• Home
  • »
  • News
  • »
  • national-international
  • »
  • Terrorist Attack: ಮದುವೆಯಾಗಿ ಮೂರೇ ತಿಂಗಳು, ಆಲ್ಬಂ ಕೂಡಾ ಸಿಕ್ಕಿರಲಿಲ್ಲ! ಬ್ಯಾಂಕ್ ಮ್ಯಾನೇಜರ್ ದಾರುಣ ಸಾವು

Terrorist Attack: ಮದುವೆಯಾಗಿ ಮೂರೇ ತಿಂಗಳು, ಆಲ್ಬಂ ಕೂಡಾ ಸಿಕ್ಕಿರಲಿಲ್ಲ! ಬ್ಯಾಂಕ್ ಮ್ಯಾನೇಜರ್ ದಾರುಣ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯ್ ಬರೀ ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯ ಆಲ್ಬಂ ಕೂಡಾ ಸಿಕ್ಕಿರಲಿಲ್ಲ. ಮಗನ ನೆನಪಿಸಿಕೊಂಡು ಕಣ್ಣೀರಾಗುತ್ತಾರೆ ವಿಜಯ್ ತಂದೆ

  • Share this:

ಜೈಪುರ: ಜಮ್ಮುವಿನಲ್ಲಿ ಬ್ಯಾಂಕ್ ಮ್ಯಾನೇಜರ್ (Bank Manager) ಹತ್ಯೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಘಟನೆಯ ವಿಡಿಯೋ ಹರಿದಾಡುತ್ತಿದ್ದು ತೀವ್ರ ಖಂಡನೆ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ಗುರುವಾರ ಭಯೋತ್ಪಾದಕರ ಗುಂಡಿಗೆ ಬಲಿಯಾದ 26 ವರ್ಷದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಬೇನಿವಾಲ್ ಅವರು ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದಾರೆ (Marriage) ಎಂದು ಅವರ ತಂದೆ ತಿಳಿಸಿದ್ದಾರೆ. ರಾಜಸ್ಥಾನದ ಹನುಮಾನ್‌ಗಢ್ ಜಿಲ್ಲೆಯ ಭಗವಾನ್ ಗ್ರಾಮದವರಾದ ವಿಜಯ್ ಕುಮಾರ್, ಕುಲ್ಗಾಮ್‌ನಲ್ಲಿರುವ ಎಲ್ಲಕ್ವಾಯ್ ದೇಹತಿ ಬ್ಯಾಂಕ್‌ನಲ್ಲಿ (Bank) ಕೆಲಸ ಮಾಡುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರ ಮೇಲೆ ನಡೆದ ದಾಳಿಗಳ ನಡುವೆಯೇ ಅವರ ಹತ್ಯೆಯಾಗಿದೆ. ಇದು ಒಂದು ವಾರದೊಳಗೆ ಎರಡನೇ ನಾಗರಿಕ ದಾಳಿಯಾಗಿದೆ. ಸೋಮವಾರ ಮುಂಜಾನೆ, ಕುಲ್ಗಾಮ್‌ನಲ್ಲಿ ಭಯೋತ್ಪಾದಕರು ಶಾಲಾ ಶಿಕ್ಷಕರನ್ನು (Teachers) ಗುಂಡಿಕ್ಕಿ ಕೊಂದಿದ್ದರು.


ವಿಜಯ್ ಕುಮಾರ್ ಅವರ ತಂದೆ ಓಂ ಪ್ರಕಾಶ್ ಬೇನಿವಾಲ್ ಅವರು ಹನುಮಾನ್‌ಗಢದ ನೋಹರ್ ತಹಸಿಲ್‌ನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದು, “ನಾನು ನಿನ್ನೆ ರಾತ್ರಿ ಅವರೊಂದಿಗೆ ಮಾತನಾಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ನಾನು ಊಟ ಮಾಡುತ್ತಿದ್ದಾಗ ಯಾರೋ ಒಬ್ಬರು ನನಗೆ ಕರೆ ಮಾಡಿ ವಿಜಯ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಟಿವಿಯಲ್ಲಿ ಸುದ್ದಿ ಹರಿಯುತ್ತಿದೆ ಎಂದು ಹೇಳಿದರು. ನಾನು ತಕ್ಷಣ ಟಿವಿ ಆನ್ ಮಾಡಿ ಅದೇ ನೋಡಿದೆ.


ಮದುವೆಯಾಗಿ 10 ದಿನ ರಜೆಯಲ್ಲಿದ್ದರು


“ಅವರು ಫೆಬ್ರವರಿ 10 ರಂದು ವಿವಾಹವಾದರು ಮತ್ತು 10 ದಿನಗಳ ನಂತರ ಕೆಲಸಕ್ಕೆ ಹೊರಟರು. ಇತ್ತೀಚೆಗಷ್ಟೇ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ಅವರ ಪತ್ನಿ ನಮ್ಮನ್ನು ಅವರೊಂದಿಗೆ ಹೋಗುವಂತೆ ಕೇಳಿದ್ದರು. ಆದರೆ ನಾನು ಮುಂದಿನ ಬಾರಿ ಬರುತ್ತೇವೆ ಎಂದು ಹೇಳಿದೆ, ಎಂದು ಅವರು ಹೇಳಿದರು.


ಮದುವೆ ಆಲ್ಬಂ ಕೂಡಾ ಸಿಕ್ಕಿಲ್ಲ ಎಂದು ಕಣ್ಣೀರಾದ ತಂದೆ


"ಅಭಿ ತೋ ಶಾದಿ ಕಾ ಆಲ್ಬಮ್ ಭೀ ತಯಾರ್ ನಹೀ ಹುವಾ ಥಾ (ಮದುವೆ ಫೋಟೋ ಆಲ್ಬಮ್ ಕೂಡ ಇನ್ನೂ ಸಿದ್ಧವಾಗಿಲ್ಲ)" ಎಂದು ನೋವಿನಿಂದ ಹೇಳಿದ್ದಾರೆ. ವಿಜಯ್ ಕುಮಾರ್ ಮತ್ತು ಅವರ ಪತ್ನಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆ (REET) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಜುಲೈ 15 ರೊಳಗೆ ಹಿಂತಿರುಗಲು ಯೋಜಿಸುತ್ತಿದ್ದರು ಎಂದು ಬೇನಿವಾಲ್ ಹೇಳಿದರು.


ಇದನ್ನೂ ಓದಿ: Sidhu Moose Wala: ಸಿಧು ಸಾವಿನ ನಂತರ 400 ವಿಐಪಿಗಳಿಗೆ ಮತ್ತೆ ಭದ್ರತೆ!


“ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಹೊರಗಿನವರನ್ನು ಗುರಿಯಾಗಿಸಿಕೊಂಡಿದ್ದಾರೆ. ಇಲ್ಲಿಂದ ಬಂದ ಹಲವರು ಬ್ಯಾಂಕ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ಏನಾದರೂ ಯೋಜನೆ ರೂಪಿಸಬೇಕು ಇಲ್ಲದಿದ್ದರೆ ಇಂತಹ ಘಟನೆಗಳು ನಡೆಯುತ್ತವೆ ಎಂದರು.


ಸಂತಾಪ ವ್ಯಕ್ತಪಡಿಸಿದ ಸಿಎಂ 


ಘಟನೆಯನ್ನು ಖಂಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಹನುಮಾನ್‌ಗಢ ನಿವಾಸಿ ವಿಜಯ್ ಕುಮಾರ್ ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಧೈರ್ಯ ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: Ancient City: ಇರಾಕ್​​ನ ಅತಿ ದೊಡ್ಡ ಜಲಾಶಯ ಬತ್ತಿದಾಗ 3,400 ವರ್ಷಗಳ ಹಳೆಯ ನಗರ ಪತ್ತೆ; ಫೋಟೋಗಳು ಇಲ್ಲಿವೆ


''ಕಾಶ್ಮೀರದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಎನ್‌ಡಿಎ ಸರಕಾರ ವಿಫಲವಾಗಿದೆ. ಕಾಶ್ಮೀರದಲ್ಲಿ ನಾಗರಿಕರ ಸುರಕ್ಷತೆಯನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಭಯೋತ್ಪಾದಕರು ನಮ್ಮ ನಾಗರಿಕರನ್ನು ಕೊಲ್ಲುವುದನ್ನು ಸಹಿಸುವುದಿಲ್ಲ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.

Published by:Divya D
First published: