ಹಳೆ ಸಂಗಾತಿ ಜೊತೆ ನಿಂತ ಕೇಜ್ರಿವಾಲ್​: ಮೋದಿ ವಿರುದ್ಧ ಟ್ವೀಟರ್​ನಲ್ಲಿ ಕಿಡಿ


Updated:July 12, 2018, 5:10 PM IST
ಹಳೆ ಸಂಗಾತಿ ಜೊತೆ ನಿಂತ ಕೇಜ್ರಿವಾಲ್​: ಮೋದಿ ವಿರುದ್ಧ ಟ್ವೀಟರ್​ನಲ್ಲಿ ಕಿಡಿ

Updated: July 12, 2018, 5:10 PM IST
ನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.12): ಮೋದಿ ಸರ್ಕಾರ ಐಟಿ ಅಸ್ತ್ರವನ್ನು ಬಳಸಿ ನನ್ನ ಕುಟುಂಬವನ್ನು ಟಾರ್ಗೆಟ್​ ಮಾಡುತ್ತಿದೆ ಎಂಬ ಸ್ವರಾಜ್​ ಇಂಡಿಯಾ ಪಕ್ಷದ ಸಂಸ್ಥಾಪಕ ಯೋಗೇಂದ್ರ ಯಾದವ್​ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ದೆಹಲಿ ಸಿಎಂ ಅಪ್​ ಪಕ್ಷದ ಸಂಸ್ಥಾಪಕ ಅರವಿಂದ್​ ಕೇಜ್ರಿವಾಲ್​ ಪ್ರತಿಕ್ರಿಯಿಸಿದ್ದು, ಯೋಗೇಂದ್ರ ಯಾದವ್​ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳೊಂದಿಗೆ ಸ್ವರಾಜ್​ ಇಂಡಿಯಾ ಪಕ್ಷದಿಂದ ಅಭಿಯಾನವನ್ನು ಹಮ್ಮಿಳ್ಳಲಾಗಿದೆ. ಇದೆ ವೇಳೆ ಯಾದವ್​ರ ಸಹೋದರಿಬ್ಬರ ಹರಿಯಾಣದಲ್ಲಿ ನಡೆಸುತ್ತಿರುವ ಆಸ್ಪತ್ರೆಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಹಿನ್ನಲ್ಲೆಯಲ್ಲಿ ಸ್ವರಾಜ್​ ಇಂಡಿಯಾ ಪಕ್ಷ ರೈತರ ಪರ ಹೋರಾಟ ನಡೆಸುತ್ತಿರುವುದಕ್ಕೆ ನನ್ನ ಕುಟುಂಬವನ್ನು ಮೋದಿ ಸರ್ಕಾರ ಟಾರ್ಗೆಟ್​ ಮಾಡಿದೆ. ಈ ದಾಳಿಗಳಿಂದ ನನ್ನನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿಗೆ ಎಚ್ಚರಿಸಿದ್ದರು. ಇದಕ್ಕೆ ಬೆಂಬಲ ಟ್ವೀಟ್​ನಲ್ಲಿ ಬೆಂಬಲ ಸೂಚಿಸಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಮೋದಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಇನ್ನು ರೈತರ ಬೆಳೆಗೆ ಉತ್ತಮ ಬೆಲೆ ಕಲ್ಪಿಸುವಂತೆ 9 ದಿನಗಳ ಪಾದಯಾತ್ರೆಯನ್ನು ನಡೆಸುತ್ತಿರುವುದನ್ನು ನಿಲ್ಲಿಸಲು ಮೋದಿ ಸರ್ಕಾರ ಈ ದಾಳಿ ನಡೆಸಿದೆ ಎಂಬ ಯೋಗೇಂದ್ರ ಯಾದವ್‌ವರ ಹೇಳಿಕೆಗೆ ಆಪ್​ ಸರ್ಕಾರ ಸಂಪೂರ್ಣ ಬೆಂಬಲ ಸೂಚಿಸಿ, ಮೋದಿ ಸರ್ಕಾರದ ನಡೆಯನ್ನು ಖಂಡಿಸಿದೆ.

ಅಲ್ಲದೇ ದೆಹಲಿಯಿಂದ 100ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ತನ್ನ ಸಹೋದಿಯರಿಯರ ಆಸ್ಪತ್ರಗಳಿಗೆ ಬೀಗ ಜಡಿದು ಸಂಬಂಧಿಕರನ್ನು ಬಂಧಿಸಿದ್ದಾರೆ ಎಂದು ಟ್ವೀಟ್​ನಲ್ಲಿ ಯೋಗೇಂದ್ರ ಯಾದವ್​ ತಿಳಿಸಿದ್ದರು. ಈ ವೇಳೆ ದೇಶದ ಕಾಂಗ್ರೆಸ್​ ಸೇರಿದಂತೆ ಹಲವು ಪಕ್ಷದ ಹಿರಿಯ ನಾಯಕರು ಯೋಗೇಂದ್ರ ಯಾದವ್​ ಅವರಿಗೆ ಬೆಂಬಲ ಸೂಚಿಸಿದ್ಧಾರೆ.

2015 ರಲ್ಲಿ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಆಪ್​ ಪಕ್ಷದಿಂದ ಹೊರಬಂದಿದ್ದರು. ಪಕ್ಷದ​ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪದ ಮೇಲೆ ಆಮ್ ಆದ್ಮಿ ಪಕ್ಷ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿತ್ತು. ಬಳಿಕ ಇಬ್ಬರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಕೇಜ್ರಿವಾಲ್​ ಹೇಳಿದ್ದರು.
Loading...

ಯಾದವ್, ಭೂಷಣ್, ಆನಂದ್ ಕುಮಾರ್ ಮತ್ತು ಅಜಿತ್ ಝಾ ಇವರುಗಳಿಗೆ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಇವರುಗಳ ವಿರುದ್ಧದ ಆರೋಪಗಳನ್ನು ಸಾಕ್ಷಿ ಸಮೇತ ಪಟ್ಟಿ ಸುಳ್ಳು ಎಂದು ಪ್ರತಿಕ್ರಿಯಿಸುವಂತೆ ಹೇಳಿದ್ದೇವೆ. ಆದರೆ ಇವರು ಪ್ರತಿಕ್ರಿಯಿಸಿದ ಕಾರಣ ನಾವು ಅವರನ್ನು ಪಕ್ಷದಿಂದ ಕಿತ್ತೊಗೆದಿದ್ದೇವೆ ಎಂದು ಆಪ್​ ಪಕ್ಷ ಸುದ್ಧೀಗೋಷ್ಠಿ ನಡೆಸಿತ್ತು.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...