• Home
  • »
  • News
  • »
  • national-international
  • »
  • Baba Ramdev: ಸಲ್ಮಾನ್, ಶಾರುಖ್ ಮತ್ತು ಆಮಿರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಯೋಗ ಗುರು ಬಾಬಾ ರಾಮ್‌ದೇವ್

Baba Ramdev: ಸಲ್ಮಾನ್, ಶಾರುಖ್ ಮತ್ತು ಆಮಿರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಯೋಗ ಗುರು ಬಾಬಾ ರಾಮ್‌ದೇವ್

ಯೋಗ ಗುರು ಬಾಬಾ ರಾಮ್‌ದೇವ್

ಯೋಗ ಗುರು ಬಾಬಾ ರಾಮ್‌ದೇವ್

ಬಾಬಾ ರಾಮ್‌ದೇವ್ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿರುವುದು ತಮ್ಮ ವಿವಾದಾತ್ಮಕ ಭಾಷಣದಿಂದ. ಹೌದು.. ಅಷ್ಟಕ್ಕೂ ಇವರು ಯಾರ ಬಗ್ಗೆ ಮಾತಾಡಿದ್ದಾರೆ? ಏನು ಮಾತಾಡಿದ್ದಾರೆ? ಅಂತ ನಿಮಗೆ ಗೊತ್ತಾದರೆ ನೀವು ಒಂದು ಕ್ಷಣ ಶಾಕ್ ಆಗುವುದಂತೂ ನಿಜ.

  • Share this:

ಯೋಗ ಗುರು ಬಾಬಾ ರಾಮ್‌ದೇವ್ (Baba Ramdev) ಅವರು ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರು ತಮ್ಮ ಯೋಗ ಮತ್ತು ಅವರು ತಯಾರಿಸುವ ಪತಂಜಲಿ (Patanjali) ಔಷಧಿಗಳಿಂದ ಸುದ್ದಿಯಲ್ಲಿದ್ದರೆ, ಇನ್ನೊಮ್ಮೆ ಅವರು ತಮ್ಮ ನೇರ ನುಡಿಯಿಂದ ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಬಾಬಾ ರಾಮ್‌ದೇವ್ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿರುವುದು ತಮ್ಮ ವಿವಾದಾತ್ಮಕ ಭಾಷಣದಿಂದ (Controversial speech). ಹೌದು.. ಅಷ್ಟಕ್ಕೂ ಇವರು ಯಾರ ಬಗ್ಗೆ ಮಾತಾಡಿದ್ದಾರೆ? ಏನು ಮಾತಾಡಿದ್ದಾರೆ? ಅಂತ ನಿಮಗೆ ಗೊತ್ತಾದರೆ ನೀವು ಒಂದು ಕ್ಷಣ ಶಾಕ್ ಆಗುವುದಂತೂ ನಿಜ.


ಯೋಗ ಗುರು ಬಾಬಾ ರಾಮ್‌ದೇವ್ ಅವರು ಬಾಲಿವುಡ್ ನಟರಿಗೂ ಮತ್ತು ಡ್ರಗ್ಸ್ ಗೂ ಇರುವ ನಂಟಿನ ಬಗ್ಗೆ ವಿವಾದಾತ್ಮಕವಾದ ಹೇಳಿಕೆಯೊಂದನ್ನು ನೀಡಿದ್ದಾರೆ ಮತ್ತು ಅದರ ವಿರುದ್ಧ ಧ್ವನಿ ಸಹ ಎತ್ತಿದ್ದಾರೆ. ಇತ್ತೀಚಿಗೆ ನೀಡಿದ ವಿವಾದಾತ್ಮಕ ಭಾಷಣದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಮಗನ ಹೆಸರನ್ನು ರಾಮ್‌ದೇವ್ ಅವರು ಉಲ್ಲೇಖಿಸಿದ್ದಾರೆ.


ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಯೋಗ ಗುರು ಹೇಳಿದ್ದೇನು?
ಉತ್ತರ ಪ್ರದೇಶದಲ್ಲಿ ಡ್ರಗ್ಸ್ ವಿರೋಧಿ ಅಭಿಯಾನವನ್ನು ಪ್ರಾರಂಭಿಸುವಾಗ ಬಾಬಾ ರಾಮ್‌ದೇವ್ ಅವರು ಮಾತನಾಡುತ್ತಿದ್ದರು, ಡ್ರಗ್ಸ್ ಪ್ರಸರಣಕ್ಕೆ ಚಲನಚಿತ್ರೋದ್ಯಮ ಮತ್ತು ತಾರೆಯರನ್ನು ಕಟುವಾಗಿ ದೂಷಿಸಿದರು.


ಇದನ್ನೂ ಓದಿ:  Rana Daggubati: ತಂದೆಯಾಗ್ತಿದ್ದಾರೆ ರಾಣಾ! ಗುಡ್​ನ್ಯೂಸ್ ಕೊಟ್ಟ ಬಾಹುಬಲಿ ಸ್ಟಾರ್


"ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್, ಕೆಲವು ತಿಂಗಳುಗಳ ಹಿಂದೆ ಡ್ರಗ್ಸ್ ಪಾರ್ಟಿಯಲ್ಲಿ ಡ್ರಗ್ಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದರು. ಅವರು ಜೈಲಿಗೂ ಸಹ ಹೋದರು. ಅಷ್ಟೇ ಅಲ್ಲದೆ ನಟ ಸಲ್ಮಾನ್ ಖಾನ್ ಸಹ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ನಟ ಆಮಿರ್ ಖಾನ್ ಬಗ್ಗೆ ನನಗೆ ಗೊತ್ತಿಲ್ಲ. ಈ ನಟನ ಬಗ್ಗೆ ದೇವರಿಗೆ ತಿಳಿದಿದೆ" ಎಂದು ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಂತಹ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗ ಗುರು ಹೀಗೆ ಹೇಳಿದರು.


'ಇನ್ನೂ ಎಷ್ಟು ಸಿನಿಮಾ ತಾರೆಯರು ಈ ರೀತಿಯಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಾರೋ ಯಾರಿಗೆ ಗೊತ್ತು ಮತ್ತು ನಟಿಯರಂತೂ ಈ ಕೆಟ್ಟ ಅಭ್ಯಾಸಕ್ಕೆ ಇನ್ನೂ ಹೆಚ್ಚಿಗೆ ಬಲಿಯಾಗುತ್ತಿದ್ದಾರೆ. ಹಿಂದಿ ಚಲನಚಿತ್ರೋದ್ಯಮದಲ್ಲಿ ಡ್ರಗ್ಸ್ ಎಲ್ಲೆಡೆ ಇದೆ. ಬಾಲಿವುಡ್ ನಲ್ಲಿ ಡ್ರಗ್ಸ್, ರಾಜಕೀಯದಲ್ಲಿ ಡ್ರಗ್ಸ್ ಇದೆ" ಎಂದು ಅವರು ಮೂರು ದಿನಗಳ "ಆರ್ಯವೀರ್ ಸಮ್ಮೇಳನ" ದಲ್ಲಿ ಹೇಳಿದರು.


ಮಾದಕ ವ್ಯಸನದ ಬಗ್ಗೆ ಏನ್ ಹೇಳಿದ್ರು ಬಾಬಾ?
"ದೇಶದ ಚುನಾವಣೆ ಸಮಯದಲ್ಲಿ ಜನರಿಗೆ ಮದ್ಯವನ್ನು ವಿತರಿಸಲಾಗುತ್ತದೆ. ಭಾರತವು ಪ್ರತಿಯೊಂದು ಮಾದಕ ವ್ಯಸನದಿಂದ ಮುಕ್ತವಾಗಿರಬೇಕು ಎಂದು ನಾವು ಪ್ರತಿಜ್ಞೆ ಮಾಡಬೇಕು. ಇದಕ್ಕಾಗಿ ನಾವು ಆಂದೋಲನವನ್ನು ಪ್ರಾರಂಭಿಸುತ್ತೇವೆ" ಎಂದು ಬಾಬಾ ರಾಮ್‌ದೇವ್ ಹೇಳಿದರು.


ಬಾಬಾ ರಾಮ್‌ದೇವ್ ಅವರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ಈ ಸೆಲೆಬ್ರಿಟಿಗಳ ಮೇಲೆ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರ ಆರೋಪಗಳಿಗೆ ಅವರು ಹೆಸರಿಸಿದ ಸೆಲೆಬ್ರಿಟಿಗಳು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.


ಡ್ರಗ್ಸ್-ಆನ್-ಕ್ರೂಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಾರುಖ್ ಪುತ್ರ ಆರ್ಯನ್
ಡ್ರಗ್ಸ್-ಆನ್-ಕ್ರೂಸ್ ಪ್ರಕರಣದಲ್ಲಿ ಕಳೆದ ವರ್ಷ ಬಂಧಿಸಲ್ಪಟ್ಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಗಳಿಂದ ಮುಕ್ತಗೊಳಿಸಲಾಗಿತ್ತು. 20 ದಿನಗಳ ಸೆರೆವಾಸದ ನಂತರ ಅವರಿಗೆ ಜಾಮೀನು ಸಹ ನೀಡಲಾಯಿತು.


ಇದನ್ನೂ ಓದಿ:  Shiva Rajkumar: ನನಗಾಗಿ ತಲೆ ಬೋಳಾಗಿಸಿಕೊಂಡಿದ್ದ ಗೀತಾ, ಹೆಂಡತಿ ಬೆಲೆ ಅಂದು ತಿಳಿಯಿತು ಎಂದ ಶಿವಣ್ಣ!


ಸುಶಾಂತ್ ಸಾವಿನ ನಂತರ ಅನೇಕ ತಾರೆಯರನ್ನು ಪ್ರಶ್ನಿಸಿದ್ದರು ಪೊಲೀಸರು..
2020 ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆಘಾತಕಾರಿ ಸಾವಿನ ನಂತರ "ಬಾಲಿವುಡ್ ಮತ್ತು ಡ್ರಗ್ಸ್ ನಂಟು" ಆರೋಪದ ತನಿಖೆಯಲ್ಲಿ ಹಲವಾರು ತಾರೆಯರನ್ನು ಪೊಲೀಸರು ಪ್ರಶ್ನಿಸಿದರು.

Published by:Ashwini Prabhu
First published: