BJP National Executive: ಯೋಗಿ ಆದಿತ್ಯನಾಥ್​ಗೆ ಮಹತ್ವ ನೀಡಿದ ಬಿಜೆಪಿ ಕಾರ್ಯಕಾರಿಣಿ

Yogi Adityanath gets limelight- ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಪ್ರಾಮುಖ್ಯತೆ ಪಡೆದದ್ದು ವಿಶೇಷ. ಉ.ಪ್ರ. ಸಿಎಂ ಮತ್ತು ಪಿಎಂ ನರೇಂದ್ರ ಮೋದಿ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬಂತಹ ಸುದ್ದಿಗಳಿಗೆ ಈ ಮೂಲಕ ತೆರೆ ಎಳೆಯಲಾಗಿದೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • News18
  • Last Updated :
  • Share this:
ನವದೆಹಲಿ, ನ. 7: ಕೋವಿಡ್ -19 (Covid -19) ನಿರ್ಬಂಧಗಳ ಕಾರಣ ಸುಮಾರು ಎರಡು ವರ್ಷಗಳ ನಂತರ ಭಾನುವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ (BJP national executive) ಭೌತಿಕವಾಗಿ ನಡೆಯಿತು. 2022ರಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab), ಗೋವಾ (Goa), ಉತ್ತರಖಂಡ (Uttarakhand) ಮತ್ತು‌ ಮಣಿಪುರ (Manipur) ವಿಧಾನಸಭಾ ಚುನಾವಣೆಗಳ ದೃಷ್ಟಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಅವರಿಗೆ ವಿಶೇಷ ಮಹತ್ವ ನೀಡಲಾಯಿತು.

2020ರ ಜನವರಿಯಲ್ಲಿ ಅಮಿತ್ ಶಾ (Amith Sha) ಅವರಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕಾರ್ಯಕಾರಿಣಿ ಸಭೆ ಇಂದಿನದ್ದು. ಈ ಹಿನ್ನೆಲೆಯಲ್ಲೂ ಭಾರಿ ಮಹತ್ವ ಪಡೆದುಕೊಂಡಿತ್ತು. ಯೋಗಿ ಆದಿತ್ಯನಾಥ್ ಅವರಿಗೆ ವಿಶೇಷ ಪ್ರಾಮುಖ್ಯತೆ ನೀಡಿರುವುದು ಈಗ ಬಿಜೆಪಿ ವಲಯದಲ್ಲಿ ಭಾರೀ‌ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿಯ ಕಾರ್ಯಕಾರಿಣಿ ಅರ್ಧ ಭೌತಿಕವಾಗಿ ಮತ್ತು ಇನ್ನರ್ಧ ವರ್ಚ್ಯುಯಲ್ ಆಗಿ‌ ನಡೆಯಿತು. ದೆಹಲಿಯಲ್ಲಿ ಕೇಂದ್ರ ಸಚಿವರು, ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ದೆಹಲಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಭಾತಿಕವಾಗಿ ಪಾಲ್ಗೊಳ್ಳಬೇಕು. ಉಳಿದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ರಾಜ್ಯ ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಆಯಾ ರಾಜ್ಯಗಳ ಬಿಜೆಪಿ ಕಚೇರಿಯಲ್ಲಿ ವರ್ಚ್ಯುಯಲ್ (Virtual) ಮೂಲಕ ಭಾಗವಹಿಸಬೇಕು ಎಂದು ಸೂಚನೆ ನೀಡಲಾಗಿತ್ತು.

ಆದರೆ ಯೋಗಿ ಆದಿತ್ಯನಾಥ್ ಅವರನ್ನು ಮಾತ್ರ ಲಕ್ನೋದಿಂದ ದೆಹಲಿಗೆ ಕರೆಸಿಕೊಳ್ಳಲಾಗಿತ್ತು. ಅಲ್ಲದೆ ಈ ಬಾರಿಯ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ‌ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರೇ ರಾಜಕೀಯ ಪ್ರಸ್ತಾಪಗಳನ್ನು ಮಂಡಿಸಿದ್ದಾರೆ. ಈ ಹಿಂದೆ 2017 ಮತ್ತು 2018ರಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಜನಾಥ್ ಸಿಂಗ್ (Rajasthan Singh) ರಾಜಕೀಯ ನಿರ್ಣಯಗಳನ್ನು ಮಂಡಿಸಿದ್ದರು. ಆ ಸ್ಥಾನವನ್ನು ಈ ಬಾರಿ ಯೋಗಿ‌ ಆದಿತ್ಯನಾಥ್ ತುಂಬಿದ್ದಾರೆ.

ಇದಕ್ಕೂ ಮೊದಲು 'ಮೋದಿ ಬಳಿಕ ಯೋಗಿ' ಎಂದೇ ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿತ್ತು. ಇತ್ತೀಚೆಗೆ ಮೋದಿ ಮತ್ತು ಯೋಗಿ ನಡುವೆ ಕೆಲ‌ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತಿತ್ತು. ಉತ್ತರ ಪ್ರದೇಶಕ್ಕೆ ಈವರೆಗೆ ಯೋಗಿ ಆದಿತ್ಯನಾಥ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ.‌ ಈ ಎಲ್ಲದರ ನಡುವೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರಾಮುಖ್ಯತೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Tsunami Awareness: ಸುನಾಮಿ ಬಗ್ಗೆ ಎಲ್ಲರೂ ತಿಳಿದಿರಲೇಬೇಕಾದ ಮಹತ್ವದ ಅಂಶಗಳಿವು, ನಿಮಗೆ ಗೊತ್ತಾ?

ಚುನಾವಣಾ ವಿಷಯಯಕ್ಕೆ ಪ್ರಾಧಾನ್ಯತೆ:

ಮುಂದಿನ‌ ವರ್ಷದ ಆರಂಭದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳ ಪೈಕಿ ಪಂಜಾಬ್ ಹೊರತುಪಡಿಸಿ ಉತ್ತರ ಪ್ರದೇಶ, ಉತ್ತರಾಖಂಡ ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ (BJP) ಈಗ ಅಧಿಕಾರದಲ್ಲಿದೆ. ಪಂಜಾಬಿನಲ್ಲಿ ಹೇಗೂ ಬಿಜೆಪಿಗೆ ನೆಲೆ ಇಲ್ಲ. ಆದುದರಿಂದ ಇರುವ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ಸಂಘಟನೆಯನ್ನು ಹೇಗೆ ಬಲಪಡಿಸಬೇಕು? ಎಂಬುದರ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಸಲಾಗಿದೆ.

ಕೃಷಿ ಮಸೂದೆಗಳ ಬಗ್ಗೆ ಚರ್ಚೆ ಸಾಧ್ಯತೆ:

ಕೇಂದ್ರ ಸರ್ಕಾರ (Union Government) ತಂದಿರುವ ಮೂರು ರೈತ ವಿರೋಧಿ ಕೃಷಿ ಕಾಯಿದೆಗಳ (Agriculture Laws) ಬಗ್ಗೆ ಒಂದು ವರ್ಷದಿಂದ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆದಿದೆ. ಈ‌ ಕಾಯಿದೆಗಳು ಮತ್ತು ರೈತ ಹೋರಾಟಗಳಿಂದಾಗಿ (Farmers Movement) ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಬಗ್ಗೆ ವ್ಯಾಪಕವಾದ ಜನಾಕ್ರೋಶ ಇದೆ. ಆದುದರಿಂದ ಕೇಂದ್ರ ಸರ್ಕಾರ ತಂದಿರುವ ಕಬ್ಬಿಗೆ‌ ಕನಿಷ್ಟ ಬೆಂಬಲ ಬೆಲೆ (Minimum Supporting Prise) ಬೆಲೆ  ನಿಗದಿ, ರೈತರು ಹಣ ಪಡೆಯಲು ಸಹಾಯ ಆಗುವಂತೆ ನೇರ ನಗದು ವರ್ಗಾವಣೆ ಯೋಜನೆ,  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಬಗ್ಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಇದನ್ನೂ ಓದಿ: Communal Peace: ಈ ಇಬ್ಬರು ಬಾಲಕರು ಸೇರಿ ಬಾಂಗ್ಲಾದೇಶದಲ್ಲಿ ಎಂಥಾ ಅದ್ಭುತ ಸಂದೇಶ ಸಾರಿದ್ದಾರೆ ನೋಡಿ!

ಮೋದಿಗೆ ಅಭಿನಂದನೆ ಸಲ್ಲಿಕೆ:

ದೇಶದಲ್ಲಿ 100 ಕೋಟಿ ಕೊರೋನಾ ಡೋಸ್ (Covid vaccine dose) ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಅವರನ್ನು ಅಭಿನಂದಿಸಲಾಯಿತು. ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡುವುದರೊಂದಿಗೆ ಕಾರ್ಯಕಾರಿಣಿ ಕೊನೆಯಾಯಿತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ಸಭೆ 2019ರ ಜನವರಿಯಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ (Ramaleela Ground) ನಡೆದಿತ್ತು.

ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ತಂಡವನ್ನು ಪ್ರಕಟಿಸಲಾಗಿತ್ತು. ಆಗ ಮೇನಕಾ ಗಾಂಧಿ (Maneka Gandhi), ಅವರ ಪುತ್ರ ವರುಣ್ ಗಾಂಧಿ (Varun Gandhi) ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swami) ಅವರನ್ನು ಕೈಬಿಡಲಾಗಿತ್ತು. ರಾಜೀಬ್ ಬ್ಯಾನರ್ಜಿ, ಜ್ಯೋತಿರಾದಿತ್ಯ ಸಿಂಧಿಯಾ, ವೀರೇಂದ್ರ ಕುಮಾರ್, ಅಶ್ವಿನಿ ವೈಷ್ಣವ್ ಸೇರಿದಂತೆ ಕೆಲ ಹೊಸ ಹೆಸರುಗಳನ್ನು ಸೇರಿಸಲಾಗಿತ್ತು.

ವರದಿ: ಧರಣೀಶ ಬೂಕನಕೆರೆ
Published by:Vijayasarthy SN
First published: