ಅಣ್ಣ-ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ. ಅಣ್ಣ-ತಂಗಿಯಾಗಿ (Brother Sister) ಹುಟ್ಟೋದಕ್ಕೂ ಪುಣ್ಯ ಮಾಡಿರಬೇಕು ಅಂತಾರೆ. ಒಡಹುಟ್ಟಿದವರ ನಡುವಿನ ರಕ್ಷಣೆ, ಪ್ರೀತಿ (Love) ಮತ್ತು ಬಾಂಧವ್ಯವನ್ನು ಬಲಪಡಿಸುವ ಮತ್ತು ಭಾವನಾತ್ಮಕ ಸಂಕೇತವಾಗಿ ಆಚರಿಸುವ ಹಬ್ಬವೇ (Festival) ರಕ್ಷಾ ಬಂಧನ. ರಕ್ಷಾ ಬಂಧನದ ದಿನ ಸಹೋದರಿಯರು ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ ಪ್ರೀತಿ ಹಂಚುತ್ತಾರೆ. ಇದೇ ವೇಳೆ ಸಹೋದರರು ತಮ್ಮ ಸಹೋದರರಿಯರ ರಕ್ಷಣೆಯ (Protection) ಜವಾಬ್ದಾರಿಯನ್ನು ಪಡೆಯುತ್ತಾರೆ. ರಕ್ಷಾ ಬಂಧನದ ದಿನ ಉಡುಗೊರೆಗಳನ್ನು (Gift) ನೀಡೋದು ಇತ್ತಿಚೆಗೆ ಬೆಳೆದು ಬಂದಿದೆ. ತಂಗಿ ಸಿಹಿ (Sweet) ತಿನ್ನಿಸಿದರೆ ಅಣ್ಣ ಉಡುಗೊರೆ ನೀಡುತ್ತಾನೆ. ಅದೇ ರೀತಿ ಈಗ ಉತ್ತರ ಪ್ರದೇಶ (Uttar Pradesh) ಸಿಎಂ (Chief Minister) ಯೋಗಿ ಆದಿತ್ಯನಾಥ್ ಗಿಫ್ಟ್ ಕೊಟ್ಟಿದ್ದಾರೆ.
ಆಗಸ್ಟ್ 11ಕ್ಕೆ ರಕ್ಷಾಬಂಧನದ ಸಂಭ್ರಮ. ರಕ್ಷಾಬಂಧನ ಅಣ್ಣ-ತಂಗಿಯರಿಗೆ ವಿಶೇಷ ಹಬ್ಬ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಾಬಂಧನದ ಸಂದರ್ಭದಲ್ಲಿ ಮಹಿಳೆಯರಿಗೆ 48 ಗಂಟೆಗಳ ಕಾಲ ಉಚಿತ ಬಸ್ ಪ್ರಯಾಣ ಘೋಷಿಸಿದ್ದಾರೆ.
ಮಹಿಳೆಯರಿಗೆ ಯೋಗಿ ಉಡುಗೊರೆ
ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸುವ ಉದ್ದೇಶದಿಂದಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದಾರೆ. ಹಾಗಾಗಿ ಮಹಿಳೆಯರು ಆಗಸ್ಟ್ 11ರಂದು ಮತ್ತು ಆಗಸ್ಟ್ 12ರಂದು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಬಹುದಾಗಿದೆ.
2 ದಿನ ಉಚಿತ ಸಂಚಾರಕ್ಕೆ ಅವಕಾಶ
ರಕ್ಷಾ ಬಂಧನದ ಸಲುವಾಗಿ 2 ದಿನ ಉಚಿತವಾಗಿ ರಾಜ್ಯದಲ್ಲಿ ಸಂಚಾರ ಮಾಡಬಹುದು ಅಂತಾ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದು ಹಬ್ಬದ ಸಂದರ್ಭದಲ್ಲಿ ರಾಜ್ಯದ ಮಹಿಳೆಯರಿಗೆ ಸಿಎಂ ಯೋಗಿ ನೀಡಿದ ಉಡುಗೊರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಂದೇ ಬಿಡ್ತು ಅಣ್ಣ-ತಂಗಿಯರ ನೆಚ್ಚಿನ ರಕ್ಷಾ ಬಂಧನ, ಎರಡು ದಿನ ಬಂದಿದೆಯೇ ಈ ಹಬ್ಬ?
ರಕ್ಷಾಬಂಧನದ ಸಂದರ್ಭದಲ್ಲಿ, ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲಾ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಅನುವು ಮಾಡಿಕೊಡಬೇಕು. ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿ ಹೇಳಿದೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಉಡುಗೊರೆಯಂತೆ, ಮಹಿಳೆಯರು ಆಗಸ್ಟ್ 10ರ ಮಧ್ಯರಾತ್ರಿಯಿಂದ ಆಗಸ್ಟ್ 12ರ ಮಧ್ಯರಾತ್ರಿಯವರೆಗೆ 48 ಗಂಟೆಗಳ ಕಾಲ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಮಹಿಳೆಯರಿಗೆ ಭರ್ಜರಿ ಗಿಫ್ಟ್
ಕಳೆದ ವರ್ಷವೂ ಸಿಎಂ ಯೋಗಿ ಸರ್ಕಾರ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಉಚಿತ ಬಸ್ ಪ್ರಯಾಣ ಘೋಷಿಸಿತ್ತು. ಆದರೆ ಕಳೆದ ವರ್ಷ ಕೊರೋನದಿಂದಾಗಿ ಬಸ್ ಪ್ರಯಾಣದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಹಾಗಾಗಿ ಉಚಿತ ಮಾಸ್ಕ್ ವಿತರಿಸಲಾಗಿತ್ತು.
ಇದನ್ನೂ ಓದಿ: ಒಟ್ಟಿಗೆ ಆಕಾಶದಲ್ಲಿ ಹಾರಿದ ತಾಯಿ ಮಗಳು! ಇಲ್ಲಿದೆ ನೋಡಿ ಪೈಲೆಟ್ ಅಮ್ಮ ಮಗಳ ರೋಮಾಂಚಕ ಕಥೆ
ಯೋಗಿ ಸರ್ಕಾರ ಮಿಷನ್ 3.0 ಯೋಜನೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ಘೋಷಿಸಿದೆ. ಇದೀಗ ಉಚಿತ ಬಸ್ ಪ್ರಯಾಣ ಘೋಷಿಸಿದೆ. ಈ ಬಾರಿಯ ವಿಶೇಷತೆ ಅಂದರೆ ಉತ್ತರ ಪ್ರದೇಶದ ಯಾವುದೇ ಸ್ಥಳಕ್ಕೆ ತೆರಲು ಮಹಿಳೆಯರು, ಹೆಣ್ಣು ಮಕ್ಕಳು ಯಾವುದೇ ಹಣ ನೀಡಬೇಕಿಲ್ಲ. ಫ್ರೀಯಾಗಿ ಸಂಚಾರ ಮಾಡಬಹುದು.
ವೆಂಕಯ್ಯ ನಾಯ್ಡು ಕೂಡ, ಮಹಿಳೆಯರ ಘನತೆಯನ್ನು ಎತ್ತಿಹಿಡಿಯಬೇಕು ಮತ್ತು ಅವರಿಗೆ ಎಲ್ಲಾ ಸಮಯದಲ್ಲೂ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದರು.
ಆದರೆ ಈ ಬಾರಿ ಅಣ್ಣತಂಗಿಯರ ಅಚಲ ಪ್ರೀತಿಯ ಹಬ್ಬವಾದ ರಕ್ಷಾ ಬಂಧನದ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದೆ. ಆ.11ರಂದು ಭದ್ರಾ ಮಾಸ ಮುಗಿದ ನಂತರ ರಾತ್ರಿ ಹಬ್ಬವನ್ನು ಆಚರಿಸಬೇಕೋ, ಆಗಸ್ಟ್ 12ರಂದು ಬೆಳಿಗ್ಗೆ ಹಬ್ಬವನ್ನು ಆಚರಿಸಬೇಕೋ ಎಂಬುದು ತಿಳಿಯುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ