"ಬೇಗ ಬಂದು ಒಮ್ಮೆ ಅಮ್ಮನ ಜೊತೆ ಮಾತನಾಡು!" ಹೀಗಂತ Yogi Adityanathಗೆ ಹೇಳಿದ್ದು ಯಾರು?

ನಾಳೆ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸಮಾರಂಭ ನಡೆಯಲಿದೆಯ ಈ ನಡುವೆ ಅವರಿಗೆ ತೀರಾ ಆಪ್ತ ವ್ಯಕ್ತಿಯೊಬ್ಬರು ವಿಶೇಷ ಮನವಿಯನ್ನು ಕಳಿಸಿದ್ದಾರೆ. "ಒಮ್ಮೆ ಬಂದು ಅಮ್ಮನನ್ನು ಭೇಟಿ ಮಾಡು, ಅವರೊಂದಿಗೆ ಮಾತನಾಡು ಸಾಕು" ಅಂತ ಮನವಿ ಮಾಡಿದ್ದಾರೆ. ಹಾಗಿದ್ರೆ ಮನವಿ ಮಾಡಿದ ಆ ಆಪ್ತ ವ್ಯಕ್ತಿ ಯಾರು? ಅಮ್ಮನನ್ನು ಭೇಟಿ ಮಾಡು ಅಂತ ಅವರು ಹೇಳಿದ್ದು ಏಕೆ?

ಯೋಗಿ ಆದಿತ್ಯನಾಥ್ ಹಾಗೂ ತಾಯಿ ಸಾವಿತ್ರಿ ದೇವಿ

ಯೋಗಿ ಆದಿತ್ಯನಾಥ್ ಹಾಗೂ ತಾಯಿ ಸಾವಿತ್ರಿ ದೇವಿ

  • Share this:
ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ (Yogi Adityanath) ಪದಗ್ರಹಣಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ (Election) ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ (BJP), ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಆಡಳಿತ ನಡೆಸಲಿದೆ. ಯೋಗಿ ಆದಿತ್ಯನಾಥ್ 2ನೇ ಬಾರಿ ಸಿಎಂ (CM) ಆಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇದೇ ಮಾರ್ಚ್‌ 25ರಂದು, ಅಂದರೆ ನಾಳೆ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸಮಾರಂಭ (Oath Ceremony) ನಡೆಯಲಿದೆಯ ಈ ನಡುವೆ ಅವರಿಗೆ ತೀರಾ ಆಪ್ತ ವ್ಯಕ್ತಿಯೊಬ್ಬರು ವಿಶೇಷ ಮನವಿಯನ್ನು (Request) ಕಳಿಸಿದ್ದಾರೆ. "ಒಮ್ಮೆ ಬಂದು ಅಮ್ಮನನ್ನು (Mother) ಭೇಟಿ (Meet) ಮಾಡು, ಅವರೊಂದಿಗೆ ಮಾತನಾಡು ಸಾಕು" ಅಂತ ಮನವಿ ಮಾಡಿದ್ದಾರೆ. ಹಾಗಿದ್ರೆ ಮನವಿ ಮಾಡಿದ ಆ ಆಪ್ತ ವ್ಯಕ್ತಿ ಯಾರು? ಅಮ್ಮನನ್ನು ಭೇಟಿ ಮಾಡು ಅಂತ ಅವರು ಹೇಳಿದ್ದು ಏಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

 ಯೋಗಿ ಆದಿತ್ಯನಾಥ್‌ಗೆ ಅಕ್ಕನ ಮನವಿ

 ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಅವರ ಸಹೋದರಿ ಶಶಿ ಸಿಂಗ್ ಪ್ರೀತಿಪೂರ್ವಕ ಮನವಿ ಮಾಡಿದ್ದಾರೆ. ಮನೆಯಲ್ಲಿ ತಾಯಿ ಸಾವಿತ್ರಿ ದೇವಿ ಇದ್ದಾರೆ. ಅವರು ತೀರಾ ವಯಸ್ಸಾಗಿದ್ದು, ನಿನ್ನ ನಿರೀಕ್ಷೆಯಲ್ಲೇ ಇದ್ದಾರೆ. ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಒಮ್ಮೆ ಬಂದು ಅವರನ್ನು ಭೇಟಿಯಾಗು, ಅವರಿಂದ ಆಶೀರ್ವಾದ ಪಡೆದುಕೊಂಡು ಹೋಗು ಅಂತ ಮನವಿ ಮಾಡಿದ್ದಾರೆ.

 ಎಲ್ಲಿದ್ದಾರೆ ಗೊತ್ತಾ ಯೋಗಿ ಆದಿತ್ಯನಾಥ್ ಸಹೋದರಿ

ಯೋಗಿ ಆದಿತ್ಯನಾಥ್ ಅಕ್ಕ ಶಶಿ ಸಿಂಗ್ ಉತ್ತರಾಖಂಡದ ತನ್ನ ಹಳ್ಳಿಯಲ್ಲಿ ತಮ್ಮ ಕುಟುಂಬಸ್ಥರ ಜೊತೆ ಇದ್ದಾರೆ. ತೀರಾ ಬಡತನದಲ್ಲಿರುವ ಅವರು, ಸಣ್ಣ ಚಹಾ ಅಂಗಡಿಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ.

ಇದನ್ನೂ ಓದಿ: Yogi Adityanath: ಮಾರ್ಚ್‌ 25ರಿಂದ ಯೋಗಿ ರಾಜ್ಯಭಾರ ಆರಂಭ! 50 ಸಾವಿರ ಜನರ ಎದುರು ಪ್ರತಿಜ್ಞಾ ವಿಧಿ

ಮಗನನ್ನು ನೋಡುವ ಆಸೆ ವ್ಯಕ್ತಪಡಿಸಿದ ತಾಯಿ

ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ಮಗನನ್ನು ತುಂಬಾ ನೆನಪಿಸಿಕೊಳ್ಳುತ್ತಾರಂತೆ. ಮನೆಗೇ ಬಂದು ಆತ ನನ್ನನ್ನು ಭೇಟಿಯಾಗಬೇಕು, ಆತನ ಜೊತೆ ಮಾತನಾಡಬೇಕು ಎನ್ನುವುದು ಅವರ ಆಸೆ ಅಂತ ಸಹೋದರಿ ಶಶಿ ಸಿಂಗ್ ಹೇಳಿದ್ದಾರೆ.

 18ನೇ ವಯಸ್ಸಿನಲ್ಲೇ ಮನೆ ತೋರೆದಿದ್ದ ಯೋಗಿ

ಉತ್ತರಾಖಂಡ್‌ನ ಪೌರಿ ಗರ್ವಾಲ್‌ನ ಪಂಚೂರ್ ಗ್ರಾಮದಲ್ಲಿ ಯೋಗಿ ಆದಿತ್ಯನಾಥ್ ಜನಿಸಿದ್ದರು. ಯೋಗಿ ಆದಿತ್ಯನಾಥ್ 18 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸನ್ಯಾಸಿಯಾಗಲು ತಮ್ಮ ಮನೆಯನ್ನು ತೊರೆದಿದ್ದರು.  ಯೋಗಿ ಆದಿತ್ಯನಾಥ್ ಮೂಲ ಹೆಸರು ಅಜಯ್. ಅವರು ತಮ್ಮ 18ನೇ ವಯಸ್ಸಿನಲ್ಲಿ ಮನೆ ತೊರೆದಿದ್ದರು. ಅವರು ಮನೆಯಿಂದ ಹೊರಟಾಗ ಅವರು ಸನ್ಯಾಸಿ ಆಗುತ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲವಂತೆ.

ಕುಟುಂಬ ರಾಜಕಾರಣ ಬೇಡ ಎಂದ ಶಶಿ ಸಿಂಗ್

ನಿಮ್ಮ ತಮ್ಮ ಉತ್ತರ ಪ್ರದೇಶ ಸಿಎಂ ಆಗಿದ್ದರೂ ನೀವು ಅಥವಾ ನಿಮ್ಮ ಕುಟುಂಬದ ಇತರ ಸದಸ್ಯರು ಯಾಕೆ ರಾಜಕೀಯದಿಂದ ದೂರ ಇದ್ದಾರೆ? ನೀವ್ಯಾಕೆ ಟೀ ಮಾರಿ, ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೀರಿ ಅಂತ ಹಲವರು ಶಶಿ ಸಿಂಗ್ ಅವರನ್ನು ಕೇಳಿದ್ದಾರೆ. ಆದರೆ ರಾಜಕೀಯ ನಮಗೆ ಬೇಡ ಅಂತಾರೆ ಶಶಿ ಸಿಂಗ್.

ತಾನೂ ದುಡಿದು ತಿನ್ನುತ್ತೇನೆ, ಆದ್ದರಿಂದಲೇ ನಮ್ಮ ಬಗ್ಗೆ ಯಾರು ಏನು ಹೇಳಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಕುಟುಂಬ ರಾಜಕಾರಣ ಯೋಗಿ ಆದಿತ್ಯನಾಥ್ ಅವರಿಗೂ ಇಷ್ಟವಿಲ್ಲ, ನಮಗೂ ಇಷ್ಟವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Yogi Adityanath Rare Photos: ಅಜಯ್ ಸಿಂಗ್ ಬಿಷ್ಟ್ ಯೋಗಿ ಆದಿತ್ಯನಾಥ್ ಆದ ರೋಚಕ ಕಥೆ!

ಮಾರ್ಚ್ 25ಕ್ಕೆ ಯೋಗಿ ಆದಿತ್ಯನಾಥ್ ಪ್ರಮಾಣ ವಚನ

ಸತತ ಎರಡನೇ ಬಾರಿಗೆ ಉತ್ತರ ಪ್ರದೇಶ ಸಿಎಂ ಆಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ್‌, ಶೀಘ್ರವೇ ರಾಜ್ಯಭಾರ ಶುರು ಮಾಡಲಿದ್ದಾರೆ. ಮಾರ್ಚ್ 25ರಂದು ಯೋಗಿ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಖನೌನ ಇಕಾನಾ ಕ್ರೀಡಾಂಗಣದಲ್ಲಿಅದ್ಧೂರಿ ಸಮಾರಂಭ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ.
Published by:Annappa Achari
First published: