Yo Yo Honey Singh: ರ್ಯಾಪರ್​​​ ಹನಿಸಿಂಗ್ ವಿಕೃತ ಪತ್ನಿಪೀಡಕನೇ..? ಹಸಿ ಹಸಿ ಸತ್ಯ ಬಿಚ್ಚಿಟ್ಟ ಹೆಂಡತಿ..!

Yo Yo Honey Singh: 2014ರ ರಿಯಾಲಿಟಿ ಶೋ ಒಂದರಲ್ಲಿ ತಾನೂ ಮದುವೆಯಾಗಿರುವುದಾಗಿ ಎಲ್ಲರಿಗೂ ಶಾಲಿನಿ ತಲ್ವಾರ್​​ ಅವರನ್ನು ಹನಿಸಿಂಗ್​ ಪರಿಚಯಿಸಿದ್ದರು. ರ್ಯಾಪರ್​ ಆಗುವ ಮೊದಲೇ ಶಾಲಿನಿ ಅವರನ್ನು ಮದುವೆಯಾಗಿರುವುದಾಗಿ ತಿಳಿಸಿದ್ದರು.

ಹನಿಸಿಂಗ್​ ಹಾಗೂ ಪತ್ನಿ ಶಾಲಿನಿ

ಹನಿಸಿಂಗ್​ ಹಾಗೂ ಪತ್ನಿ ಶಾಲಿನಿ

  • Share this:
ಇತ್ತೀಚೆಗೆ ಹಿಂದಿ ಚಿತ್ರರಂಗ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತೇ ಇದೆ. ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​​ ಕುಂದ್ರಾ ಪೋರ್ನ್​​ ವಿಡಿಯೋಗಳ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್​​ ಆಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ರ್ಯಾಪರ್​​  ಯೋ ಯೋ ಹನಿಸಿಂಗ್​ ವಿರುದ್ಧ ಅವರ ಪತ್ನಿಯೇ ಕೋರ್ಟ್​​ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಂಜಾಬಿ ಗಾಯಕ ಹನಿಸಿಂಗ್​ ಒಬ್ಬ ಪತ್ನಿ ಪೀಡಕ ಎಂದು ಶಾಲಿನಿ ತಲ್ವಾರ್​​ ಆರೋಪಿಸಿ ಕೇಸ್​ ದಾಖಲಿಸಿದ್ದಾರೆ. ಕೌಟುಂಬಿಕ ಹಿಂಸೆಯಿಂದ ನನಗೆ ರಕ್ಷಣೆ ನೀಡಿ ಎಂದು ಹನಿಸಿಂಗ್​ ಪತ್ನಿ ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಹಿಂದಿಯ ಚೆನ್ನೈ ಎಕ್ಸ್​​ಪ್ರೆಸ್​​​​ ಸಿನಿಮಾದ ಲುಂಗಿ ಡ್ಯಾನ್ಸ್​​ ಹಾಡು ಯಾರಿಗೆ ತಾನೇ ಗೊತ್ತಿಲ್ಲ. ತಮ್ಮ ಪಾರ್ಟಿ ಸಾಂಗ್​ಗಳ ಮೂಲಕವೇ ಫೇಮಸ್​ ಆದವರು ಹನಿಸಿಂಗ್​. ಪಂಜಾಬಿ ರ್ಯಾಪರ್​ಗಳ ಪೈಕಿ ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದವರು ಹನಿಸಿಂಗ್​. ಈಗ ಅವರ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ತನ್ನ ಪತಿ ನನ್ನ ಮುಖವನ್ನು ಗೋಡೆಗೆ ಚಚ್ಚಿ ಹಲ್ಲೆ ಮಾಡಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ , ಲೈಂಗಿಕವಾಗಿಯೂ ಹಿಂಸಿಸುತ್ತಿದ್ದಾನೆ ಎಂದು ಶಾಲಿನಿ ದೂರಿದ್ದಾರೆ. ಕೌಟುಂಬಿಕ ಅಪರಾಧ ರಕ್ಷಣೆ ಕಾಯ್ದೆಯಡಿ ನನಗೆ ರಕ್ಷಣೆ ಕೊಡಿ ಎಂದು ದೆಹಲಿ ಕೋರ್ಟ್​​ಗೆ ಮನವಿ ಮಾಡಿದ್ದಾರೆ.

ಶಾಲಿನಿ ತಲ್ವಾರ್​ ಅರ್ಜಿ ಅನ್ವಯ ಆಗಸ್ಟ್​​ 28ರೊಳಗೆ ಉತ್ತರಿಸುವಂತೆ ಕೋರ್ಟ್​ ಗಾಯಕ ಹನಿಸಿಂಗ್​ಗೆ ನೋಟಿಸ್​​ ಜಾರಿ ಮಾಡಿದೆ. ಇನ್ನು ಪತಿ-ಪತ್ನಿ ಇಬ್ಬರ ಹೆಸರಲ್ಲೂ ಜಂಟಿಯಾಗಿರುವ ಆಸ್ತಿಯ ಹಕ್ಕಿನಿಂದ ಹನಿಸಿಂಗ್​ ಅವರನ್ನು ಕೈ ಬಿಡುವಂತೆಯೂ ಶಾಲಿನಿ ಪರ ವಕೀಲರು ಕೋರ್ಟ್​ಗೆ ಮನವಿ ಮಾಡಿದ್ದಾರೆ. ಪತ್ನಿ ದೂರಿನ ಅನ್ವಯ ಹನಿಸಿಂಗ್​ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ.

2014ರ ರಿಯಾಲಿಟಿ ಶೋ ಒಂದರಲ್ಲಿ ತಾನೂ ಮದುವೆಯಾಗಿರುವುದಾಗಿ ಎಲ್ಲರಿಗೂ ಶಾಲಿನಿ ತಲ್ವಾರ್​​ ಅವರನ್ನು ಹನಿಸಿಂಗ್​ ಪರಿಚಯಿಸಿದ್ದರು. ರ್ಯಾಪರ್​ ಆಗುವ ಮೊದಲೇ ಶಾಲಿನಿ ಅವರನ್ನು ಮದುವೆಯಾಗಿರುವುದಾಗಿ ತಿಳಿಸಿದ್ದರು. ಇನ್ನು ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗಲೇ ಹನಿಸಿಂಗ್​ ಖಿನ್ನತೆಗೆ ಒಳಗಾಗಿದ್ದರು. ಒಂದಷ್ಟು ವರ್ಷ ಅಜ್ಞಾತರಾಗಿದ್ದ ಹನಿಸಿಂಗ್​ ಯಾವುದೇ ಹಾಡುಗಳನ್ನು ಬಿಡುಗಡೆ ಮಾಡಿರಲಿಲ್ಲ. ಬಾಲಿವುಡ್​​ನಲ್ಲೂ ಕಾಣಿಸಿಕೊಳ್ಳಲಿಲ್ಲ. ನಂತರ ತಾನು ಡಿಪ್ರೆಷನ್​​ಗೆ ಒಳಗಾಗಿದ್ದೆ. ಈ ವೇಳೆ ನಟ ಶಾರೂಖ್​ ಖಾನ್​​ ಹಾಗೂ ನಟಿ ದೀಪಿಕಾ ಪಡುಕೋಣೆ ನನಗೆ ಸಾಕಷ್ಟು ಸಹಾಯ ಮಾಡಿದ್ದರು ಎಂದು ಹನಿಸಿಂಗ್​ ಹೇಳಿಕೊಂಡಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: