Yogi Adityanath Interview: ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ; ಯೋಗಿ ಆದಿತ್ಯನಾಥ್ ಅಭಯ

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

"ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದು, ಭಯಪಡುವ ವಾತಾವರಣ ಇಲ್ಲ ಅಂತ ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದ್ದರು. ನಾನು ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಈ ವಿಚಾರದಲ್ಲಿ ಅವರು ಹೇಳಿದ್ದು ಸರಿಯಾಗಿದ್ದು, ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿ ಇದ್ದಾರೆ" ಅಂತ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.  

ಮುಂದೆ ಓದಿ ...
  • Share this:

    ಉತ್ತರ ಪ್ರದೇಶ ಸಿಎಂ (Uttar Pradesh CM) ಯೋಗಿ ಆದಿತ್ಯನಾಥ್ (Yogi Adityanath) ಭಾರತೀಯ ಮುಸ್ಲಿಮರು, ಅವರ ಸುರಕ್ಷತೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ (News18 Exclusive Interview) ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, ಬಿಜೆಪಿ ಆಡಳಿತದಲ್ಲಿ ಹಿಂದೂ ಯುವತಿಯರು ಹಾಗೂ ಮುಸ್ಲಿಂ ಯುವತಿಯರು (Hindu and Muslim women) ಸುರಕ್ಷಿತವಾಗಿದ್ದಾರೆ. ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದು, ಭಯಪಡುವ ವಾತಾವರಣ ಇಲ್ಲ ಅಂತ ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದ್ದರು. ನಾನು ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಈ ವಿಚಾರದಲ್ಲಿ ಅವರು ಹೇಳಿದ್ದು ಸರಿಯಾಗಿದ್ದು, ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿ ಇದ್ದಾರೆ ಅಂತ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. 


    ಮುಸ್ಲಿಮರು ಭಯಪಡುವ ಅಗತ್ಯವೇ ಇಲ್ಲ


    ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಭಯವಿಲ್ಲ, ಅವರು ಸುರಕ್ಷಿತವಾಗಿದ್ದಾರೆ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, ಭಾರತವೇ ಆಗಿರಬಹುದು ಅಥವಾ ಉತ್ತರ ಪ್ರದೇಶವೇ ಆಗಿರ ಬಹುದು ಮುಸ್ಲಿಮರು ಯಾವುದೇ ತಾರತಮ್ಯವಿಲ್ಲದೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿರುವುದರಿಂದ ಹಿಂದೂಗಳ ಹಬ್ಬಗಳನ್ನು ಶಾಂತಿಯುತವಾಗಿ ಮತ್ತು ಪರಿಣಾಮಕಾರಿಯಾಗಿ ಆಚರಿಸಲಾಗುತ್ತಿದ್ದು, ಅದೇ ರೀತಿ ಮುಸ್ಲಿಮರ ಹಬ್ಬಗಳನ್ನೂ ಉತ್ತಮ ರೀತಿಯಲ್ಲಿ ಆಚರಿಸಲಾಗುತ್ತಿದೆ ಅಂತ ಅವರು ಹೇಳಿದ್ದಾರೆ.




    “ಮೋಹನ್ ಭಾಗವತ್ ಹೇಳಿಕೆಗೆ ನನ್ನ ಬೆಂಬಲ ಇದೆ”


    ಭಾರತೀಯ ಮುಸ್ಲಿಮರ ಕುರಿತಂತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಈ ದೇಶದಲ್ಲಿ ಮುಸ್ಲಿಮರಿಗೆ ಸಮಾನತೆಯ ಹಕ್ಕಿದೆ. ಆದರೆ ತಾವು ದೊಡ್ಡವರು, ರಾಜರಾಗಿದ್ದವರು ಮತ್ತೆ ರಾಜರಾಗುತ್ತಾರೆ ಎಂಬ ಭಾವನೆಯನ್ನೂ ಬಿಡಬೇಕು. ಮುಸ್ಲಿಮರು ಈ ಭಾವನೆಯನ್ನು ಬಿಡಬೇಕು ಅಂತ ಭಾಗವತ್ ಹೇಳಿದ್ದರು. ಅವರ ಮಾತನ್ನು ಪ್ರಸ್ತಾಪಿಸಿದ ಯೋಗಿ ಆದಿತ್ಯನಾಥ್, ನಾನು ಮೋಹನ್ ಭಾಗವತ್ ಮಾತನ್ನು ಒಪ್ಪುತ್ತೇನೆ. ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಅಂತ ಅಭಿಪ್ರಾಯಪಟ್ಟರು.


    ಇದನ್ನೂ ಓದಿ: Yogi Adityanath Interview: ಪಠಾಣ್ ಸಿನಿಮಾ ವಿವಾದದ ಬಗ್ಗೆ ಯೋಗಿ ಆದಿತ್ಯನಾಥ್ ಹೇಳಿದ್ದೇನು? ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ


    “ಹಿಂದೂ, ಮುಸ್ಲಿಂ ಯುವತಿಯರು ಸುರಕ್ಷಿತವಾಗಿದ್ದಾರೆ”


    ಉತ್ತರ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಯುವತಿಯರು ಸುರಕ್ಷಿತವಾಗಿದ್ದಾರೆ ಅಂತ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದರೆ ಅದರ ಲಾಭ ಹಿಂದೂ ಹೆಣ್ಣು ಮಕ್ಕಳ ಜತೆಗೆ ಮುಸ್ಲಿಂ ಹೆಣ್ಣು ಮಕ್ಕಳಿಗೂ ಸಿಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದೇ ಮುಸ್ಲಿಮರನ್ನು ಬೆಸೆಯಲು ಉತ್ತಮ ಮಾಧ್ಯಮ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.


    “ಸಿನಿಮಾ ಯಾರಿಗೂ ನೋವುಂಟು ಮಾಡಬಾರದು”


    ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡಿನ ವಿವಾದದ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ನಟ, ನಿರ್ದೇಶಕ ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಅಥವಾ ಸಾರ್ವಜನಿಕರಿಗೆ ನೋವುಂಟು ಮಾಡುವ ದೃಶ್ಯಗಳ ಬಗ್ಗೆ ಜಾಗ್ರತನಾಗಿರಬೇಕು. ಅಂತಹ ಸೀನ್, ಕಥೆ, ಹಾಡುಗಳನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಬಾರದು ಅಂತ ಹೇಳಿದ್ರು.




    “ಎಲ್ಲಾ ಕಲಾವಿದರನ್ನು ಗೌರವಿಸಬೇಕು”


    ಎಲ್ಲಾ ಕಲಾವಿದರನ್ನು ಗೌರವಿಸಬೇಕು ಎಂದ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶವು ಚಲನಚಿತ್ರಗಳಿಗೆ ನೀತಿಯನ್ನು ಮಾಡಿದೆ ಮತ್ತು ರಾಜ್ಯದಲ್ಲಿ ಅನೇಕ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದಿದ್ದಾರೆ. ಸಿನಿಮಾ ನಿರ್ದೇಶಕರು ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಯಾವುದೇ ದೃಶ್ಯಗಳನ್ನು ನೀಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅಂತ ಅವರು ನಿರ್ದೇಶಕರಿಗೆ ಕಿವಿಮಾತು ಹೇಳಿದ್ದಾರೆ.

    Published by:Annappa Achari
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು