Yogi Adityanath: ಮಾರ್ಚ್‌ 25ರಿಂದ ಯೋಗಿ ರಾಜ್ಯಭಾರ ಆರಂಭ! 50 ಸಾವಿರ ಜನರ ಎದುರು ಪ್ರತಿಜ್ಞಾ ವಿಧಿ

ಮಾರ್ಚ್ 25ರಂದು ಯೋಗಿ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗಣ್ಯರ ಜೊತೆಗೆ ಪಕ್ಷದ ಕಾರ್ಯಕರ್ತರು, ಜನ ಸಾಮಾನ್ಯರಿಗೂ ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಒಟ್ಟು 50 ಸಾವಿರ ಮಂದಿಗೆ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • Share this:
ಉತ್ತರ ಪ್ರದೇಶ: ಪಂಚ ರಾಜ್ಯಗಳ (5 States) ಪೈಕಿ ಇಡೀ ದೇಶದ ಗಮನ ಸೆಳೆದಿದ್ದು ಅಂದರೆ ಉತ್ತರ ಪ್ರದೇಶ (Uttara Pradesh) ಚುನಾವಣೆ (Election). ಯೋಗಿ ಆದಿತ್ಯನಾಥ್ (Yogi Adityanath), ನರೇಂದ್ರ ಮೋದಿ (Narendra Modi) ಸೇರಿದಂತೆ ಬಿಜೆಪಿ (BJP) ನಾಯಕರಿಗೆ (Leaders) ಪ್ರತಿಷ್ಠೆಯ ವಿಚಾರವಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್ (Congress) ನಾಯಕರಾದ ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ಘಟಾನುಘಟಿಗಳೇ ಅಲ್ಲಿ ಪ್ರಚಾರಕ್ಕಾಗಿ ಠಿಕಾಣಿ ಹೂಡಿದ್ದರು. ಆದರೆ ಫಲಿತಾಂಶ (Result) ಮಾತ್ರ ಬಿಜೆಪಿ ಪರವಾಗಿಯೇ ಬಂತು. ಅಮೋಘ ಜಯ ಸಾಧಿಸಿದ ಯೋಗಿ ಆದಿತ್ಯನಾಥ್, ಮತ್ತೊಮ್ಮೆ ಸಿಎಂ (CM) ಆಗಿ ಆಯ್ಕೆಯಾದರು. ಇದೀಗ ಮಾರ್ಚ್ 25ರಂದು ಯೋಗಿ ಆದಿತ್ಯನಾಥ್ ಸಿಎಂ ಆಗಿ ಪ್ರಮಾಣ ವಚನ (Oath) ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಅದ್ಧೂರಿ ಸಿದ್ಧತೆಗಳು ನಡೆಯುತ್ತಿವೆ.  

 ಮಾರ್ಚ್ 25ಕ್ಕೆ ಯೋಗಿ ಆದಿತ್ಯನಾಥ್ ಪ್ರಮಾಣ ವಚನ

ಸತತ ಎರಡನೇ ಬಾರಿಗೆ ಉತ್ತರ ಪ್ರದೇಶ ಸಿಎಂ ಆಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ್‌, ಶೀಘ್ರವೇ ರಾಜ್ಯಭಾರ ಶುರು ಮಾಡಲಿದ್ದಾರೆ. ಮಾರ್ಚ್ 25ರಂದು ಯೋಗಿ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಖನೌನ ಇಕಾನಾ ಕ್ರೀಡಾಂಗಣದಲ್ಲಿಅದ್ಧೂರಿ ಸಮಾರಂಭ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಬಿಜೆಪಿಯು ಆಹ್ವಾನಿತರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಬಿಜೆಪಿ ರಾಷ್ಟ್ಪೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಪ್ರಮುಖ ನಾಯಕರು, ಉತ್ತರ ಪ್ರದೇಶ ಬಿಜೆಪಿ ನಾಯಕರು, ಉತ್ತರ ಪ್ರದೇಶದ ಪ್ರತಿಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಲು ಬಿಜೆಪಿ ನಿರ್ಧರಿಸಿದೆ. ಇನ್ನು ಸುಮಾರು 200 ಮಂದಿ ಗಣ್ಯರಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ.

ಇದನ್ನೂ ಓದಿ: Rahul Gandhi: ಬೆಲೆ ಏರಿಕೆ ಬಿಸಿ ಮತ್ತಷ್ಟು ಹೆಚ್ಚಲಿದೆ! ಕೂಡಲೇ ಕ್ರಮ ಕೈಗೊಳ್ಳಿ ಎಂದ ರಾಹುಲ್ ಗಾಂಧಿ

50 ಸಾವಿರ ಮಂದಿ ಉಪಸ್ಥಿತಿ

ಗಣ್ಯರ ಜೊತೆಗೆ ಪಕ್ಷದ ಕಾರ್ಯಕರ್ತರು, ಜನ ಸಾಮಾನ್ಯರಿಗೂ ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಒಟ್ಟು 50 ಸಾವಿರ ಮಂದಿಗೆ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

1 ಸಾವಿರ ಫಲಾನುಭವಿಗಳಿಗೆ ವಿಶೇಷ ಆಹ್ವಾನ

ಇವಿಷ್ಟು ಅಲ್ಲದೇ, ಉತ್ತರ ಪ್ರದೇಶ ಸರ್ಕಾರದ ಈ ಹಿಂದಿನ ಹಲವು ಯೋಜನೆಗಳ ಫಲಾನುಭವಿಗಳನ್ನೂ ಅತಿಥಿಗಳಾಗಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳು ಅಂತಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಸುಮಾರು 200 ಗಣ್ಯರು ಮತ್ತು 1,000 ಫಲಾನುಭವಿಗಳಿಗೆ ಆಮಂತ್ರಣ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುತ್ತಿರುವ ಯೋಗಿ

ಉತ್ತರ ಪ್ರದೇಶದಲ್ಲಿ 1985ರಿಂದ ಇಲ್ಲಿಯವರೆಗೆ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿದ ಪಕ್ಷವೇ ಇಲ್ಲ. ಕಳೆದ ಅವಧಿಯನ್ನು ಐದು ವರ್ಷ ಪೂರೈಸಿದ ಬಿಜೆಪಿ ಇದೀಗ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿದೆ. ಹಿಂದೊಂದು ಕಾಲದಲ್ಲಿ ಬಿಜೆಪಿ ತಳದಲ್ಲಿದ್ದ ರಾಜ್ಯವದು.

ಆದರೆ ಅಲ್ಲೀಗ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತಿದೆ. ಹೀಗೆ ರಾಜ್ಯದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಯೋಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಪಕ್ಷ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: The Kashmir Files: ಕಾಶ್ಮೀರ್ ಫೈಲ್ಸ್ ತುಂಬಾ ಸುಳ್ಳುಗಳೇ ಇವೆ ಎಂದ ಮಾಜಿ ಸಿಎಂ

ಅಮೋಘ ಜಯ ಸಾಧಿಸಿದ್ದ ಬಿಜೆಪಿ

ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು. 403ಸದಸ್ಯರ ವಿಧಾನಸಭೆಯಲ್ಲಿ 255 ಸ್ಥಾನಗಳನ್ನುಗೆದ್ದ ಬಿಜೆಪಿ, ನಿರಾಯಾಸವಾಗಿ ಮತ್ತೊಮ್ಮೆ ಅಧಿಕಾರದ ಗದ್ದುಗಗೆ ಏರುತ್ತಿದೆ.

ಇನ್ನು ಎಸ್‌ಪಿ ನೇತೃತ್ವದ ಮೈತ್ರಿಕೂಟವು 125 ಸ್ಥಾನಗಳನ್ನು ಗೆದ್ದುಕೊಂಡಿತು, ಅದರಲ್ಲಿ 111 ಅಖಿಲೇಶ್ ಯಾದವ್ ನೇತೃತ್ವದ ಪಕ್ಷಕ್ಕೆ ಬಂದವು. ಇನ್ನು 1987 ರಿಂದ ಉತ್ತರ ಪ್ರದೇಶದಲ್ಲಿ 2ನೇ ಅವಧಿಗೆ ಆಯ್ಕೆಯಾದ ಮೊದಲ ಸರ್ಕಾರ ಇದು ಎಂಬ ಹೆಗ್ಗಳಿಗೆ ಗಳಿಸಿದೆ.
Published by:Annappa Achari
First published: