ಏಮ್ಸ್​ ಆಸ್ಪತ್ರೆಗೆ ದಾಖಲಾದ ಯೋಗ ಗುರು ಬಾಬಾ ರಾಮದೇವ್​ ಆಪ್ತ ಆಚಾರ್ಯ ಬಾಲ್​ ಕೃಷ್ಣ

ಏಮ್ಸ್​ನ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಬಾಲ್​ ಕೃಷ್ಣ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ ಎಂದು ಆಸ್ಪತ್ರೆಗೆ ಅಧಿಕಾರಿಗಳು ತಿಳಿಸಿದ್ದಾರೆ.

HR Ramesh | news18-kannada
Updated:August 23, 2019, 10:44 PM IST
ಏಮ್ಸ್​ ಆಸ್ಪತ್ರೆಗೆ ದಾಖಲಾದ ಯೋಗ ಗುರು ಬಾಬಾ ರಾಮದೇವ್​ ಆಪ್ತ ಆಚಾರ್ಯ ಬಾಲ್​ ಕೃಷ್ಣ
ಯೋಗ ಗುರು ಬಾಬಾ ರಾಮದೇವ್​ ಆಪ್ತ ಬಾಲ್​ಕೃಷ್ಣ (ಸಂಗ್ರಹ ಚಿತ್ರ)
  • Share this:
ರಿಶಿಕೇಶ್​ (ಉತ್ತರಾಖಂಡ್): ಯೋಗ ಗುರು ಬಾಬಾ ರಾಮದೇವ್ ಅವರ ಆಪ್ತ ಆಚಾರ್ಯ ಬಾಲ್ ಕೃಷ್ಣ ಅವರು ಉತ್ತರಾಖಂಡ್​ನ ರಿಶಿಕೇಶದಲ್ಲಿರುವ ಏಮ್ಸ್​ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದಾರೆ.

ಆಚಾರ್ಯ ಬಾಲ್​ ಕೃಷ್ಣ ಅವರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಮೊದಲು ಹರಿದ್ವಾರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದಾಗ್ಯೂ, ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಏಮ್ಸ್​ಗೆ ಸೇರಿಸುವಂತೆ ವೈದ್ಯರು ಸಲಹೆ ನೀಡಿದ್ದರಿಂದ ಏಮ್ಸ್​ಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನು ಓದಿ: ಮುಂದುವರೆದ ಚೀನಾ-ಅಮೆರಿಕ ವಾಣಿಜ್ಯ ಸಮರ; ಯುಎಸ್​ನ 75 ಬಿ. ಡಾಲರ್ ಮೌಲ್ಯದ ಸರಕಿನ ಮೇಲೆ ಹೆಚ್ಚುವರಿ ಸುಂಕ

ಏಮ್ಸ್​ನ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಬಾಲ್​ ಕೃಷ್ಣ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ ಎಂದು ಆಸ್ಪತ್ರೆಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published: August 23, 2019, 10:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading