Yogi Adityanath: ಅಯೋಧ್ಯೆ ಬಳಿಕ ಕಾಶಿ, ಮಥುರಾದ ಮೇಲೆ ಗಮನ! ಯೋಗಿ ಆದಿತ್ಯನಾಥ್ ಘೋಷಣೆ

"ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಪ್ರಾರಂಭವಾದ ನಂತರ, ಕಾಶಿಯ ಜಾಗೃತೆ ಮಾಡುವ ಗುರಿ ನಮ್ಮ ಮುಂದಿದೆ" ಅಂತ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದಕ್ಕಾಗಿ ನಾವೆಲ್ಲರು ಒಗ್ಗಟ್ಟಾಗಿ ಹೋರಾಡಬೇಕು ಎಂದಿದ್ದಾರೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • Share this:
 ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ (Ayodhye) ರಾಮಮಂದಿರ (Ram Mandir) ಮೊದಲು ನಿರ್ಮಾಣವಾಗಲಿ. ಆ ನಂತರ ಕಾಶಿ (Kashi) ಹಾಗೂ ಮಥುರಾದಂತಹ (Mathura) ಧಾರ್ಮಿಕ ಕೇಂದ್ರಗಳ ವಿವಾದಗಳನ್ನು (Controversy) ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಅಂತ ಉತ್ತರ ಪ್ರದೇಶ (Uttara Pradesh) ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಹೇಳಿದ್ದಾರೆ. ಬಿಜೆಪಿ (BJP) ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ''ರಾಮ ಮಂದಿರ ನಿರ್ಮಾಣ ಮಾಡಿದ ಬಳಿಕ ಕಾಶಿ ವಿಶ್ವನಾಥ ದೇಗುಲ (Vishwanath Temple) ನಮ್ಮೆದುರಿದೆ. ಇದೇ ರೀತಿ, ಮಥುರಾ, ವೃಂದಾವನ, ವಿಂಧ್ಯವಾಸಿನಿ ಧಾಮ, ನೈಮಿಶ್‌ ಧಾಮ ಸೇರಿ ಹಲವು ಧಾಮಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ” ಎಂದಿದ್ದಾರೆ.

ಅಯೋಧ್ಯೆ ಬಳಿಕ ಕಾಶಿ, ಮಥುರಾದತ್ತ ಗಮನ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ, ಮಥುರಾ, ವೃಂದಾವನ, ವಿಂಧ್ಯವಾಸಿನಿ ಧಾಮ ಮತ್ತು ನೈಮಿಶ್ ಧಾಮಗಳಂತೆ ದೇವಾಲಯಗಳ ಪಟ್ಟಣವಾದ ಕಾಶಿಯು ಅಭಿವೃದ್ಧಿಗೊಳ್ಳಲಿದೆ ಅಂತ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಬಿಜೆಪಿಯ ಒಂದು ದಿನದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಯೋಗಿ ಆದಿತ್ಯನಾಥ್ ಮಾತನ್ನಾಡಿದ್ರು.

ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು

"ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಪ್ರಾರಂಭವಾದ ನಂತರ, ಕಾಶಿಯ ಜಾಗೃತೆ ಮಾಡುವ ಗುರಿ ನಮ್ಮ ಮುಂದಿದೆ" ಎಂದು ಹೇಳಿದರು. "ಮಥುರಾ ವೃಂದಾವನ, ವಿಂಧ್ಯವಾಸಿನಿ ಧಾಮ, ನೈಮಿಷ್ ಧಾಮಗಳಂತಹ ಎಲ್ಲಾ ಯಾತ್ರಾ ಕೇಂದ್ರಗಳು ಮತ್ತೊಮ್ಮೆ ಎಚ್ಚರಗೊಳ್ಳುತ್ತಿವೆ ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಮತ್ತೊಮ್ಮೆ ಒಟ್ಟಾಗಿ ಮುನ್ನಡೆಯಬೇಕಾಗಿದೆ" ಅಂತ ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಕಾಶಿ ದೇಗುಲ ಮೋದಿ ಅವರ ದೂರದೃಷ್ಟಿಗೆ ಉದಾಹರಣೆ

ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್ ಉದ್ಘಾಟನೆಯನ್ನು ಉಲ್ಲೇಖಿಸಿದ ಯೋಗಿ  ಆದಿತ್ಯನಾಥ್, ಪ್ರತಿದಿನ ಒಂದು ಲಕ್ಷ ಭಕ್ತರು ಕಾಶಿಗೆ ಭೇಟಿ ನೀಡುತ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಗೆ ಅನುಗುಣವಾಗಿ ಈ ಸ್ಥಳವು ತನ್ನ ಹೆಸರಿನ ಮಹತ್ವವನ್ನು ಸಾಬೀತುಪಡಿಸುತ್ತಿದೆ ಅಂತ ಹೇಳಿದ್ರು.

ಶಾಂತಿಯುತವಾಗಿ ರಾಮನವಮಿ, ಹನುಮ ಜಯಂತಿ ನಡೆದಿದೆ

"ರಾಮ ನವಮಿ ಮತ್ತು ಹನುಮ ಜಯಂತಿಯನ್ನು ಶಾಂತಿಯುತವಾಗಿ ನಡೆಸಲಾಯಿತು. ಇದೇ ಮೊದಲ ಬಾರಿಗೆ ಈದ್ ಹಿಂದಿನ ಕೊನೆಯ ಶುಕ್ರವಾರದ ನಮಾಜ್ ಬೀದಿಗಳಲ್ಲಿ ನಡೆಯಲಿಲ್ಲ. ನಮಾಜ್‌ಗಾಗಿ ಪ್ರಾರ್ಥನಾ ಸ್ಥಳವಿದೆ, ಅವರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಮಸೀದಿಗಳಿವೆ,. ಇತ್ತೀಚಿನ ಹಬ್ಬಗಳನ್ನು ಪ್ರಸ್ತಾಪಿಸಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈದ್‌ನ ಹಿಂದಿನ ಕೊನೆಯ ಶುಕ್ರವಾರದ ನಮಾಜ್ ಅನ್ನು ರಸ್ತೆಗಳಲ್ಲಿ ನಡೆಸಲಾಗಿಲ್ಲ ಎಂದು ಹೇಳಿದರು."

ಅನಗತ್ಯ ಶಬ್ದಗಳನ್ನು ಹೋಗಲಾಡಿಸಿದ್ದೇವೆ

ಇನ್ನು ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದಿರುವುದನ್ನು ಪ್ರಸ್ತಾಪಿಸಿದ ಅವರು, ಅನಗತ್ಯ ಶಬ್ದವನ್ನು ಹೇಗೆ ಹೋಗಲಾಡಿಸಿದ್ದೇವೆ  ಎಂಬುದನ್ನು ನೀವು ನೋಡಿರಬೇಕು ಅಂತ ಯೋಗಿ ಆದಿತ್ಯನಾಥ್ ಹೇಳಿದರು.

ಇದನ್ನೂ ಓದಿ:

ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮುಗಿದಿದ್ದು, ಇದರ ಕುರಿತು ಪರ-ವಿರೋಧ ಚರ್ಚೆಯಾಗುತ್ತಿದೆ. ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿಪ್ರಕರಣದ ವಿಚಾರಣೆ ನಡೆಯುತ್ತಿದೆ. ಅತ್ತ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣವೂ ನ್ಯಾಯಾಲಯದ ಅಂಗಳದಲ್ಲಿದೆ. ಇದರ ಬೆನ್ನಲ್ಲೇ, ಶತಮಾನದಷ್ಟು ಹಳೆಯ ಮಸೀದಿಗಳ ಸಮೀಕ್ಷೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೇ, ಯೋಗಿ ಆದಿತ್ಯನಾಥ್‌ ಅವರು ಹಲವು ಧಾರ್ಮಿಕ ಕೇಂದ್ರಗಳ ಹೆಸರು ಪ್ರಸ್ತಾಪಿಸಿರುವುದು ಪ್ರಾಮುಖ್ಯತೆ ಪಡೆದಿದೆ.
Published by:Annappa Achari
First published: