ಉತ್ತರ ಪ್ರದೇಶ ಬಜೆಟ್; ಅಯೋಧ್ಯೆಯ' ಶ್ರೀರಾಮ ವಿಮಾನ ನಿಲ್ದಾಣ'ಕ್ಕೆ 101 ಕೋಟಿ ರೂ. ಮೀಸಲು

ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ವಿಮಾನ ನಿಲ್ದಾಣಕ್ಕಾಗಿ ಬಜೆಟ್ನಲ್ಲಿ 101 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

 • Share this:

  ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣದ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ 'ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ವಿಮಾನ ನಿಲ್ದಾಣ' ಎಂಬುದಾಗಿ ಹೆಸರಿಡಲಾಗುತ್ತಿದೆ. ಜೊತೆಗೆ ಈ ವಿಮಾನ ನಿಲ್ದಾಣಕ್ಕಾಗಿ ಬಜೆಟ್ನಲ್ಲಿ 101 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹಣಕಾಸು ಸಚಿವ ಸುರೇಶ್ ಖನ್ನಾ ಸೋಮವಾರ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.


  ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಈ ವಿಮಾನ ನಿಲ್ದಾಣವನ್ನು ಮುಂದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡುವ ಗುರಿಯನ್ನೂ ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಹೀಗೆ ಶ್ರೀರಾಮನ ಹೆಸರನ್ನು ಹೈಜಾಕ್ ಮಾಡೋಕೆ ಉತ್ತರ ಪ್ರದೇಶ ಸರ್ಕಾರ ಸರ್ಕಸ್ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


  ಇನ್ನು, ನೋಯ್ಡಾದಲ್ಲಿರುವ ಜೆವರ್ ವಿಮಾನ ನಿಲ್ದಾಣದ ವಾಯುನೆಲೆಗಳನ್ನೂ ಹೆಚ್ಚಿಸಲು ಉದ್ದೇಶಿಲಾಗಿದೆ. ಹೀಗಾಗಿ ಈ ವಾಯುನೆಲೆಗಳ ಸಂಖ್ಯೆಯನ್ನು 2ರಿಂದ 6ಕ್ಕೆ ಹೆಚ್ಚಿಸಲು 2000 ಕೋಟಿಯನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ.


  ಇದನ್ನೂ ಓದಿ: Petrol Price: 2 ದಿನಗಳ ಬಳಿಕ ಇಂದು ಮತ್ತೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ


  2021-22ರ ಸಾಲಿನ ಈ ಬಜೆಟ್ ಅನ್ನು ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಮಂಡಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಅಲಿಘಢ, ಮೊರಾದಾಬಾದ್, ಮೀರತ್ ನಗರಗಳಿಗೂ ಶೀಘ್ರದಲ್ಲೇ ವಿಮಾನ ಯಾನ ಸೇವೆಯನ್ನು ಕಲ್ಪಿಸಲಾಗುವುದು' ಎಂದು ಹೇಳಿದ್ದಾರೆ.


  ಬಜೆಟ್​ನಲ್ಲಿ ಏನೆಲ್ಲ ಇದೆ?:


  ಈ ಬಜೆಟ್​ನಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ವಿಶೇಷ ಪ್ರದೇಶ ಕಾರ್ಯಕ್ರಮದಡಿಯಲ್ಲಿ ಪೂರ್ವಾಂಚಲದ ವಿಶೇಷ ಯೋಜನೆಗಾಗಿ 300 ಕೋಟಿ ರೂ. ಹಾಗೂ ಬುಂದೇಲ್ಖಂಡದ ವಿಶೇಷ ಯೋಜನೆಗಾಗಿ 210 ಕೋಟಿಯನ್ನು ಮೀಸಲಿಡುವುದಾಗಿ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನು ಮೀರತ್ ಅನ್ನು ಅಲಹಾಬಾದ್ಗೆ ಸಂಪರ್ಕಿಸುವ ಗಂಗಾ ಎಕ್ಸ್ಪ್ರೆಸ್ ವೇ ಯೋಜನೆಯ ಭೂಸ್ವಾಧೀನಕ್ಕಾಗಿ 7,200 ಕೋಟಿ ರೂ. ಹಾಗೂ ನಿರ್ಮಾಣ ಕಾರ್ಯಗಳಿಗೆ 489 ಕೋಟಿ ರೂ. ಮೀಸಲಿಡಲಾಗಿದೆ.


  ಲೋಕೋಪಯೋಗಿ ಇಲಾಖೆಯಡಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ 12,441 ಕೋಟಿ ರೂ. ಮತ್ತು ರಸ್ತೆ ಮತ್ತು ಸೇತುವೆಗಳ ನಿರ್ವಹಣೆಗಾಗಿ 4,135 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲದೆ, ರಾಜ್ಯದ ಗ್ರಾಮಗಳನ್ನು ಲಿಂಕ್ ರೋಡ್​ಗೆ ಸಂಪರ್ಕಿಸಲು 695 ಕೋಟಿ ರೂ. ಮೀಸಲಿಡಲಾಗಿದೆ.


  ಇನ್ನು ವಿಶ್ವ ಬ್ಯಾಂಕ್ ನೆರವಿನಿಂದ ಉತ್ತರ ಪ್ರದೇಶ 'ಕೋರ್ ರೋಡ್ ನೆಟ್ವರ್ಕ್' ಯೋಜನೆಯಡಿ ರಸ್ತೆಗಳ ನಿರ್ಮಾಣಕ್ಕಾಗಿ 440 ಕೋಟಿ ರೂ. ಮತ್ತು ಏಷ್ಯನ್ ಡೆವಲಪ್​ಮೆಂಟ್ ಬ್ಯಾಂಕ್ ನೆರವಿನಿಂದ ಇನ್ನುಳಿದ ರಸ್ತೆಗಳ ನಿರ್ಮಾಣಕ್ಕೆ 208 ಕೋಟಿ ರೂ.  ಒದಗಿಸಲಾಗುತ್ತದೆ. ರೈಲ್ವೆ ಓವರ್ಳ ಬ್ರಿಡ್ಜ್​ಗಳ ನಿರ್ಮಾಣಕ್ಕೆ 1,192 ಕೋಟಿ ರೂ. ಹಣವನ್ನು ಮೀಸಡಲಿಡಲಾಗಿದೆ. ಹೀಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಒಟ್ಟಾರೆ 5.5 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದೆ.

  Published by:Sushma Chakre
  First published: