪಸ್ಥಿತಿ

ಗಣ್ಯರ ಜೊತೆಗೆ ಪಕ್ಷದ ಕಾರ್ಯಕರ್ತರು, ಜನ ಸಾಮಾನ್ಯರಿಗೂ ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಒಟ್ಟು 50 ಸಾವಿರ ಮಂದಿಗೆ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: BJP ಗೆದ್ದರೆ ರಾಜಕೀಯವನ್ನೇ ತೊರೆಯುವೆ.. ದೆಹಲಿ ಸಿಎಂ ಕೇಜ್ರಿವಾಲ್ ಸವಾಲನ್ನು ಸ್ವೀಕರಿಸುತ್ತಾ ಕೇಸರಿ ಪಕ್ಷ?

1 ಸಾವಿರ ಫಲಾನುಭವಿಗಳಿಗೆ ವಿಶೇಷ ಆಹ್ವಾನ

ಉತ್ತರ ಪ್ರದೇಶ ಸರ್ಕಾರದ ಈ ಹಿಂದಿನ ಹಲವು ಯೋಜನೆಗಳ ಫಲಾನುಭವಿಗಳನ್ನೂ ಅತಿಥಿಗಳಾಗಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳು ಅಂತಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಸುಮಾರು 200 ಗಣ್ಯರು ಮತ್ತು 1,000 ಫಲಾನುಭವಿಗಳಿಗೆ ಆಮಂತ್ರಣ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

3 ಅಥವಾ 4 ಡಿಸಿಎಂ ಸಾಧ್ಯತೆ

ಪ್ರಚಂಡ ಬಹುಮತ ನೀಡಿದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಪ್ರದೇಶ ಮತ್ತು ಜಾತಿ ಲೆಕ್ಕಾಚಾರಗಳಿಗೆ ಅನುಸಾರವಾಗಿ ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರಲ್ಲದೆ ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿಗಳು ಕೂಡ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಬ್ರಜೇಶ್ ಪಾಠಕ್, ಶ್ರೀಕಾಂತ್ ಶರ್ಮಾ, ಬೇಬಿ ರಾಣಿ ಮೌರ್ಯ, ದಿನೇಶ್ ಶಾಮ ಮತ್ತು ಕೇಶವ್ ಪ್ರಸಾದ್ ಮೌರ್ಯ ಹೆಸರುಗಳು ಪರಿಗಣನೆಯಲ್ಲಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಕೆಲವು ಸಚಿವರ ಪ್ರಮಾಣವಚನ ಸ್ವೀಕಾರ

ಯೋಗಿ ಆದಿತ್ಯನಾಥ್ ಮತ್ತು ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿಗಳ ಜೊತೆಗೆ ಇಂದು ಕೆಲವು ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಸ್ವತಂತ್ರ ದೇವ್ ಸಿಂಗ್, ಬ್ರಜೇಶ್ ಪಾಠಕ್, ಶ್ರೀಕಾಂತ್ ಶರ್ಮಾ, ಕುನ್ವಾರ್ ಬ್ರಿಜೇಶ್ ಸಿಂಗ್, ಅದಿತಿ ಸಿಂಗ್, ಅಸಿಮ್ ಅರುಣ್ ಅಥವಾ ರಾಜೇಶ್ವರ್ ಸಿಂಗ್ ಮತ್ತಿತರರು ಯೋಗಿ ಸಂಪುಟ ಸೇರುವ ಸಾಧ್ಯತೆಗಳಿವೆ.
Published by:Annappa Achari
First published: