• Home
  • »
  • News
  • »
  • national-international
  • »
  • MBBS ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕಡ್ಡಾಯ; ಪ್ರತಿ ದಿನ ಒಂದು ತಾಸು Yoga ಮಾಡಲೇಬೇಕು!

MBBS ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕಡ್ಡಾಯ; ಪ್ರತಿ ದಿನ ಒಂದು ತಾಸು Yoga ಮಾಡಲೇಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲು ಚಿಂತನೆ ನಡೆಸಿದೆ. 10 ದಿನಗಳ ಕಾಲ ಯೋಗ ತರಬೇತಿ ಪಡೆಯುವುದು ಕಡ್ಡಾಯ ಅಂತ ಆದೇಶ ಹೊರಡಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 1 ಗಂಟೆಗಳ ಕಾಲ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವಂತೆ ಆದೇಶಿಸಲಾಗಿದೆ.

  • Share this:

‘ವೈದ್ಯರು (Doctors) ಅಂದರೆ ದೇವರ (God) ಸಮಾನ’ ಅಂತಾರೆ ಹಿರಿಯರು. ಅಂತಹ ವೈದ್ಯಕೀಯ ಪದವಿ (Medical Courses) ಪಡೆಯುವ ವಿದ್ಯಾರ್ಥಿಗಳು (Students) ಮಾನಸಿಕವಾಗಿ (Mentally) ಮತ್ತು ದೈಹಿಕವಾಗಿ (Physically)  ಆರೋಗ್ಯವಂತರಾಗಿ (Healthy) ಇರಬೇಕು. ಹೀಗೆ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು (MBBS Students) ಆರೋಗ್ಯವಂತರನ್ನಾಗಿ ಮಾಡಲು ರಾಷ್ಟ್ರೀಯ ವೈದ್ಯಕೀಯ ಮಂಡಳಿ (National Medical Council) ಅಂಥವಾ ಎನ್‌ಎಂಸಿ (NMC) ಮುಂದಾಗಿದೆ. ಇದಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಯೋಗ ತರಬೇತಿ (Yoga Training) ನೀಡಲು ಚಿಂತನೆ ನಡೆಸಿದೆ. 10 ದಿನಗಳ ಕಾಲ ಯೋಗ ತರಬೇತಿ ಪಡೆಯುವುದು ಕಡ್ಡಾಯ ಅಂತ ಆದೇಶ ಹೊರಡಿಸಿದೆ. ಜೂನ್ 12ರಿಂದ 21ರವರೆಗೆ ಪ್ರತಿ ದಿನ ಬೆಳಗ್ಗೆ 1 ಗಂಟೆಗಳ ಕಾಲ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವಂತೆ ಆದೇಶಿಸಲಾಗಿದೆ.


ವೈದ್ಯಕೀಯ ವಿದ್ಯಾರ್ಥಿಗಳಿಗೆ 10 ದಿನಗಳ ಕಾಲ ಯೋಗ ತರಬೇತಿ


ಪ್ರತಿ ವರ್ಷ 10 ದಿನಗಳ ಕಾಲ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲೇಬೇಕು ಅಂತ ಎನ್‌ಎಂಸಿ ಆದೇಶಿಸಿದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21ರಂದು ಆಚರಿಸಲಾಗುತ್ತದೆ. ಅಂದು ಮುಕ್ತಾಯವಾಗುವಂತೆ ತರಬೇತಿ ನೀಡಬೇಕು. ಅಂದರೆ ಪ್ರತಿವರ್ಷ ಜೂನ್​ 12ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 1 ತಾಸುಗಳ ಕಾಲವಾದರೂ ಎಂಬಿಬಿಎಸ್​ನ ಎಲ್ಲ ಬ್ಯಾಚ್​ಗಳ ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯ ಎಂದು ಎನ್​ಎಂಸಿ ಹೇಳಿದೆ.


ಎಲ್ಲಾ ರಾಜ್ಯಗಳ ಮೆಡಿಕಲ್ ಕಾಲೇಜುಗಳಿಗೆ ಸುತ್ತೋಲೆ


ಎಲ್ಲ ರಾಜ್ಯಗಳ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ  ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕಾಲೇಜು ಆಸ್ಪತ್ರೆಗಳು 10 ದಿನಗಳ ಕಾಲ ಯೋಗ ತರಬೇತಿಯನ್ನು ಕಡ್ಡಾಯವಾಗಿ ನೀಡಲೇ ಬೇಕು ಅಂತ ಆದೇಶ ನೀಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ  ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.


ಇದನ್ನೂ ಓದಿ: Hijab ಧರಿಸಿ SSLC ಪರೀಕ್ಷೆ ಬರೆಯಲು ಅವಕಾಶ; ಏಳು ಶಿಕ್ಷಕರ ಅಮಾನತು


ಅಷ್ಟೇ ಅಲ್ಲ, ಎಂಬಿಬಿಎಸ್​ ವಿದ್ಯಾರ್ಥಿಗಳಿಗೆ 2026ರಲ್ಲಿ ಮೊದಲ ರಾಷ್ಟ್ರವ್ಯಾಪಿ ನಿರ್ಗಮನ ಪರೀಕ್ಷೆ ನಡೆಸುವುದಾಗಿಯೂ ಇದೇ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂದರೆ 2022ರ ಫೆಬ್ರವರಿ-ಮಾರ್ಚ್‌ನಲ್ಲಿ ಸೇರಿರುವ 2021-22ರ ಬ್ಯಾಚ್‌ ವಿದ್ಯಾರ್ಥಿಗಳಿಗಾಗಿ 2026ರ ಏಪ್ರಿಲ್‌ನಲ್ಲಿ ಮೊದಲ ಸುತ್ತಿನ ತೇರ್ಗಡೆ ಪರೀಕ್ಷೆ ನಡೆಸಲು ಯೋಜಿಸಲಾಗಿದೆ.


ಯೋಗ  ದಿನ ಆಚರಿಸಲು ಸೂಚನೆ


ದೇಶದ ಎಲ್ಲ ವೈದ್ಯಕೀಯ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸುವಂತೆ ಹೇಳಿರುವ ಎನ್​ಎಂಸಿ ರಾಷ್ಟ್ರವ್ಯಾಪಿಯಾಗಿ ಒಂದು ಸಾಮಾನ್ಯ ಸ್ವರೂಪದ ಯೋಗದ ವಿಧವನ್ನು ನೀಡಲಿದೆ. ಹಾಗಿದ್ದಾಗ್ಯೂ ಕೂಡ ವೈದ್ಯಕೀಯ ಕಾಲೇಜುಗಳು  ಸ್ವಂತವಾಗಿಯೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ.


ಯೋಗ ತರಬೇತಿಗೂ ಮಾರ್ಗಸೂಚಿ


ಯೋಗಾಭ್ಯಾಸಕ್ಕಾಗಿಯೇ ಒಂದು ಘಟಕವನ್ನು ರಚಿಸಿಕೊಳ್ಳಬೇಕು. ನುರಿತರಿಂದ ತರಬೇತಿ ಕೊಡಿಸಬೇಕು ಎಂದೂ ವೈದ್ಯಕೀಯ ಮಂಡಳಿ ತಿಳಿಸಿದೆ. ಅಷ್ಟೇ ಅಲ್ಲ, ವೈದ್ಯಕೀಯ ವೃತ್ತಿ ಸ್ವೀಕಾರ ಮಾಡುವವರು ಸಾಮಾನ್ಯವಾಗಿ ಹಿಪೊಕ್ರೆಟಿಕ್​ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಈ ಬಾರಿ ಎನ್​ಎಂಸಿ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ, ಇನ್ನು ಮುಂದೆ ಚರಕ್​ ಶಪಥ್​ ಸ್ವೀಕಾರ ಮಾಡುವಂತೆ ಸೂಚಿಸಲಾಗಿದೆ. ಹಾಗಂತ ಹಿಪೊಕ್ರೆಟಿಕ್​ ಪ್ರಮಾಣವಚನ ಇನ್ನು ಮುಂದೆ ಇರುವುದಿಲ್ಲ ಎಂದೂ ಹೇಳಿಲ್ಲ.


 ಇದನ್ನೂ ಓದಿ: School Text Book: ಟಿಪ್ಪು ಸುಲ್ತಾನ್ ವೈಭವೀಕರಿಸಿರೋ ಅಂಶಗಳನ್ನ ತೆಗೆದುಹಾಕಬಹುದು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಶಿಫಾರಸು


 ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ಎಂಬಿಬಿಎಸ್‌ ಕೋರ್ಸ್


ಎಂಬಿಬಿಎಸ್‌ ಅನ್ನು ಈಗ ಹಿಂದಿಯಲ್ಲೂ ಬೋಧಿಸಲಾಗುತ್ತದೆ ಎಂದು ಮಧ್ಯ ಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್‌ ಕೈಲಾಶ್‌ ಸಾರಂಗ್‌ ಹೇಳಿದ್ದಾರೆ. ಮುಂದೆ ರಾಜ್ಯಾದ್ಯಂತ ಹಿಂದಿಯಲ್ಲೂ ಎಂಬಿಬಿಎಸ್‌ ಬೋಧಿಸಲಾಗುತ್ತಿದೆ. ಸದ್ಯ ಭೋಪಾಲ್‌ನ ಗಾಂಧಿ ಮೆಡಿಕಲ್‌ ಕಾಲೇಜು ಹಿಂದಿಯಲ್ಲಿ ಎಂಬಿಬಿಸ್‌ ಬೋಧಿಸುವ ಮೊದಲ ಕಾಲೇಜು ಆಗಲಿದೆ ಎಂದು ಅವರು ಹೇಳಿದ್ದಾರೆ.

Published by:Annappa Achari
First published: