Yogi Adityanath: "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎಂದ ಯೋಗಿ ಆದಿತ್ಯನಾಥ್, ಭರ್ಜರಿ ಗೆಲುವಿನ ಬಳಿಕ ಮತದಾರರಿಗೆ ಕೃತಜ್ಞತೆ

ಈ ಬಾರಿ ಯೋಗಿ ಆದಿತ್ಯನಾಥ್ ಗೆಲ್ಲೋದು ಖಚಿತ, ಮುಖ್ಯಮಂತ್ರಿ ಆಗೋದೂ ಖಚಿತ ಎಂದು ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದರು. ಅವರ ನಿರೀಕ್ಷೆ ನಿಜವಾಗಿದೆ. ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಯೋಗಿ ಆದಿತ್ಯನಾಥ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಭರ್ಜರಿ ಗೆಲುವಿನ ಬಳಿಕ ಯೋಗಿ ಆದಿತ್ಯನಾಥ್ ಮತದಾರರಿಗೆ ಕೃತಜ್ಞತೆ ಅರ್ಪಿಸಿದರು. "ಇದು ಉತ್ತರ ಪ್ರದೇಶದ ಜನತಾ ಜನಾರ್ಧನನ ತಾಕತ್ತು" ಅಂತ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • Share this:
Uttara Pradesh Election Results 2022: ಉತ್ತರ ಪ್ರದೇಶದಲ್ಲಿ (Uttara Pradesh) ಮತ್ತೆ ಬಿಜೆಪಿ (BJP) ಅಧಿಕಾರದ ಗದ್ದುಗೆಗೆ ಏರಿದೆ. 2ನೇ ಬಾರಿಗೆ ಸಿಎಂ (CM) ಆಗಿ ಯೋಗಿ ಆದಿತ್ಯನಾಥ್ (Yogi Adityanath) ಅಧಿಕಾರ ಸ್ವೀಕರಿಸಲಿದ್ದಾರೆ. ಚುನಾವಣೆಗೆ (Election) ಮುನ್ನವೇ ಉತ್ತರ ಪ್ರದೇಶದ ಮುಂದಿನ ಸಿಎಂ ಅಭ್ಯರ್ಥಿ (CM Candidate) ಯೋಗಿ ಆದಿತ್ಯನಾಥ್ ಎಂದು ಘೋಷಿಸಲಾಗಿತ್ತು. ಖುದ್ದು ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಅವರೇ ಯೋಗಿ ಅವರ ನಾಯಕತ್ವ (Leadership) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಹೀಗಾಗಿ ಈ ಬಾರಿ ಯೋಗಿ ಗೆಲ್ಲೋದು (Win) ಖಚಿತ, ಮುಖ್ಯಮಂತ್ರಿ ಆಗೋದೂ ಖಚಿತ ಎಂದು ಬಿಜೆಪಿ ಕಾರ್ಯಕರ್ತರು (BJP Worker) ಹುಮ್ಮಸ್ಸಿನಲ್ಲಿದ್ದರು. ಅವರ ನಿರೀಕ್ಷೆ ನಿಜವಾಗಿದೆ. ಗೋರಖ್‌ಪುರ (Gorakhpur) ಕ್ಷೇತ್ರದಿಂದ ಸ್ಪರ್ಧಿಸಿದ್ದ ಯೋಗಿ ಆದಿತ್ಯನಾಥ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇದರೊಂದಿಗೆ ಬಿಜೆಪಿ ಕೂಡ ಉತ್ತರ ಪ್ರದೇಶದಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರುವುದು ಪಕ್ಕಾ ಆಗಲಿದೆ. ಇದೀಗ ಭರ್ಜರಿ ಗೆಲುವಿನ ಬಳಿಕ ಯೋಗಿ ಆದಿತ್ಯನಾಥ್ ಮತದಾರರನ್ನು ಉದ್ಧೇಶಿಸಿ ಮಾತನಾಡಿದ್ದಾರೆ.

 ಉತ್ತರ ಪ್ರದೇಶದ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

 ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯೋಗಿ ಆದಿತ್ಯನಾಥ್, ಈ ಬಾರಿಯೂ ಗೆದ್ದು ಬೀಗಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಉತ್ತರ ಪ್ರದೇಶ ರಾಜಧಾನಿ ಲಕ್ನೋನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮತದಾರರಿಗೆ ಕೃತಜ್ಞತೆ ಅರ್ಪಿಸಿದ ಯೋಗಿ ಆದಿತ್ಯನಾಥ್

ಭರ್ಜರಿ ಗೆಲುವಿನ ಬಳಿಕ ಯೋಗಿ ಆದಿತ್ಯನಾಥ್ ಮತದಾರರಿಗೆ ಕೃತಜ್ಞತೆ ಅರ್ಪಿಸಿದರು. ಇದು ಉತ್ತರ ಪ್ರದೇಶದ ಜನತಾ ಜನಾರ್ಧನನ ತಾಕತ್ತು ತೋರಿಸಿದೆ ಎಂದಿರುವ ಯೋಗಿ ಆದಿತ್ಯನಾಥ್, ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್ ಎನ್ನುವುದು ನಮ್ಮ ಮೂಲ ಮಂತ್ರ ಎಂದರು .

 ಇದನ್ನೂ ಓದಿ: Yogi Adityanath Rare Photos: ಅಜಯ್ ಸಿಂಗ್ ಬಿಷ್ಟ್ ಯೋಗಿ ಆದಿತ್ಯನಾಥ್ ಆದ ರೋಚಕ ಕಥೆ!

ಮೋದಿ ಹೊಗಳಿದ ಯೋಗಿ ಆದಿತ್ಯನಾಥ್

ಭಾಷಣದುದ್ದಕ್ಕೂ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೋದಿಯವರ ಉತ್ತಮ ಆಡಳಿತದ ಜೊತೆಗೆ ಉತ್ತರ ಪ್ರದೇಶ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಮತ್ತೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಡಬಲ್ ಎಂಜಿನ್ ಸರ್ಕಾರದಿಂದಾಗಿ ಅಭಿವೃದ್ಧಿ ಚುರುಕು ಪಡೆಯುತ್ತದೆ ಅಂತ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಬಿಜೆಪಿ ಗೆಲುವಿಗೆ ಮುಲಾಯಂ ಸೊಸೆ ಸಂತಸ

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದಿರುವ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಬಿಷ್ತ್ ಯಾದವ್, ತುಷ್ಟೀಕರಣ ರಾಜಕಾರಣ, ಜಾತಿಯ ಆಧಾರದ ಮೇಲೆ ರಾಜ್ಯವನ್ನು ವಿಭಜಿಸಿದ ಎಲ್ಲರಿಗೂ ಇದು ಉತ್ತರವಾಗಿದೆ. ಹಿಂದೂ-ಮುಸ್ಲಿಂ-ಸಿಖ್-ಇಸೈ ಸಬ್ಕೆ ಸಬ್ ಹೇ ಭಾಜಪೇಯಿ. ಮಾರ್ಚ್ 10 ರಂದು 'ಜೈ ಶ್ರೀ ರಾಮ್' ನೊಂದಿಗೆ ಸರ್ಕಾರ ರಚಿಸುತ್ತಿದ್ದೇವೆ. ಇದಕ್ಕಿಂತ ಉತ್ತಮ ಸರ್ಕಾರ ಸಿಗುವುದಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಫಲಿತಾಂಶ

ಉತ್ತರ ಪ್ರದೇಶದ 403 ಸ್ಥಾನಗಳ ಪೈಕಿ ಬಿಜೆಪಿ 273 ಸ್ಥಾನಗಳನ್ನು ಗೆದ್ದಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಏರುವುದು ಕನ್ಫರ್ಮ್ ಆಗಿದೆ. ಇನ್ನು ಕಾಂಗ್ರೆಸ್ 2 ಸ್ಥಾನಗಳನ್ನಷ್ಟೇ ಪಡೆಯಲು ಸಾಧ್ಯವಾಗಿದೆ. ಇನ್ನು ಎಸ್‌ಪಿ 130 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಎಸ್‌ಪಿ 1 ಸ್ಥಾನದಲ್ಲಷ್ಟೇ ಮುಂದಿದೆ.

ಇದನ್ನೂ ಓದಿ: UPಯಲ್ಲಿ ಇತಿಹಾಸ ಸೃಷ್ಟಿಸಿದ Yogi; ಆದಿತ್ಯನಾಥ್ ಗೆಲುವಿಗೆ ಮುಲಾಯಂ ಯಾದವ್​ ಸೊಸೆ ಸಂಭ್ರಮ​

ರಾಹುಲ್, ಪ್ರಿಯಾಂಕಾ ಕಣಕ್ಕಿಳಿದರೂ ಆಗಲಿಲ್ಲ ಮ್ಯಾಜಿಕ್

ರಾಜಕೀಯ ವೀಕ್ಷಕರು ಕಾಂಗ್ರೆಸ್ ಪಕ್ಷದ ಸೋಲನ್ನು ದೇಶದ ಅತಿ ಹಳೆಯ ಪಕ್ಷಕ್ಕೆ ಉಂಟಾದ ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಿದ್ದಾರೆ. ಇದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ "ಬ್ರಾಂಡ್ ಮೌಲ್ಯವನ್ನು ಕಡಿಮೆಗೊಳಿಸಬಹುದು ಎಂದು ಸಹ ಹೇಳಲಾಗಿದೆ. ಏಕೆಂದರೆ ಉತ್ತರ ಪ್ರದೇಶದಲ್ಲಿ ಸ್ವತಃ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಣಕ್ಕಿಳಿದು ಭರ್ಜರಿ ಪ್ರಚಾರ ನಡೆಸಿದ್ದರು.
Published by:Annappa Achari
First published: