Yo Yo Honey Singh: ಮೌನ ಮುರಿದ ಯೋಯೋ ಹನಿ ಸಿಂಗ್: ಟ್ವಿಟರ್​ನಲ್ಲಿ ಓಪನ್ ಲೆಟರ್ ಬರೆದ ಗಾಯಕ..!

ಮಾಡಿ ಮೂರು ದಿನಗಳ ಬಳಿಕ ಅಂತೂ ಯೋ ಯೋ ಹನಿ ಸಿಂಗ್ ಮೌನ ಮುರಿದಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಓಪನ್ ಲೆಟರ್ ಬರೆಯುವ ಮೂಲಕ ಪತ್ನಿ ಶಾಲಿನಿ ತಲ್ವಾರ್ ಮಾಡಿರುವ ಎಲ್ಲ ಆರೋಪಗಳನ್ನೂ ಅಲ್ಲಗಳೆದಿದ್ದಾರೆ.

ಗಾಯಕ ಹನಿ ಸಿಂಗ್​ ಹಾಗೂ ಅವರ ಪತ್ನಿ

ಗಾಯಕ ಹನಿ ಸಿಂಗ್​ ಹಾಗೂ ಅವರ ಪತ್ನಿ

  • Share this:
ಬಾಲಿವುಡ್‌ನ ಖ್ಯಾತ ಗಾಯಕ  ಹಾಗೂ ಸಂಗೀತ ನಿರ್ದೇಶಕ ಯೋಯೋ ಹನಿ ಸಿಂಗ್  (Yo Yo Honey Singh), ತಮ್ಮ ಹಾಡುಗಳ ಮೂಲಕ ಎಷ್ಟು ಸದ್ದು ಮಾಡಿದ್ದಾರೋ, ವಿವಾದಗಳಿಂದಲೂ ಅಷ್ಟೇ ಸುದ್ದಿ ಮಾಡಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ಯೋ ಯೋ ಹನಿ ಸಿಂಗ್, ಆ ಸಕ್ಸಸ್‌ ಅನ್ನು ಸರಿಯಾಗಿ ಬಳಸಿಕೊಳ್ಳದೇ ಸಾಲು ಸಾಲು ವಿವಾದಗಳಿಗೆ ಈಡಾದರು. ಅತಿಯಾದ ಮದ್ಯಪಾನ, ಮಾದಕ ವಸ್ತುವಿಗೆ ದಾಸನಾಗಿ ಕಣ್ಮರೆಯಾಗಿಬಿಟ್ಟಿದ್ದರು. ಆ ನಂತರವೂ ಮಾದಕ ವ್ಯಸನ ಬಿಟ್ಟು ಕಮ್‌ಬ್ಯಾಕ್ ಮಾಡಲು ಶತ ಪ್ರಯತ್ನ ಮಾಡಿದರೂ, ಅವರಿಗೆ ಮೊದಲಿನ ಅದೃಷ್ಟ ಕೈಕೊಟ್ಟಿತ್ತು. 

ಇಂತಹ ಯೋ ಯೋ, ಸಿನಿಮಾಗಳಿಂದ ಹಾಗೂ ಹಾಡುಗಳಿಂದ ಸುದ್ದಿ ಮಾಡಿ ಹಲವು ದಿನಗಳೇ ಆಗಿವೆ. ಆದರೆ ಈಗ ಕೆಲ ದಿನಗಳಿಂದ ಮತ್ತೊಮ್ಮೆ, ಮತ್ತೊಂದು ವಿವಾದದಲ್ಲಿ ಅವರ ಹೆಸರು ತಳಕು ಹಾಕಿಕೊಂಡಿದೆ. ಹೌದು, ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಯೋ ಯೋ ವಿರುದ್ಧ ದೆಹಲಿಯ ತೀಸ್ ಹಜಾರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಲ್ಲೆ, ನಿಂದನೆ, ಪರ ಸ್ತ್ರೀಯರ ಜೊತೆ ಅಕ್ರಮ ಸಂಬಂಧ, ದುಂದುವೆಚ್ಚ ಅಂತೆಲ್ಲ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. 10 ಕೋಟಿ ರೂಪಾಯಿ ಕಾಂಪನ್ಸೇಷನ್ ಕೇಳಿದ್ದು ಜೊತೆಗೆ ಪ್ರತಿ ತಿಂಗಳು ಐದು ಲಕ್ಷ ರೂಪಾಯಿ ಹಣವನ್ನೂ ನೀಡುವಂತೆ ಕೇಳಿಕೊಂಡಿದ್ದಾರೆ.ಈ ಆರೋಪಗಳನ್ನು ಮಾಡಿ ಮೂರು ದಿನಗಳ ಬಳಿಕ ಅಂತೂ ಯೋ ಯೋ ಹನಿ ಸಿಂಗ್ ಮೌನ ಮುರಿದಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಓಪನ್ ಲೆಟರ್ ಬರೆಯುವ ಮೂಲಕ ಪತ್ನಿ ಶಾಲಿನಿ ತಲ್ವಾರ್ ಮಾಡಿರುವ ಎಲ್ಲ ಆರೋಪಗಳನ್ನೂ ಅಲ್ಲಗಳೆದಿದ್ದಾರೆ. `20 ವರ್ಷಗಳ ನನ್ನ ಸಂಗಾತಿ/ ಪತ್ನಿ ಶಾಲಿನಿ ತಲ್ವಾರ್ ನನ್ನ ಮೇಲೆ ಹಲವು ದ್ವೇಷಪೂರಿತ ಆರೋಪಗಳನ್ನು ಮಾಡಿರುವುದು ನನ್ನಲ್ಲಿ ಅತೀವ ನೋವನ್ನುಂಟು ಮಾಡಿದೆ. ಅವರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಈ ಗಾಯಕ.

ಇದನ್ನೂ ಓದಿ: Priyanka Timmesh: ತುಂಡುಡುಗೆಯಲ್ಲಿ ಪ್ರಿಯಾಂಕಾ ತಿಮ್ಮೇಶ್: ಬಿಗ್ ಬಾಸ್​ ಫಿನಾಲೆಯಲ್ಲಿ ಮಿಂಚಲಿರುವ ಪಿಂಕಿ​..!

ನನ್ನ ಹಾಡುಗಳ ಸಾಹಿತ್ಯದ ಬಗ್ಗೆ, ನನ್ನ ಆರೋಗ್ಯದ ಬಗ್ಗೆ ಹಾಗೂ ಹಲವು ಬಾರಿ ನನ್ನ ಬಗ್ಗೆ ನೆಗಟಿವ್ ಆಗಿ ಸುದ್ದಿಗಳಾಗಿದ್ದರೂ ಆಗ ನಾನು ಸಾರ್ವಜನಿಕ ಹೇಳಿಕೆಗಳನ್ನಾಗಲೀ ಅಥವಾ ಪ್ರೆಸ್ ನೋಟ್‌ ಅನ್ನಾಗಲೀ ಬಿಡುಗಡೆ ಮಾಡಿರಲಿಲ್ಲ. ಆದರೆ ಈ ಬಾರಿಯ ಆರೋಪಗಳನ್ನು ಕೇಳಿಕೊಂಡು ನಾನು ಸುಮ್ಮನೇ ಕೂರಲು ಸಾಧ್ಯವಿಲ್ಲ. ಯಾಕೆಂದರೆ ವಯಸ್ಸಾದ ನನ್ನ ತಂದೆ, ತಾಯಿ ಹಾಗೂ ತಂಗಿಯ ಬಗ್ಗೆ ಇಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ. ಹೋರಾಟದ ಹಾಗೂ ಕಷ್ಟದ ದಿನಗಳಲ್ಲಿ ನನ್ನ ಬೆನ್ನೆಲುಬಾಗಿ ನಿಂತು, ನನ್ನ ಪ್ರಪಂಚವೇ ಆಗಿರುವ ಅವರನ್ನು ತೇಜೋವಧೆ ಮಾಡಲು ಯತ್ನಿಸಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಯೋ ಯೋ ಹನಿ ಸಿಂಗ್.

ಇದನ್ನೂ ಓದಿ: Raj Kundra: ತಕ್ಷಣವೇ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಿದ್ದ ರಾಜ್​ ಕುಂದ್ರಾ: ಜಾಮೀನು ಅರ್ಜಿ ತಿರಸ್ಕರಿದ ನ್ಯಾಯಾಲಯ

`ನಾನು ಬಾಲಿವುಡ್ ಹಾಗೂ ಸಂಗೀತ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ತೊಡಗಿಸಿಕೊಂಡಿದ್ದು, ದೇಶದ ವಿವಿಧ ಭಾಗಗಳ ಹೆಸರಾಂತ ಕಲಾವಿದರು ಹಾಗೂ ಸಂಗೀತಗಾರರ ಜೊತೆ ಕೆಲಸ ಮಾಡಿದ್ದೇನೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನನ್ನ ತಂಡದ ಪ್ರಮುಖ ಸದಸ್ಯರಾಗಿ ನನ್ನ ಪತ್ನಿ ಶಾಲಿನಿ ಕೂಡ ನನ್ನ ಜೊತೆ ಶೂಟ್‌ಗಳಿಗೆ, ಸಂಗೀತ ಕಾರ್ಯಕ್ರಮಗಳಿಗೆ ಹಾಗೂ ಮೀಟಿಂಗ್‌ಗಳಿಗೂ ಬಂದಿದ್ದಾರೆ. ನನ್ನ ಹಾಗೂ ಶಾಲಿನಿ ಸಂಬAಧದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಕೆ ಮಾಡಿರುವ ಎಲ್ಲ ಆರೋಪಗಳನ್ನೂ ನಾನು ಅಲ್ಲಗಳೆಯುತ್ತೇನೆ. ಆದರೆ ವಿಷಯ ಸದ್ಯ ಕೋರ್ಟ್ನಲ್ಲಿರುವ ಕಾರಣ ಅದರ ಬಗ್ಗೆ ಹೆಚ್ಚೇನೂ ಮಾತನಾಡಲು ನನಗಿಷ್ಟವಿಲ್ಲ. ನನಗೆ ನಮ್ಮ ಕಾನೂನು ವ್ಯವಸ್ಥೆಯ ಬಗ್ಗೆ ನಂಬಿಕೆಯಿದೆ. ಸತ್ಯ ಏನು ಎಂಬುದು ಎಲ್ಲರಿಗೂ ಕೆಲವೇ ದಿನಗಳಲ್ಲಿ ತಿಳಿಯಲಿದೆ. ಕೋರ್ಟ್ನಲ್ಲಿಯೇ ನಾನೂ ಎಲ್ಲ ಆರೋಪಗಳಿಗೂ ಉತ್ತರಿಸಲಿದ್ದೇನೆ' ಎಂದೂ ಕಾನೂನು ಹೋರಾಟ ಮುಂದುವರಿಸುವುದಾಗಿಯೂ ಸ್ಪಷ್ಟನೆ ನೀಡಿದ್ದಾರೆ.
Published by:Anitha E
First published: