• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮೈತ್ರಿಕೂಟದಿಂದ ಹೊರ ಬಂದಿರುವುದು ನನ್ನದೇ ನಿರ್ಧಾರ; ಅಮಿತ್​ ಶಾ ಹೇಳಿಕೆ ಬಗ್ಗೆ ಚಿರಾಗ್​ ಪಾಸ್ವಾನ್​ ಸ್ಪಷ್ಟನೆ

ಮೈತ್ರಿಕೂಟದಿಂದ ಹೊರ ಬಂದಿರುವುದು ನನ್ನದೇ ನಿರ್ಧಾರ; ಅಮಿತ್​ ಶಾ ಹೇಳಿಕೆ ಬಗ್ಗೆ ಚಿರಾಗ್​ ಪಾಸ್ವಾನ್​ ಸ್ಪಷ್ಟನೆ

ಚಿರಾಗ್ ಪಾಸ್ವಾನ್

ಚಿರಾಗ್ ಪಾಸ್ವಾನ್

ನಾವು ಮೈತ್ರಿಕೂಟವನ್ನು ಒಡೆಯುವ ಕೆಲಸ ಮಾಡಲಿಲ್ಲ. ಅವರೇ ಅಧಿಕೃತವಾಗಿ ಮೈತ್ರಿ ಮುರಿದುಕೊಂಡರು ಎಂದು ಅಮಿತ್ ಶಾ ಹೇಳಿದ್ದರು. ಇದನ್ನು ಚಿರಾಗ್​ ಕೂಡ ಒಪ್ಪಿಕೊಂಡಿದ್ದಾರೆ.

  • Share this:

    ನವದೆಹಲಿ (ಅಕ್ಟೋಬರ್ 18): ಕೇಂದ್ರದ ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಎಲ್​ಜೆಪಿ ಪಕ್ಷ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಈ ಬಗ್ಗೆ ನ್ಯೂಸ್18 ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅಮಿತ್ ಶಾ, ತಾವು ಎಲ್​ಜೆಪಿ ಜೊತೆ ಹಲವು ಬಾರಿ ಮಾತುಕತೆ ನಡೆಸಿ ನ್ಯಾಯಯುತವಾಗಿ ಸೀಟು ಹಂಚಿಕೆ ಮಾಡುವ ಭರವಸೆ ನೀಡಿದ್ದೆವು. ಆದರೂ ಎಲ್​ಜೆಪಿ ಸಹಮತಕ್ಕೆ ಬರದೆ ಏಕಾಂಗಿ ಹೋರಾಟದ ನಿರ್ಧಾರ ಮಾಡಿತು ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಲ್​ಜೆಪಿ ಮುಖ್ಯಸ್ಥ ಚಿರಾಗ್​ ಪಾಸ್ವಾನ್​ ಇದನ್ನು ಒಪ್ಪಿಕೊಂಡಿದ್ದಾರೆ.


    ಸಂದರ್ಶನದ ಕುರಿತು ಮಾತನಾಡಿರುವ ಚಿರಾಗ್​, ಅಮಿತ್​ ಶಾ ಅವರು ಹೇಳಿದ್ದು ಸತ್ಯ. ನಾನು ಅವರ ಜೊತೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಆದರೆ, ಅವರು ನನ್ನ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ ಎಂದಿದ್ದಾರೆ.


    “ಈ ಬಾರಿ ನಮ್ಮ ಮೈತ್ರಿಕೂಟಕ್ಕೆ ಹೊಸ ಸೇರ್ಪಡೆಯಾಗಿತ್ತು. ಇದರಿಂದಾಗಿ ಪ್ರತಿಯೊಂದು ಪಕ್ಷಕ್ಕೂ ಸೀಟುಗಳ ಸಂಖ್ಯೆ ಕಡಿಮೆ ಆಯಿತು. ಜೆಡಿಯು ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಪಾಲಿನ ಕೆಲ ಸೀಟುಗಳನ್ನ ಬಿಟ್ಟುಕೊಟ್ಟವು. ಆದರೆ, ಎಲ್​ಜೆಪಿಗೆ ಇದು ಸಮಾಧಾನ ತರಲಿಲ್ಲ. ಏಕಪಕ್ಷೀಯವಾಗಿ ಹೇಳಿಕೆಗಳು ಬರತೊಡಗಿದವು. ಇದು ಪಕ್ಷದ ಕಾರ್ಯಕರ್ತರ ಮೇಲೆ ಪರಿಣಾಮ ಬೀರತೊಡಗಿದವು. ಹೀಗಾಗಿ, ಒಂದು ಪಕ್ಷದ ಪರವಾಗಿ ನಿಲ್ಲಲು ಕಷ್ಟವಾಯಿತು. ಆದಾಗ್ಯೂ ನಾವು ಮೈತ್ರಿಕೂಟವನ್ನು ಒಡೆಯುವ ಕೆಲಸ ಮಾಡಲಿಲ್ಲ. ಅವರೇ ಅಧಿಕೃತವಾಗಿ ಮೈತ್ರಿ ಮುರಿದುಕೊಂಡರು” ಎಂದು ಅಮಿತ್ ಶಾ ಹೇಳಿದ್ದರು. ಇದನ್ನು ಚಿರಾಗ್​ ಕೂಡ ಒಪ್ಪಿಕೊಂಡಿದ್ದಾರೆ.


    ಎನ್​ಡಿಎ ಮೈತ್ರಿಯಿಂದ ಹೊರ ಬಂದಿರುವ ಚಿರಾಗ್​ ಈಗ ಮೋದಿ ಹೆಸರು ಹೇಳಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಅವರು, ಮೋದಿ ಫೋಟೊ ಹಿಡಿದು ನಾನು ಚುನಾವಣಾ ಪ್ರಚಾರ ಎದುರಿಸಬೇಕಿಲ್ಲ. ನರೇಂದ್ರ ಮೋದಿಯವರು ನನ್ನ ಎದೆಯಲ್ಲೇ ಇದ್ದಾರೆ ಎಂದು ಹೇಳಿದ್ದರು.

    Published by:Rajesh Duggumane
    First published: