Padma Shri: ಪದ್ಮಶ್ರೀ ಸ್ವೀಕಾರಕ್ಕೂ ಮುನ್ನ ಪ್ರಧಾನಿ, ರಾಷ್ಟ್ರಪತಿಗೆ 125 ವರ್ಷದ ಯೋಗ ಗುರು ನಮಿಸಿದ್ದು ಹೀಗೆ

ಪ್ರಶಸ್ತಿ ಸ್ವೀಕರಿಸುವ ಮೊದಲು, ಯೋಗ ಸಾಧಕರಾದ ಸ್ವಾಮಿ ಶಿವಾನಂದ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಾಷ್ಟ್ರಪತಿಗಳಿಗೆ (President) ಸಾಷ್ಟಾಂಗ ನಮಸ್ಕಾರ ಮಾಡಿದರು. ಈ ಸಮಯದಲ್ಲೂ ಯೋಗ ಸಾಧಕರಿಗೆ ಸಮಾರಂಭದಲ್ಲಿದ್ದ ಅತಿಥಿಗಳು ಚಪ್ಪಾಳೆಯ ಸುರಿಮಳೆಯನ್ನೇ ಸುರಿಯಲಾಯಿತು.

ಯೋಗ ಗುರು

ಯೋಗ ಗುರು

  • Share this:
ರಾಷ್ಟ್ರ ರಾಜಧಾನಿ ನವದೆಹಲಿಯ ರಾಷ್ಟ್ರಪತಿ ಭವನದ ಅರಮನೆಯ ದರ್ಬಾರ್ ಹಾಲ್‌ನಲ್ಲಿ 125 ವರ್ಷದ ಕಾಶಿ ಮೂಲದ ಯೋಗ ಗುರು ಸ್ವಾಮಿ ಶಿವಾನಂದ ಅವರಿಗೆ ಪದ್ಮಶ್ರೀ ಪ್ರಶಸ್ತಿ (Padma Shri) ನೀಡಿ ಗೌರವಿಸಲಾಯಿತು. ಈ ವೇಳೆ ಅವರು ಬರಿಗಾಲಲ್ಲಿ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದು ವಿ‍ಶೇಷವಾಗಿ ಕಂಡಿತು. ಅಲ್ಲದೆ, ಅವರಿಗೆ ಪ್ರಶಸ್ತಿ ನೀಡುವ ವೇಳೆ ಗಣ್ಯರು ಸೇರಿ ದರ್ಬಾರ್‌ ಹಾಲ್‌ನಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇಷ್ಟೇ ಅಲ್ಲ, ಪ್ರಶಸ್ತಿ ಸ್ವೀಕರಿಸುವ ಮೊದಲು, ಯೋಗ ಸಾಧಕರಾದ ಸ್ವಾಮಿ ಶಿವಾನಂದ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಾಷ್ಟ್ರಪತಿಗಳಿಗೆ (President) ಸಾಷ್ಟಾಂಗ ನಮಸ್ಕಾರ ಮಾಡಿದರು. ಈ ಸಮಯದಲ್ಲೂ ಯೋಗ ಸಾಧಕರಿಗೆ ಸಮಾರಂಭದಲ್ಲಿದ್ದ ಅತಿಥಿಗಳು ಚಪ್ಪಾಳೆಯ ಸುರಿಮಳೆಯನ್ನೇ ಸುರಿಯಲಾಯಿತು.

ಇನ್ನು, ಯೋಗ ಗುರುಗಳ ಶುಭಾಶಯವನ್ನು ಹಿಂದಿರುಗಿಸಿದ ಪ್ರಧಾನಿ ಮೋದಿ ತಕ್ಷಣವೇ ಅವರತ್ತ ನಮಸ್ಕರಿಸಿ ನೆಲವನ್ನು ಮುಟ್ಟಿದರು.

ಪ್ರಧಾನಿಗೆ ಸಾಷ್ಷ್ಟಾಂಗ ನಮಸ್ಕಾರ

ಪ್ರಧಾನಿಗೆ ಸಾಷ್ಷ್ಟಾಂಗ ನಮಸ್ಕಾರ ಮಾಡಿದ ಬಳಿಕ ವೇದಿಕೆಯನ್ನು ತಲುಪುವ ಮೊದಲು, ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿದ್ದ ಯೋಗ ಗುರುಗಳು, ಮತ್ತೆ ಎರಡು ಬಾರಿ ನಮಸ್ಕಾರ ಮಾಡಿದರು. ಬಳಿಕ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ತಮ್ಮ ಕುರ್ಚಿಯಿಂದ ಮೇಲೆದ್ದು ಯೋಗ ಸಾಧಕರಿಗೆ ಏಳಲು ಸಹಾಯ ಮಾಡಿದರು. ನಂತರ ಅವರು ಶಿವಾನಂದ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಪ್ರಶಸ್ತಿ ಪ್ರಧಾನ ಮಾಡುವ ವೇಳೆ ರಾಷ್ಟ್ರಪತಿಗಳು 125 ವರ್ಷದ ಗುರುಗಳೊಂದಿಗೆ ಮಾತನಾಡುತ್ತಿರುವುದು ಸಹ ವಿಡಿಯೋದಲ್ಲಿ ಕಂಡುಬಂದಿದೆ.

ಸ್ವಾಮಿ ಶಿವಾನಂದರ ಜೀವನ ಹೇಗಿದೆ ನೋಡಿ..

ಸ್ವಾಮಿ ಶಿವಾನಂದರು ತಮ್ಮ ಜೀವನವನ್ನು ಮಾನವ ಸಮಾಜದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

ಮುಂಜಾನೆ ಯೋಗ, ಎಣ್ಣೆ ರಹಿತ ಬೇಯಿಸಿದ ಆಹಾರ ಮತ್ತು ಮನುಕುಲಕ್ಕೆ ತನ್ನದೇ ಆದ ರೀತಿಯಲ್ಲಿ ನಿಸ್ವಾರ್ಥ ಸೇವೆಯೊಂದಿಗೆ ಶಿಸ್ತುಬದ್ಧ ಮತ್ತು ನಿಯಂತ್ರಿತ ಜೀವನದ ಸರಳ ಮಾರ್ಗಗಳು ಅವರಿಗೆ ರೋಗ-ಮುಕ್ತ ಮತ್ತು ಉದ್ವೇಗ-ಮುಕ್ತ ಸುದೀರ್ಘ ಜೀವನವನ್ನು ನೀಡಿವೆ. ಅವರು ತನ್ನ ಜೀವನವನ್ನು ಬೋಧಿಸುವುದಕ್ಕಿಂತ ಅನುಕರಣೀಯ ಪಾಠವಾಗಿ ಪ್ರದರ್ಶಿಸುತ್ತಾರೆ ಎಂಬುದು ವಿಶೇಷ.

ಇದನ್ನೂ ಓದಿ: ಲಂಡನ್​​ನಿಂದ ಬೈಕ್​​ನಲ್ಲಿ ಹೊರಟು ಭಾರತ ತಲುಪಲಿರುವ Sadhguru.. ಇದರ ಹಿಂದಿನ ಉದ್ದೇಶವೇನು?

ಅವಿಭಜಿತ ಭಾರತದ ಸಿಲ್ಹೆಟ್ ಜಿಲ್ಲೆಯಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) 8 ಆಗಸ್ಟ್ 1896 ರಂದು ಜನಿಸಿದ ಸ್ವಾಮಿ ಶಿವಾನಂದರು ತಮ್ಮ ಆರನೇ ವಯಸ್ಸಿನಲ್ಲಿ ತಮ್ಮ ತಾಯಿ ಮತ್ತು ತಂದೆಯನ್ನು ಕಳೆದುಕೊಂಡರು. ಇನ್ನು, ಕಡು ಬಡತನದ ಕಾರಣ, ಅವರ ಬಾಲ್ಯದ ದಿನಗಳಲ್ಲಿ ಅವರ ತಂದೆ ತಾಯಿಗಳು ಭಿಕ್ಷೆ ಬೇಡಿ ಬಾಯಿಲ್ಡ್‌ ರೈಸ್‌ ನೀರನ್ನು ಅವರಿಗೆ ನೀಡುತ್ತಿದ್ದರಂತೆ.

ತಂದೆ ತಾಯಿ ಮೃತಪಟ್ಟ ಬಳಿಕ ಸ್ವಾಮಿ ಶಿವಾನಂದರನ್ನು ಪಶ್ಚಿಮ ಬಂಗಾಳದ ನಬದ್ವೀಪ್‌ನಲ್ಲಿರುವ ಗುರೂಜಿ ಆಶ್ರಮಕ್ಕೆ ಕರೆತರಲಾಯಿತು. ಗುರು ಓಂಕಾರಾನಂದ ಗೋಸ್ವಾಮಿ ಅವರನ್ನು ಇಲ್ಲಿ ಬೆಳೆಸಿದರು. ಶಾಲಾ ಶಿಕ್ಷಣವಿಲ್ಲದಿದ್ದರೂ ಯೋಗ ಸೇರಿದಂತೆ ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು.

ಧನಾತ್ಮಕ ಚಿಂತಕ

ಅವರು ತಮ್ಮ ಜೀವನದುದ್ದಕ್ಕೂ ಧನಾತ್ಮಕ ಚಿಂತಕರಾಗಿದ್ದರು. 'ವಿಶ್ವವೇ ನನ್ನ ಮನೆ, ಅದರ ಜನರು ನನ್ನ ತಂದೆ-ತಾಯಿಗಳು, ಅವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ನನ್ನ ಧರ್ಮ' ಎನ್ನುವುದು ಅವರ ನಂಬಿಕೆಯಾಗಿದೆ.

ಕಳೆದ 50 ವರ್ಷಗಳಿಂದ, ಸ್ವಾಮಿ ಶಿವಾನಂದರು 400-600 ಕುಷ್ಠರೋಗ ಪೀಡಿತ ಭಿಕ್ಷುಕರನ್ನು ಅವರ ಗುಡಿಸಲುಗಳಲ್ಲಿ ವೈಯಕ್ತಿಕವಾಗಿ ಭೇಟಿ ಮಾಡುವ ಮೂಲಕ ಪುರಿಯಲ್ಲಿ ಘನತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಕುಷ್ಠರೋಗ ಪೀಡಿತರೇ ಇವರಿಗೆ ಜೀವಂತ ದೇವರು..!

ಸ್ವಾಮಿ ಶಿವಾನಂದರು ಕುಷ್ಠರೋಗ ಪೀಡಿತ ಭಿಕ್ಷುಕರನ್ನು ಜೀವಂತ ದೇವರೆಂದು ಗ್ರಹಿಸುತ್ತಾರೆ ಮತ್ತು ಲಭ್ಯವಿರುವ ಅತ್ಯುತ್ತಮ ವಸ್ತುಗಳೊಂದಿಗೆ ಸೇವೆ ಸಲ್ಲಿಸುತ್ತಾರೆ. ಆಹಾರ ಪದಾರ್ಥಗಳು, ಹಣ್ಣುಗಳು, ಬಟ್ಟೆಗಳು, ಚಳಿಗಾಲದ ಉಡುಪುಗಳು, ಹೊದಿಕೆಗಳು, ಸೊಳ್ಳೆ ಪರದೆಗಳು, ಅಡುಗೆ ಪಾತ್ರೆಗಳು ಮುಂತಾದ ವಿವಿಧ ವಸ್ತುಗಳನ್ನು ಅವರ ಅಗತ್ಯಕ್ಕೆ ಅನುಗುಣವಾಗಿ ಜೋಡಿಸುತ್ತಾರೆ" ಎಂದು ರಾಷ್ಟ್ರಪತಿ ಭವನದ ದಾಖಲೆ ಹೇಳುತ್ತದೆ.

ಕುಷ್ಠರೋಗ ಪೀಡಿತ ಜನರಿಗೆ ವಿವಿಧ ವಸ್ತುಗಳನ್ನು ಹಸ್ತಾಂತರಿಸಲು ಅವರು ಇತರರನ್ನು ಸಹ ಪ್ರೋತ್ಸಾಹಿಸುತ್ತಾರೆ. ಇದರಿಂದಾಗಿ ಅವರು ನೀಡುವ ಸಂತೋಷವನ್ನು ಅನುಭವಿಸುತ್ತಾರೆ, ಹಾಗೂ ತಮ್ಮ ಪ್ರದೇಶಗಳಲ್ಲಿ ಅಂತಹ ರೀತಿಯ ಮಾನವೀಯ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತಾರೆ.

125 ವರ್ಷ ವಯಸ್ಸಿನಲ್ಲೂ ಕೋವಿಡ್‌ ಲಸಿಕೆ ಪಡೆದ ಗುರುಗಳು..!

ಸ್ವಾಮಿ ಶಿವಾನಂದರ ಆರೋಗ್ಯಕರ ಮತ್ತು ದೀರ್ಘಾಯುಷ್ಯವು ಪ್ರಪಂಚದಾದ್ಯಂತ ಗಮನ ಸೆಳೆದಿದೆ. 125 ವರ್ಷ ವಯಸ್ಸಿನಲ್ಲಿ ಸ್ವತಃ ಕೋವಿಡ್‌ ಲಸಿಕೆ ಪಡೆದು ದೇಶವಾಸಿಗಳನ್ನು ಪ್ರೇರೇಪಿಸಿದ್ದರು.


ರಾಷ್ಟ್ರದಾದ್ಯಂತ ಕಾರ್ಪೊರೇಟ್ ಆಸ್ಪತ್ರೆಗಳು ಅವರ ಜೀವನಶೈಲಿಯನ್ನು ವೀಕ್ಷಿಸಲು ಅವರ ಪ್ರಮುಖ ಅಂಗಗಳು ಮತ್ತು ವ್ಯವಸ್ಥೆಗಳ ರಚನಾತ್ಮಕ ಹಾಗೂ ಕ್ರಿಯಾತ್ಮಕ ಸ್ಥಿತಿಯನ್ನು ನಿರ್ಣಯಿಸಲು ಪೂರಕವಾದ ಮಾಸ್ಟರ್ ಆರೋಗ್ಯ ತಪಾಸಣೆಗಳನ್ನು ನಡೆಸಿವೆ.

ಇದನ್ನೂ ಓದಿ: Hindu Temple: ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕೆ ಭೂಮಿ ಕೊಟ್ಟ ಮುಸ್ಲಿಂ ಕುಟುಂಬ

ಇನ್ನು, ಅವರ ಸುದೀರ್ಘ ಜೀವನದ ರಹಸ್ಯದ ಬಗ್ಗೆ ವೈದ್ಯರು ಮತ್ತು ನಿರ್ವಹಣಾ ತಂಡಗಳು ಪ್ರಶ್ನೆ ಮಾಡಿದರೆ, ಅವರ ಸಮ್ಮುಖದಲ್ಲಿ, ವಿಭಿನ್ನ ಯೋಗ ಮತ್ತು ವ್ಯಾಯಾಮವನ್ನು ಪ್ರದರ್ಶನ ಮಾಡುತ್ತಾರಂತೆ ಸ್ವಾಮಿ ಶಿವಾನಂದರು.

ವಿಶ್ವ ಯೋಗ ದಿನದಲ್ಲೂ ಭಾಗಿಯಾಗಿದ್ದರು..!

ಸ್ವಾಮಿ ಶಿವಾನಂದ ಅವರಿಗೆ ಬೆಂಗಳೂರಿನಲ್ಲಿ 2019 ರಲ್ಲಿ ಯೋಗ ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಅವರು 2019 ರಲ್ಲಿ ವಿಶ್ವ ಯೋಗ ದಿನವಾದ ಜೂನ್ 21 ರಂದು ಯೋಗ ಪ್ರದರ್ಶನ ಮಾಡುವ ಮೂಲಕ, ಈ ರೀತಿ ಯೋಗ ಪ್ರದರ್ಶಿಸಿದ ದೇಶದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ಈ ಮಧ್ಯೆ, 30 ನವೆಂಬರ್ 2019 ರಂದು ಸಮಾಜಕ್ಕೆ ಅವರ ಕೊಡುಗೆಗಾಗಿ ರೆಸ್ಪೆಕ್ಟ್ ಏಜ್ ಇಂಟರ್‌ನ್ಯಾಶನಲ್‌ನಿಂದ ಬಸುಂಧರ ರತನ್ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಗಿದೆ.
Published by:Divya D
First published: