SEBI ಜೊತೆಗೆ ಸೆಟಲ್ಮೆಂಟ್ ಮಾಡಿಕೊಳ್ಳೋಕೆ 1.65 ಕೋಟಿ ರೂ. ನೀಡಿದ Yes Bank, ಇದ್ರಿಂದ ಗ್ರಾಹಕರಿಗೆ ಏನು ಲಾಭ?

ತನಿಖೆ ವೇಳೆ, ಬ್ಯಾಂಕ್​ ಮತ್ತು ಆರು ವ್ಯಕ್ತಿಗಳು ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಸೆಬಿ ಗಮನಕ್ಕೆ ಬಂದಿತು. ಈ ನಿಟ್ಟಿನಲ್ಲಿ ಯೆಸ್ ಬ್ಯಾಂಕ್ ಹಾಗೂ 6 ವ್ಯಕ್ತಿಗಳಿಗೆ ಸೆಬಿ ಅಕ್ಟೋಬರ್ 2020ರಲ್ಲಿ ಶೋಕಾಸ್ ನೋಟಿಸ್ ನೀಡಿತ್ತು.

ಸೆಬಿ

ಸೆಬಿ

  • Share this:
    ಮುಂಬೈ(ಸೆ.15): ಖಾಸಗಿ ವಲಯದ ಸಾಲದಾತ ಯೆಸ್​ ಬ್ಯಾಂಕ್(Yes Bank) ಹಾಗೂ 6 ಮಂದಿ 1.65 ಕೋಟಿ ರೂಪಾಯಿಗಳನ್ನು ಪಾವತಿ ಮಾಡುವ ಮೂಲಕ ಸೆಕ್ಯುರಿಟೀಸ್ ಮತ್ತು ಎಕ್ಸ್​​ಚೇಂಜ್ ಬೋರ್ಡ್​ ಆಫ್ ಇಂಡಿಯಾ(ಸೆಬಿ-Sebi) (Securities and Exchange board of India) ದೊಂದಿಗೆ ಇದ್ದ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

    ಯೆಸ್ ಬ್ಯಾಂಕ್ ಜೊತೆಗೆ ಆಶಿಶ್ ಅಗರವಾಲ್, ನಿರಂಜನ್ ಬನೋದ್ಕರ್, ಸಂಜಯ್ ನಂಬಿಯಾರ್, ದೇವಮಲ್ಯ ದೇಯ್, ರಜತ್ ಮೊಂಗಾ ಮತ್ತು ಶಿವಾನಂದ ಶೆಟ್ಟಿಗಾರ್ ಆಸ್ತಿಯ ಗುಣಮಟ್ಟದ ಬಹಿರಂಗಪಡಿಸುವಿಕೆ ಪ್ರಕರಣವನ್ನು ಇತ್ಯರ್ಥಪಡಿಸಿದವರು.

    ಕಳೆದ ವರ್ಷ ಅಂದರೆ 2020 ರ ಅಕ್ಟೋಬರ್​ನಲ್ಲಿ ಸೆಬಿ ಒಂದು ಕಾರಣವನ್ನು ನೀಡಿತ್ತು. ಖಾಸಗಿ ಸಾಲದಾತರು​​ ಫೆಬ್ರವರಿ 13, 2029ರಂದು ಆಯ್ದ ಆಸ್ತಿಯ ಗುಣಮಟ್ಟವನ್ನು ಬಹಿರಂಗಪಡಿಸಿವೆ ಎಂದು ಎಂದು ಆರೋಪಿಸಿತ್ತು. ಆರ್​​​​ಬಿಐ ನಿಯಮಗಳಿಂದ ‘NIL‘ ವ್ಯತ್ಯಾಸವನ್ನು ಅದರ ಆಸ್ತಿ ವರ್ಗೀಕರಣ ಮತ್ತು ನಿಬಂಧನೆಗಳಲ್ಲಿ ಎತ್ತಿ ತೋರಿಸಿತ್ತು. ಇದು ಬೆಲೆ ಚಲನೆಯ ಮೇಲೆ ಧನಾತ್ಮಕ ಪರಿಣಾಮ ಬೀರಿತ್ತು.

    ಇದನ್ನೂ ಓದಿ:Gold Price Today: ಮತ್ತೆ ಇಳಿಕೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ರೇಟ್​ ಹೀಗಿದೆ

    ಮಂಗಳವಾರದ ಸೆಟಲ್​ಮೆಂಟ್ ಆದೇಶದಲ್ಲಿ, ಅಕ್ಟೋಬರ್ 26, 2020ರ ಶೋಕಾಸ್​ ನೋಟೀಸ್ ಅನುಸಾರ ಅರ್ಜಿದಾರರ ವಿರುದ್ದ ಆರಂಭಿಸಲಾದ ತ್ವರಿತ ತೀರ್ಪು ಪ್ರಕ್ರಿಯೆಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಸೆಬಿ ಹೇಳಿದೆ.

    ಸೆಬಿ ಕಾಯ್ದೆ ಮತ್ತು ವಂಚನೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳ ನಿಷೇಧ-PFUTP ನಿಬಂಧನೆಗಳ ಉಲ್ಲಂಘನೆಯನ್ನು ಪತ್ತೆ ಮಾಡಲು ಫೆಬ್ರವರಿ 2019ರಲ್ಲಿ ಯೆಸ್​ ಬ್ಯಾಂಕ್​​ನ ವ್ಯವಹಾರಗಳಲ್ಲಿ ತನಿಖೆ ನಡೆಸಲಾಯಿತು.

    ತನಿಖೆ ವೇಳೆ, ಬ್ಯಾಂಕ್​ ಮತ್ತು ಆರು ವ್ಯಕ್ತಿಗಳು ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಸೆಬಿ ಗಮನಕ್ಕೆ ಬಂದಿತು. ಈ ನಿಟ್ಟಿನಲ್ಲಿ ಯೆಸ್ ಬ್ಯಾಂಕ್ ಹಾಗೂ 6 ವ್ಯಕ್ತಿಗಳಿಗೆ ಸೆಬಿ ಅಕ್ಟೋಬರ್ 2020ರಲ್ಲಿ ಶೋಕಾಸ್ ನೋಟಿಸ್ ನೀಡಿತ್ತು.

    ನೀಡಲಾದ ಶೋಕಾಸ್​ ನೋಟಿಸ್​ನಲ್ಲಿ, ಯೆಸ್​ ಬ್ಯಾಂಕ್​ ಫೆಬ್ರವರಿ 13, 2019ರಂದು ಖಾಸಗಿ ಸಾಲದಾತರು​​ ಆಯ್ದ ಆಸ್ತಿಯ ಗುಣಮಟ್ಟವನ್ನು ಬಹಿರಂಗಪಡಿಸಿವೆ ಎಂದು ಎಂದು ಆರೋಪಿಸಿತ್ತು. ಆರ್​​​​ಬಿಐ ನಿಯಮಗಳಿಂದ ‘NIL‘ ವ್ಯತ್ಯಾಸವನ್ನು ಅದರ ಆಸ್ತಿ ವರ್ಗೀಕರಣ ಮತ್ತು ನಿಬಂಧನೆಗಳಲ್ಲಿ ಎತ್ತಿ ತೋರಿಸಿತ್ತು. ಇದು ಬೆಲೆ ಚಲನೆಯ ಮೇಲೆ ಧನಾತ್ಮಕ ಪರಿಣಾಮ ಬೀರಿತ್ತು.

    ಇದನ್ನೂ ಓದಿ:Explained: ಕ್ವಾಡ್ ಹೇಗೆ ರೂಪುಗೊಂಡಿತು ಮತ್ತು ಅದರ ಉದ್ದೇಶಗಳೇನು..? ಇದು ಚೀನಾ ವಿರೋಧಿಯೇ?

    ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Latha CG
    First published: